Saturday, February 13, 2010
ಹೀಗೂ ಬರೆಯಬಹುದೆ ಪ್ರೇಮ ಪತ್ರವನ್ನು??
Saturday, December 26, 2009
"ಕಂಗಳಲ್ಲೇ ಕವನ ಬರೆದು................
ಏಯ್ ಸುಮ್ಮನಿರೋ ಎನ್ನುವ ನಾನು,
ಸುಮ್ಮನಿರದ ನೀನು........
Wednesday, December 16, 2009
ನೀನು ನಕ್ಕು ನಲಿಯುತಿರಲು ............
ರಂಗುಗೊಂಡಿತಾಗಸ...
ನಿನ್ನ ಸರಸ ಸಂಗವಿರಲು
ಕಂಡುದೆಲ್ಲ ಹೊಸ ಹೊಸ...
ನಿನಗೂ ಅನ್ನಿಸ್ತಿರಬಹುದು.. ಇದೇನಪ್ಪ..ನನ್ನ ಕೂಚಿನ ಹೊಸ ರೂಪ...ನಾನೇ ಎದುರಿಗಿದ್ದೇನೆ.. ಏನು ಹೇಳಬೇಕೋ ಅದನ್ನು ಹೇಳುವುದು ಬಿಟ್ಟು..ಯಾವ್ದೋ letter..ಕೊಟ್ತಳಲ್ಲಾ.. ಅಂತ...ಸ್ವಲ್ಪ ಚೇಂಜ್ ಇರ್ಲಿ ಅಂತ...ನಿನ್ನ mail ಎಷ್ಟು ಚನ್ನಾಗಿತ್ತು ಅಂದರೆ...ಅದಕ್ಕೆ ಹಾಗೆ ಮೇಲ್ ಮಾಡ್ವನ ಅನ್ನಿಸ್ತಿತ್ತು..ಆದರೂ..ಮೊದಲ ಪ್ರೀತಿಯ ಸಂಭ್ರಮ ಪತ್ರ ಬರೆಯುವುದರಲ್ಲೂ ಇದ್ದು..ಅಲ್ದಾ?..ಆದ್ರೆ.. ಅರುಣ್, , ..ನಿನ್ನ ನೆನಪಾದಾಗಲೆಲ್ಲ..ನೀನು ಗಾಢವಾಗಿ ಕಾಡಿದಾಗಲೆಲ್ಲ ನಿನಗೆ ಹೀಗೇ ಎಷ್ಟೊಂದು ಚಿಕ್ಕ ಚಿಕ್ಕ ಪತ್ರ , ಚುಟುಕು ಬರೆದಿಟ್ಟಿದ್ದೆನಂದ್ರೆ .. ಅದೆಲ್ಲಾ ನಿಂಗೆ ಕೊಟ್ಟಿದ್ರೆ...ನಿನ್ನ ಮಡಿಲ ತುಂಬೆಲ್ಲಾ ನನ್ನ ಅಕ್ಷರಗಳದೆ ಕಲರವವಿರುತ್ತಿತ್ತು.. ಅಷ್ಟು ನೆನಪಾಗ್ತೀಯಾ ನೀನು..ಇಳೆಗೆ ಮಳೆ ನೆನಪಾಗುವಂತೆ... ಪತ್ರದ ತುಂಬಾ ಇರುವುದು ಅಕ್ಷರಗಳೋ ...ಮನಸ್ಸೋ.. ಅನಿಸಿಕೆಯೋ.. ಅಥವಾ ಅವು ಯಾವುದೂ ಪೂರ್ಣ ವಾಕ್ಯಗಳೇ ಆಗೋದಿಲ್ಲವೋ ಅನ್ನಿಸ್ತು..ಆ ಪತ್ರಗಳಲ್ಲಿ ವಿಶೇಷ ಏನೂ ಇಲ್ಲ..ಎಲ್ಲಾ..ನನ್ನ, ನಿನ್ನ ಕುರಿತಾದ ಕನಸುಗಳೇ..offcourse...ಕೆಲ ಹಕೀಕತ್ತುಗಳು.. ನಿನಗಿದೆಲ್ಲ ಹುಚ್ಚು ಅನ್ನಿಸ ಬಹುದು...ವಾರಕ್ಕೊಮ್ಮೆ ಸಿಗ್ತೇವೆ.ಎಷ್ಟೋ ಮಾತಾಡ್ತೇವೆ.....ದಿನಕ್ಕೆ ನೂರಾರು msgs....ಮತ್ತೆ..ಫೋನು..ಆನ್ ಲೈನು...ಯಾಕಪ್ಪಾ.. ಎಂದು..ಆದರೂ ಅರುಣ್ , ..ಪತ್ರ ಬರೆಯುವುದೇ ಚಂದ..ಎದುರಿಗೆ ನೀನಿದ್ದೆ ಎನ್ನುವ ಸಂಕೋಚ ಇರ್ತಿಲ್ಲೆ.. ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ ಮೋದಕ್ಕೆ.ಪತ್ರವೇ ಸರಿ.. ಇಂಥ ನೂರಾರು ಪತ್ರ ಬರೆದು ನಿನಗೊಂದನ್ನೂ ಕೊಡದೆ..ನಾನೇ ಇಟ್ಟುಕೊಂಡು.. ಒಬ್ಬಳೇ ಇರುವಾಗ ಅದನ್ನು ಓದಿ ಎಷ್ಟು enjoy ಮಾಡ್ತೆ ಗೊತ್ತಿದ್ದಾ?..ಈಗ ನಿಂಗೆ ಕೊಡ್ತ್ನಲ್ಲ...ಆ ಪತ್ರ ಎಷ್ಟು ಲಕ್ಕಿ ನೋಡು..ಅದು ಎಷ್ಟೊಂದು ಹೊತ್ತು ನಿನ್ನ ಜೊತೆ ಇರ್ತು..ನಿನ್ನ ಕಣ್ಣ ಎದುರಿಗಿರ್ತು...ಎಷ್ಟೊಂದು ಬಾರಿ ಅದರ ಕೆನ್ನೆಗೆ ಮುತ್ತು ಸಿಗ್ತು..ಆಮೇಲೆ ಏಕಾಂತದ ರಾತ್ರಿಗಳಲ್ಲಿ..ನಿನ್ನ ಜೊತೆಗಿರ್ತು..ನಿನಗೆ ಕಚಗುಳಿ ನೀಡಿ.. ರೋಮಾಂಚನಗೊಳಿಸ್ತು.ನೀನದನ್ನು..ಪದೇ ಪದೇ ಓದುತ್ತೀಯಾ.. ಕೆಲವೊಮ್ಮೆ ತಬ್ಬಿಕೊಂಡೆ ಮಲಗಬಹುದು... ಇಂಥ ರೋಮಾಂಚನಕ್ಕೆ..ಈ ಪತ್ರ ನಿಂಗೆ..(ಸಣ್ಣ ಹೊಟ್ಟೆಕಿಚ್ಚೂ ಆಗ್ತು)
ನನ್ನ ಪ್ರೇಮದಲ್ಲಿ ನೀನು
ಅರಳಿ ನಿಂತ ಚಿತ್ರ..
ಸುತ್ತ ಎಲ್ಲ ನೀನೆ ನೀನು..
ಶೂನ್ಯ ನನ್ನ ಗಾತ್ರ..
