Saturday, February 13, 2010

ಹೀಗೂ ಬರೆಯಬಹುದೆ ಪ್ರೇಮ ಪತ್ರವನ್ನು??

ಪ್ರೀತಿಸಿದ  ಪ್ರತಿಯೊಬ್ಬರೂ ತಾನೂ ಕೂಡ ಒಂದು ಪ್ರೇಮ ಪತ್ರ ಬರೆದು ಬಿಡಬೇಕು ಎಂದುಕೊಳ್ಳುತ್ತಾರೆ. ಆದರೆ ಹೇಗೆ ಪ್ರಾರಂಬಿಸಿ ಹೇಗೆ ಮುಗಿಸಬೇಕು ಎಂದೇ ಗೊತ್ತಾಗದೆ ಕೆಲವನ್ನು ಕಸದ  ಬುಟ್ಟಿಗೆ ಹಾಕಿ,  , ಇನ್ನು  ಕೆಲವನ್ನು  ತಾವೇ ಇಟ್ಟು  ಕೊಂಡುಬಿದುತ್ತಾರೆ. ಪ್ರೇಮ ಪತ್ರ ಗಳ ಬಗ್ಗೆ ಸಾವಿರ  ಜನ ಸಾವಿರ defination ಕೊಡಬಹುದು, ಪತ್ರದಲ್ಲಿ ಇರಬೇಕಾದ ಅಕ್ಷರಗಳಿಗಿಂತ ಬರೆಯುವವರಲ್ಲಿರುವ ಪ್ರೀತಿ ಮುಖ್ಯ  ಎನ್ನಬಹುದು, ಹೇಗೆ ಬರೆದರೂ ಅದನ್ನು ಓದುವವರು ಪ್ರೀತಿಸಿದವರೇ ತಾನೇ ಎಂದು ಕೂಡ ಹೇಳಿಬಿಡಬಹುದು. ಓದುವವರಿಗೆ ಕೂಡ ಆ ಕ್ಷಣದಲ್ಲಿ ಅದು ಅಪ್ಯಾಯಮಾನವಾಗಿ ಕಾಣಬಹುದು. ಆದರೆ ನೀವು ಬರೆದ ಪ್ರೇಮ ಪತ್ರ ನೂರ್ಕಾಲ ಹಸಿ ಹಸಿಯಾಗಿರಬೇಕು, ನೀವು ಕೂಡ ಒಂದು ಚಂದದ ಪತ್ರ ಬರೆಯಬೇಕು  ಎಂದಾದರೆ,  ಇಲ್ಲಿದೆ ನೋಡಿ ಕೆಲವು ಸಲಹೆಗಳು :-

ಮೊದಲನೆಯದಾಗಿ, ನಿಮ್ಮ ಪತ್ರ, ನೀವು ಬಳಸುವ  wordings, ಆದಷ್ಟು ಸರಳವಾಗಿರಲಿ. ನಿಮ್ಮಲ್ಲಿ ಅವರು ಹೇಗೆ ವಿಶೇಷ ಭಾವನೆಯನ್ನು ಉಂಟು ಮಾಡುತ್ತಾರೆ ಎನ್ನುವುದರ ವಿವರಣೆ ಇರಲಿ. ಹೇಳುವುದಕ್ಕೆ ಸ್ವಲ್ಪ ಪೇಚಾಟ ಎನಿಸಿದರೂ, ಪತ್ರ ಓದಿದ ನಂತರ ನಿಮ್ಮ ಸಂಗಾತಿಯ ಆಹ್ಲಾದಕರ ಮುಖದ ಕಲ್ಪನೆ ಮಾಡಿಕೊಂಡರೆ ಅಕ್ಷರಗಳು ತಾನಾಗಿಯೇ ಮುಂದಕ್ಕೆ ಹೋಗುತ್ತದೆ. ಪತ್ರ ಬರೆಯುವ ಮೊದಲು ನಿಮ್ಮ ಸಂಗಾತಿಯ ಬಗ್ಗೆ ಸ್ವಲ್ಪ ಹೊತ್ತು ಯೋಚಿಸಿ, ನಿಮಗೆ ನೆನಪೇ ಆಗದ ಎಸ್ಟೋ ಹೊಸ ಹೊಸ ವಿಚಾರಗಳು ನಿಮ್ಮ ಮನಸ್ಸಿನಲ್ಲಿ ಹಾದು ಹೋಗಬಹುದು. ಅದು ನಿಮ್ಮ ಕಷ್ಟ ಕಾಲದಲ್ಲಿ ಆತ ಅಥವಾ ಆಕೆ ನಿಮಗೆ ಕೊಟ್ಟ Moral  Support  ಇರಬಹುದು, ಅಥವಾ, ನೀವು ಖುಷಿಯಾಗಿದ್ದಾಗ  ನಿಮ್ಮ ಜವಾಬ್ದಾರಿಯ ನೆನಪು ಮಾಡಿದ್ದಿರಬಹುದು, ಮೌನವಾಗಿ ಕೈ ಕೈ ಹಿಡಿದುಕೊಂಡು ಹೋದ Long  Walk  ಇರಬಹುದು.  ಇಷ್ಟು ಯೋಚಿಸುವ ಹೊತ್ತಿಗೆ ನೀವು ಬರೆಯುವ  ಪ್ರೇಮ ಪತ್ರದ ನೀಲ ನಕ್ಷೆಯೊಂದು ನಿಮ್ಮ ಮನಸ್ಸಿನಲ್ಲಿ ಮೂಡಿರುತ್ತದೆ.


ನಿಮ್ಮ ಪತ್ರದ ಮೊದಲ ಸಾಲು, ಮೈ Dear , dearest , ನಂತಹ ಪದಗಳಿಂದ ಪ್ರಾರಂಭವಾದರೆ ಒಳ್ಳೆಯದು. ಒಂದು ವೇಳೆ ನಿಮ್ಮದು ಹಳೆಯ ಸಂಬಂಧ ವಾಗಿದ್ದರೆ ನೀವೇ ಕಂಡುಕೊಂಡ nick name ಇದ್ದೆ ಇರುತ್ತದೆ. ಇಂತಹ ಪದಗಳ ಬಳಕೆ ಓದುವ ಮನಸ್ಸಿಗೆ ಹೆಚ್ಚು ಮುದ ನೀಡುತ್ತದೆ.

ಒಂದು ಸಲ ಇಷ್ಟನ್ನು   ಬರೆದಾದ ನಂತರ ನಿಮಗೆ ಆಕೆಯ ಅಥವಾ ಆತನ ಸಾಂಗತ್ಯ ಎಷ್ಟು ಹಿತವಾಗಿರುತ್ತದೆ ಎನ್ನುವುದನ್ನು ಮನವರಿಕೆ ಮಾಡಿ. ನೀವು ಒಟ್ಟಿಗೆ ಕಳೆದ ಕ್ಷಣಗಳು ಹೀಗೆ ಬಿನ್ನವಾಗಿತ್ತು ಎಂಬುದರ ವಿವರಣೆ  ಕೊಡಿ. ನೀವು ಬಳಸುವ ಶಭ್ದಗಳು ನಿಮ್ಮ ಅಂತರಾಳದಿಂದ ಬಂದಿರಲಿ. ನೀವಾಡುವ ದೊಡ್ಡ ದೊಡ್ಡ ಮಾತುಗಳು ಓದುವ ಮನಸ್ಸಿನಲ್ಲಿ ಶಾಶ್ವತವಾಗಿ ಕೂರುವ ಹಾಗೆ ಇರಲಿ. ಆಡುವ ಮಾತು ಎಷ್ಟು ದೊಡ್ದದಿರುತ್ತದೋ, ಬಳಸುವ  ವಾಖ್ಯಗಳು ಕೂಡ ಅಸ್ಟೆ ನೇರವಾಗಿಯೂ ಇದ್ದರೆ  ಒಳ್ಳೆಯದು. ತೆರೆದ ಮನಸ್ಸಿನಿಂದ ನಿಮ್ಮ ಮನಸ್ಸಿನ ಭಾವನೆಗಳನ್ನು , ನಿಮ್ಮ ಸಂಗಾತಿಯ ಬಗ್ಗೆ ನಿಮಗನಿಸಿದ್ದನ್ನು  ಎಳೆ ಎಳೆಯಾಗಿ ಬಿಡಿಸಿಡುವಲ್ಲಿ ಯಾವ ಕಾರಣಕ್ಕೂ ಹಿಂಜರಿಯ ಬಾರದು. ಓದುವ ಮನಸ್ಸಿಗೆ ಅದು ಖಂಡಿತವಾಗಿಯೂ  ಇಷ್ಟವಾಗುತ್ತದೆ.

ನಿಮ್ಮ ಪತ್ರದ ಮುಂದಿನ ಭಾಗ ನೀವು ನಿಮ್ಮ ಸಂಗಾತಿಯನ್ನು ಪ್ರೀತಿಸಲು ಕಾರಣವಾದ ಅಂಶಗಳ ಬಗ್ಗೆ ಇರಲಿ. ಯಾಕೆ ಪ್ರತಿ ಕ್ಷಣವೂ ನಿನ್ನನ್ನು ನೋಡಬೇಕು, ಮಾತಾಡುತ್ತಲೇ ಇರಬೇಕು ಎನಿಸುತ್ತದೆ ಎಂದು ಹೇಳಿ. ಒಂದು ವೇಳೆ ನಿಮ್ಮ ಸಂಗಾತಿಯ ಬಗ್ಗೆ  ನಿಮಗೇನಾದರೂ ಅಸಮಾಧಾನವಿದ್ದರೆ ಅದನ್ನು ಕೂಡ ಅವರ ಮನಸ್ಸಿಗೆ ನೋವಾಗದಂತೆ   ಬರೆಯಬಹುದು. ನೀನು ಹೀಗಿದ್ದರೆ ನನಗಿನ್ನೂ ಸಂತೋಷ ಎಂದು ತಿಳಿಸಿ ಹೇಳಿ. ಪತ್ರದ ಕೊನೆ ಆದಷ್ಟು positive ಆಗಿರಲಿ. .  ನಿಮ್ಮ ಮುಂದಿನ ಜೀವನದ ಬಗ್ಗೆ, ಎದುರಿಸಬಹುದಾದ ಆತಂಕಗಳ ಬಗ್ಗೆ, ಅನುಭವಿಸಬಹುದಾದ ಸುಂದರ ಕ್ಷಣಗಳ ಬಗ್ಗೆ, ನಿಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಹೇಳಿ. ಹೇಳಿ ಕೇಳಿ ಇದು ಪ್ರೇಮಿಗಳ ತಿಂಗಳು. ನಿಮ್ಮ ಮನದನ್ನೆಯ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳುವಾಗ ಕೆಂಪು ಗುಲಾಬಿಯ ಜೊತೆಗೆ ಒಂದು ಒಲವಿನ ಒಲೆಯನ್ನೂ ಕೊಡಬೇಕು ಎಂದಿದ್ದರೆ ಯಾಕೆ ತಡ?? ಬರೆದುಬಿಡಿ ಒಂದು ಚಂದದ ಪತ್ರವನ್ನು...

Saturday, December 26, 2009

"ಕಂಗಳಲ್ಲೇ ಕವನ ಬರೆದು................



