Saturday, October 25, 2008

ಹೀಗಿತ್ತು ಅಂದಿನ ಕಟಿಂಗ್ ಪ್ರಸಂಗ

ಆದಿನ ನಾನು ಹಿಂದೆಂದಿಗಿಂತಲೂ ಹೆಚ್ಚು ಚಿಂತಾ ಕ್ರಾಂತನಾಗಿದ್ದೆ . ನನ್ನ ಮುಖದಲ್ಲಿ ಚಿಂತೆಯ ಗೆರೆಗಳು ಸ್ಪಷ್ಟವಾಗಿ ಮೂಡಿದ್ದವು. ಏನು ನಡೆಯುತ್ತದೆ ಎಂದು ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೂ ಏನೋ ನಡೆಯುವುದು ನಿಶ್ಚಯವಾಗಿತ್ತು. ಅದಕ್ಕೆ ಪೂರಕವೆಂಬಂತೆ ನನ್ನ ತಂದೆ ತಾಯಿ ಕೂಡ ನನ್ನನ್ನು ಸಮಾಧಾನ ಪಡಿಸುತ್ತಿದ್ದರು. ಮತ್ತು ನನ್ನ ಚಿಂತೆಯೇ ಅವರಿಗೆ ದೊಡ್ಡ ಸಮಸ್ಯೆಯಾಗಿತ್ತು. ಇಸ್ಟೆಲ್ಲಾ ಪಿತಿಕೆಯನ್ನು ಕೇಳಿ ಅಂತಹ ತಲೆ ಹೋಗುವ ಸಮಸ್ಯೆ ಎನಿತ್ತಪ್ಪ ಎಂದುತ್ತಿದ್ದಿರ? ನಿಜಕ್ಕೂ ಅದುತಲೆ ಹೋಗುವ ಸಮಸ್ಯೆಯೇ ಆಗಿತ್ತು. ಅಂದು ನಮ್ಮ ಮನೆಗೆ ಹೇರ್ ಕಟಿಂಗ್ ಹನುಮಂತ ಬರುವವನಿದ್ದ . ಆದಿನಗಳಲ್ಲಿ ಕೇವಲ ಸಲ್ಪ ದವಸ ದಾನ್ಯಗಳು ಮತ್ತು ಒಂದೈವತ್ತು ರುಪಾಯಿ ಕೊಟ್ಟರೆ ವರ್ಷವೆಲ್ಲ ಬಂದು ಕಟಿಂಗ್ ಮಡಿ ಹೋಗುತ್ತಿದ್ದರು . ಇಗ ಕೇವಲ ಒಂದು ಕತಿನ್ಗಿಗೆ ನೂರಾರು ರುಪಾಯಿ ತೆಗೆದುಕೊಳ್ಳುವ ಹೈಟೆಕ್ ಕಟಿಂಗ್ ಶಾಪುಗಳು ತಲೆಯೆತ್ತಿವೆ. ಕೂದಲಿನ ಜೊತೆಗೆ ನಮ್ಮ ಜೇಬಿಗೂ ಕತ್ತರಿ ಆಡಿಸಿಬಿದುತ್ತಾರೆ.