ನಿಜ..ಅರುಣ್ ..ನನ್ನ ಮನಸ್ಸು ಅಂದಿಗೂ..ಇಂದಿಗೂ ನಿನ್ನದೇ...ಅದರಾಳದಲ್ಲಿ .ನೂರೆಂಟು ಪ್ರಶ್ನೆಗಳು ..ಗೊಂದಲ ಗೋಜಲುಗಳು..ನೀನು ನನ್ನ ದೌರ್ಭಲ್ಯವಾ? ಆರಾಧನೆಯಾ..ಬಂಧುವಾ..ನನ್ನೊಳಗಿನ ಭಾವವಾ? ಮಾತು ಮುಗಿದಾಗ ದಕ್ಕುವ ಮೌನವಾ..ನನಸಾದ ಕನಸಾ ಅಥವಾ..ದೇವರೇ ನನಗಾಗಿ ಕರುಣಿಸಿದ ವರವಾ?ಏನಿರಬಹುದು? ಇಷ್ಟು ವರ್ಷ ನಾನು ನೀನಿಲ್ಲದೆ ಹೇಗಿದ್ದೆ?..ಅಥವಾ ಅದು ಕೇವಲ ನನ್ನ ಭ್ರಮೆಯಾ?.. ಇಲ್ಲದಿದ್ದರೆ..ನೀನು ಕೂಚೇ.ಅಂದ್ರೆ..ತೆರೆದುಕೊಳ್ಳುವ ಕಿವಿ... ಅರ್ಪಿತಾ ಅಂದರೆ..ಹೊಡೆದುಕೊಳ್ಳುವ ಹೃದಯ.. ನಿನ್ನ ಬೈಕ್ನಲ್ಲಿ ಹಿಂದೆ ಕುಳಿತಾಗ..ಬುಜದ ಮೇಲೆ ಕೈ ಇಡಲು ತಡೆದು ಕೊಳ್ಳುವ ಮನಸ್ಸು.. ಏನಿದು ಅರುಣ್, ??? ನಿನ್ನನ್ನು ನಾನೇ ಆನರಿಸಿಕೊಳ್ಳಲು ಬಿಟ್ನಾ? ಅಥವಾ...ನನ್ನನ್ನು ನನ್ನ ಮೇಲೆ ನಿನಗೆ ಅಷ್ಟೊಂದು ವಶೀಕರಣ ಶಕ್ತಿ ಇದ್ದಾ?..ನೀನೆ ಯೋಚಿಸು.."ಮೊದಲು ಕದ ತಟ್ಟಿದವನು ನೀನಾ?..ಬಾಗಿಲು ತೆರೆದವಳು ನಾನಾ?..ಅಥವಾ..ಇವೆರೆಡು ಒಟ್ಟಿಗೇ ಸಂಭವಿಸಿದ ಮೋಹಕ ಅಪಘಾತವಾ?" but..ನಿನ್ನನ್ನು ಇನ್ನು ಪ್ರೀತಿಸದೆ ಇರಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸಿದ ಮೇಲೆ ..ನಾ ನಿನ್ನೆಡೆಗೆ..ನಡೆದು ಬಂದಿದ್ದು...ಸರಿಯೋ..ತಪ್ಪೋ..ಎಂದು ಒಂದೂ ಯೋಚಿಸದೆ.. ಆದ್ರೆ.. ಅರುಣ್ , ..ಇಂಥ ನೂರಾರು ತಪ್ಪುಗಳನ್ನು..ಲೀಲಾಜಾಲವಾಗಿ ಮಾಡಿಸ ಬಲ್ಲ ಚತುರ ನೀನು ನಿನ್ನ ಮಾತು ಅಪ್ಪಟ ಕಾಮನ ಬಿಲ್ಲು.. ಕುಳಿತಲ್ಲಿಂದಲೇ..ನೂರೆಂಟು ರಂಗು ಮೂಡಿಸೋ ವರ್ಣವಿದ್ಯೆ ಬಲ್ಲ ಹುಡುಗ ನೀನು.. ಸದಾ ನಗುವ..ಕಾಡುವ..ತೆರೆದರೆ ಸಾವಿರ ಗುಟ್ಟು ಹೇಳುವ..ಮುಚ್ಚಿದರೆ .ನೂರು ಕನಸು ಕಲ್ಪಿಸುವ ನಿನ್ನ ಕಣ್ಣು..ಜಲಪಾತಕ್ಕೆ ತಲೆ ಒಡ್ಡಿದಾಗ ಆಗುವಂತೆ ಕಕ್ಕಾಬಿಕ್ಕಿಗೊಳಿಸುವ ನಿನ್ನ ಮಾತು..ಆ respect..care...ನೀನು ಹೀಗಿರದೆ ಹೋಗಿದ್ದಾರೆ..ಸುಮ್ಮನೆ ಸೋಲುತ್ತೀನಾ ನಾನು?..
ನಿನ್ನ..
ಕೂಚು..
Thursday, December 10, 2009
Propose ಮಾಡುವುದು ಯಾಕಿಷ್ಟು ಕಷ್ಟ???
Friday, December 4, 2009
ಮನಸ್ಸು ಮತ್ತು ಮೆನೇಜ್ಮೆಂಟ್
ಹೌದಲ್ಲ, ಒಂದು ಸಾರಿ ವೃತ್ತಿ ಜೀವನಕ್ಕೆ ಕಾಲಿಟ್ಟು ಬಿಟ್ಟರೆ ನಮಗೆ ನಮ್ಮವರು, ತಮ್ಮವರು ಎಂಬ ಯೋಚನೆಯೇ ಇರುವುದಿಲ್ಲ, ಆಗಾಗ ಬರುವ ಹಬ್ಬ ಹರಿದಿನಗಳು ಮರೆತೇ ಹೋಗಿರುತ್ತದೆ. ಸ್ವಂತ ಅಕ್ಕನ ಮನೆಗೋ, ತಂಗಿಯ ಮನೆಗೋ ಕೊನೆಯೇ ಬಾರಿ ಹೋಗಿದ್ದು ಯಾವಾಗ ಎಂದು ನೆನಪು ಮಾಡಿಕೊಳ್ಳಬೇಕಾಗುತ್ತದೆ, ಮಗನೆ, ನಿನ್ನ ಜೊತೆ ಮಾತಾಡಿ ೧೫ ದಿನ ಆಯಿತಲ್ಲೋ ಎಂದು ತಾಯಿ ಹೇಳಿದಾಗಲೇ, ಮನೆಗೆ call ಮಾಡಲು ಮರೆತಿದ್ದೆ ಎಂದು ನೆನಪಾಗುವುದು. ಚಿಕ್ಕವರಿದ್ದಾಗ ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸಗಳು, ಪದೇ ಪದೇ ಹೋಗುತ್ತಿದ್ದ ನಮ್ಮ ಊರಿನ ಜಾಗಗಳು, ಸ್ಮೃತಿಪಟಲದಿಂದ ದೂರವೇ ಹೋಗಿಬಿಟ್ಟಿರುತ್ತದೆ.
ಆದರೆ ದಿನಕ್ಕೆ 10 ಗಂಟೆ ಆಫೀಸ್ ಮತ್ತು, ೪ ಗಂಟೆ office ಗೆ ಹೋಗುವ ದಾರಿಯಲ್ಲಿ ಕಳೆಯುವ ನಮಗೆ ನಮ್ಮ ಬಗ್ಗೆ ಯೋಚಿಸಲು ಸಮಯವಾದರೂ ಯೆಲ್ಲಿ ಸಿಕ್ಕುತ್ತದೆ?? ಹಾಗೊಮ್ಮೆ ಯೋಚಿಸಲು ಪ್ರಾರಂಬಿಸಿದರು ನವ್ಯಾರೋ ಬೇರೆಯವರ ಬಗ್ಗೆ ಯೋಚಿಸುತ್ತಿದ್ದೇವೆ ಎಂಬಸ್ಟು ನಮಗೆ ನಾವೇ ಅಪರಿಚಿತರಾಗಿರುತ್ತೇವೆ. ಇಂತಹ ಯೋಚನೆಗಳನ್ನು ಕೂಡ Office ನಲ್ಲಿಯೇ ಮಾಡಬೇಕು. ಏಕೆಂದರೆ ಮನೆಗೆ ಬಂದ ಮೇಲೆ ಊಟ ಮಾಡಿ ಮಲಗಿದರೆ ಸಾಕು ಎಂಬಂತಾಗಿರುತ್ತದೆ. ಇಂತಹ ನಮಗೆ ಒಂದೆರಡು ದಿನಗಳನ್ನು ಬಿಟ್ಟಿಯಾಗಿ ಕೊಟ್ಟುಬಿಟ್ಟರೆ ಏನು ಮಾಡಬಹುದು?? ಏನೂ ಮಾಡುವುದಿಲ್ಲವಾದರೂ ಮತ್ತೆ ಆಫೀಸ್ ನ ಬಗ್ಗೆ ಯೋಚನೆ ಮಾಡುವುದನ್ನಂತು ಬಿಡುವುದಿಲ್ಲ. ಯಾಕಾದರೂ ರಜೆ ಕೊಟ್ಟರೋ ಎಂದು ನಮಗಿಂತ ಚಿಕ್ಕವರಾದ ನಮ್ಮ ಜೂನಿಯರ್ ಗಳ ಬಗ್ಗೆ, ಯಾರು ಕೆಲಸ ಹೇಳಿದರು ಐದೇ ನಿಮಿಷ ಬಂದೆ ಎಂದು ನಾಪತ್ತೆಯಾಗುವ ಆಫೀಸ್ ಬಾಯ್, ದಿನಕ್ಕೊಂದು ಡ್ರೆಸ್ ಮಾಡಿಕೊಂಡು ಗಮನ ಸೆಳೆಯುವ ಪಕ್ಕದ ಕ್ಯಾಬಿನ್ ನ ಚಂದದ ಹುಡುಗಿ, ಮತ್ತೆ ಮತ್ತೆ ಕೈಕೊಡುವ ಇಂಟರ್ನೆಟ್, ಏನೋ ಮೋಸ ನಡೆದಿದೆ, ಅದನ್ನು ತಾನು ಹುಡುಕಬೇಕು ಎಂದೇ ಕೆಲಸ ಪ್ರಾರಂಬಿಸುವ Auditor, ಹೀಗೆ ಎಲ್ಲ ನಮ್ಮ ಯೋಚನಾ ವಸ್ತುವಾಗಿರುತ್ತದೆ.
Thursday, November 19, 2009
....
Wednesday, July 22, 2009
ಮತ್ತೆ ಬಂದಿದೆ ಆಗಸ್ಟ್ ಹದಿನೈದು.....
Monday, June 29, 2009
ಸ್ತ್ರೀ ಎಂದರೆ ಅಸ್ಟೆ ಸಾಕೆ???