ಚಿನ್ನು, ಈಗ ಎಷ್ಟೊಂದು ಸಾರಿ ಬೇಟಿ ಆಗ್ತೇವೆ ನಾವು, ಆದರೂ ಏನೋ ಒಂಥರಾ ಅತೃಪ್ತಿ ನನ್ನಲ್ಲಿ, ಮೊದಲೇ ಚೆನ್ನಾಗಿತ್ತೇನೋ ಅನ್ನಿಸ್ತು. ಆದಿನಗಳೇ ಚೆನ್ನಾಗಿತ್ತು ಬಿಡು. ದಿನವಿಡೀ ಹರಟೆ,ಮತ್ತೆ ರಾತ್ರಿ ಫೋನ್, ಒಂದೂ ಮೊಬೈಲ್ ನ ಚಾರ್ಜ್ ಮುಗೀಬೇಕು, ಇಲ್ಲ currency ಖಾಲಿ ಆಗ್ಬೇಕು... ಹೇಗಿತ್ತು ಅಲ್ವಾ??? ಈಗಾದರೋ ದೊಡ್ಡಪ್ಪ ಬಂದ್ರು , ದೊಡ್ಡಮ್ಮ ನೋಡ್ತಾ ಇದಾಳೆ, ಅಣ್ಣ ಕರೀತಿದಾನೆ, ಏನೋ ಹೇಳಿ ಫೋನ್ ಕಟ್ ಮಾಡೋದು. ಆದರೆ ನೀನು ಮಾತ್ರ ನಿರಾಳ ನಿರಾಳ ಅನ್ಸತ್ತೆ. ಆಗ ಕೆಟ್ಟ ಸಿಟ್ಟು ಬರತ್ತೆ ನಂಗೆ.ಆದ್ರೆ ನಿನ್ನ work stress , tension , ಕೆಲಸದ ಚಿಂತೆ ಇವನ್ನೆಲ್ಲ ನೋಡಿ ಸುಮ್ಮನಾಗಿಬಿಡ್ತೀನಿ. ಅದರ ಜೊತೆ ನಿನ್ನ ಸತಾಯಿಸುವ Dialogue ಇದೆಯಲ್ಲ, "ಬೇಕೆಂದೇ ಜಗಳವಾಡಿ ನಂತರ ರಾಜಿ ಆಗುವ ಸಂತೋಷ ಬೇರೆಲ್ಲಿದೆಯೇ ಕೂಚೆ" ಅಂತ. ಮೊದಲು ನಂಗೂ ಅದು ಇಷ್ಟ ಆಗ್ತಿತ್ತು. ಆದರೆ ಈ ಮೊದಲ ಪ್ರೇಮ ನನ್ನನ್ನು ಹೇಗೆ ಮಾಡಿಬಿಡ್ತು ನೋಡು. ಮೊದಮೊದಲು ಬೈಕ್ ಹೊಡೆಯಲು ಕಲಿತ ಸಂಬ್ರಮದಂತೆ........., ನಾನು ಹಾಡಿಕೊಳ್ಳುವ ಪ್ರತಿ ಹಾಡಿನ ಸಾಲಿನಲ್ಲಿಯೂ,ನೀನು ನನ್ನನ್ನು ಹೀಗೆ ಪ್ರೀತಿಸಬೇಕೆಂಬ ಭಾವ........ ಒಂದು ಹಗಲು ನಮಗೋಸ್ಕರವೇ ಬೆಳಗಾಗುತ್ತಿದೆ ಅನಿಸ್ಸುತ್ತದೆ..... ಪ್ರತಿ ಬೇಟಿಯಲ್ಲೂ ಒಂದು ವಿದಾಯದ ಆತಂಕ..... ಮತ್ತೊಂದು ಬೇಟಿ ಪ್ರೇಮಾಲಾಪವಿದ್ದರೂ ಕೂಡ.. ....... ಸುಮ್ಮನೆ ಕೈ ಹಿಡಿದು ಕುಳಿತ ಸಂಜೆ ಗಳಲ್ಲಿ ಅದೆಷ್ಟೋ ಮಾತು ಮರೆತೇ ಹೋಗಿರುತ್ತದೆ.......................ನೆನೆಪನ್ನೇ ತಬ್ಬಿಕೊಂಡು ರಾತ್ರಿ ಮಲಗಿದರೆ ಅಲ್ಲೂ ನಿನ್ನ,ನನ್ನ ಕನಸುಗಳಜಾತ್ರೆ............


ನಿನ್ನೆ ರಾತ್ರಿ ಈ ಪತ್ರ ಬರೆದೆ. ಇಂದು, ಈಗ ನೀನು ಈ ಪತ್ರ ಓದಿ ಮುಗಿಸಿದ ಮೇಲೆ ನಿನ್ನ ಮುಖ ನೋಡುವ ಆಸೆ ನನಗೆ. ನಿನ್ನ ಎಷ್ಟೋ ದಿನಗಳ ಆಯಾಸವನ್ನೆಲ್ಲ ನನ್ನ ಮಡಿಲ ಮೇಲೆ ನಿನ್ನನ್ನು ಮಲಗಿಸಿಕೊಂಡು ಕಳೆದು ಬಿಡಬೇಕು,... ದಾಹಗೊಂಡಿರುವ ನಿನಗೆ ಸಿಹಿ ಮುತ್ತುಗಳ ಬರಪೂರ ಅಭಿಷೇಕ....... ಹಿಂದಿನ ಬಾರಿ ಬಂದಾಗ ಕೊಡದೆ ಉಳಿದದ್ದು, ಮುನಿದಾಗ ನಿರಾಕರಿಸಿದ್ದು,ಕೆಲಬಾರಿ ಕೊಡಲು ಮರೆತಿದ್ದು, ಮುಂದೆ ಕೊಡಬೇಕಾಗಿದ್ದು, ಹೀಗೆ ಹಳೆಯ ಬಾಕಿ ಸೇರಿಸಿ, ಕೈಯಿಂದ ಮತ್ತಷ್ಟು ಹಾಕಿ, ಅವೆಲ್ಲವನ್ನು ಒಂದೇ ಸಲ ಕೊಟ್ಟುಬಿಡಬೇಕು ಅಂದುಕೊಂಡಿದ್ದೇನೆ. ಇದನ್ನೆಲ್ಲ ನೋಡಿದ ಮೇಲೆ ನಮ್ಮ ಕೋತಿಗೆ ಹೆಂಡ ಕುಡಿಸಿದ ಹಾಗಾಗುತ್ತದೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಫೋನ್ ನಲ್ಲಿ ಅಷ್ಟೊಂದು ಮಾತನಾಡುವ ನಮಗೆ, ಇಲ್ಲಿ ಸಂಕೋಚದ ತೆರೆ, ನೀನೀಗ ಮನಸ್ಸಿನಲ್ಲೇ ಬೈದುಕೊಳ್ಳಬಹುದು...... ಇಷ್ಟೊಂದು ಚಂದದ ಪತ್ರ ಬರೆಯುವವಳಿಗೆ ಹಾಗೆ ಪ್ರೀತಿಸಲು ಏನಾಗುತ್ತದೆ ಎಂದು.. ನನಗೂ ಸಿಟ್ಟು ಬರುತ್ತದೆ,ನನ್ನ ಈ ನಾಚಿಕೆಯ ಮೇಲೆ,ಆದರೆ ಏನು ಮಾಡಲೋ???



ನಿನ್ನ ಮನಸ್ಥಿತಿ ನನಗೆ ಅರ್ಥ ಆಗುತ್ತೆ ಚಿನ್ನು, ನಿನ್ನ ಪ್ರೀತಿ, ಕಳವಳ,ಆತಂಕ, ಒಳ ಒಳಗೆ ಚಡಪಡಿಸಿ, "ನನಗೆ ನೀನು ಬೇಕು,ಮತ್ತು ನೀನೆ ಬೇಕು" ಎನ್ನುವ ನಿನ್ನ ನಿಸ್ಸಹಾಯಕ ಆಸೆಗಳು, ನಮ್ಮಿಬ್ಬರ ಮುಂದಿರುವ ಸುದೀರ್ಘ ವಿರಹ,... ನಮ್ಮಿಬ್ಬರ ಸಂಭಂದ ಒಪ್ಪದ ನಮ್ಮ ಮನೆಯವರು,.... ಹೀಗೆ ಎಲ್ಲ. ಜೊತೆಗೆ ಪ್ರೀತಿಸಿದ ಪ್ರತಿ ಹುದುಗರಿಗೂಒಂದು assurence ಬೇಕಾಗುತ್ತದೆ ಅಂತಲೂ ಗೊತ್ತು. ಆದರೆ ನಂಬಿಕೆ ಎನ್ನುವುದು ಮಾತು,ಆಣೆ, ಪ್ರಮಾಣ ಗಳಲ್ಲಿ ಹುಟ್ಟುವುದಿಲ್ಲ ಚಿನ್ನು, ನಂಬಿಕೆ ಹುಟ್ಟುವುದು ಮೌನದಲ್ಲಿ, ಮೊದಲು ನನ್ನ ಮೇಲೆ, ಅಮೇಲೆ ನೀನು ನನ್ನ ಮೇಲೆ ಇಟ್ಟಿರುವ ನಂಬಿಕೆಯ ಮೇಲೆ ನಂಬಿಕೆ ,ಅಲ್ವಾ??? ನೀನೆ ನೋಡ್ತಾ ಇರು,ನೀನು ನನ್ನನ್ನು ಬಿಟ್ಟು ದೂರ ಇದ್ದರೂ ನಾನೆಷ್ಟು confidence ನಿಂದ ಇರ್ತೀನಿ..ಅಂತ.. ಅಂತ. ಮನೆಯವರು ಬಲವಂತ ಮಾಡಿದರೆ, ಹುಡುಗ ನೋಡಲು ಬಂದರೆ, ಇದ್ದೆ ಇದೆಯಲ್ಲ ತಿಂಗಳ ನಾಲ್ಕು ದಿನಗಳ ರಜ, ಹೊಟ್ಟೆ ನೋವು, ತಲೆನೋವು, ಅಂತೂ ಮಾಮೂಲು.... ಇನ್ನೂ ಒಂಚೂರು ಓದಿ ಬಿಡ್ತೀನಿ ಹೀಗೆ ದೊಡ್ದಪನ ಹತ್ತಿರ ಒಂದು ಸಣ್ಣ ಸಬೂಬು. ಆದರೆ ಸರಿದು ಹೋಗುವ ಕಾಲ, ಬದುಕಿನ ಅಗೋಚರ ಕಷ್ಟಗಳು,ಸಣ್ಣದಾಗಿ ಕಾರಣವೇ ಇಲ್ಲದೆ ಹುಟ್ಟುವ ಬೇಸರ, ಸುಖಾ ಸುಮ್ಮನೆ ಹುಟ್ಟುವ ಮೌನ, ಇದ್ಯಾವುದೂ ನಮ್ಮನ್ನು ದೂರ ಮಾಡಲಾರದು, ಮಾಡಬಾರದು ಎನ್ನುವ ನಂಬಿಕೆ ನಿನಗಿರಲಿ. ಅದರಂತೆ ನಿನ್ನ ಕಣ್ಣೆವೆ ಯಿಂದ ನನ್ನ ಚಿತ್ರ ಎಂದಿಗೂ ಅಳಿಸಿ ಹೋಗದಿರಲಿ, ಮನೆಯವರೆಲ್ಲ ಹುಡುಕಲು ಬಂದರೂ ನಿನ್ನ ತಬ್ಬುಗೆಯಲ್ಲಿ ನಾನವರಿಗೆ ಕಾಣಿಸಬಾರದು... ನಿನ್ನ ತೆಕ್ಕೆಯ ಬಿಸುಪೂ ಆರಬಾರದು....

"ಕಂಗಳಲ್ಲೇ ಕವನ ಬರೆದು ಕಳಿಸಿದೆ ನಿನ್ನಲ್ಲಿಗೆ,

ಅಂಗಳದಲ್ಲಿ ಅರಳಿದಾಗ ನನ್ನ ಒಲವ ಮಲ್ಲಿಗೆ..".................

ಚಿನ್ಸು...ಸುಮ್ಮನೆ ಸಿಕ್ಕವನಲ್ಲ ನೀನು, ನನ್ನ ಎಷ್ಟು ಜನ್ಮದ ನಿರೀಕ್ಷೆಯೋ ಏನೋ.... ನಿನಗೋಸ್ಕರ ಎಷ್ಟು ಬಾರಿ ಹಲುಬಿದ್ದೆ ಅಂತ ನನಗೇ ಗೊತ್ತು... ಪ್ರತಿ ಸಲ ನಾನೆ ಸೋತು, ನಾನೇ ರಾಜಿ ಆಗಿ, ನಿನ್ನ ಒಲಿಸಿ , ಓಲೈಸಿ, ಈ ಜನ್ಮ ಪೂರ್ತಿ ನಂಗೆ ನೀನೆ ಬೇಕು ಅಂತ ಇಟ್ಟುಕೊಂಡಿದ್ದೇನೆ, ಅದಕ್ಕೋಸ್ಕರ ನಾನು ತುಂಬಾ ಕಷ್ಟ ಪಟ್ಟೆ ಎನ್ನುವುದಕ್ಕಿಂತ ಅದನ್ನು ಇಷ್ಟ ಪಟ್ಟೇ ಮಾಡಿದ್ದೇನೆ ಅಂದ್ರೆ ಸರಿ ಆಗತ್ತೇನೋ.. ಆದರೆ ಚಿನ್ನು, ನಿನಗೆ ಒಂದು ಸತ್ಯ ಹೇಳಲಾ?? ಒಂದು ಸಲ ನಿನ್ನನ್ನು ನನ್ನ ಕಣ್ಣೊಳಗೆ ಕೆಡವಿಕೊಂಡ ಮೇಲೆ ಈ ಜನ್ಮದಲ್ಲೀನ್ನೊಂದು personality ಯನ್ನು ಕಣ್ಣೆತ್ತಿ ಕೂಡ ನೋಡಲಾರೆ....ಅಂಥವ..ನೀನು.... ನಿನ್ನದೊ ಶುದ್ದ ಒರಟು ಪ್ರೀತಿ.. ತುಂಟತನ, concern , ನಿನ್ನನ್ನು ಕೈ ಹಿಡಿದಾಗ ಎಂದಿಗೂ ಬಿಡಲಾರೆ ಎನ್ನುವ ದೃಢತೆ,.. ಅದಕ್ಕೆ ನಿನ್ನ ಜೊತೆ ಹೆಜ್ಜೆ ಹಾಕುವಾಗ ಎಲ್ಲ ಹುಡುಗಿಯರಿಗೆ ಕಾಡುವ ತವಕ,ಭಯ ಆತಂಕಗಳು ನನ್ನನ್ನು ಕಾಡುವುದೇ ಇಲ್ಲ. Believe Me.. ನಾನು ಈ ಜನ್ಮದಲ್ಲಿ ಇನ್ಯಾರನ್ನೂ ಪ್ರೀತಿಸಲಾರೆ..., ನಾನಾಗೇ ಪ್ರೀತಿಸ ಬಯಸಿದರೂ... 'ನನಗೆ ಎಲ್ಲದಕ್ಕೂ ನೀನೆ ಆಗಬೇಕು, ಮಾತಿಗೆ, ಮೌನಕ್ಕೆ, ಹಾಡಿಗೆ, ಫೋನಿಗೆ, ಸರಸಕ್ಕೆ, ಜಗಳಕ್ಕೆ, ರಾಜಿಗೆ, ವಿರಹಕ್ಕೆ, ಬರಹಕ್ಕೆ, ಮದುವೆಗೆ, ಮಕ್ಕಳಿಗೆ, ಎಲ್ಲದಕ್ಕೂ ನೀನೆ ಬೇಕು'...

