Sunday, December 21, 2008

ಸಾವಯವ ಕೃಷಿ ಮತ್ತು ಹಸಿರು ಕ್ರಾಂತಿ

ಹಸಿರು ಮತ್ತು ಕೃಷಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕೃಷಿಯಲ್ಲಿ ಹಸಿರಿನ ಪ್ರಾಮುಖ್ಯತೆಯನ್ನು ನೋಡಿಯೇ ಕೃಷಿಯನ್ನು ಹಸಿರಿಗೆ ಹೊಲಿಸಿದ್ದರೆನೋ? ಆದರೆ ಹಸಿರಿನೊಂದಿಗೆ ಇಂತಹ ಅವಿನಾಭಾವ ಸಂಭಂಧ ಹೊಂದಿರುವ ಕೃಷಿ ೧೯೬೦ ರಲ್ಲಿ ಭಾರಿ ಪ್ರಚಾರದೊಂದಿಗೆ ಪ್ರಾರಂಭವಾದ ಹಸಿರು ಕ್ರಾಂತಿಯಿಂದ ತನ್ನ ವರ್ಚಸ್ಸನ್ನೆ ಕಳೆದುಕೊಂಡು ಅಧ ಪತನದತ್ತ ಸಾಗಿತು ಎಂದರೆ ಅದು ವಿಪರ್ಯಾಸವೇ ಸರಿ. ಕೇವಲ ೨೫ - ೩೦ ವರ್ಷಗಳ ಹಿಂದೆ ೫- ೬ ಜೋಡಿ ಎತ್ತುಗಳನ್ನು ಹೊಂದಿದ್ದರ ಆ ರೈತನ ವೈಭವವೇ ಬೇರೆಯಾಗಿತ್ತು. ಆಹಾರ ದಾನ್ಯಗಳನ್ನು ಬೆಳೆಯುವ ರೈತರು ಸಹ ವಾಣಿಜ್ಯ ಬೆಳೆಗಾರರಂತೆ ಹಾಗು ಹೀಗು ಹಣವನ್ನು ಕಾಣುತ್ತಿದ್ದರು. ವಾಣಿಜ್ಯ ಬೆಳೆಗಾರರು ಸಹ ತಮಗೆ ಬೇಕಾದ ಆಹಾರ ದಾನ್ಯಗಳನ್ನು ಬೆಳೆದು ಕೊಳ್ಳುತ್ತಿದ್ದರು.
ಆದರೆ ಹಸಿರು ಕ್ರಾಂತಿಯೊಂದಿಗೆ vairas ನಂತೆ ಬಂದ ರಾಸಾಯನಿಕಗಳು ಮತ್ತು ಇತರ ಅಧುನಿಕ ಕೃಷಿ ಉಪಕರಣಗಳು ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತನ ನ್ನು ನೇಣಿನ ಅಂಚಿಗೆ ತಂದು ನಿಲ್ಲಿಸಿತು ಎಂಬುದು ವಿಶಾದನಿಯ. ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ದೇಶವನ್ನೇ ಕೊಳ್ಳೆ ಹೊಡೆದ ಅಂಗ್ಲರಂತೆ , ಮೊದಲೆರಡು ವರ್ಷ ಉತ್ತಮ ಬೆಳೆಯೂ ಬಂತು. ಆಹಾರ ದನ್ಯದ ಕೊರತೆಯಿಂದ ಬಳಲುತ್ತಿದ್ದ ಭಾರತಕ್ಕೆ ಅತಿ ವೇಗವಾಗಿ ಆಹಾರದ ಕೊರತೆ ನೀಗಿಸಲು ಇದು ಏಕೈಕ ಪರಿಹಾರವಾಯಿತು. ಮತ್ತು ಅದನ್ನು ಜಾರಿಗೆ ತರಲು ಸರ್ಕಾರದ ಬೆಂಬಲವು ಸಿಕ್ಕಿತು. ಒಂದೆರೆಡು ವರ್ಷಗಳಲ್ಲಿಯೇ ಭಾರತ ಆಹಾರ ದನ್ಯಗಳನ್ನು ರಫ್ತು ಮಾಡಲು ಪ್ರಾರಂಬಿಸಿತು. ಆದರೆ ಇಂದು ಅದೇ ಹಸಿರು ಕ್ರಾಂತಿ ಬಗಲ ಮುಳ್ಳಾಗಿರುವುದು ವಿಪರ್ಯಾಸವಲ್ಲದೆ ಮತ್ತಿನ್ನೇನು? ನಾಲ್ಕಾರು ಹಸುಗಳನ್ನು ಸಾಕಿ ಹೈನುಗಾರಿಕೆಯ ಜೊತೆಜೊತೆಗೆ ಕೃಷಿಯ ಪಮುಖ ಅಗತ್ಯಗಳಲ್ಲೊಂದಾದ ಗೊಬ್ಬರವನ್ನು ಪಡೆಯುತ್ತಿದ್ದ ರೈತ ಅತಿ ಹೆಚ್ಚು ಹಾಲು ಕರೆಯುವ ವಿದೇಶಿ ತಳಿಯ ಒಂದೇ ಹಸುವನ್ನು ಸಾಕಲು ಪ್ರಾರಂಬಿಸಿದ. ಸಾವಯವ ಗೊಬ್ಬರದ ಬದಲಿಗೆ ರಸಾಯನಿಕ ಗೊಬ್ಬರ ಬಳಸಲು ಪ್ರಾರಂಬಿಸಿದ. ರಾಸಾಯನಿಕ ಗೊಬ್ಬರಕ್ಕಾಗಿ ಇಂದಿನ ರೈತರು ಪರದಾಡುತ್ತಿರುವುದನ್ನು ನೋಡಿದರೆ ಕೃಷಿ ಭೂಮಿಗಿಂತಲೂ ರೈತನೇ ರಾಸಯನಿಕಕ್ಕೆ ಹೆಚ್ಚು ಅವಲಂಬಿತನಗಿದ್ದನೇನೋ ಎಂದು ಅನಿಸುತ್ತದೆ. ಮೊನ್ನೆ ಮೊನ್ನೆ ಹಾವೇರಿಯಲ್ಲಿ ನಡೆದ ರೈತರ ಮೇಲಿನ ಗೋಲಿಬಾರ್ ಘಟನೆ ಇದಕ್ಕೆ ಇನ್ನಸ್ಟು ಇಂಬು ಕೊಡುತ್ತದೆ.