Saturday, June 13, 2009
ನೆತ್ತಿಯ ಮೇಲಿನ ಮುದ್ದು ಹಕ್ಕಿ,
ಆದರೆ ಒಂದು ಬಾರಿ ನನ್ನ ಜೀವನದಲ್ಲಿ ನಿನ್ನ ಪ್ರವೇಶವಾಗಿದ್ದೇ ತಡ, ಹೃದಯವನ್ನಾಳುತ್ತಿದ್ದ ನನ್ನ ಬುದ್ದಿ, ಹೃದಯದ ತಾಳಕ್ಕೆ ತಕ್ಕಂತೆ ಕುಣಿಯತೊಡಗಿಬಿಟ್ಟಿತು ನೋಡು. ಹಾಗೆ ಭಾವನಾ ಲೋಕಕ್ಕೆ ಕರೆದೊಯ್ದ ನೀನು ಸಂಗೀತವೆಂದರೇನೆಂದು ಪರಿಚಯಿಸಿದೆ. ನಿನಗಿಸ್ಟ ಅಂತಲೋ, ಅಥವಾ ನನಗೇ ಇಸ್ಟವಾಯೀತೋ, ಅಂತೂ ಸಂಗೀತ ಪ್ರಪಂಚದ ಹುಚ್ಚು ಹತ್ತಿಸಿಕೊಂಡು ಬಿಟ್ಟೆ. ಅಲ್ಲಿಂದ ನಮ್ಮ ಮನೆಯ ರೇಡಿಯೋಕ್ಕೆ ಬಿಡುವೇ ಇಲ್ಲದಾಯ್ತಲ್ಲ. ಬರುವ ನಾಲ್ಕಾರು ಸ್ಟೇಶನ್ ಗಳಲ್ಲೇ ಹುಡುಕಿ ಹುಡುಕಿ ಹಾಡು ಕೇಳುತ್ತಿದ್ದೆ. ಅದ್ಯಾವುದೋ ಒಂದು ದಿನ ಹಾಗೆ ರೇಡಿಯೋದ ಕಿವಿಗಳನ್ನು ತಿರಿಸುತ್ತಿದ್ದಾಗ ಬಂತಲ್ಲ ಕೊಳಲ ಗಾನ, ಅದೇನು ಮೋಡಿ ಮಾಡಿತೋ ಏನೋ, ಅವತ್ತಿನಿಂದಲೇ ತಾನೇ ನಾನು ಕೊಳಲ ದಾಸನಾಗಿದ್ದು??
ನಮ್ಮೂರಿನಲ್ಲಿರುವ ಬಿದಿರನ್ನೆಲ್ಲ ಕಡಿದು , ಒಂದರಿಂದಲೂ ನಾದವಿರಲಿ, ಕನಿಸ್ಟ ಶಿಳ್ಳೆ ಹೊಡೆದ ಶಬ್ಧವೂ ಬಾರದಿದ್ದಾಗ ನಾನು ಪಟ್ಟ ಪರಿಪಾಟಲು, ಅಂತೂ ಯಾರನ್ನೋ ಹಿಡಿದು ಒಂದು ಕೊಳಲನ್ನು ಸಂಪಾದಿಸಿದೆನಲ್ಲ, ತಿಂಗಳುಗಟ್ಟಲೇ ಅದರೊಂದಿಗೆ ಗುದ್ದಾಡಿ, ಕೆಲವು ಹಾಡುಗಳನ್ನು ಕಲಿತು ನಾನು ನುಡಿಸುತ್ತಿದ್ದರೆ, ರಾಧೆ, ರುಕ್ಮಿಣಿ, ಸತ್ಯಭಾಮೆ ಎಲ್ಲವೂ ನೀನೆ ಆಗಿ ಕೇಳುತ್ತಿದ್ದ ನೀನು ನಿಜಕ್ಕೂ ಅಪರೂಪದ ಕೇಳುಗಳು. ಹಾಗೆ ನಾನು ನುಡಿಸುತ್ತಾ, ನೀನು ಕೇಳುತ್ತ ನಮಗೆ ನಾವೇ ಸ್ರಸ್ಟಿಸಿಕೊಳ್ಳುತ್ತಿದ್ದ ಗಂದರ್ವ ಲೋಕ, ಪ್ರೀತಿ ಎಂದರೆ ಇದೇ ತಾನೇ, ಬೇರೆಯವರಿಗೆಲ್ಲ ನಾನೂದುವ ಪಿಳ್ಳನ್ಗೋವಿ, ನಿನ್ನ ಪಾಲಿಗೆ ಸುಮಧುರ ಕೊಳಲ ಗಾನ. ಕೊನೇ ಕೊನೆಗೆ ಕೊಳಲೂದುವುದನ್ನೆ ಮರೆತು ನಿನ್ನನ್ನೇ ನೋಡುತ್ತಾ ಕುಳಿತು ಬಿಡುತ್ತಿದ್ದೆ. ನೀನೋ, ನಾನೇ ತಟ್ಟಿ ಎಬ್ಬಿಸಬೇಕಿತ್ತು. ನೀನು ನಿಜವಾಗಿಯೂ ಕೆಳುತ್ತಿದ್ದೆಯೋ, ನನ್ನನ್ನು ನೋಡುತ್ತಾ ಕುಳಿತಿರುತ್ತಿದ್ದೆಯೋ, ಅಥವಾ ಭವಿಷ್ಯದ ಕನಸು ಕಾಣುತ್ತಿದ್ದೆಯೋ ಇವತ್ತಿಗೂ ಗೊತ್ತಿಲ್ಲ. ಯಾಕೆಂದರೆ ನಾನು ನುಡಿಸಿದ ಕೊಳಲ ಗಾನ, ರೆಕಾರ್ಡ್ ಮಾಡಿಕೊಂಡು ಹಾಕಿದರೆ ನನಗೇ ಕೇಳಲಾಗುತ್ತಿರಲಿಲ್ಲವಲ್ಲ..
ಅವಾಗಲೇ ಅಂದುಕೊಂಡಿದ್ದೆ, ನನ್ನ ಹೆಂಡತಿಯಾಗಲು ನೀನೇ ಸರಿ ಎಂದು. ನೀನು ಮಾತ್ರ ನನಗೆ ತಕ್ಕ ಸತಿಯಾಗಬಲ್ಲೆ ಎಂದು ನಂಬಿಕೊಂಡಿದ್ದೆ. ಆದರೆ ನೀರಿನಲ್ಲಿ ಈಜುವ ಮೀನಿನ ಹೆಜ್ಜೆಯನ್ನದರೂ ಗುರುತಿಸಬಹುದು, ಹೃದ್ಗತವಾದ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾದ್ಯವಿಲ್ಲ ಅಂತಾರಲ್ಲ, ಅದ್ಯಾವ ಗೃಹ ನಿನ್ನ ಮನಸ್ಸನ್ನು ಬದಲಿಸಿಬಿತ್ತಿತೋ ನಾಕಾಣೆ, ನೀನೆಂದರೆ ನಂಗೆ ಇಸ್ಟವಿಲ್ಲ, ನನ್ನನ್ನು ಮರೆತುಬಿಡು ಅಂದುಬಿಟ್ಟೆಯಲ್ಲ, ಎಲ್ಲವನ್ನೂ ಅತಿಯಾಗಿಯೇ ಮಾಡುವ ನನ್ನಂಥವನ ಜೊತೆ ಏಗುವುದು ಹೇಗೆನ್ದು ನಿನಗೂ ಅನ್ನಿಸಿರಬಹುದು ಗೆಳತಿ, ಆದರೆ ಹಾಗೆ ನಿನ್ನಿಂದ ಒಂದೇ ಮಾತಿನಲ್ಲಿ ತಿರಸ್ಕ್ರತಗೊಂಡು ಹೋದ ದಿನದಿಂದ ಒಂದೇ ಒಂದು ದಿನವೂ ನಿನ್ನನ್ನು ಮರೆಯುವ ಪ್ರಯತ್ನದಲ್ಲಿ ನಾನು ಸಫಲನಾಗಲೇ ಇಲ್ಲ. ನಾನಾಯಿತು ನನ್ನ ಪಾದಾಯಿತು ಎಂದು ಇದ್ದವನನ್ನು ಪ್ರೀತಿಯೆಂಬ ಸುಂದರ ತೋಟಕ್ಕೆ ಎಳೆದು ತಂದೆಯಲ್ಲ, ಅದು ನೋದಲು ಮಾತ್ರ ಸುಂದರ ಎಂದು ಈಗ ಗೊತ್ತಾಗುತ್ತಿದೆ. ಪ್ರೀತಿ ಎಂದರೆ ಎಸ್ಟು ಮುಕ್ಕಿದರೂ ತೀರದ ಹಸಿವು. ಎಸ್ಟು ಹಾಕಿದರೂ ತುಂಬದ ಬಿಕ್ಷಾ ಪಾತ್ರೆ. ಅದು ನಿರಂತರ ಹರಿಯುವ ನೀರಿನ ಸೆಳೆತ..
ಕೇವಲ ಒಂದು ಏಕ್ರೆ ತೋಟ, ಒಂದು ಮನೆ, ಒಂದು ಸುಂದರ ಸಂಸಾರ, ಅಸ್ಟೆ ಆಗಿತ್ತಲ್ಲ ನಿನ್ನ ಕನಸು, ನನ್ನನ್ನು ಅಸ್ಟು ಕೂಡ ಕೊಡಲು ಆಗದವನು ಎಂದುಕೊಂಡುಬಿಟ್ಟಿದ್ದೇಯಲ್ಲ, ಪ್ರತಿ ಮಾತು, ಪ್ರತಿ ಘಟನೆ, ಪ್ರತಿದಿನದ ಕತ್ತಲು, ಎಳೆಬಿಸಿಲು, ತಂಗಾಳಿ, ನಮ್ಮೂರಿನ ಗುಡ್ಡಬೆಟ್ಟಗಳು, ನಾನೂದಿದ ಕೊಳಲು, ಹೀಗೆ ಎಲ್ಲೆಂದರಲ್ಲಿ ನಿನ್ನ ನೆನಪಾಗುತ್ತಿದ್ದರೂ, ಇದೋ ನೋಡು, ನಿನ್ನೆರಡೂ ಕಣ್ಣುಗಳನ್ನು ಬಿಟ್ಟು, ಎಲ್ಲ ಅಸಹಾಯಕತೆ, ಅವಮಾನ , ಖಿನ್ನತೆ ಗಳನ್ನೆಲ್ಲ ಹಿಮ್ಮಡಿಯ ಕೆಳಗೆ ಮೆಟ್ಟಿ ನಿಲ್ಲುವ ಫಕೀರನ ಛಲದಂತೆ ನಾನು ಕೂಡ ನನ್ನ ಜೀವನವನ್ನು ರೂಪಿಸಿಕೊಂಡಿದ್ದೇನೆ. ನೀನು ಕಂಡ ಕನಸನ್ನು ಮೀರಿ ಬೆಳೆದುಬಿಟ್ಟಿದ್ದೇನೆ.