ಪತ್ರ ಓದಿದ ನಂತರ ತೀರ ಒರಟನಂತೆ ಪ್ರೀತಿಸಬೇಡ, ಮನೆಯಲ್ಲಿ ದೊಡ್ಡಮ್ಮ ಕೇಳಿಯಾರು.... ಆದರೆ ನೀನೆಲ್ಲಿ ಕೇಳ್ತಿ ನನ್ನ ಮಾತನ್ನು ???

ಏಯ್ ಸುಮ್ಮನಿರೋ ಎನ್ನುವ ನಾನು,

ಸುಮ್ಮನಿರದ ನೀನು........



Wednesday, December 16, 2009

ನೀನು ನಕ್ಕು ನಲಿಯುತಿರಲು ............

ನೀನು ನಕ್ಕು ನಲಿಯುತಿರಲು
ರಂಗುಗೊಂಡಿತಾಗಸ...
ನಿನ್ನ ಸರಸ ಸಂಗವಿರಲು
ಕಂಡುದೆಲ್ಲ ಹೊಸ ಹೊಸ...
.
ಅರುಣ್ ..
ನಿನಗೂ ಅನ್ನಿಸ್ತಿರಬಹುದು.. ಇದೇನಪ್ಪ..ನನ್ನ ಕೂಚಿನ ಹೊಸ ರೂಪ...ನಾನೇ ಎದುರಿಗಿದ್ದೇನೆ.. ಏನು ಹೇಳಬೇಕೋ ಅದನ್ನು ಹೇಳುವುದು ಬಿಟ್ಟು..ಯಾವ್ದೋ letter..ಕೊಟ್ತಳಲ್ಲಾ.. ಅಂತ...ಸ್ವಲ್ಪ ಚೇಂಜ್ ಇರ್ಲಿ ಅಂತ...ನಿನ್ನ mail ಎಷ್ಟು ಚನ್ನಾಗಿತ್ತು ಅಂದರೆ...ಅದಕ್ಕೆ ಹಾಗೆ ಮೇಲ್ ಮಾಡ್ವನ ಅನ್ನಿಸ್ತಿತ್ತು..ಆದರೂ..ಮೊದಲ ಪ್ರೀತಿಯ ಸಂಭ್ರಮ ಪತ್ರ ಬರೆಯುವುದರಲ್ಲೂ ಇದ್ದು..ಅಲ್ದಾ?..ಆದ್ರೆ.. ಅರುಣ್, , ..ನಿನ್ನ ನೆನಪಾದಾಗಲೆಲ್ಲ..ನೀನು ಗಾಢವಾಗಿ ಕಾಡಿದಾಗಲೆಲ್ಲ ನಿನಗೆ ಹೀಗೇ ಎಷ್ಟೊಂದು ಚಿಕ್ಕ ಚಿಕ್ಕ ಪತ್ರ , ಚುಟುಕು ಬರೆದಿಟ್ಟಿದ್ದೆನಂದ್ರೆ .. ಅದೆಲ್ಲಾ ನಿಂಗೆ ಕೊಟ್ಟಿದ್ರೆ...ನಿನ್ನ ಮಡಿಲ ತುಂಬೆಲ್ಲಾ ನನ್ನ ಅಕ್ಷರಗಳದೆ ಕಲರವವಿರುತ್ತಿತ್ತು.. ಅಷ್ಟು ನೆನಪಾಗ್ತೀಯಾ ನೀನು..ಇಳೆಗೆ ಮಳೆ ನೆನಪಾಗುವಂತೆ... ಪತ್ರದ ತುಂಬಾ ಇರುವುದು ಅಕ್ಷರಗಳೋ ...ಮನಸ್ಸೋ.. ಅನಿಸಿಕೆಯೋ.. ಅಥವಾ ಅವು ಯಾವುದೂ ಪೂರ್ಣ ವಾಕ್ಯಗಳೇ ಆಗೋದಿಲ್ಲವೋ ಅನ್ನಿಸ್ತು..ಆ ಪತ್ರಗಳಲ್ಲಿ ವಿಶೇಷ ಏನೂ ಇಲ್ಲ..ಎಲ್ಲಾ..ನನ್ನ, ನಿನ್ನ ಕುರಿತಾದ ಕನಸುಗಳೇ..offcourse...ಕೆಲ ಹಕೀಕತ್ತುಗಳು.. ನಿನಗಿದೆಲ್ಲ ಹುಚ್ಚು ಅನ್ನಿಸ ಬಹುದು...ವಾರಕ್ಕೊಮ್ಮೆ ಸಿಗ್ತೇವೆ.ಎಷ್ಟೋ ಮಾತಾಡ್ತೇವೆ.....ದಿನಕ್ಕೆ ನೂರಾರು msgs....ಮತ್ತೆ..ಫೋನು..ಆನ್ ಲೈನು...ಯಾಕಪ್ಪಾ.. ಎಂದು..ಆದರೂ ಅರುಣ್ , ..ಪತ್ರ ಬರೆಯುವುದೇ ಚಂದ..ಎದುರಿಗೆ ನೀನಿದ್ದೆ ಎನ್ನುವ ಸಂಕೋಚ ಇರ್ತಿಲ್ಲೆ.. ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ ಮೋದಕ್ಕೆ.ಪತ್ರವೇ ಸರಿ.. ಇಂಥ ನೂರಾರು ಪತ್ರ ಬರೆದು ನಿನಗೊಂದನ್ನೂ ಕೊಡದೆ..ನಾನೇ ಇಟ್ಟುಕೊಂಡು.. ಒಬ್ಬಳೇ ಇರುವಾಗ ಅದನ್ನು ಓದಿ ಎಷ್ಟು enjoy ಮಾಡ್ತೆ ಗೊತ್ತಿದ್ದಾ?..ಈಗ ನಿಂಗೆ ಕೊಡ್ತ್ನಲ್ಲ...ಆ ಪತ್ರ ಎಷ್ಟು ಲಕ್ಕಿ ನೋಡು..ಅದು ಎಷ್ಟೊಂದು ಹೊತ್ತು ನಿನ್ನ ಜೊತೆ ಇರ್ತು..ನಿನ್ನ ಕಣ್ಣ ಎದುರಿಗಿರ್ತು...ಎಷ್ಟೊಂದು ಬಾರಿ ಅದರ ಕೆನ್ನೆಗೆ ಮುತ್ತು ಸಿಗ್ತು..ಆಮೇಲೆ ಏಕಾಂತದ ರಾತ್ರಿಗಳಲ್ಲಿ..ನಿನ್ನ ಜೊತೆಗಿರ್ತು..ನಿನಗೆ ಕಚಗುಳಿ ನೀಡಿ.. ರೋಮಾಂಚನಗೊಳಿಸ್ತು.ನೀನದನ್ನು..ಪದೇ ಪದೇ ಓದುತ್ತೀಯಾ.. ಕೆಲವೊಮ್ಮೆ ತಬ್ಬಿಕೊಂಡೆ ಮಲಗಬಹುದು... ಇಂಥ ರೋಮಾಂಚನಕ್ಕೆ..ಈ ಪತ್ರ ನಿಂಗೆ..(ಸಣ್ಣ ಹೊಟ್ಟೆಕಿಚ್ಚೂ ಆಗ್ತು)
.
.
ನನ್ನ ಪ್ರೇಮದಲ್ಲಿ ನೀನು
ಅರಳಿ ನಿಂತ ಚಿತ್ರ..
ಸುತ್ತ ಎಲ್ಲ ನೀನೆ ನೀನು..
ಶೂನ್ಯ ನನ್ನ ಗಾತ್ರ..
.
.
ನಿಜ..ಅರುಣ್ ..ನನ್ನ ಮನಸ್ಸು ಅಂದಿಗೂ..ಇಂದಿಗೂ ನಿನ್ನದೇ...ಅದರಾಳದಲ್ಲಿ .ನೂರೆಂಟು ಪ್ರಶ್ನೆಗಳು ..ಗೊಂದಲ ಗೋಜಲುಗಳು..ನೀನು ನನ್ನ ದೌರ್ಭಲ್ಯವಾ? ಆರಾಧನೆಯಾ..ಬಂಧುವಾ..ನನ್ನೊಳಗಿನ ಭಾವವಾ? ಮಾತು ಮುಗಿದಾಗ ದಕ್ಕುವ ಮೌನವಾ..ನನಸಾದ ಕನಸಾ ಅಥವಾ..ದೇವರೇ ನನಗಾಗಿ ಕರುಣಿಸಿದ ವರವಾ?ಏನಿರಬಹುದು? ಇಷ್ಟು ವರ್ಷ ನಾನು ನೀನಿಲ್ಲದೆ ಹೇಗಿದ್ದೆ?..ಅಥವಾ ಅದು ಕೇವಲ ನನ್ನ ಭ್ರಮೆಯಾ?.. ಇಲ್ಲದಿದ್ದರೆ..ನೀನು ಕೂಚೇ.ಅಂದ್ರೆ..ತೆರೆದುಕೊಳ್ಳುವ ಕಿವಿ... ಅರ್ಪಿತಾ ಅಂದರೆ..ಹೊಡೆದುಕೊಳ್ಳುವ ಹೃದಯ.. ನಿನ್ನ ಬೈಕ್ನಲ್ಲಿ ಹಿಂದೆ ಕುಳಿತಾಗ..ಬುಜದ ಮೇಲೆ ಕೈ ಇಡಲು ತಡೆದು ಕೊಳ್ಳುವ ಮನಸ್ಸು.. ಏನಿದು ಅರುಣ್, ??? ನಿನ್ನನ್ನು ನಾನೇ ಆನರಿಸಿಕೊಳ್ಳಲು ಬಿಟ್ನಾ? ಅಥವಾ...ನನ್ನನ್ನು ನನ್ನ ಮೇಲೆ ನಿನಗೆ ಅಷ್ಟೊಂದು ವಶೀಕರಣ ಶಕ್ತಿ ಇದ್ದಾ?..ನೀನೆ ಯೋಚಿಸು.."ಮೊದಲು ಕದ ತಟ್ಟಿದವನು ನೀನಾ?..ಬಾಗಿಲು ತೆರೆದವಳು ನಾನಾ?..ಅಥವಾ..ಇವೆರೆಡು ಒಟ್ಟಿಗೇ ಸಂಭವಿಸಿದ ಮೋಹಕ ಅಪಘಾತವಾ?" but..ನಿನ್ನನ್ನು ಇನ್ನು ಪ್ರೀತಿಸದೆ ಇರಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸಿದ ಮೇಲೆ ..ನಾ ನಿನ್ನೆಡೆಗೆ..ನಡೆದು ಬಂದಿದ್ದು...ಸರಿಯೋ..ತಪ್ಪೋ..ಎಂದು ಒಂದೂ ಯೋಚಿಸದೆ.. ಆದ್ರೆ.. ಅರುಣ್ , ..ಇಂಥ ನೂರಾರು ತಪ್ಪುಗಳನ್ನು..ಲೀಲಾಜಾಲವಾಗಿ ಮಾಡಿಸ ಬಲ್ಲ ಚತುರ ನೀನು ನಿನ್ನ ಮಾತು ಅಪ್ಪಟ ಕಾಮನ ಬಿಲ್ಲು.. ಕುಳಿತಲ್ಲಿಂದಲೇ..ನೂರೆಂಟು ರಂಗು ಮೂಡಿಸೋ ವರ್ಣವಿದ್ಯೆ ಬಲ್ಲ ಹುಡುಗ ನೀನು.. ಸದಾ ನಗುವ..ಕಾಡುವ..ತೆರೆದರೆ ಸಾವಿರ ಗುಟ್ಟು ಹೇಳುವ..ಮುಚ್ಚಿದರೆ .ನೂರು ಕನಸು ಕಲ್ಪಿಸುವ ನಿನ್ನ ಕಣ್ಣು..ಜಲಪಾತಕ್ಕೆ ತಲೆ ಒಡ್ಡಿದಾಗ ಆಗುವಂತೆ ಕಕ್ಕಾಬಿಕ್ಕಿಗೊಳಿಸುವ ನಿನ್ನ ಮಾತು..ಆ respect..care...ನೀನು ಹೀಗಿರದೆ ಹೋಗಿದ್ದಾರೆ..ಸುಮ್ಮನೆ ಸೋಲುತ್ತೀನಾ ನಾನು?..
.
(ಕೇವಲ ಅರ್ಧ ಪತ್ರ ಮಾತ್ರ ..ಉಳಿದಿದ್ದು ಸೆನ್ಸಾರ್ ... ನಿರೀಕ್ಷಿಸಿ... )

ನಿನ್ನ..
ಕೂಚು..