ಅಮತು ಬಿಡಿ. ಈಗ ವಿಷಯಕ್ಕೆ ಬರೋಣ . ಮೊದಲಿನಿಂದಲೂ ನನಗೆ ಕಟಿಂಗ್ ಎಂದರೆ ತುಂಬಾ ಭಯ. ಬಹುಷಃ ಹಾವನ್ನು ಬಿಟ್ಟರೆ ನಾನು ತುಂಬ ಹೆದರುವುದು ಕಟಿಂಗಿಗೆ ಮಾತ್ರ. ಆಡಿನವು ಅಸ್ಟೇ . ಅಂತು ಹನುಮಂತ ಬಂದೆ ಬಿಟ್ಟ. ನಾನೆಸ್ತೆ ಬೇಡವೆಂದರೂ ನನ್ನನ್ನು ಬಲವಂತವಾಗಿ ಕೂರಿಸಿಕೊಂಡ. ತನಗೆ ತಿಳಿದ ಎಲ್ಲಾ ಉಪಾಯಗಳನ್ನು ಪ್ರಯೋಗೊಇಸಿದ ಮೇಲೆ ನಾನು ಒಪ್ಪಿ ಕುಳಿತುಕೊಂಡೆ. ಅಲ್ಲಿಂದ ಪ್ರಾರಮ್ಬವಾಯಿತು ಆತನ ನಿಜವಾದ ವರಸೆ. ಆಕಡೆ ತಿರುಗು, ಈಕಡೆ ತಿರುಗು, ಎಂದು ನನ್ನ ತಲೆಯನ್ನು ತನ್ನ ಕೈಯ ಚೆಂಡಿನಂತೆ ಬಳಸಹತ್ತಿದ ಆತ, ಚಕ್ ಚಕ್ ಎಂದು ಶಬ್ದ ಬರುವ ಕತ್ತರಿಯನ್ನು ಆಡಿಸುತ್ತಿದ್ದಾರೆ, ನನ್ನ ಜೀವ ಕೈಗೆ ಬಂದಂತಾಗಿತ್ತು. ಇನ್ನೊಂದು ಕಡೆ ಬೇರೆಯವರೆಲ್ಲ ಅದನ್ನು ನೋಡಿ ಮಜತೆಗೆದುಕೊಲ್ಲುತ್ತಿದ್ದರೆನೋ ಎಂಬ ಅನುಮಾನ ಬೇರೆ. ಕುತೂಹಲ ತಡೆಯಲಾಗದೆ ನನ್ನ ಕತ್ತನ್ನು ಅತ್ತಇರುಗಿಸೋನವೆಂದರೆ ನನ್ನ ತಲೆ ಹನುಮಂತನ ಕೈಯಲ್ಲಿ.

ಇಎಲ್ಲ ಪರಿಪಾತಲಿನ ನಡುವೆ ಇನ್ನೊಂದು ಭಯ ಬೇರೆ. ನನ್ನ ಜೊತೆ ಓದುತ್ತಿರುವ ನನ್ನ ಸ್ನೇಹಿತರಿಗೆ ನಾನೇ ಸಾಕಸ್ತು ಸಲ ಅವರ ಹೇರ್ ಕಟಿಂಗ್ ಬಗ್ಗೆ ಕಳೆಲೆದಿದ್ದಿದೆ. ಆಗೆಲ್ಲೇ ಇಳಿ ಮಾಡಿದ ಕಿತಾಪತಿ, ಮೌಸ್ ಕಟ್ ಇತ್ಯಾದಿ ಪದಗಳು ಹೆಚ್ಚು ಬಳಕೆಯಲ್ಲಿದ್ದವು. ಹನುಮಂತನ ಮಾತನ್ನು ಕೇಳದಿದ್ದರೆ ನನ್ನ ಕೂದಲು ಕೂಡ ಅದೇ ರೀತಿ ಅವಮಾನಕ್ಕೆ ತುತ್ತಾಗಬಹುದೆಂದು ನನ್ನ ದುರಾಲೋಚನೆ. ಕೂದಲು ಉದ್ದವೇ ಇರಲಿ ಎಂದು ಎಸ್ಟೆ ಹೇಳಿದರು ಆತ ಕೇಳದೆ ದೂರದಲ್ಲಿ ನಿಂತು ಸನ್ನೆಯಿಂದಲೇ ಚಿಕ್ಕದು ಮಾಡಲು ಹೇಳುತ್ತಿದ್ದ ನನ್ನಮ್ಮನ ಮಾತನ್ನೇ ಕೇಳುತ್ತಿದ್ದ.