ಒಂದು ಕಾಲದಲ್ಲಿ ಮರಳಲ್ಲಿ ರೆಕ್ಕೆ ಹುದುಗಿಸಿ, ಮೈಮರೆತು ತೀರಕ್ಕೆ ಬರುವ ಮೀನಿಗಾಗಿ ಕಾಯುತ್ತ ಶತಮಾನ ಕಳೆದು ಬಿಡುವ ಹಕ್ಕಿಯ ಸಂಯಮವಿತ್ತು. ಮರದ ಮೇಲಿನ ಹೆಜ್ಜೆನಿಗಾಗಿ ಕೆಳಗಡೆ ಶತಪಥ ಹಾಕುವ ಕರಡಿಯ ಕನವರಿಕೆಯಿತ್ತು. ನೀನು ಸಿಕ್ಕಿದರೆ ನನ್ನ ಜೊತೆ ಇಡೀ ಜಗತ್ತೇ ಸಮಧಾನಗೊಳ್ಳುತ್ತದೆ ಎನ್ನುವ ಸುಳ್ಳೇ ಸುಳ್ಳು ನಿರಾಳತೆಯಿತ್ತು. ಕೊಳಲೆಂಬ ತುತುಗಳುಲ್ಲ ಬಿದಿರು ಉಡುವ ನನಗೆ ಅದ್ಭುತವಾದ ಭಾವುಕ ಮನಸ್ಸಿತ್ತು. ಶತಮಾನಗಳ ಕಾಲ ನಿನ್ನ ಜೀವಕೊಶಗಳೊಂದಿಗೆ ಬೆರೆತು ಹೋಗುವ ಉತ್ಸಾಹವಿತ್ತು. ಪ್ರೀತಿಯಲ್ಲಿ ಮುಳುಗಿದವನೊಬ್ಬನ ಆರ್ತನಾದವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ನನ್ನ ಅಗಾಧ ಪ್ರೇಮವಿತ್ತು. But My dear Love, ನನ್ನ ಪಾಲಿಗೆ ನೀನು ಆಗಂತುಕಳಾಗಿ ಹೋದೆಯಲ್ಲ. Really I am Sorry, ಭಾಹುಶಹ ಇನ್ನೊಂದು ಸ್ವಲ್ಪ ದಿನಕ್ಕೆ ನೀನಾಗಿ ಬಂದರೂ ನಾನು ನಿನ್ನ ಜೊತೆ ಮಾತನಾಡುವ ಉತ್ಸಾಹವನ್ನೇ ಕಳೆದುಕೊಂಡು ಬಿಡಬಹುದು. Wish you all the best....
Saturday, May 30, 2009
ಅರ್ಥಿಕ ಸುಧಾರಣೆಗಳು ಮತ್ತು ವಿಮಾನ ಯಾನ...
ಆದಿನ ನಾನೇ ನೆಲದಿಂದ ತುಂಬಾ ಮೇಲಿದ್ದೆನೋ ಅಥವಾ ನೆಲವೇ ನನಗಿಂತ ಕೆಳಗಿತ್ತೋ ಗೊತ್ತಿಲ್ಲ. ಅಂತೂ ನೆಲ ಬಿಟ್ಟು ಹೋಗುವಸ್ಟು ಖುಷಿಯಾಗಿದ್ದಂತೂ ಸತ್ಯ. ಖುಷಿ ಅನ್ನುವುದಕ್ಕಿಂತ ಅನೇಕ ಭಾವನೆಗಳ ಮಿಶ್ರಣ ಎನ್ನುವುದು ಸೂಕ್ತ. ಅದು ಹೇಳಿದರೆ ಅರ್ಥವಾಗುವುದಿಲ್ಲ ಬಿಡಿ. ಅನುಭವಿಸಿ ನೋಡಬೇಕು. ಹಿಂದೆಂದೂ ಆಗಿರದ, ಮುಂದೆ ಆಗಲು ಸಾದ್ಯವಿರದಸ್ಟು ಖುಷಿಯಾಗಿತ್ತದು ಎಂದು ಮಾತ್ರ ಹೇಳಬಲ್ಲೆ. ಯಾವತ್ತಾದರೂ ಯಾರಾದರೂ ನಿನ್ನ ಜೀವನದ ಅತ್ಯಂತ ಸಂತಸದ ಕ್ಷಣ ಯಾವುದಾಗಿತ್ತು ಎಂದರೆ ಅನುಮಾನಕ್ಕೆ ಎಡೆಯೆ ಇಲ್ಲದೇ ಈ ಘಟನೆಯನ್ನು ಹೇಳಬಲ್ಲೆ ಎನಿಸಿತ್ತು.
ಅಸ್ಟೆಲ್ಲ ಖುಷಿಗೆ ಮೂಲ ಕಾರಣ ಕೇವಲ 3.5 ನಿಮಿಷಗಳ 1 ಫೋನ್ ಕಾಲ್. ಪ್ರಪಂಚದ ಆರ್ಥಿಕ ಬಿಕ್ಕಟ್ತಿನ ಬಗ್ಗೆ, ತುಂಬಾ ಸರಳವಾಗಿ ನಾನು ಮಂಡಿಸಿದ ಪ್ರಬಂದ ಅದು ಹೇಗೊ ಜಗಜ್ಜಾಹೀರಾಗಿತ್ತು. ಅದನ್ನು ಓದಿದ ಮೊಂಟೆಕ್ ಸಿಂಗ್ ಅಹ್ಲುವಾಳೀಯ ಎಂಬ ಪ್ರಖ್ಯಾತ ಅರ್ಥ ಶಾಸ್ತ್ರಜ್ಞ ತನ್ನನ್ನು ಕಾಣಲು ಸೂಚಿಸಿದ್ದ ಪೋನ್ ಕಾಲ್ ಅದು. ಆದಿನವಿಡೀ ನನ್ನನ್ನು ಯಾವುದೋ ಮತ್ತಿನಲ್ಲಿ ತೇಲಾಡುವಂತೆ ಮಾಡಿದ ಫೋನ್ ಕಾಲ್ ಅದು. ನನ್ನನ್ನು ನಾನು ನಂಬಲಾಗದಂತೆ ಮಾಡಿದ ಫೋನ್ ಕಾಲ್ ಅದು.