Thursday, December 10, 2009

Propose ಮಾಡುವುದು ಯಾಕಿಷ್ಟು ಕಷ್ಟ???

ಆಕರ್ಷಣೆ ಎನ್ನುವುದು ಹೇಳಿ ಕೇಳಿ ಹುಟ್ಟುವುದಿಲ್ಲವಲ್ಲ, ಎಲ್ಲೋ ಯಾವುದೋ ಅರೆಘಳಿಗೆಯಲ್ಲಿ , ಯಾವುದರ ಮೇಲೆ ಬೇಕಾದರೂ ನಾವು ಆಕರ್ಷಿತರಾಗಿಬಿಡಬಹುದು, ಯಾವುದೇ ಬೇದ ಭಾವವಿಲ್ಲದೆ. ನಮ್ಮ ಆಕರ್ಷಣೆಗೆ ಒಳಗಾಗಿರುವುದು ವಸ್ತುವಾದರೆ ಅದನ್ನು ಸುಲಭವಾಗಿ ಕೊಂಡು ಕೊಂಡುಬಿಡಬಹುದು. ಅಥವಾ ಅಂತಹುದೇ ಇನ್ನೊಂದನ್ನು ನಾವೇ ತಯಾರಿಸಿಕೊಂಡು ಬಿಡಬಹುದು. ಆದರೆ ಅದು ಇನ್ನೊಂದು ಜೀವಿಯಾದರೆ?? ಅಸ್ಟು ಸುಲಭವಾಗಿ ಪಡೆಯಲಾಗುವುದಿಲ್ಲವಲ್ಲ?? ಆ ಜೀವ ನಮ್ಮನ್ನು ಸೆಳೆದಂತೆ ನಾವು ಕೂಡ ಆ ಜೀವಿಯ ಮನಸ್ಸಿನಲ್ಲಿ ಮೂಡಬೇಕು. ಸಾಮಾನ್ಯವಾಗಿ ಪ್ರತಿ ಹುಡುಗರು ಯಾವುದೋ ಹಂತದಲ್ಲಿ ಇನ್ನೊಂದು ಹುಡುಗಿಯ ಕಡೆಗೆ ಆಕರ್ಷಿತರಾಗಿರುತ್ತಾರೆ. ಆದರೆ ಅದನ್ನು ಮಾತಿನ ಮೂಲಕ ವ್ಯಕ್ತಪಡಿಸುವವರು ಅರ್ದಕ್ಕಿಂತ ಕಡಿಮೆ ಜನ. ಅದು ಕೂಡ ಮೀನಾ ಮೇಷ ಏಣಿಸಿ.... ಯಾಕೆ ಹೀಗೋ?? Propose ಮಾಡುವುದು ಯಾಕಿಷ್ಟು ಕಷ್ಟ??
.
.
Propose ಮಾಡುವುದು ಕಷ್ಟ ಎನ್ನುವುದಕ್ಕಿಂತ ಆಕೆಯ ಒಪ್ಪಿಗೆಯ ಅಥವಾ ತಿರಸ್ಕಾರದ ನಂತರ ಮುಂದೇನು ಎಂಬ ಬಗ್ಗೆ ಗೊಂದಲ. ಆಗುವ ಪರಿಣಾಮಗಳ ಬಗ್ಗೆ ಯೋಚನೆ ಮತ್ತು ಮುಂದೆ ಜವಾಬ್ದಾರಿಗಳ ಬಗೆಗಿನ ಭಯವು ಇರಬಹುದು. ಪ್ರೀತಿಸಿದ ಹುಡುಗಿಯ ಹೆಸರು ಗೊತ್ತಿರುತ್ತದೆ, ಆಕೆಯ ಮನೆಯ ವಿಳಾಸ ತಿಳಿದಿರುತ್ತದೆ, ಇನ್ನು ಮುಂದೆ ಹೋದರೆ ಆಕೆಯ ಮನೆಯವರ ಹೆಸರು ಕೂಡ ಗೊತ್ತಿರುತ್ತದೆ, ಆದರೆ ಆಕೆಯ ಮನಸ್ಥಿತಿ ಗೊತ್ತಿರುವುದಿಲ್ಲವಲ್ಲ ?? ಅಮ್ಮ ಹಾಲಿಗೆ ಹೆಪ್ಪು ಹಾಕುವುದನ್ನು ನೋಡಿ ತನು ಮುಂದೊಂದು ದಿನ ಇದನ್ನೆಲ್ಲಾ ಮಾಡಬೇಕಾಗುತ್ತದೆ ಎನ್ನುವುದೇ ಆಕೆಯ ಸಂಭ್ರಮ. ಯಾವುದೊ ತಾಯಿ ತನ್ನ ಮಗುವನ್ನು ಮುದ್ದುಗರೆಯುವುದನ್ನು ನೋಡಿ ತಾನು ಕೂಡ ತಾಯಿಯ ಜಾಗದಲ್ಲಿ ನಿಂತು ಕುಶಿಪಡುವ ವಯಸ್ಸದು. ಅವತ್ತಿಗೆ ಅವಳ ಪಾಲಿಗೆ ಅಪ್ಪ ಅಮ್ಮನೇ ರೋಲ್ ಮಾಡೆಲ್ ಗಳು. ಆದರೆ ವಯಸ್ಸಿನ ಒಂದು ಹಂತ ದಾಟಿದ ಮೇಲೆ ಪಾಲಕರ ಕಡೆಗಿನ ಆರಾಧನೆ ಕಡಿಮೆಯಾಗುತ್ತದೆ. ಅವರ ಮೇಲೆ ಇಲ್ಲ ಸಲ್ಲ ಆರೋಪಗಳು ಹೊರ ಬರ ತೊಡಗುತ್ತದೆ. ಏಕೆಂದರೆ ಆ ವಯಸ್ಸಿಗೆ ಕೌಮಾರ್ಯ ಅಥವಾ ಹದಿಹರೆಯ ಎನ್ನುತ್ತಾರೆ. ತಾನು propose ಮಾಡ ಹೊರಟಿರುವ ಹುಡುಗಿ ಕೂಡ ಇವೆಲ್ಲವುಗಳಿಂದ ಅತೀತಳೆನು ಅಲ್ಲವಲ್ಲ.
.
.
ನೋಡನೋಡುತ್ತಲೇ ಹದಿಹರೆಯ ಮುಗಿದು, ಮತ್ತೆ ಪಾಲಕರ ಕಡೆಗೊಂದು ಪ್ರೀತಿ ಪೂರ್ವಕ ಗೌರವ ಮೂಡತೊಡಗುತ್ತದೆ. ಆದರದು ಮೊದಲಿನ ಆರಾಧನೆಯಾಗಿರುವುದಿಲ್ಲ. ಆ ಆರಾಧನೆ ಬೇರೆ ಯಾರ ಕಡೆಗಾದರೂ ತಿರುಗಬೇಕಲ್ಲ, ಅದು ಪಲ್ಸರ್ ನಲ್ಲಿ ತಿರುಗುವ ಪಕ್ಕದ ಮನೆಯ ಹುಡುಗನಾಗಿರಬಹುದು, ಒನೊಂದು ದಿನ ಒಂದೊಂದು ರೀತಿ ಕಾಣುವ ರೋಡ್ ರೋಮಿಯೋ ಇರಬಹುದು, ದಿನಾ ಒಂದೊಂದು ಗಾಡಿಯಲ್ಲಿ ಓಡಾಡುವ ರೌಡಿಯೇ ಇರಬಹುದು, ಅಥವಾ ಯಾವುದೋ ಕಂಪನಿಯಲ್ಲಿ ಕೆಲಸ ಮಾಡುವ softwear ಇಂಜಿನಿಯರ್ ಇರಬಹುದು. ಆಕೆಯ ಮನಸ್ಸು ಅವರ ಜೊತೆ ಮಾತನಾಡಲು ಚದಪಡಿಸುತ್ತಿರುತ್ತದೆ. ಅವರ ಪ್ರತಿ ಮಾತು ಕೃತಿ, ಇವಳ ಪಾಲಿಗೆ ಅದ್ಭುತವಾಗಿ ಕಾಣುತ್ತದೆ. ಅವರ ತಪ್ಪುಗಳು ನಗಣ್ಯ ಎನಿಸುತ್ತದೆ. ಹೀಗೆ ಪ್ರೀತಿಯನ್ನು ಬಿಟ್ಟು ಬೇರೇನೂ ಕಾಣದವರ, ಪ್ರಪಂಚದಲ್ಲಿ ಪ್ರೀತಿಯಸ್ಟು ಮುಖ್ಯ ಯಾವುದು ಇಲ್ಲ ಎಂದುಕೊಂದವರ ಪ್ರೀತಿಯೂ ಪಕ್ವವಾಗಿರುವುದಿಲ್ಲ. ಅರ್ದ ಹುಡುಗುತನ, ಇನ್ನರ್ದ ತುಂಟತನದಿಂದ ಕೂಡಿದ ಮನಸ್ಸು ಪ್ರತಿ ಕ್ಷಣಕ್ಕೂ ಚಂಚಲ. ಹಿರೋನಂತೆ ಕಾಣುವ ಸಾಮಾನ್ಯ ಹುಡುಗ ಕೆಲವೇ ದಿನಗಳಲ್ಲಿ ಇಸ್ಟೇ ಎನಿಸಿಬಿಡುತ್ತಾನೆ. ತಾನೂ ಕೂಡ ಆಕೆಯ ಪಾಲಿನ ಕ್ಷಣಿಕ ಆರಾಧನೆಯೇ?? ತನ್ನದು ಕೂಡ ವಯೋ ಸಹಜ crush ಇರಬಹುದೇ?? ಇಂತಹ ಪ್ರಶ್ನೆಗಳು propose ಮಾಡುವ ಮನಸ್ಸನ್ನು ಹಿಂದೇಟು ಹಾಕಿಸುತ್ತದೆ.
.
.
ಲವ್ ಅಟ್ ಫಸ್ಟ್ ಸೈಟ್ ಎನ್ನುವುದು ಸಂಭವಿಸುವುದು ಕೆಲವೇ ಸಂಧರ್ಬಗಳಲ್ಲಾದರು ಹೆಚ್ಚಿನ ಸಲ ಪರಿಚಯವಾಗಿ, ಅದು ಸ್ನೇಹವಾಗಿ, ನಂತರ ಯಾವುದೋ ಘಳಿಗೆಯಲ್ಲಿ ಈಕೆಯನ್ನೇ ಮದುವೆಯಾಗಬಹುದಲ್ಲ ಎಂಬ ಶುದ್ದ ಅನುಕೂಲದ ಭಾವನೆ ಉಂಟಾಗುತ್ತದೆ. ಸುಖ ಮತ್ತು ಶಾಸ್ತ್ರ ಎರಡೂ ಒಟ್ಟೊಟ್ಟಿಗೆ ಆಗುವುದಾದರೆ ಆಗಲೀ ಎಂಬ ಬುದ್ದಿವಂತಿಕೆ. ಆದರೆ ಆಕೆಯ ಮನಸ್ಸಿನಲ್ಲಿ ಏನಿದೆಯೋ ಎಂಬ ತಳಮಳ. ಒಂದು ವೇಳೆ ಆಕೆ ಇದ್ಯಾವುದನ್ನೂ ನಿರೀಕ್ಷಿಸದೆ ಇದ್ದು, ಇವನೂ ಹೀಗ ಎಂದು ತಪ್ಪು ತಿಳಿದು ಬಿಟ್ಟರೆ ಎಂಬ ಭಯ ಹುಡುಗನಿಗೆ. ಒಂದು ಶುದ್ದ ಸ್ನೇಹವನ್ನು ಕೇವಲ propose ಮಾಡುವುದರ ಮೂಲಕ ಕಳೆದುಕೊಂಡು ಬಿಡಬೇಕ ಎನ್ನುವ ವಿವೇಕ, propose ಮಾಡಿಯೇ ಬಿಡುವ ಗಟ್ಟಿ ನಿರ್ದಾರವನ್ನು ಸಡಿಲಿಸಿಬಿಡುತ್ತದೆ.
.
.
ಇವೆಲ್ಲ ಒಂದು ಕಡೆ ಆದರೆ ಹುಡುಗನ ದುಡಿಮೆ ಮತ್ತು ಅಂತಸ್ತಿನ ಅಂತರ propose ಮಾಡ ಹೊರಟವನನ್ನು ಜಗ್ಗಿ ನಿಲ್ಲಿಸುತ್ತದೆ. ಒಂದು ಹುಡುಗಿ ತನ್ನನ್ನು ನಂಬಿಕೊಂಡು ತನ್ನ ಜೊತೆ ಬರುತ್ತಾಳೆ ಎಂದರೆ, ಆಕೆಯ ಸಂಪೂರ್ಣ ಜವಾಬ್ದಾರಿ ಈತನ ಮೇಲಿರುತ್ತದೆ. ನಂಬಿ ಬಂದ ಹುಡುಗಿಯ ಎಲ್ಲ ತಾಪತ್ರಯಗಳಿಗೂ ಈತ ಕಿವಿಯಾಗಬೇಕು. ಆಕೆಗಾದರೂ ಯಾರಿರುತ್ತಾರೆ ಹೇಳಿಕೊಳ್ಳುವುದಕ್ಕೆ?? ಸುಖದಿಂದ ಬೆಳೆದ ಹುಡುಗಿಯನ್ನು ತಾನು ಸಂಬಾಳಿಸಬಲ್ಲೇನೆ ಎಂಬ ಗೊಂದಲಗಳು ಆತನ ಮನಸ್ಸನ್ನು ಒಣಗಿ ಹೋದ ಜೇನು ಗೂಡಿನಂತೆ ಮಾಡಿರುತ್ತದೆ.
.
.
ಇವೆಲ್ಲ ಯೋಚನೆಗಳು ಸಾಧುವೆ ಆದರೂ ಪ್ರೀತಿಗೆ ಇದೆಲ್ಲವನ್ನೂ ಮೀರಿ ನಡೆಯುವ ದಾರ್ಸ್ತ್ಯವಿರುತ್ತದೆ. ಇಷ್ಟಕ್ಕೂ ಮಾಡುವುದು ಪ್ರೀತಿ ತಾನೆ?? ದ್ವೆಷವಲ್ಲವಲ್ಲ?? ಕೊನೆಯಲ್ಲಿ ಒಂದು ಮಾತು. ಎದೆಯೊಳಗಿನ ಹುಡುಗಿ ಉರಿಯುವ ಸಿಗರೆಟಿದ್ದಂತೆ. ತಾನೂ ಉರಿದು ನಮ್ಮನ್ನೂ ಸುಟ್ಟು ಗಾಳಿಯಲ್ಲಿ ಕರಗಿ ಹೋಗುತ್ತಲೇ. propose ಮಾಡಿ ನಿರಾಳರಾಗಿಬಿಡಿ.
........................................................................................................