2 ವರ್ಷಗಳ ಹಿಂದೆ ಸುಭಾಷ್ ಪಾಳೇಕರ್ ಎಂಬ ಕೃಷಿ ತಜ್ನನ ಭಾಷಣಗಳಿಗೆ ಜನ ತಂಡೋಪ ತಂಡವಾಗಿ ಬರುತ್ತಿದ್ದರು. ಮತ್ತು ಅದು ಪಾಲೇಕರ್ ಕೃಷಿ ( ಶೂನ್ಯದಲ್ಲಿ ಕೃಷಿ) ಎಂದೆ ಹೆಸರು ಪಡೆದಿತ್ತು ಮತ್ತು ಸಾವಯವ ಕೃಷಿಯಬಗ್ಗೆ ಆಶಾ ಭಾವವನ್ನು ಮೂಡಿಸಿತ್ತು. ಆದರೆ ಮೊಪ್ನ್ನೇ ನಡೆದ ರೈತರ ಹೋರಾಟ ಮತ್ತು ರೈತರ ಮೇಲಿನ ಗೋಲಿಬಾರ್ ಎಲ್ಲವನ್ನು ತಲೆಕೆಳಗಾಗಿಸಿತು.
ಹಸಿರು ಕ್ರಾಂತಿಯ ನಂತರ ಬಂದ ಉದಾರೀಕರಣ ನೀತಿಗಳು ರೈತನನ್ನು ಮತ್ತು ಕೃಷಿಯನ್ನು ಮತ್ತಸ್ತು ಅತಂತ್ರತೆಯತ್ತ ನೂಕಿತು . ಹಳ್ಳಿಗಳ ದೇಶ, ಕೃಷಿಕರ ನಾಡು, ಎಂದೆಲ್ಲ ಕರೆಸಿಕೊಂಡಿದ್ದ ಭಾರತದಲ್ಲಿ ನಗರೀಕರಣದ ಗಾಳಿ ಬೀಸತೊಡಗಿತು. ಕೃಷಿಯನ್ನೇ ತಮ್ಮ ಜೀವನದ ಆಧಾರ ವಾಗಿಸಿಕೊಂದವರು ಸಹ ನಗರದ ಥಳುಕು ಬಳುಕಿಗೆ ಮಾರು ಹೋಗಿ ಅತ್ತ ನಗರಿಗರು ಆಗದೆ ಇತ್ತ ಹಳ್ಳಿಗರು ಆಗದೆ ಅತಂತ್ರ ಸ್ಥಿತಿಯಲ್ಲಿ ಪರದಾಡುತ್ತಿದ್ದಾರೆ.
ಇಂತಹ ಸ್ಥಿತಿಯಲ್ಲಿ ಸಹಜ ಕೃಷಿಯನ್ನು ಉಳಿಸಿಕೊಳ್ಳಲು ಸರ್ಕಾರದ ಸಹಾಯ ಅಗತ್ಯವಾದರೂ ರಾಜಕೀಯ ದೊಂಬರಾಟದಲ್ಲಿ ತೊಡಗಿರುವ ರಾಜಕಾರಣಿಗಳಿಂದ ಹೆಚ್ಚಿನ ಸಹಕಾರ ನಿರೀಕ್ಷಿಸುವುದು ಮೂರ್ಖತನವೇ ಸರಿ. ಅವರಿಂದ ಉಪಕಾರಕ್ಕಿಂತ ಅಪಕಾರವಾಗದಿದ್ದರೆ ಅಸ್ತೆಎಂದರೆ ಸಾಕು. ಆದರೆ ಕೃಷಿ ವಿಶ್ವವಿದ್ಯಾಲಯಗಳು ಕೃಷಿಕರಿಗೆ ಈ ಬಗ್ಗೆ ಹೆಚ್ಚಿನ ತರಬೇತಿ ಕೊಡಬಹುದು. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ರೈತರೇ ಈ ಬಗ್ಗೆ ಸ್ವಯಮ್ ಸ್ಪೂರ್ತಿಯಿಂದ ಮುಂದುವರಿಯಬೇಕಾಗಿದೆ. ಇಂದಿನ ಪ್ರಗತಿಪರ ರೈತರು ಮತ್ತು ಯುವ ಸಮುದಾಯ ಈ ಬಗ್ಗೆ ವಲವು ತೋರುತ್ತಿರುವುದು ಸಮಾಧಾನದ ವಿಷಯವಾದರೂ ಅದು ಕೇವಲ ಪತ್ರಿಕೆಗಳಲ್ಲಿ ಪ್ರಚಾರಕ್ಕಗಿಯೂ ಅಥವಾ ಕೃಷಿಯ ಏಳಿಗೆಗೆ ಸಹಾಯವಾಗುತ್ತದೆಯೋ ಕಾದು ನೋಡಬೇಕು.

2 comments:

Arun said...
This comment has been removed by the author.
ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

sakkattagide gotte irlilla nim blog irodu
santosha nirantaravaagirali
blagina harivu.......