ನಾನು ನನ್ನ ಪ್ರಬಂದದಲ್ಲ್ಲಿ ಹೇಳಿದ್ದಾದರೂ ಏನು, ಒಂದು ಚಿಕ್ಕ ಸರ್ಕಲ್ ನಲ್ಲಿ, ಹಣದ ಹರಿವನ್ನು ಚಿತ್ರಿಸಿ, ಅವು ಒಂದಕ್ಕೊಂದು ಹೇಗೆ ಬೆಸೆದುಕೊಂಡಿರುತ್ತವೆ ಎಂದು ವಿವರಿಸಿದ್ದೆ , ಬಲು ದೊಡ್ಡ ಕಟ್ಟಡವನ್ನು ಕಟ್ಟುವಾಗ ಹಾಕಿಕೊಳ್ಳುವ ನೀಲ ನಕ್ಷೆಯಂತೆ. ಆರ್ಥಿಕ ಹಿಂಜರಿತಕ್ಕೆ ಕಾರಣವಾದ ಅಂಶಗಳನ್ನು ಹೆಕ್ಕಿ ತೆಗೆದಿದ್ದೆ. ಹೇಗೆ ಒಂದು ಮನೆಯಲ್ಲಿ, ದುಡ್ಡು ಒಳ ಬಂದು ಹೊರ ಹೋಗುವ ಚಕ್ರ ಸರಾಗವಾಗಿ ತಿರುಗುತ್ತಿರುತ್ತದೋ, ಹಾಗೆ ಚಿಕ್ಕ ಉದಾಹರಣೆ ಇಂದ ದೊಡ್ಡದನ್ನು ತೋರಿಸಿದ್ದೆ. ಒಂದು ಕಡೆ ಹಣ ನಿಂತು ಹೋಗಿದೆ, ಅದರಿಂದ ಹಣದ ಹರಿವು ಆಗುತ್ತಿಲ್ಲ, ಅಥವಾ, ಹಣಕಾಸಿನ ಚಕ್ರ ನಿಧಾನವಾಗಿ ತಿರುಗುತ್ತಿದೆ ಎಂದು ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತಹ ಆರ್ಥಿಕ ನೀತಿಯನ್ನು ರೂಪಿಸಿದ್ದೆ. ಹೇಗೆ ಅಧಿಕಾರ ವಿಕೇಂದ್ರೀಕರಣ ಇದೆಯೋ ಹಾಗೆ, ಹಣಕಾಸಿನ ನೀತಿಯನ್ನು, ಬೇರೆ ಬೇರೆ ಪ್ರದೇಶಕ್ಕೆ ಅನುಗುಣವಾಗಿ ರೂಪಿಸಬೇಕು, ಅಂದರೆ ಕಿರು ಹಣಕಾಸು ನೀತಿಯನ್ನು ಬಲಪಡಿಸಬೇಕು ತಿಳಿಸಿ ಹೇಳಿದ್ದೆ. ಅದಕ್ಕಾಗಿ ಕೆಲವು ಆರ್ಥಿಕ ಸುಧಾರಣ ಕ್ರಮಗಳನ್ನೂ ಕೈಗೊಳ್ಳಬೇಕು, ಈಗಾಗಲೇ ತೆಗೆದುಕೊಂಡ ಕ್ರಮಗಳನ್ನು ಬಿಟ್ಟು, ಇನ್ನಸ್ಟು ಪರಿಣಾಮಕಾರಿ ಯೋಜನೆಗಳನ್ನು, ಯಾವ ರಾಜಕೀಯ ವತ್ತದಕ್ಕೂ ಸಿಲುಕಡೆ ಕೈಗೊಂಡರೆ, ಆರ್ ಬೀ ಐ ಮೈ ಚಳಿ ಬಿಟ್ಟು ಕೆಲಸ ಮಾಡಿದರೆ ಆರ್ಥಿಕ ಬಿಕ್ಕಟ್ಟನು ಓಡಿಸಿ ಬಿಡಬಹುದು ಎಂದು ಒತ್ತಿ ಹೇಳಿದ್ದೆ. ಆದರೆ ಈ ಪ್ರಬಂದ ಬರೆಯುವಾಗ ನಿಜವಾಗಿಯೂ ಗೊತ್ತಿರಲಿಲ್ಲ, ಇದು ಇಸ್ಟು ಪ್ರಭಾವ ಬೀರುತ್ತದೆ ಎಂದು. ಕೇವಲ ನನ್ನ ಸಮಾಧಾನಕ್ಕಾಗಿ ನಾನು ಬರೆದ ಪ್ರಬಂದ , ಅಬ್ಬಾ...ನೆನೆಸಿಕೊಂಡರೆ ಮೈ ಜುಂ ಎನ್ನುತ್ತದೆ.
ಅಸ್ಟೆ ಅಲ್ಲ, ಅಲ್ಲಿಗೆ ಹೋಗುವುದು ಹೇಗೆ, bangalore ನಿಂದ ಬರಲು ಅವರೇ ವಿಮಾನದ ಟಿಕೆಟ್ ಕೊಟ್ಟಿದ್ದರಲ್ಲ. ನಾನೋ ಮೊದಲ ಬಾರಿಗೆ ವಿಮಾನ ಏರುತ್ತಿರುವವನು. ಹೇಗೊ ಏನೋ ಎನ್ನಿುವ ಆತಂಕ ಒಂದುಕಡೆ, ಆಗಸದಲ್ಲಿ ಹಾರುವ ಹಕ್ಕಿಗಳನ್ನು ನೋಡಿ ಖುಷಿಪಟ್ಟ ನನಗೆ ನಾನು ಅವುಗಳಂತೆ ಹಾರಬಹುದಲ್ಲ ಎನ್ನುವ ಖುಷಿ ಇನ್ನೊಂದು ಕಡೆ. ಪ್ರತಿ ದಿನ ಆಫೀಸ್ ಗೆ ಹೋಗುವ ಹಾಗೆ ಹೋಗಲೊ, ಅಥವಾ, ಬೇರೆ ಏನಾದರೂ, , ಅಂತು ಪಾರು ಹರಿಯಾದ ಯೋಚನೆ. ಅಲ್ಲಿ ಮೊದಲು ಯಾರನ್ನು ಕಾಣಬೇಕೂ,, ನಾನು ಬೆಂಗಳೂರಿನಿಂದ ಬಂದವನು ಎಂದರೆ ನನ್ನನ್ನು ಅವರು ಒಳಗೆ ಬಿಡುತ್ತಾರೋ ಇಲ್ಲವೋ, ಎನ್ನುವ ಬಗೆ ಹರಿಯದ ಚಿಂತನೆ. ಅನ್ತೂ ಇನ್ತೂ ಸಿಂಗ್ ಅವರನ್ನು ಕಾಣುವ ಸುದಿನ ಬಂದೆ ಬಿಟ್ಟಿತು. ನಾನು ಹೊರಡಲೇ ಬೇಕು.
ಮನೆ ದೇವರಿಂದ ಹಿಡಿದು, ನನ್ನ ಅಜ್ಜಿ ತನ್ನ ಕೊನೆಗಾಲದಲ್ಲಿ ಹೇಳುತ್ತಿದ್ದ ದೇವರ ಹೆಸರುಗಳನ್ನೆಲ್ಲ ಒಂದು ಸಾರಿ ಸ್ಮರಿಸಿಕೊಂಡು ದೆಹಲಿಯತ್ತ ಹೊರಟೆ ಬಿಟ್ಟಿದ್ದೆ. ಅಬ್ಬ, ಅಲ್ಲಿಂದ ಮುಂದೆ ಯಾವುದೂ ನನ್ನ ಕೈಲಿರಲೇ ಇಲ್ಲ. ಯಾರೋ ನಡೆಸುವ ಮಂತ್ರದ ಗೊಂಬೆಯಂತೆ, ಕೇಂದ್ರ ಹಣಕಾಸು ಸಚಿವಾಲಯದ ಸಿಬ್ಬಂದಿಗಳು ಹೇಳಿದಂತೆ ಅವರು ಕರೆದುಕೊಂಡು ಹೋದಲ್ಲೆಲ್ಲ ಹೋದೆ.
ಅವತ್ತೇ ಸಿಂಗ್ ಜೊತೆಯಲ್ಲಿ ಕೇವಲ ೧೫ ನಿಮಿಷಗಳ ಮಾತುಕತೆ , ನಂತರ ನನಗೆ ನೆನಪಿನ ಕಾಣಿಕೆಯ ಅರ್ಪಣೆ, ಮತ್ತು, "ಪ್ರಪಂಚದ ಆರ್ಥಿಕ ಬಿಕ್ಕಟ್ಟು ಮತ್ತು ಪರಿಹಾರೋಪಾಯಗಳು" ಎಂಬ ವಿಷಯದ ಬಗ್ಗೆ ನನ್ನ ಉಪನ್ಯಾಸ. ಸಿಂಗ್ ಜೊತೆಯಲ್ಲಿ ಹೇಗೋ ಮಾತುಕತೆ ಮುಗಿದು ಹೋಗಿತ್ತು. ನನಗೆ ಗೊತ್ತಿರುವ ವಿಷಯಗಳನ್ನು,, ಮುಖದಲ್ಲಿ ಧೈರ್ಯ ತುಂಬಿಕೊಂಡು ಮಂಡಿಸುವ ಹೊತ್ತಿಗೆ ನನ್ನ ಹಣೆಯಲ್ಲಿ ಬೆವರ ಸಾಲು. ಅವರೋ ನನ್ನನ್ನು ಅರ್ಥಿಕ ಜಗತ್ತಿನ ದ್ರುವತಾರೆಯಂತೆ ಚಿತ್ರಿಸುತ್ತಿದ್ದರು. ನಂತರದ ಕಾರ್ಯಕ್ರಮವೇ ನೆನಪಿನ ಕಾಣಿಕೆಯ ಅರ್ಪಣೆ, ಅವರ್ಯಾರೋ Anchor, ಎಲ್ಲರನ್ನು ಕರೆದು ಹಾಗೆ ನನ್ನ ಹೆಸರನ್ನೂ ಕರೆದೇ ಬಿಟ್ಟರು. ನನ್ನ ಯಾವತ್ತಿನ ಗಂಭೀರ , ದಿಟ್ಟ ನಡಿಗೆಯೊಂದಿಗೆ ವೇದಿಕೆ ಹತ್ತುತ್ತಿದ್ದರೆ ಕಾಲುಗಳಲ್ಲಿ ಚಿಕ್ಕ ನಡುಕ. ಹಾಗೆ ಸಾವಿರ ಮಿಂಚುಗಳು ಒಂದೇ ಸಾರಿ ಮಿಂಚಿದ ಹಾಗೆ ಕ್ಯಾಮೆರಾ ಬೆಳಕಿನ ಮದ್ಯೆ ಇನ್ನೇನು ನೆನಪಿನ ಕಾಣಿಕೆ ಪಡೆಯಬೇಕು, ಅಸ್ಟರಲ್ಲಿ,
ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲವಲ್ಲ. ಕತ್ತಲು ಮುಗಿದು ಬೆಳಕು ಬಂದ ಹಾಗೆ, ಹಗಲು ಮುಗಿದು ರಾತ್ರಿಯಾದಂತೆ, ಅವನತಿಯು ಕೂಡ ಉತ್ಕರ್ಷ ದತ್ತ ಸಾಗಿದಂತೆ, ಹರಿಯುವ ನದಿಗೂ ಕೊನೆ ಎನ್ನುವುದು ಇರುವಂತೆ, ಕ್ಷೀರ ಸಾಗರಕ್ಕೂ, ಕಿನಾರೆ ಇರುವಂತೆ, ನನ್ನ ಕನಸು ಕೂಡ ಮುಗಿದು ಹೋಗಿತ್ತು. ಒಂದು ಕ್ಷಣ, ಕನಸೇ ನಿಜವಾಗಿ, ಎಚ್ಚರವೇ ಕನಸಾಗಿರಬಾರದಿತ್ತೆ ಎನಿಸಿತ್ತು. ಆದರೆ ವಸ್ತು ಸ್ಥಿತಿಯನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲವಲ್ಲ. ಎಂದಿನಂತೆ ಅಂದು ಕೂಡ Office ಗೆ Late ಆಗಿಯೇ ಹೋದೆ :)
Saturday, May 16, 2009
ಹದಿಹರೆಯದ ಪ್ರಾಣಾಳಿಕೆಗಳು...