Friday, December 4, 2009

ಮನಸ್ಸು ಮತ್ತು ಮೆನೇಜ್ಮೆಂಟ್

Office ನಲ್ಲಿ ಕುಳಿತು ಏನೋ ಮಾಡುತ್ತಿದ್ದವನಿಗೆ ಯಾಕೋ ಭಾವನೆಗಳು ಮತ್ತು ವ್ಯವಹಾರಗಳ ನಡುವಿನ ವ್ಯತ್ಯಾಸಗಳ ಕಡೆಗೆ ಯೋಚನೆ ಹರಿಯಹತ್ತಿತು. ಇಲ್ಲಿ ಭಾವನೆಗಳಿಗೆ , ಮಾನವೀಯತೆಗೆ ಜಾಗವಿಲ್ಲ, ಕೇವಲ ವ್ಯವಹಾರೀ ದೃಷ್ಟಿ ಇಂದ ಎಲ್ಲವನ್ನೂ ನೋಡಬೇಕು, ಎಂಬ ಧೋರಣೆಯಿಂದ ನಾವೇ ನಮ್ಮ ಸಹೋದ್ಯೋಗಿಗಳಿಗೆ ಹೆರುವ ಕೆಲಸಗಳು, ಮನೆಯಲ್ಲಿ ಯಾರೋ ಕಾಯುತ್ತಿರುತ್ತಾರೆ ಎಂಬ ಅರಿವು ಕೂಡ ಇಲ್ಲದೆ ಕೆಲಸ ಮುಗಿಸಿಯೇ ಹೋಗು ಎಂದು ನಾವು ನಮ್ಮ ಕೆಳಗಿನವರಿಗೆ ಮಾಡುವ ಆಜ್ಞೆ, ಮನೆಯ ವಿಚಾರಗಳನ್ನು, ನಮ್ಮ ವಯಕ್ತಿಕ ವಿಚಾರಗಳನ್ನು ಆಫೀಸ್ ನ ಒಳಗೆ ತರಬಾರದು ಎಂಬ ನಮ್ಮ ವಾದ, ಭಾವನೆಗಳು ಮತ್ತು ಜೀವನಕ್ಕಾಗಿ ನಾವು ಮಾಡುವ ಕೆಲಸಗಳ ನಡುವೆ ನಾವೇ ಸೃಸ್ತಿಸಿಕೊಳ್ಳುವ ಕಂದಕ, ಇವುಗಳ ಬಗ್ಗೆ ನನ್ನ ಯೋಚನೆ ಜಾರುತ್ತಿತ್ತು.



ಹೌದಲ್ಲ, ಒಂದು ಸಾರಿ ವೃತ್ತಿ ಜೀವನಕ್ಕೆ ಕಾಲಿಟ್ಟು ಬಿಟ್ಟರೆ ನಮಗೆ ನಮ್ಮವರು, ತಮ್ಮವರು ಎಂಬ ಯೋಚನೆಯೇ ಇರುವುದಿಲ್ಲ, ಆಗಾಗ ಬರುವ ಹಬ್ಬ ಹರಿದಿನಗಳು ಮರೆತೇ ಹೋಗಿರುತ್ತದೆ. ಸ್ವಂತ ಅಕ್ಕನ ಮನೆಗೋ, ತಂಗಿಯ ಮನೆಗೋ ಕೊನೆಯೇ ಬಾರಿ ಹೋಗಿದ್ದು ಯಾವಾಗ ಎಂದು ನೆನಪು ಮಾಡಿಕೊಳ್ಳಬೇಕಾಗುತ್ತದೆ, ಮಗನೆ, ನಿನ್ನ ಜೊತೆ ಮಾತಾಡಿ ೧೫ ದಿನ ಆಯಿತಲ್ಲೋ ಎಂದು ತಾಯಿ ಹೇಳಿದಾಗಲೇ, ಮನೆಗೆ call ಮಾಡಲು ಮರೆತಿದ್ದೆ ಎಂದು ನೆನಪಾಗುವುದು. ಚಿಕ್ಕವರಿದ್ದಾಗ ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸಗಳು, ಪದೇ ಪದೇ ಹೋಗುತ್ತಿದ್ದ ನಮ್ಮ ಊರಿನ ಜಾಗಗಳು, ಸ್ಮೃತಿಪಟಲದಿಂದ ದೂರವೇ ಹೋಗಿಬಿಟ್ಟಿರುತ್ತದೆ.



ಆದರೆ ದಿನಕ್ಕೆ 10 ಗಂಟೆ ಆಫೀಸ್ ಮತ್ತು, ೪ ಗಂಟೆ office ಗೆ ಹೋಗುವ ದಾರಿಯಲ್ಲಿ ಕಳೆಯುವ ನಮಗೆ ನಮ್ಮ ಬಗ್ಗೆ ಯೋಚಿಸಲು ಸಮಯವಾದರೂ ಯೆಲ್ಲಿ ಸಿಕ್ಕುತ್ತದೆ?? ಹಾಗೊಮ್ಮೆ ಯೋಚಿಸಲು ಪ್ರಾರಂಬಿಸಿದರು ನವ್ಯಾರೋ ಬೇರೆಯವರ ಬಗ್ಗೆ ಯೋಚಿಸುತ್ತಿದ್ದೇವೆ ಎಂಬಸ್ಟು ನಮಗೆ ನಾವೇ ಅಪರಿಚಿತರಾಗಿರುತ್ತೇವೆ. ಇಂತಹ ಯೋಚನೆಗಳನ್ನು ಕೂಡ Office ನಲ್ಲಿಯೇ ಮಾಡಬೇಕು. ಏಕೆಂದರೆ ಮನೆಗೆ ಬಂದ ಮೇಲೆ ಊಟ ಮಾಡಿ ಮಲಗಿದರೆ ಸಾಕು ಎಂಬಂತಾಗಿರುತ್ತದೆ. ಇಂತಹ ನಮಗೆ ಒಂದೆರಡು ದಿನಗಳನ್ನು ಬಿಟ್ಟಿಯಾಗಿ ಕೊಟ್ಟುಬಿಟ್ಟರೆ ಏನು ಮಾಡಬಹುದು?? ಏನೂ ಮಾಡುವುದಿಲ್ಲವಾದರೂ ಮತ್ತೆ ಆಫೀಸ್ ನ ಬಗ್ಗೆ ಯೋಚನೆ ಮಾಡುವುದನ್ನಂತು ಬಿಡುವುದಿಲ್ಲ. ಯಾಕಾದರೂ ರಜೆ ಕೊಟ್ಟರೋ ಎಂದು ನಮಗಿಂತ ಚಿಕ್ಕವರಾದ ನಮ್ಮ ಜೂನಿಯರ್ ಗಳ ಬಗ್ಗೆ, ಯಾರು ಕೆಲಸ ಹೇಳಿದರು ಐದೇ ನಿಮಿಷ ಬಂದೆ ಎಂದು ನಾಪತ್ತೆಯಾಗುವ ಆಫೀಸ್ ಬಾಯ್, ದಿನಕ್ಕೊಂದು ಡ್ರೆಸ್ ಮಾಡಿಕೊಂಡು ಗಮನ ಸೆಳೆಯುವ ಪಕ್ಕದ ಕ್ಯಾಬಿನ್ ನ ಚಂದದ ಹುಡುಗಿ, ಮತ್ತೆ ಮತ್ತೆ ಕೈಕೊಡುವ ಇಂಟರ್ನೆಟ್, ಏನೋ ಮೋಸ ನಡೆದಿದೆ, ಅದನ್ನು ತಾನು ಹುಡುಕಬೇಕು ಎಂದೇ ಕೆಲಸ ಪ್ರಾರಂಬಿಸುವ Auditor, ಹೀಗೆ ಎಲ್ಲ ನಮ್ಮ ಯೋಚನಾ ವಸ್ತುವಾಗಿರುತ್ತದೆ.
.
.
ಇದೆಲ್ಲಾ ಒಂದುಕಡೆಯಾದರೆ, ಸಾವಿರ ಸಂದೇಶಗಳನ್ನು ಹೇಳುವ ಬಾಸ್ ನ smile. ಲೇಟ್ ಆಗಿ ಆಫೀಸ್ ಗೆ ಬಂದರೆ ಒಂದು ರೀತಿಯ smile, ಬೇಗ ಬಂದರೆ ಒಂದು ರೀತಿಯ smile, ಆತನ ಒಂದು smile ನಿಂದ ನಮಗೆ ತನ್ನ ಸಂದೇಶಗಳನ್ನು ರವಾನಿಸಿಬಿದುತ್ತಾನೆ, ಅಥವಾ ಹಾಗೆ ರವಾನಿಸುವುದೇ ಆತನ ಉದ್ದೇಶವಾಗಿರುತ್ತದೆ. ನಿರ್ವಹಣೆ, ಆಡಳಿತ, ನಿಯಂತ್ರಣ ಮುಂತಾದ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಆತನ ಅದದೇ ಕೆಲಸಗಳಲ್ಲಿ ಇದೂ ಒಂದೇನೋ, ಲೇಟ್ ಆಗಿ ಬಂದಾಗ ನಿನ್ನದು ದಿನಾ ಇದೆ ಕತೆ ಎಂದು, ಬೇಗ ಬಂದಾಗ, ತನ್ನನ್ನು impress ಮಾಡಲು ಬಂದೆಯಾ ಎಂದು, ಕಡಿಮೆ ಕೆಲಸ ಮಾಡಿದಾಗ, ಅಥವಾ ತಪ್ಪು ಮಾಡಿದಾಗ incriment ಗೆ ತುಂಬಾ ದಿನ ಇಲ್ಲ ಎಂದು ಆತನ ಒಂದು smile ನಿಂದ ಅವನಿಗಿಂತ ಮೊದಲೇ ನಮಗೆ ಅರ್ಥವಾಗಿಬಿಡುತ್ತದೆ. ಅಂತು ರಜಾದ ಖುಷಿ ಅನುಭವಿಸುವ ಬದಲು ಮತ್ತೆ ಮತ್ತೆ ಆಫೀಸ್ ನ ಬಗ್ಗೆಯೇ ಆಲೋಚಿಸುತ್ತೇವೆ.
.
.
ಇನ್ನು ಬೇರೆಯವರ ದುಡ್ಡನ್ನು ಲೆಕ್ಕ ಮಾಡಿ ಸಂಪಾದನೆ ಮಾಡುವ ನಮ್ಮಂಥ ಲೆಕ್ಕಾಚಾರದ ಮನುಷ್ಯರಿಗಂತೂ ದಿನವಿಡೀ ವ್ಯವಹಾರದ್ದೆ ಚಿಂತೆ. ಎಲ್ಲಿ ಏನು ಮಾಡಿದರೆ ನಮ್ಮ ಕಂಪನಿ ಗೆ ಎಷ್ಟು ಬಡ್ಡಿ ಉಳಿತಾಯವಾಗುತ್ತದೆ ಎಂದು. ಕೇವಲ ಎರಡು ಹೊತ್ತಿನ ಊಟಕ್ಕಾಗಿ ಎಲ್ಲಿಂದಲೋ ಬಂದು ಆರೋಗ್ಯದ ಜೊತೆ ಮನಸ್ಸನ್ನೂ ಕೆಡಿಸಿಕೊಂಡು ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗಬಹುದು ಎಂದು ಗೊತ್ತಿದ್ದರೂ ನಮ್ಮ ಮನಸ್ಸು ಮೆನೇಜ್ಮೆಂಟ್ ನ ಕಡೆಯೇ ಹೆಚ್ಚು ವಾಲುತ್ತದೆ. ಏಕೆಂದರೆ ನಮಗೂ ಗೊತ್ತು, ಎಲ್ಲೋ ಒಂದು ಕಡೆ ಕುಳಿತು , ಯಾರದೋ ಲೆಕ್ಕದ ಪುಸ್ತಕವನ್ನು ನೋಡಿಕೊಳ್ಳುವುದಕ್ಕಿಂತ, ಇನ್ನೆಲ್ಲೋ ಹೊಲ ಗದ್ದೆ ಗಳಲ್ಲಿ ಕೆಲಸ ಮಾಡುವುದು ಕಷ್ಟ ಎಂದು. ಆಫೀಸ್ ನ ವ್ಯವಹಾರಗಳಲ್ಲಿ ಮುಳುಗಿ ನಮ್ಮ ವಯಕ್ತಿಕ ನೋವು ಕಷ್ಟಗಳನ್ನು ಮರೆತು ಬಿಡಬಹುದು ಎಂಬ ಬ್ರಮೆ ನಮ್ಮನ್ನು ಆವರಿಸಿಕೊಂಡಿರುತ್ತದೆ. ಹಳ್ಳಿಯಲ್ಲಿ ನಮ್ಮದೇ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡಿದರೆ ಇಲ್ಲಿನ ಥಳುಕು ಬಳುಕಿನ ಜೀವನದಿಂದ ವಂಚಿತರಾಗಿ ಬಿಡುತ್ತೇವೆ ಎಂಬ ಭಯ ನಮ್ಮ ತಲೆಯಲ್ಲಿ ತುಂಬಿಕೊಂಡಿರುತ್ತದೆ. ಭಾವನೆಗಳು ಮತ್ತು ಇತರ ಸಿದ್ದಾಂತಗಳು ಮಾತಿಗಸ್ಟೆ ಮುಗಿದು ಹೋಗುತ್ತದೆ.
.
.
ಇವೆಲ್ಲ ಚಿಂತನೆಗಳು ಆ ದಿನ ನನ್ನ ತಲೆಯಲ್ಲಿ ಗಿರಾಕಿ ಹೊಡೆಯುತ್ತಿತ್ತು. ನಿಮ್ಮ ಜೊತೆ ಹಂಚಿಕೊಳ್ಳೋಣ ಎಂದು ಈ ಬರಹ. ಏನೇನೋ ಮ್ಯಾನೇಜ್ ಮಾಡುವುದಕ್ಕಿಂತ ಮೊದಲು ನಮ್ಮನ್ನು ಮತ್ತು ನಮ್ಮದೇ ಮನಸ್ಸನ್ನು ಮ್ಯಾನೇಜ್ ಮಾಡಲು ಕಲಿತುಕೂಳ್ಳೋಣ ಅಲ್ವ??