ನನ್ನ ವಿಚಾರಗಳು ಇರೀತಿ ಸಾಗುತ್ತಿದ್ದಗಲೇ ಹನುಮಂತ ತನ್ನ ಕತ್ತರಿ ಪ್ರಯೋಗ ಮುಗಿಸಿ ತನ್ನ ರೆಜರಿಗೆ Blade ಹಾಕುತ್ತಿದ್ದ. ಒಂದು ಕೈಯಲ್ಲಿ ನೀರನ್ನು ತೆಗೆದುಕೊಂಡು ನನ್ನ ತಲೆಯ ಸುತ್ತಲು ಒದ್ದೆ ಮಾಡಿದ ಆತ ನಿದಾನವಾಗಿ ಕಿವಿಯ ಪಕ್ಕದಲ್ಲಿ ಪ್ರಾರಂಬಿಸಿ ಇನ್ನೊಂದು ಕಿವಿಯವರೆಗೂ ತನ್ನ ರೆಜರನ್ನು ಆಡಿಸಿದ. ಅದು ಸಲ್ಪ ಕುಶಿ ಕೊಟ್ಟಿತಾದರೂ ಅಸ್ತು ಹೊತ್ತಿಗೆ ನನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುವ ಕುತೂಹಲವೂ ಆರಂಭವಾಗಿತ್ತು.

ಅಂತು ಇಂತೂ ಎಲ್ಲಾ ಮುಗಿಸಿ ಅಂಚಿನಲ್ಲಿ ತುಕ್ಕು ಹಿಡಿದ ತನ್ನ ಕನ್ನಡಿಯನ್ನು ನನ್ನ ಮುಖಕ್ಕೆ ಹಿಡಿದಾಗ, ತುಂಬಾ ಗಲೆತೆ ಮಾಡುತ್ತಿದ್ದ ನನ್ನನ್ನು ಕೂರಿಸಿಕೊಂಡು ಕಟಿಂಗ್ ಮಾಡಿದ ಸಮಾಧಾನ ಆತನ ಮುಖದಲ್ಲಿದ್ದರೆ, ಕನ್ನಡಿಯನ್ನು ನೋಡಿ ಆತನನ್ನು ಸಾಯಿಸುವಸ್ತು ಕೋಪ ನನಗೆ ಬಂದಿತ್ತು. ಏಕೆಂದರೆ, ಯಕ್ಷಗಾನದಲ್ಲಿ ಬರುವ ಹಾಸ್ಯ ಕಲಾವಿದರ ಹಾಗಾಗಿತ್ತು ನನ್ನ ಕೂದಲು. ಬಿಎಸ್ಸಿ ಎನ್ನೆಸ್ಸಿ ಷೇರು ಸುಚ್ಯನ್ಕದಂತೆ ಒಂದು ಕಡೆ ಮೇಲೀರಿದರೆ ಇನ್ನೊಂದು ಕಡೆ ಪಾತಾಳ ಸೇರಿತ್ತು.

ಅಸ್ತು ಹೊತ್ತು ಆತನೆದೆಗಿದ್ದ ನನ್ನ ಕೋಪ ನಮ್ಮನ ಕಡೆ ತಿರುಗುತ್ತಿತ್ತು. ಇದಕ್ಕೆಲ್ಲ ಮೂಲಕಾರಣ ನನ್ನಮ್ಮ ಎಂಬ ಭಾವನೆ ನನ್ನಲ್ಲಿ ಮನೆಮಾಡಿತ್ತು. ಆದರೆ ಎಸ್ಟೆ ರಂಪ ಮಾಡಿದರು ಕಳೆದು ಹೋದ ನನ್ನ ಕೂದಲಿನ ಒನಪು ಮರಳಿ ಬರುವ ಮತ್ತೆ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಾಳೆ ನನ್ನ ಸ್ನೇಹಿತರ ನಡುವೆ ಅನುಭವಿಸಬೇಕಾದ ಅವಮಾನವನ್ನು ನೆನೆಪಿಸಿಕೊಂಡು ನನ್ನ ಸಿಟ್ಟು ಹತಾಶೆಯಾಗಿ ಪರಿವರ್ತನೆಯಾಗುತ್ತಿತ್ತು. ನನ್ನ ಪ್ರಕಾರ ಎಲ್ಲವನ್ನು ಕಳೆದುಕೊಂಡೆ ಎಂಬ ಭಾವ ನನ್ನನ್ನು ಆವರಿಸಿತ್ತು.