ಈಬಾರಿ ಚೆನ್ನಾಗಿ ಓದಿ, ಪರೀಕ್ಷೆ ಮುಗಿಸಿ ಬಿಟ್ಟರೆ ತನ್ನ ವಿದ್ಯಾರ್ಥಿ ಜೀವನ ಮುಗಿದು ಹೋಗುತ್ತದೆ, ಯಾವುದಾದರೂ ಒಳ್ಳೆಯ ಬಹುರಾಸ್ಟ್ರೀಯ ಕಂಪನಿಯಲ್ಲಿ, ಉದ್ಯೋಗ ಪ್ರಾರಂಬಿಸಿ, ಕಂಪನಿಯ ಉನ್ನತಿಗೆ ತಾನು ಕಾರಣನಾಗಬೇಕು, ತನ್ಮೂಲಕ, ತನ್ನ ಯಾರೋ ಬಂಧುಗಳ ಹಾಗೆ, ಪರಿಚಯದವರ ಹಾಗೆ, ತಾನು ಒಳ್ಳೆಯ ಹೆಸರು ಗಳಿಸಬೇಕು ಎಂದುಕೊಂಡಿರುತ್ತಾನೆ. ಆದರೆ ಕೆಲದಕ್ಕೆ ಸೇರಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು, ಕೆಲಸ ಅಂಥ ಕಲಿಯಲಿಕ್ಕೇ 6 ತಿಂಗಳು ಹಿಡಿದು ಹೋಗುತ್ತದೆ. ನಂತರ ಎಲ್ಲಿಯ ಕೆಲಸ, Chat ಮಾಡಲಿಕ್ಕೆ ಸಮಯ ಸಿಕ್ಕುವುದಿಲ್ಲ. ಇವ್ರು ಕೊಡೊ ಸಂಬಳಕ್ಕೆ ನಾನ್ ಆಗಿರೋದಕ್ಕೆ ಕೆಲಸ ಮಾಡ್ತಾ ಇದ್ದೀನಿ, ಬೇರೆಯವರಾಗಿದ್ರೆ ಯಾವಾಗ್ಲೋ ಬಿಟ್ಹೊಗ್ತಿದ್ರು ಅಂತ ಗೊನ್ಗೋಕೆ ಶುರು ಮಾಡ್ತಾನೆ. ನಾನು ಕೆಲಸ ಬಿಟ್ರೆ ನನ್ value ಗೊತ್ತಾಗತ್ತೆ ಅಂತಾನೆ. ಕೆಲಸ ಬಿಟ್ಮೇಲೆ ಇವ್ನ ಕಥೆ ಏನಾಗತ್ತೆ ಅಂಥ ಯೋಚನೆ ನೆ ಮಾಡಿರಲ್ಲ. ಹೀಗೆ ಓದಬೇಕಾದರೆ ಹಾಕ್ಕೊಂಡಿರೋ ಒಂದು ಪ್ರನಾಳಿಕೆ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ ಆಗಿರತ್ತೆ.
ಮನೆಯ ತೊಂದರೆ ತಾಪತ್ರಯಗಳನ್ನು ನೋಡುತ್ತಾ ಬೆಳೆದ , ಬಡತನದಲ್ಲೇ ಓದು ಮುಗಿಸಿದ ಹುಡುಗ, ತನಗೆ ಕೆಲಸ ಅಂಥ ಒಂದು ಸಿಕ್ಕಿಬಿಟ್ಟರೆ , ತನ್ನ ಅಪ್ಪ ಅಮ್ಮನ್ನ ತಾನೇ ನೋಡಿಕೊಳ್ಳಬೇಕು, ಪ್ರತೀ ತಿಂಗಳು ಅವರಿಗೆ ಅಂಥ ಒಂದಸ್ಟು ಹಣ ಕಳಿಸುತ್ತಾ ಇರಬೇಕು, ಅವರ ಕೊನೆಗಾಲದಲ್ಲದ್ರೂ ಅವ್ರು ಚೆನಗಿರ್ಲಿ, ಇಷ್ಟು ದಿನ ಅಂತು ಪಾಪ ಕಷ್ಟ ಪಟ್ರು, ಅಂಥ ಅಂದ್ಕೊಂಡಿರ್ತಾನೆ. ಹಾಗಂತ ತನ್ನ ಸ್ನೇಹಿತರಿಗೆ ಹೇಳೂ ಇರ್ತಾನೆ. ಅವ್ನು ಅಂದ್ಕೊಂಡ ಹಾಗೆ ಕೆಲ್ಸಾನು ಸಿಗತ್ತೆ, ಮೊದಲ್ನೇ ತಿಂಗಳ ಸಂಬಳವೂ ಸಿಗತ್ತೆ. ಆದ್ರೆ ಅವ್ನು, ಈ ತಿಂಗ್ಳು ಒಂದು ಮೊಬೈಲ್ ತಗೋ ಬಿಡೋಣ, ಅದಿಲ್ದೆ ಇದ್ರೆ Contacts ಇರಲ್ಲ, ಮುಂದಿನ ತಿಂಗಳಿಂದ ಪ್ರತೀ ತಿಂಗ್ಳು ತಪ್ಪದೆ ಹಣ ಕೊಡ್ಬೇಕು ಅಂದ್ಕೊತಾನೆ. ಆದರೆ, ಮುಂದಿನ ತಿಗಳಿನ ಇವನ ಮೊಬೈಲ್ ಬಿಲ್ಲು ಹೊಸಾ ಮೊಬೈಲ್ ಕಿಂತಾನು ಜಾಸ್ತಿ ಆಗಿರತ್ತೆ. ಯಾಕಂದ್ರೆ ಅವನ Contacts ಲಿ ಹೊಸ girl friend ಕೂಡ ಸೇರ್ಕೊಬಿತ್ತಿರ್ತಾಳೆ ಅವನಿಗೇ ಗೊತ್ತಿಲ್ದೆ. ಅವಾಗ್ಲೇ ಅವ್ನಿಗೆ ಅನ್ಸೋಕೆ ಶುರು ಆಗಿರತ್ತೆ, ಅಪ್ಪ ಅಮ್ಮನ್ನ ನೋಡ್ಕೊಳದ್ರಲ್ಲಿ ತನ್ನಷ್ಟೇ ತನ್ನ ಅಣ್ಣ, ಅಕ್ಕನದು ಪಾಲಿದೆ ಅಂತ. ಅವ್ರು ಕೂಡ ನೋಡ್ಕೊಳ್ಳಿ, ತನಗೆ ಮಾತ್ರ ಯಾಕೆ ಆ ಉಸಾಬರಿ ಅಂತ. ಹಾಕಿಕೊಂಡ ಪ್ರಣಾಳಿಕೆ ಈಡೇರುವ ಮೊದಲೇ ಎಲ್ಲೋ ಕುಳಿತು ತಣ್ಣಗೆ ನಗುತ್ತಿರುತ್ತದೆ.
ತನ್ನ Education ಗೆ ಅಂತ ಅಪ್ಪ ಸಾಲ ಮಾಡಿದಾನೆ, ಮದ್ವೆ ಅಗೂಕಿಂತ ಮೊದ್ಲು ಅದನ್ನೆಲ್ಲಾ ಹೇಗಾದ್ರು ಮಾಡಿ ತೀರಿಸಬೇಕು, ಒಂದು ವೇಳೆ ಆಗಿಲ್ಲ ಅಂದ್ರೆ ತನ್ನ ಮದ್ವೆ ಅಗೋ ಹುಡಗನ ಹತ್ರ ವಧುದಕ್ಷಿನೆನಾದ್ರು ತಗೊಂಡು ತನ್ನ ಅಪ್ಪನಿಗೆ ಕೊಡ್ಬೇಕು, ಅವನಿಗೆ ಯಾಕೆ ಸಾಲದ ಹೊರೆ, ಅದೂ ಇಳಿವಯಸ್ಸಿನಲ್ಲಿ, ಅಂತ ಅಂದ್ಕೊಂದಿರ್ತಾಳೆ ಹುಡುಗಿ. ಆದರೆ ತನ್ನ office ನಲ್ಲೆ ಕೆಲಸ ಮಾಡೋ ಚೆಂದದ ಹುಡುಗನನ್ನ ಲವ್ ಮಾಡಿ, ಮದ್ವೆ ಮಾಡ್ಕೊಂಡು, ಹನಿಮೂನ್ ಮುಗ್ಸೋ ಹೊತ್ಗೆ, ಅಪ್ಪನ ಸಾಲ ಇರೋದೇ ಮರ್ತೊಗಿರತ್ತೆ. ಪ್ರಪಂಚ ಅರಿಯದ ಅಪ್ಪ ಮಾತೆ ಆಡಿರಲ್ಲ. ಎಷ್ಟಾದರೂ ವಿದ್ಯೆ ಕಲಿತ ಮಗಳು ತಾನೆ, ಎಲ್ಲಾದರೂ ಚೆನ್ನಾಗಿರಲಿ ಅಂತ ಮನತುಂಬಿ ಹಾರೈಸಿರ್ತಾನೆ.