Thursday, November 19, 2009

....

ಸ್ಪಂಜಿನ ದಿಂಬಿಗೆ ಮುಖ ಒತ್ತಿ ಮಲಗಿದ್ದ ನನಗೆ ಯಾಕೋ ನಿನ್ನದೇ ಕನವರಿಕೆ.. ಅಕ್ಷರ ಕಲಿತಿದ್ದು ನಿನಗೆ ಪ್ರೇಮ ಪತ್ರಗಳನ್ನು ಬರೆಯಲು ಮಾತ್ರವೇನೋ ಎಂಬಂತೆ ದಿನಕ್ಕೊಂದು ಪತ್ರ ಬರೆದು ನನ್ನ ಶಭ್ದ ಬಂಡಾರವೇ ಖಾಲಿಯಾಯಿತೇನೋ ಎಂದುಕೊಂಡಿದ್ದೆ. ಆದರೆ ಕೈಗೆ ಪೆನ್ನು ಸಿಕ್ಕುವುದೇ ತಡ, ಕಣ್ಣು ಮುಚ್ಚಿ ಬಿಡುವುದರೊಳಗೆ ಪ್ರೇಮ ಪತ್ರ ರೆಡಿ. ದಿನಕ್ಕೊಂದು ಪತ್ರ ಬರೆಯದಿದ್ದರೆ ನೀನಾದರೂ ಎಲ್ಲಿ ಬಿಡುತ್ತಿ?? ಹಠ ಮಾಡಿಯಾದರೂ ಪತ್ರ ಬರೆಸಿಕೊಲ್ಲುತ್ತಿಯಲ್ಲೇ ಗೆಳತಿ, ಅದೂ ಪ್ರತ್ಯಕ್ಷ ನಾನೇ ನಿನ್ನ ಬಳಿ ಇರುವಾಗ. ಅದೇನು ಹುಚ್ಚು ಪ್ರೀತಿಯೋ ನಾ ಕಾಣೆ. ನಮ್ಮೂರಲ್ಲಿ ಮೊಬೈಲ್ Network ಸಿಗುವುದಿಲ್ಲ ಎಂದು ನನ್ನನ್ನು ಮನೆಗೆ ಹೋಗುವುದೇ ಬೇಡ ಎನ್ನುವ ನಿನಗೆ ಕೇವಲ ಒಂದೆರಡು ದಿನ ಕೂಡ ನನ್ನನ್ನು ಬಿಟ್ಟಿರಲು ಅಗುವುದಿಲ್ಲವಲ್ಲೇ ಗೆಳತಿ, ಇಷ್ಟು ಹಚ್ಹ್ಚಿಕೊಂಡಿದ್ದೀಯಲ್ಲ ನನ್ನ, ನಾನೆನಾದರೋ ನಿನ್ನ ಕೈಗೆ ಸಿಗದೇನೆ ಹೋದ್ರೆ ಅದ್ಹೇಗೆ ತಡ್ಕೊತೀಯೋ?? ಆದರೆ ನೀನೇನೋ ಎಲ್ಲವನ್ನು ಬಾಯಿ ಬಿಟ್ಟು ಹೇಳಿ ಬಿಡ್ತೀಯ, ನನ್ನ ಕತೆ?? ನೀನೆನದ್ರು ಸಿಕ್ದೇ ಹೋದ್ರೆ ನಾನು ಹುಚ್ಚನೆ ಅಗಿಬಿಡ್ತೀನೇನೋ??
.
.
ಅವಾಗ ತಾನೆ ನನ್ನ ನಿನ್ನ ಸ್ನೇಹ ಮೊಗ್ಗಾಗಿ ಅರಳುತ್ತಿತ್ತು. ಅದು ಕೆಲವೇ ದಿನಗಳಲ್ಲಿ ಹೂವಾಗಿ ಅರಳಿ ಅಸ್ಟೆ ಬೇಗ ಪ್ರೇಮಕ್ಕೆ ತಿರುಗಿದ ಬಗೆ ಇದೆಯಲ್ಲ, ಅದು ನಿಜಕ್ಕೂ ಅದ್ಬುತ. ಎಸ್ಟೋ ಜನ ಹುಡುಗರು, ಹುಡುಗಿಯರೂ ಪ್ರೀತಿಸಿದವರ ಹಸಿರು ನಿಶಾನೆಗೆ ವರ್ಷಗಟ್ಟಲೆ ಕಾಯುತ್ತಾರಲ್ಲ, ಆದರೆ ನಾವು, ಕೇವಲ ಹಾವ ಭಾವ ಗಳಲ್ಲೇ ಪ್ರೀತಿಸಿ, ಎಸ್ಟೋ ದಿನದ ನಂತರ Propose ಮಾಡಿಕೊಂಡು ನಕ್ಕಿದ್ದೇವೆ. ನಿಜಕ್ಕೂ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎನ್ನುವ ಯೋಚನೆಯೇ ರೋಮಾಂಚನ.. ಎಂದು ಮುಗಿಯದ ಆಫೀಸ್ ನ ಜಂಜಡಗಳ ನಡುವೆ, ಮುಂದೇನು ಮಾಡಬೇಕೆಂದು ತೋಚದೆ, ಮಾಡುತ್ತಿರುವ ಕೆಲಸವನ್ನು ಮಾಡದೆ, ಬೇರೆ ಕೆಲಸಕ್ಕೂ ಕೈ ಹಾಕದೆ, ಬಾಸ್ ಮುಂದೆ ಹೋದರೆ ಇನ್ನಸ್ಟು ಬಿಸಿಕೊಲ್ಲಬೇಕೆಂಬ ದುಗುಡದಿಂದ, ನೋಡುತ್ತಿರುವುದೆಲ್ಲ ಅರಿಶಿನವಾಗಿ ಕಾಣುತ್ತಿರುವ ಆ ವಿಹ್ವಲ ಸನ್ನಿವೇಶಗಳಲ್ಲಿ ನೀನು ಮತ್ತು ನಿನ್ನ ಪ್ರೀತಿಯ ಸ್ಮರಣೆ ಎಲ್ಲವನ್ನು ಮರೆಸಿ, ಒಂದು ಹಗುರ ಭಾವನೆ ಉಂಟಾಗುತ್ತದೆ. ಪ್ರೀತಿಯಲ್ಲಿ ಮುಳುಗಿ ಹೋದ ನನ್ನ ಸ್ನೇಹಿತರ ತೊಳಲಾಟ, ದುಗುಡ, ಪ್ರೀತಿಯ ಬಲೆಗೆ ಬೀಳುತ್ತಿರುವಾಗ ಅವರಲ್ಲಾಗುವ ಹನಿ ಹನಿ ಬದಲಾವಣೆಗಳನ್ನು ನೋಡಿ ನಗುತ್ತಿದ್ದವನು ನಾನು. ಈವತ್ತು ಈ ಪರಿಯಲ್ಲಿ ನಿನ್ನ ಪ್ರೇಮದ ಪಾಶಕ್ಕೆ ಸಿಲುಕಿದ್ದೇನೆ ಎಂದರೆ ನನಗೇ ನಂಬುವುದು ಕಷ್ಟ. ಪ್ರೀತಿಯ ಶಕ್ತಿ ಎಂತಹುದಿರಬಹುದು ನೋಡು.
.
.
ಹೌದು, ಹೇಗಿದ್ದೀ ನೀನು??? ಭಾಹುಶ ನಿನಗೂ ಅನ್ನಿಸಿರಬಹುದು, ಪ್ರತಿ ಸಾರಿಯ ನಿನ್ನ ಜೊತೆಗಿನ ನನ್ನ ಮಾತುಕತೆಯಲ್ಲೂ, ನಾನು ನಿನಗಿಂತ ನಿನ್ನ ಮನೆಯವರನ್ನೇ ಹೆಚ್ಚು ವಿಚಾರಿಸಿ ಬಿಡುತ್ತೇನೆ, ಅಮ್ಮ ಹೆಂಗಿದಾಳೆ, ತಂಗಿ ಚೆನ್ನಗಿದಾರ, ಹಾಗಾ, ಹೀಗಾ ಎಂದು, ಅದರರ್ಥ ನಿನ್ನ ಬಗೆಗಿನ ಅಸದ್ದೆಯಂತೂ ಖಂಡಿತ ಅಲ್ಲ.. ನೀನು ಯಾವಾಗಲೂ ಚೆನ್ನಾಗಿಯೇ ಇರ್ತಿ ಮತ್ತು ಇರಬೇಕು ಎಂಬ ನಂಬಿಕೆ ಮತ್ತು ಹಾರೈಕೆ. ಆದರು ಇವತ್ತು ನಿನ್ನ ಬಗ್ಗೆ ಕೇಳುವ ಹಂಬಲ, ಚೆನ್ನಗಿದ್ದೆಯ?? ನಾನು ಹೇಗಿದೀನಿ ಗೊತ್ತಾ??? ಈಗೀಗ ನಮ್ಮ ಮನೆಯಲ್ಲಿ ಹಾಲು ಉಕ್ಕಿಸದೆ ಕಾಯಿಸಿದ ದಿನವೇ ಇಲ್ಲ, ಹಾಲನ್ನು ಬಿಸಿಗಿದುವಾಗ ಎಚ್ಚರದಿಂದಿರುವ ನಾನು ಕನಸಿನ ಚಿಪ್ಪಿನೊಳಗೆ ಜಾರಿ ಹೋದರೆ ಹಾಲು ಉಕ್ಕಿ ಕಮಟು ವಾಸನೆ ಬಂದ ಮೇಲೆಯೇ ವಾಸ್ತವಕ್ಕೆ ಬರುವುದು. ಹಗಲು ಪೂರ್ತಿ ನಿನ್ನ SMS ಗಳಿಗೆ ರಿಪ್ಲೈ ಮಾಡುತ್ತಾ ಕಳೆದರೆ ರಾತ್ರಿಯಾಗುತ್ತಿದ್ದಂತೆ ಕೆಲಸದ ನೆನಪು.... ಅನಿವಾರ್ಯವಾಗಿ ಪ್ರತಿದಿನವೂ late sitting.. ಏನೋ ಮಾಡುವ ತುಡಿತ.. ಏನೂ ಮಾಡಲಾಗದ ಚಡಪಡಿಕೆ, ಏನೋ ಕಳೆದುಕೊಂಡ ಭಾವ, ಯಾವುದೋ ಅವ್ಯಕ್ತ ತಳಮಳ, ಒಂದಿಸ್ತು ಪಶ್ಚಾತಾಪ, ಇದ್ದಕ್ಕಿದ್ದಂತೆ ಖಿನ್ನತೆ, ಕೆಲವೇ ಕ್ಷಣಗಳಲ್ಲಿ ಉತ್ಸಾಹದ ಸಂತೆ, ಪ್ರೀತಿ ಎಂದರೆ ಇದೆ ಏನೇ?? ಎಷ್ಟು ದಿನ ಹೀಗೆ???
.
.
ಮೊನ್ನೆ ಸಿಕ್ಕಿದಾಗ ಹೇಳಿದ್ದೆ ನೀನು, ಆದಸ್ಟು ಬೇಗ ಮನೆಯಲ್ಲಿ ನಮ್ಮ ವಿಚಾರವನ್ನು ಹೇಳುತ್ತೇನೆ, ಒಂದು ವೇಳೆ ಮನೆಯಲ್ಲಿ ಒಪ್ಪದಿದ್ದರೆ ಓದಿ ಹೋಗಿ ಬಿಡೋಣ ಎಂದು, ಆದರೆ ನನಗೇಕೋ ಹತ್ತು ಜನರ ಸಮ್ಮುಖದಲ್ಲಿ, ಸರ್ವರ ಸಮ್ಮತದೊಂದಿಗೆ, ಗುರುಹಿರಿಯರ ಆಶೆರ್ವಾದದೊಂದಿಗೆ ತಾಳಿ ಕಾತ್ತುವುದೇ ಹಿತ ಎನಿಸುತ್ತಿದೆ. ಯಾವುದಕ್ಕೂ ದೈರ್ಯ ಗೆಡಬೇಡ.. ನಾವಂತೂ ತಪ್ಪು ಮಾಡುತ್ತಿಲ್ಲ ಎಂಬ ನಂಬಿಕೆ ನನಗಿದೆ.. ನಮ್ಮ ಪ್ರೀತಿ ನಿಒಜವೇ ಆಗಿದ್ದಲ್ಲಿ ಮನೆಯವರು ಖಂಡಿತ ಒಪ್ಪೇ ಒಪ್ಪುತ್ತಾರೆ. ಹೌದು ಯಾವಾಗ್ ಸಿಕ್ತೀ?? ಪ್ರತಿ ಸಲ ನೀನು ನನಗೆ ಸಿಕ್ಕಾಗಲೂ ನಿನ್ನ ಕಣ್ಣುಗಳಿಂದ ಆಚೆ ಬರುವುದಕ್ಕೆ ಆಗದಸ್ತು, ನಿನ್ನ ಕಣ್ಣೊಳಗೆ ನನ್ನ ಕಣ್ಣು ಹುಡುಗಿ ಹೋಗಿರುತ್ತದೆ... ಈ ಬಾರಿ ನಿನ್ನ ಮುದ್ದು ಮುಖವನ್ನು ನೋಡುವ ಹಂಬಲ......
......................................................