ನಾನು ಎನಿಸಿದಂತೆಯೇ ಮರುದಿನ ನನ್ನ ಕೂದಲಿನ ಧಾರುಣ ಕಥೆ ನನ್ನ ಸ್ನೇಹಿತರಅ ಬಾಯಿಗೆ ಆಹಾರವಾಗಿತ್ತು. ನಾನು ಸಿಕ್ಕಿಕೊಳ್ಳದೆ ಸ್ನೇಹಿತರ ಕಾಲನ್ನು ಮಾತ್ರ ಎಳೆಯುತ್ತಿದ್ದ ನನ್ನನ್ನು ಸಿಕ್ಕಿಸಲು ಕಾಯುತ್ತಿದ್ದ ಅವರಿಗೆ ನಿಧಿ ಸಿಕ್ಕಿದ ಸಂಬ್ರಮವಾಗಿತ್ತು. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ. ತುಂಬಾ ದಿನದವರೆಗೂ ಇದೇ ವಿಷಯವನ್ನು ಅವರು ನನ್ನ ಬಾಯಿ ಮುಚ್ಚಿಸಲು ಬಂದವಾಳವಾಗಿಸಿಕೊಂಡರು ಕೂಡ. ಈ ಸುದ್ದಿ ನನ್ನ ಟೀಚರ್ ಜ್ಕಿವಿಗು ಬಿದ್ದಿದ್ದು ಮತ್ತು ಅವರು ಕೂದಲಿನ ವಿಷಯ ಬಂದಾಗಲೆಲ್ಲಾ ನನ್ನ ಕಡೆಯೇ ನೋಡುತ್ತಿದ್ದುದು ನನ್ನ ಪಾಲಿಗೆ ಬಿಸಿ ತುಪ್ಪವಾಗಿತ್ತು. ಅಂದಿನಿಂದ ಇಂದಿನವರೆಗೂ ಪ್ರತಿ ತಿಂಗಳು ಕಟಿಂಗ್ ಮಾಡಿಸುತ್ತಿದ್ದರು ಅಂದಿನ ಕಹಿ ನೆನಪು ಮಾತ್ರ ಮರೆಯುತ್ತಿಲ್ಲ.
>>>>>>><<<<<<<<<

12 comments:

Ashwath said...

enu guru sakattagittu ninna story
adu BSE noo athava NSE nooo adre adu matra, ninna story avaga teacher matte friendge eega namage "hasii Beesi" Marya.

hanumatha innu iddna helu nodan
avanege ondu "BEST HAZAMA NA AWARD KODONA" en-anthi.

Hm............

Unknown said...

Nanage story odolikke time illa kutu mataduvaga story helu,spot nalli comments kodtini ok

Unknown said...

Hi, Boss, nimdu blog page iddiddu gotte irlilla nange... super agide ... keep it up

Unknown said...

Hey Come on dude how wonderfull u r writing, so i need to appreciate your hornfull thinking and ability and i dont think that u have this much creative mind.....

me said...

Edunna odidare ravi belegereya kasbath odida hage anustu...... ok, tumba chanaagiddu.
keep it up.

vishwa said...

super aagi iddha idhanna nodire nanagu ondu blog page creat madavu anta anista iddu !keep writing super!

Anonymous said...

hey super ale,enta sakat eddu andre anu fida agbitti.nin baraya style sakat esta atu.keep it up man

Anonymous said...

hey super ale,enta sakat eddu andre anu fida agbitti.nin baraya style sakat esta atu.keep it up man

Unknown said...

Blogalli entha iddu annudu aste mukya alla....typing bagge care thga...illa andre apartha agthu....kan muchkyande type madthya enthadu......any way its good.....keep it up.....Gopal....

Arun said...
This comment has been removed by the author.
niranjan.makkimane said...

Sakkattagiddu bosss

Unknown said...

Chennagide... Nim hair cuting story ge sensex, Nifty sersiddu super