ವರದಕ್ಷಿಣೆಯ ಬಗ್ಗೆ, ಅದರ ದುಷ್ಪರಿಣಾಮಗಳ ಬಗ್ಗೆ, ತನ್ನ College ಜೀವನದಲ್ಲಿ ಮಾರುದ್ದದ ಭಾಷಣ ಮಾಡಿದ ಹುಡುಗ ನಿಜವಾಗಿಯೂ ಸ್ವಾಭಿಮಾನಿಯಾಗಿರುತ್ತಾನೆ. ಏನಾದರು ಮಾಡಿ ಈ ಪಿಡುಗನ್ನು ದೂರಮಾಡಬೇಕು ಎಂದು ಬಲವಾಗಿ ಪ್ರತಿಪಾದಿಸಿರುತ್ತಾನೆ. ವರದಕ್ಷಿಣೆ ಪಡೆದು ತಮ್ಮನ್ನೇ ಮಾರಿಕೊಳ್ಳುವವರನ್ನು ವಿರೋದಿಸಿರುತ್ತಾನೆ. ಹಾಗೆ, ತಾನು ಮಾತ್ರ ವರದಕ್ಷಿಣೆ ಮುಟ್ಟುವುದಿಲ್ಲ ಎನ್ನುವ ಹುಡುಗ, ಕೊನೆಗೆ ಅವರಾಗೆ ಕೊಟ್ಟರೆ ತೆಗೆದುಕೊಳ್ಳುವುದು ತಪ್ಪಲ್ಲ ಎಂದು ರಾಜೀ ಸೂತ್ರಕ್ಕೆ ಬರುತ್ತಾನೆ. ಮತ್ತು ಇವನ ಮದುವೆಯ ವೇಳೆಗೆ, ಇವನು ಕೊಳ್ಳುವ Site ಗೆ ದುಡ್ಡು ಕಡಿಮೆಯಾಗಿಬಿದುತ್ತದೆ. ವರದಕ್ಷಿಣೆ ತೆಗೆದುಕೊಳ್ಳದೆ ಬೇರೆ ದಾರಿಯೇ ಇಲ್ಲ. ಎಸ್ತಾದಎಊ ಅವರು ಕೊಡುತ್ತಿರುವುದು ಅವರ ಮಗಳಿಗೆ ತಾನೆ ಎಂದು ತನ್ನನ್ನು ತಾನೆ ಸಮರ್ಥಿಸಿಕೊಂಡು, ತನ್ನದೇ ಪ್ರಣಾಳಿಕೆಗೆ ಎಳ್ಳು ನೀರು ಬಿಟ್ಟಿರುತ್ತಾನೆ.
ಇಷ್ಟೇ ಅಲ್ಲ, ಲಂಚಾವತಾರದ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ, ಈ ದೇಶದ ಬಗ್ಗೆ, ದೇಶದ ಪ್ರಗತಿಯ ಬಗ್ಗೆ, ಅದರ ಭವಿಷ್ಯದ ಬಗ್ಗೆ, ಸಮಾಜದಲ್ಲಿ ನಾವು ಪಾಲಿಸುವ ಕರ್ತವ್ಯದ ಬಗ್ಗೆ, ಕೌಟುಂಬಿಕ ಸಾಮರಸ್ಯದ ಬಗ್ಗೆ, ಇಂದಿನ ಯುವಕರಿಗೆ ಅವರದೇ ಅದ ದೃಷ್ಟಿಕೊನವಿರುತ್ತದೆ. ಭವ್ಯ ಭಾರತದ ಭಾವೀ ಪ್ರಜೆಗಳ ಈ ಕಳಕಳಿ, ನಿಜಕ್ಕೂ ಶ್ಲಾಘನೀಯ ಕೂಡ. ಆದರೆ ಬದಲಾಗುವ ಜೀವನ, ಬೆನ್ನು ಬೀಳುವ ಜವಾಬ್ದಾರಿಗಳು, ಬಿಟ್ಟು ಬಿಡದೆ ಕಾಡುವ ವತ್ತಡಗಳು, ಅವರ ಸಿದ್ದಾಂತ ಗಳನ್ನೂ ಎಷ್ಟೋ ಬಾರಿ ಬುಡಮೇಲು ಮಾಡಿಬಿಡುತ್ತದೆ. ಚೆನ್ನಾಗಿ ಓದಿ ಒಳ್ಳೆಯ score ಮಾಡಿದ ಹುಡುಗ ವರ್ಷಗಟ್ಟಲೆ ಕೆಲಸ ಸಿಗದಿದ್ದಾಗ ಅನಿವಾರ್ಯವಾಗಿ ಲಂಚ ಕೊಟ್ಟು ಕೆಲಸ ಹಿಡಿಯುತ್ತಾನೆ. ಆಮೇಲೆ ಇವನು ಕೂಡ ಅದೇ ದಾರಿ ಹಿಡಿಯುತ್ತಾನೆ.
ಹಾಗಂತ ಎಲ್ಲ ವಿಷಯದಲ್ಲೂ, ಎಲ್ಲ ಕಾಲದಲ್ಲೂ ಹೀಗೆ ಆಗುತ್ತದೆ ಎಂದು ಹೇಳಲಾಗದು. ಕೆಲವರು ತಮ್ಮ ಜೀವನದ ಕೊನೆಯವರೆಗೂ ಒಂದು ಶಿಸ್ತನ್ನು, ಮೌಲ್ಯವನ್ನು ರೂಡಿಸಿಕೊಂಡು ಬಂದಿರುತ್ತಾರೆ. ಅವರನ್ನೇ ನಮ್ಮ ಬುದ್ದಿವಂತ ಸಮಾಜ 'ಬದುಕಲು ಬರದವರು' ಎಂದು ಕರೆಯುವುದು. ಏನೇ ಆದರು, ಭವಿಷ್ಯದ ಬಗ್ಗೆ ನಮ್ಮ ಯುವಕರು ಕಾಣುವ ಕನಸುಗಳು ಇಡೆರಲಿ ಎಂದು ಹಾರೈಸೋಣ. ಕನಸುಗಳನ್ನು ನನಸು ಮಾಡಿಕೊಳ್ಳುವ ಅವರ ಪ್ರಯತ್ನವನ್ನು ಅಭಿನಂದಿಸೋಣ. ಯುವಕರ ಕಯ್ಯಲ್ಲಿ ಭಾರತ ಪ್ರಕಾಶಿಸಲಿ, ನಾವು ನಾವಾಗಿ ಅಷ್ಟು ಮಾಡಬಹುದಲ್ಲ........
.........................................................................................................................................................
Saturday, May 9, 2009
ಇನ್ನೂ ನೋಡದ ನಿಮ್ಮ ಬಗ್ಗೆ ಚೂರು ಪಾರು......
ಈ ಪತ್ರವನ್ನು ನಿಮಗೆ ನೇರವಾಗಿಯೇ ಕೊಡಬಹುದಿತ್ತು. ಈಗೆಲ್ಲಿಯ ಪತ್ರ??? ಎಲ್ಲವು e MAil ನಲ್ಲೆ ಮುಗಿದು ಹೋಗುತ್ತದಲ್ಲ. ಅದಕ್ಕಿಂತಲೂ ಬ್ಲಾಗ್ ಹೆಚ್ಚು ಸೂಕ್ತ ಎಂದು ಇಲ್ಲಿಯೇ ನನ್ನ ಸ್ನೇಹದ ಹರಿವನ್ನು ಹರಿಸುತ್ತಿದ್ದೇನೆ. ನಮ್ಮ ಪರಿಚಯವೂ ಇಲ್ಲಿಯೇ ತಾನೆ?? Google talk ಇಲ್ಲದಿದ್ದರೆ ನಾನ್ಯಾರೋ, ನೀವ್ಯಾರೋ. ಸ್ನೇಹವೊಂದು ಕವನ, ನೂರಾರು ಭಾವನೆಗಳ ಮಿಶ್ರಣ, ಇನ್ನೂ ಏನೇನೋ ಹೇಳುತ್ತಾರೆ. ಬಿಡಿ, ನಮ್ಮ ಪರಿಚಯ ಎಲ್ಲಿ, ಹೇಗಾಯಿತು ಎನ್ನುವುದಕ್ಕಿಂತ ನಮಗೆ ಸ್ನೇಹವೆಂಬ ಭಾವ ಮುಖ್ಯ. ಅದೆಸ್ತು ಗಟ್ಟಿ ಎನ್ನುವುದು ಮುಖ್ಯ.