Wednesday, July 22, 2009

ಮತ್ತೆ ಬಂದಿದೆ ಆಗಸ್ಟ್ ಹದಿನೈದು.....

ಇನ್ನೇನು, 100 ಕೋಟಿ ಜನಸಂಖ್ಯೆಯನ್ನು ಹೊಂದಿರುವ, ಅನೇಕ ಧರ್ಮ, ಬಹು ಜಾತಿ, ನೂರಾರು ಸಂಪ್ರದಾಯಗಳು, ಅಸ್ಟೇ ವಿಧದ ಭಾಷೆ, ಇತ್ಯಾದಿಗಳನ್ನು ಹೊಂದಿರುವ, ಕೆಲವು ಕಡೆ ಮುಂದುವರಿದಿದೆ ಎಂದು ಭಾವಿಸಬಹುದಾದ, ಇನ್ನು ಕೆಲವು ಕಡೆ, ಮುಂದುವರಿಯುತ್ತಿದೆ ಎಂದು ನಂಬಬಹುದಾದ, ಇನ್ನೂ ಕೆಲವು ಸಾರಿ, ಯಾಕೋ ನಮ್ಮ ದೇಶ ಹಿಂದೆ ಉಳಿದುಬಿಟ್ಟಿದೆ ಎನ್ನಿಸುವ, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದ ಭಾರತ ದೇಶಕ್ಕೆ ಇನ್ನೊಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುವ ಸುಸಂದರ್ಭ ಬಂದೆ ಬಿಟ್ಟಿತು. ಭಾರತ ಎಂದಾಕ್ಷಣ, ನಮಗೆ ನಮ್ಮದೇ ನೆನಪು ಬರುತ್ತದೆ, ಬರಬೇಕು ಕೂಡ. ಏಕೆಂದರೆ ಅದು ನಮ್ಮದೇ ವ್ಯಕ್ತಿತ್ವಗಳ ಒಟ್ಟಾರೆ ಪ್ರತಿಬಿಂಭ. ನಮ್ಮೆಲ್ಲರ ಗುಣ ಅವಗುಣಗಳು, ನಮ್ಮೆಲ್ಲಾ ಸ್ವಾರ್ಥ, ತಿಕ್ಕಲುತನಗಳು, ಅತ್ತ ವ್ಯವಸ್ಥೆಯು ಅಲ್ಲದ, ಇತ್ತ ಅವ್ಯವಸ್ತೆಯು ಅಲ್ಲದ ಸರಕಾರೀ ಯಂತ್ರ, ಇದೆಲ್ಲದರ ನಡುವೆ ಅಕ್ಕ ಪಕ್ಕದ ದೇಶಗಳ ಮುಂದೆ ತಲೆ ಎತ್ತಿ ನಡೆಯಬೇಕೆಂಬ ನಮ್ಮ ಸ್ವಾಭಿಮಾನ, ದೇಶದ ಜೊತೆಗೆ ನಮ್ಮ ಕಿಸೆಯನ್ನೂ ಸ್ವಲ್ಪ ದಪ್ಪ ಮಾಡಿಕೊಂಡುಬಿಡೋಣ ಎಂಬ ನಮ್ಮ ಸಣ್ಣತನ, ಇದೆಲ್ಲಾ ಸೇರಿ ಆಗಿದ್ದೆ ನಮ್ಮ ದೇಶವಲ್ಲವೇ, ಹಾಗಾಗಿಯೇ ಸ್ವಾತಂತ್ರ್ಯೋತ್ಸವ ನಮ್ಮ ಮನೆಯ ಉತ್ಸವ ಕೂಡ ಅಗಿದ್ದು.
ಮಾನ್ಯ ಗುರುವ್ರಂದದವರೇ, ನನ್ನ ಪ್ರೀತಿಯ ಸಹಪಾಟಿಗಳೇ, ಹಾಗು ಊರ ನಾಗರಿಕರೆ, ಎಂದು ಪ್ರಾರಂಬಿಸಿ, ದೇಶದ ಸ್ವಾತಂತ್ಯ್ರ ಗಳಿಕೆಗೆ ಯಾರ್ಯಾರು ಹೇಗೆ ಬಲಿದಾನ ಮಾಡಿದರು ಎಂದು ಮುಗಿಸುವ ಶಾಲಾ ಮಕ್ಕಳ ಭಾಷಣದಂತೆ ನಾವು ಕೂಡ ಒಂದು ದಿನ ದೇಶದ ಬಗ್ಗೆ ಮಾತಾಡಿ ಮುಗಿಸಿಬಿಡಬೇಕೇ ಎನ್ನುವುದು ಈಗಿನ ಪ್ರಶ್ನೆ. ಕೇವಲ ಕೆಲವು ವರ್ಷಗಳ ಹಿಂದೆ ಭವಿಷ್ಯದ ಪ್ರಜೆಗಳು ಎನ್ನಿಸಿಕೊಂಡವರು ನಾವು. ಅಂದರೆ ಈಗ ನಾವು ಭವ್ಯ ಭಾರತದ ಚುಕ್ಕಾಣಿ ಹಿಡಿದಿರುವ ಪ್ರಜೆಗಳು. ಯುವ ಶಕ್ತಿಯೇ ದೇಶದ ಬೆನ್ನೆಲುಬು ಎಂದಾದರೆ, ದೇಶದ ಮುನ್ನಡೆಗೆ ನಮ್ಮ ಕೊಡುಗೆ ಏಷ್ಟು ಎಂದು ನಾವು ನಮ್ಮನ್ನೇ ಕೇಳಿಕೊಳ್ಳಲು ಇದು ಸಕಾಲ ಎನ್ನುವುದು ನನ್ನ ಭಾವನೆ. ನೀವೆಲ್ಲ ಏನಂತೀರಿ??? ೫೦ ವರ್ಷಗಳ ಹಿಂದೆ ದೇಶಕ್ಕೆ ಸ್ವಾತಂತ್ಯ್ರ ಕೊಡಿಸುವಲ್ಲಿ ಯಾರ್ಯಾರು ಎಷ್ಟು ಕಾಣಿಕೆ ನೀಡಿದರು, ಎಂದು ಅವರನ್ನು ಹೊಗಳುವುದು, ವ್ಯಾಪಾರಕ್ಕೆಂದು ಬಂದು ದೇಶವನ್ನೇ ಕೊಳ್ಳೆ ಹೊಡೆದ ಬ್ರಿಟಿಷ್ ರನ್ನು ತೆಗಳುವುದು, ಎಷ್ಟು ಮುಖ್ಯವೋ, ಇವತ್ತು ನಾವೇ ನು ಮಾಡಬೇಕು ಎನ್ನುವುದು ಕೂಡ ಅಸ್ಟೆ ಮುಖ್ಯವಲ್ಲವೆ???
ಯಾವಾಗಲು ಪಕ್ಕದ ಮನೆಯ ವಸ್ತುಗಳೇ ನಮಗೆ ಸುಂದರವಾಗಿ ಕಾಣುತ್ತದೆ. ಅದಕ್ಕೆ ಸಿಂಗಪುರದ ಸ್ವಚ್ಚತೆಯನ್ನು, ಅಮೆರಿಕಾದ ವ್ಯವಸ್ಥೆಯನ್ನು, ಆಸ್ಟ್ರೇಲಿಯಾದ ಶ್ರೀಮಂತಿಕೆಯನ್ನು, ನೋಡಿ ನಾವು ಹಾಗೆ ಆಗಬೇಕು ಎಂದು ಕೊಳ್ಳುತ್ತೇವೆ. ಆದರೆ ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಭಾರತ ಇನ್ನೆಲ್ಲಿ ಸಿಕ್ಕೆತು ನಮಗೆ?? ಇರುವ ನಮ್ಮದೇ ಆದ ಸಂಪ್ರದಾಯಗಳನ್ನು, ವ್ಯವಸ್ಥೆಯನ್ನು ಕಳೆದುಕೊಂಡು ಬಿಟ್ಟರೆ ನಮ್ಮ ದೇಶವನ್ನು ಇನ್ನೆಲ್ಲಿ ಹುಡುಕೋಣ?? ಸದ್ಯಕ್ಕೆ ಬೇರೆ ದೇಶಗಳನ್ನು, ಅವುಗಳ ಚಂದವನ್ನು, ದೂರದಿಂದಲೇ ನೋಡಿ ಖುಶಿಪಡೋಣ. ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ, ನಮ್ಮದೇ ದೇಶವನ್ನು ಇನ್ನಸ್ಟು ಚಂದಗೊಳಿಸೋಣ, ಅದು ಈಗಿರುವಂತೆಯೇ. ಭಾರತ ಎಂದರೆ ಅದು ಭಾರತದಂತೆಯೇ ಇರಬೇಕು. ಆಗ ಮಾತ್ರ ಅದು ತನ್ನತನವನ್ನು ಉಳಿಸಿಕೊಳ್ಳಲು ಸಾದ್ಯ. ಅದು ಬಿಟ್ಟು ಭಾರತ ಕೂಡ ಅಮೆರಿಕಾದಂತೆ ಆಗಿಬಿಟ್ಟರೆ ಭಾರತಕ್ಕೆನು ಬೆಲೆ??? ಮೊನ್ನೆ ಮೊನ್ನೆ ಕಣ್ಣು ಬಿಟ್ಟ ಅಮೆರಿಕಾವನ್ನು ಅನುಕರಿಸಿಬಿಟ್ಟರೆ ಅತ್ತ ಅಮೆರಿಕಾವೂ ಆಗದೆ, ಇತ್ತ ಭಾರತವೂ ಅಲ್ಲದೆ ತ್ರಿಶಂಕು ಆಗಿಬಿಡುತ್ತದೆ ಅಲ್ಲವೇ???
ದೇಶದ ಬಗ್ಗೆ ಬರೆಯುತ್ತಾ ಹೋದರೆ, ಅದು ಪುಟವಲ್ಲ, ಪುಸ್ತಕವಾದೀತು. ಆದ್ರೆ ಈ ವರ್ಷವಾದರೂ ನಾವು ಕೆಲವು ಸಂಕಲ್ಪಗಳನ್ನು ತೊಡಲೇಬೇಕು. ಹಾಗೆಂದು ವಿಶೇಷವಾದದ್ದೇನು ಮಾಡಬೇಕಿಲ್ಲ. ಮಾಡುವ ಕೆಲಸವನ್ನೇ ಇನ್ನಸ್ಟು ಶ್ರದ್ದೆಯಿಂದ ಮಾಡೋಣ, ಪ್ರಾಮಾಣಿಕತೆಯಿಂದ ಮಾಡೋಣ, ನಮ್ಮ ದೇಶದಲ್ಲೇ ತಯಾರಾಗುವ ವಸ್ತುಗಳನ್ನು ಕರೀದಿ ಮಾಡೋಣ, ಕೋಲಾದ ಬದಲು ಎಳನೀರು ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು, ನಮ್ಮ ಹೊಟ್ಟೆಯ ಜೊತೆಗೆ ನಮ್ಮ ರೈತನ ಹೊಟ್ಟೆಯನ್ನು ತಂಪಾಗಿಸಿದ ಪುಣ್ಯ ನಮ್ಮದಾಗುತ್ತದೆ. ಮನೆಯನ್ನು ಸ್ವಚ್ಚವಾಗಿರಿಸಿಕೊಂಡ ಹಾಗೆ ಹೊರಗಡೆಯ ಸ್ವಚ್ಚತೆಗೂ ಇನ್ನಸ್ಟು ಗಮನ ಹರಿಸೋಣ, ದೇಶದ ಬಗ್ಗೆ ನಮಗಿರುವ ಅಭಿಮಾನವನ್ನು ಚೂರೇ ಚೂರು ಹೆಚ್ಚಿಸಿಕೊಳ್ಳೋಣ, ನಮ್ಮದೇ ಕನಸಿನ ದೇಶವನ್ನು, ನಾವಂದುಕೊಂಡಂತೆ ಕಟ್ಟೋಣ, ಕೇವಲ ನಮಗಾಗಿ, ನಾವು ಕಟ್ಟುವ ನಾವು ಕಟ್ಟುವ ಸುಂದರ ಬೀಡಿಗಾಗಿ, ಚಂದದ ನಾಡಿಗಾಗಿ, ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಇನ್ನಸ್ಟು ಅರ್ಥಪೂರ್ಣಗೊಳಿಸುವ ಸಲುವಾಗಿ, ನಮ್ಮ ಇಷ್ಟು ಮಾತ್ರದ ಪ್ರಯತ್ನ ಸಾಕು ಎಂದುಕೊಳ್ಳುತ್ತೇನೆ. ಮತ್ತು ಇಸ್ತನ್ನು ನಾವು ಮಾಡಬಲ್ಲೆವು ಕೂಡ ಎಂದುಕೊಳ್ಳುತ್ತೇನೆ, ಈ ಬಾರಿಯ ಸ್ವಾತಂತ್ರ್ಯೋತ್ಸವ ನಮಗೆಲ್ಲರಿಗೂ ಹೊಸ ಚೈತನ್ಯ ತುಂಬಲಿ, ಹೊಸ ಹುಮ್ಮಸ್ಸಿನೊಂದಿಗೆ ನಾನಂತೂ Ready, ಇನ್ನು ನೀವು, ಒಹ್, ನನಗಿಂತ ಮೊದಲೇ ಎದ್ದುಬಿಟ್ಟಿದ್ದೀರಿ, Ready ತಾನೆ??