ಒಂದು ವಿಷಯ ಮಾತ್ರ ನನಗಿನ್ನೂ ನಗು ಬರಿಸುತ್ತಿದೆ. ನಿಮಗೆ ನನ್ನ ಹೆಸರೇ ಗೊತ್ತಿರಲಿಲ್ಲವಲ್ಲ. ಆದರು ನಮ್ಮ ಸ್ನೇಹಕ್ಕೆ, ಮಧುರ ಮಾತಿಗೆ ಅದರಿಂದ ಯಾವ ತೊಂದರೆಯೂ ಅಗೆ ಇಲ್ಲೇ. ನಿನ್ನ ಕಂಗಳ ಕೊಳದಿ ಬೆಳದಿಂಗಲಿಳಿದಂತೆ ಎಂಬ ಹೆಸರಿನ ನನ್ನ profile ನಲ್ಲಿ ನನ್ನ ಹೆಸರೇ ಇಲ್ಲ ಎಂಬುದು ನನಗೆ ಹೊಳೆದಿದ್ದೇ ಆವಾಗ. ಅದೆಸ್ಟು ಚೆನ್ನಾಗಿ ಮಾತನಾಡುತ್ತಿದ್ದೆವು ನಾವು??? ಪ್ರತಿ ಮಾತಲ್ಲೂ ಕಾಲೆಳೆಯುವುದು, ಕೀಟಲೆ ನಡೆದೇ ಇತ್ತು. ಹಾಗೆ ಮಾಡುತ್ತಲೇ ನಮ್ಮ ನಮ್ಮ ಪರಿಚಯವನ್ನೂ ಮಾಡಿಕೊಂಡೆವು. ಅಲ್ಲಿಂದ ನಮ್ಮ ಮಾತು ಪುಸ್ತಕಗಳತ್ತ ತಿರುಗಿತ್ತು. ನಾವು ಓದಿದ ಪುಸ್ತಕಗಳ ಬಗ್ಗೆ ಚರ್ಚೆ. ಒಟ್ಟಿನಲ್ಲಿ ಅದೊಂದು ಮುಗಿಯದ ಮಾತುಕತೆ. ಕೆಲವೇ ಕೆಲವು ದಿನಗಳಲ್ಲಿ ಜನ್ಮ ಜನ್ಮಾಂತರದ ಗೆಳೆಯರಾಗಿಬಿತ್ತೆವಲ್ಲ ನಾವು...
ಸ್ನೇಹದ ಬಗ್ಗೆ, ಅದರ ವಿಶಾಲತೆಯ ಬಗ್ಗೆ, ಅದರ ಆಳ ಅಗಲಗಳ ಬಗ್ಗೆ , ಸ್ನೇಹದ ಪ್ರಾಮುಖ್ಯತೆಯ ಬಗ್ಗೆ, ಅದೆಸ್ಟೋ SMS ಗಳು ಬರುತ್ತವೆ, ನೂರಾರು ಲೇಖನಗಳು ಬರುತ್ತವೆ. ಅದೆಲವನ್ನು ನಾನು ಮತ್ತೆ ಮತ್ತೆ ಹೇಳುವುದಿಲ್ಲ. ಯಾಕೆಂದರೆ ಅದೆಲ್ಲ ನನಗೂ ಗೊತ್ತು, ನಿಮಗೂ ಗೊತ್ತು. ಕೇವಲ ನಮ್ಮ ಸ್ನೇಹಕ್ಕಾಗಿ ನಾನು ಬರೆಯುತ್ತಿರುವ ಈ ಪತ್ರ ಕೂಡ ಅದೆಲ್ಲವನ್ನೂ ಹೇಳಬಹುದು. ಆದರೆ ಎಲ್ಲ ಸಂಭಂದಗಳಲ್ಲೂ, ಸ್ನೇಹ ಸಂಭಂದ ಹೆಚ್ಚು ಗಟ್ಟಿ ಮತ್ತು ಪವಿತ್ರ ಎಂದು ಮಾತ್ರ ಹೇಳಬಲ್ಲೆ. ಯಾಕೆಂದರೆ ಏನನ್ನು ಬೇಕಾದರೂ ಮಾಡದೆ ತಿಂಗಳುಗಟ್ಟಲೆ ಕಳೆದು ಬಿಡಬಹುದು. ಆದರೆ ಸ್ನೇಹಿತರನ್ನು ನೋಡದೇ , ಅವರ ಜೊತೆ ಮಾತನಾಡದೇ, ಇದ್ದರೆ ಮನಸ್ಸು, ಬೆಕ್ಕು ಕುಡಿದ ಗಂಜಿಯ ಮಾಡಿಕೆಯಾಗಿಬಿದುತ್ತದೆ.
ಇಸ್ಟೆಲ್ಲಾ ಹೇಳಿದ ಮೇಲೆ ನನಗೆ ಮತ್ತೆ ಮತ್ತೆ ನೆನಪಾಗುವುದು ನಾನಿನ್ನು ನಿಮ್ಮನ್ನು ನೋಡೇ ಇಲ್ಲವಲ್ಲ ಎಂದು. ಮಾತನಾಡಲು ಮುಹೂರ್ತ ಹುಡುಕಿದಂತೆ ನಿಮ್ಮನ್ನು ನೋಡಲು ಕೂಡ ಅದೆಸ್ಟು ದಿನ ಕಾಯಬೇಕೋ??? ಯಾವಾಗ ನಮ್ಮ ನಿಮ್ಮ ಬೇಟಿ??? ಆದರೆ ನನಗೆ ಒಂದು ಸಣ್ಣ ಭಯ ಕಾಡುತ್ತುದೆ. ನಾವು ಒಬ್ಬರನ್ನೋಬರು ಬೇಟಿ ಮಾಡಿದರೆ ನಮ್ಮ ಸ್ನೇಹದಲ್ಲಿ ಮೊದಲಿನ ಉತ್ಸಾಹ, ಆಸಕ್ತಿ ಕಡಿಮೆಯಾಗಳುಬಹುದು. ದೂರದ ಬೆಟ್ಟ ಕಣ್ಣಿಗೆ ತಂಪಂತೆ. ಬರೀ ಮಾತು ಕೇಳಿ, ಪೋಟೋ ನೋಡಿ, ನೀವು ಹೇಗಿರಬೇಕೆಂದು ನಾನು, ನಾನು ಇನ್ಹೇಗೋ ಇರಬಹುದೆಂದು ನೀವು, ನಾವಿರುವ ನೈಜತೆಗಿಂತಲೂ ಹೆಚ್ಚಿನ ಬ್ರಮೆಯನ್ನು, ಕಲ್ಪನೆಯನ್ನು, ಕಟ್ಟಿಕೊಂಡಿರುತ್ತೇವೆ. ಆದರೆ, ನೈಜತೆಗು ಕಲ್ಪನೆಗೂ ಅಜಗಜಾಂತರ ವ್ಯತ್ಯಾಸ ಇರುತ್ತದಲ್ಲ, ಯಾವುದೋ ಒಂದು ಘಟನೆಗಾಗಿ ಕಾಯುವಿಕೆಯಲ್ಲಿನ ಖುಷಿ, ಆ ಘಟನೆಯ ನಂತರ ಇರುವುದಿಲ್ಲವಂತೆ. ಹೀಗಾಗಿ ಉತ್ಸಾಹ ದಿಂದ ಪ್ರಾರಂಭವಾದ ನಮ್ಮ ಬೇಟಿ, ನಿರುತ್ಸಾಹದಲ್ಲಿ ಕೊನೆಯಾಗಲೂಬಹುದು. ನಿಧಾನವಾಗಿ ಸಿಕ್ಕೋಣ ಬಿಡಿ. ಅದ್ಯಾವುದು ನಮ್ಮ ಸ್ನೇಹಕ್ಕೆ ಅದ್ದಿಯಾಗುವುದಿಲ್ಲ ಅಂದುಕೊಳ್ಳುತ್ತೇನೆ.
ಈ ಪತ್ರ ಬರೆಯಲು ಕುಳಿತಾಗ, ಏನು ಬೇರೆಯಲಿ, ಹೇಗೆ ಪ್ರಾರಂಭಿಸಲಿ ಎಂದೇ ತೋಚದಾಗಿತ್ತು. ಆದರೆ ಬರೆಯಲು ತೊಡಗಿದ್ದೆ ತಡ, ನನ್ನ ಪೆನ್ನಿಗೆ ಬ್ರೇಕೇ ಇಲ್ಲದೆ ಇಲ್ಲಿಯವರೆಗೆ ಬರೆಸಿಬಿಟ್ಟಿತು. ಏನೇ ಇರಲಿ, ನಿಮ್ಮ ಸ್ನೇಹಕ್ಕೆ, ನೀವು ತೋರಿಸುವ ಪ್ರೀತಿಗೆ, ನಿಮ್ಮ ಕಳಕಳಿಗೆ, ನಿಮ್ಮ ಅಭಿಮಾನಕ್ಕೆ, ನೀವು ತುಂಬುವ ಉತ್ಸಾಹಕ್ಕೆ, ನಿಮ್ಮ ಬೆಲೆಬಾಳುವ ಸಲಹೆ ಸೂಚನೆಗಳಿಗೆ ನಾನು ಕೃತಜ್ಞನಾಗಿದ್ದೇನೆ. ನಮ್ಮ ಸ್ನೇಹ ನಿರಂತರವಾಗಿರಲಿ. ಹೇಳುವುದು ಇನ್ನೂ ತುಂಬಾ ಇದೆ. ಜೊತೆ ಜೊತೆಗೆ ಕೇಳುವುದು ಕೂಡ. ಇನ್ಯಾವತ್ತಾದರೂ ಮಾತನಾಡೋಣ. ಜೀವನದ ಸಂಪೂರ್ಣ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತಾ,
ನಿಮ್ಮ ಪ್ರೀತಿಯ ಸ್ನೇಹಿತ..