Monday, June 29, 2009

ಸ್ತ್ರೀ ಎಂದರೆ ಅಸ್ಟೆ ಸಾಕೆ???

ಹೂವು ಚೆಲುವೆಲ್ಲ ತಂದೆಂದಿತು, ಹೆಣ್ಣು ಹೂವ ಮೂಡಿದು ಚೆಲುವೇ ತಾನೆಂದಿತು, ಎನ್ನುವ ಹಾಡಿನ ಸಾಲುಗಳಂತೆ, ಹೆಣ್ಣಿನ ಸೌಂದರ್ಯ ಜನ ಜನಿತ. ಅದು ನಿತ್ಯನೂತನ, ಮತ್ತು ಗಂಡಿನ ಪಾಲಿನ ಬಗೆ ಹರಿಯಾದ ಕುತೂಹಲ. ಹೆಣ್ಣು ಎಂಬ ಎರಡು ಅಕ್ಷರ ಮತ್ತು ಒಂದು ವತ್ತಕ್ಷರಗಳ ಪ್ರಭಾವವೇ ಅಂತಹುದೇನೋ, ಕೇಳಿದ ಕೂಡ ಅವರವರ ಭಾವಕ್ಕೆ ತಕ್ಕಂತೆ ಒಬ್ಬೊಬ್ಬರ ಮನಸ್ಸಿನಲ್ಲೂ ಒಂದೊಂದು ರೀತಿಯ ಭಾವನೆ ಮೂಡುತ್ತದೆ. . ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ ಎಂದು ಅದಕ್ಕಾಗಿಯೇ ಹೇಳಿದ್ದಾರೇನೋ?? ಹೆಣ್ಣನ್ನು ಶಕ್ತಿಗೆ ಹೊಲಿಸಿರುವುದೂ ಇದಕ್ಕೆ ಇರಬೇಕು. ಪ್ರಪಂಚದಲ್ಲಿ ನಡೆಯುವ ಹೆಚ್ಚಿನ ಘಟನೆಗಳಲ್ಲಿ ಹೆಣ್ಣಿನ ಛಾಯೆ ಇರುತ್ತದಲ್ಲ, ಇಂತಹ ಹೆಣ್ಣಿನ ಸೌಂದರ್ಯ ಅವಳ ಬಾಹ್ಯ ರೂಪ, ಅವಳ ಬಳುಕುವ ನಡು, ನೀಳ ಜಡೆ, ಅವಳ ಹಾವ ಭಾವಗಳು, ಪ್ರತಿಯೊಬ್ಬರಿಗೂ ಕಂಡರೆ, ಕೆಲವರಿಗೆ ಮಾತ್ರ ಅವಳ ಅಂತರಂಗದ ಭಾವನೆಗಳೂ ಅರ್ಥವಾಗುತ್ತವೆ. ಹೆಣ್ಣಿನ ಬಗ್ಗೆ ಇರುವ ಹೋಗಳಿಕೆಯ ಮಾತುಗಳ ಹಾಗೆ ಸಾವಿರ ಸಾವಿರ ಅಪವಾದಗಳು ಇವೆ, ಆದರೆ ನಮ್ಮದೇ ಸಮಾಜದ ಅವೀಬಾಜ್ಯ ಅಂಗ, ಒನ್ದೇ ನಾಣ್ಯದ ಇನ್ನೊಂದು ಮುಖದ ಬಗ್ಗೆ ಹೊಗಳಿಕೆ ಅಥವಾ ತೆಗಳಿಕೆ ಕೂಡ ಅಸಮ್ನ್ಜಸವಲ್ಲವೇ??? ಅಥವಾ ಅದು ಕೂಡ ಶೋಷಣೆಯ ಒಂದು ವಿಧಾನವೋ???
ಹೀಗೆ ಸೃಸ್ತಿ ಕರ್ತ ಬ್ರಹ್ಮನಿಂದ ವಿಶೇಷ ಮುತುವರ್ಜಿಯಿಂದ ಸೃಸ್ತಿಸಲ್ಪಟ್ಟ ಹೆಣ್ಣು, ತನ್ನ ಜೀವ ಮಾನದಲ್ಲಿ ಆದೆಸ್ಟು ಪಾತ್ರಗಳನ್ನು ನಿರ್ವಹಿಸುತ್ತಳೇ ಎಂದು ಯೋಚಿಸಿದರೆ ಅದು ನಿಜಕ್ಕೂ ಸೋಜಿಗ. ಎಲ್ಲರಂತೆ ಅಥವಾ ಹುಡುಗರಂತೆ ಅವರು ಬಾಲ್ಯವನ್ನು ಕಳೆದರು ಕೂಡ ಅಲ್ಲಿ ಕಟ್ಟು ನಿಟ್ತುಗಳು ಸಾಮಾನ್ಯ. ಈಸ್ಟೇ ಹೊತ್ತಿಗೆ ಮನೆ ಸೇರಬೇಕು, ಹೀಗೆ ಇರಬೇಕು, ಈಸ್ಟೇ ಮಾತದಬೇಕು, ಮನೆಕೆಲಸದಲ್ಲಿ ಸಹಾಯ ಮಾಡಬೇಕು, ಇಸ್ತೇ ಶಿಕ್ಷಣ ಸಾಕು, ಇತ್ಯಾದಿ ಇತ್ಯಾದಿ, ಇಸ್ತೆಲ್ಲ ಅಡ್ಡಿ ಆತಂಕಗಳ ನಡುವೆ ಶಿಕ್ಷಣ ಮುಗಿಸಿ ಉದ್ಯೋಗ ಪ್ರಾರಂಬಿಸಿದರೆ ಅಲ್ಲೂ ಕೂಡ ಗಂಡಿಗೆ ಸಮಾನವಾಗಿ ದುಡಿಯುವ ಹೆಣ್ಣನ್ನು ಅದ್ಯಾವ ದ್ರಸ್ತಿಯಿಂದ ಅಬಲೆ ಎನ್ದರೋ?? ಅದು ಕೂಡ ಮನೆಯಲ್ಲಿ ತನ್ನ ಪತಿಗೆ ಆಸರೆಯಾಗಿ, ಮನೆಯ ಜವಾಬ್ದಾರಿಗಳನ್ನು ಹೊತ್ತು ಉದ್ಯೋಗವನ್ನು ಮಾಡುವ ಮಹಿಳೆ ನಿಜಕ್ಕೂ ಸಬಲೆಯಲ್ಲದೇ ಮತ್ತಿನ್ನೇನು???
ಹೆಣ್ಣಿನ ಇನ್ನೊಂದು ಮಹತ್ವದ ಪಾತ್ರ ಮತ್ತು ಆಕೆ ತನ್ನ ಹೆಣ್ತನದ ಪರಿಪೂರ್ಣತೆ ಹೊಂದುವುದು ತಾಯಿಯಾಗಿ. ಸಾಮಾನ್ಯವಾಗಿ ಹೆಣ್ಣು ಎಂದಾಕ್ಷಣ ನಮಗೆ ಮೊದಲು ನೆನಪಾಗುವುದು ಕೂಡ ತಾಯಿಯೇ. ನಾವು ಕಣ್ಣಿಂದ ನೋಡಬಹುದಾದ ಪ್ರತ್ಯಕ್ಷ ದೇವರು. ಪ್ರತಿದಿನ ನಮಗೆ ಬೇಕಾಗಿದ್ದನ್ನು ನಾವು ಕೇಳಲಿ ಬಿಡಲಿ, ನಮಗಿಂತ ಮೊದಲು ಅರ್ಥ ಮಾಡಿಕೊಂಡು ಕೊಡುವ ಆಕೆ ನಮ್ಮ ಪಾಲಿಗೆ ಕೇವಲ ಮಮತಾಮಯಿ ತಾಯಿ ಮಾತ್ರ. ನಮಗನಿಸಿದ್ದನ್ನು, ನಮ್ಮ ಕೈಲಾಗದ್ದನು, ನೇರವಾಗಿ ಅಮ್ಮನಿಗೆ ಹೇಳಿಬಿಟ್ಟರೆ ನಮ್ಮ ಜವಾಬ್ದಾರಿ ಮುಗಿದು ಹೋಗುತ್ತದಲ್ಲ, ಆದರೆ ಆಕೆಗೆ ನಮ್ಮ ಜೊತೆಗೆ ನಮ್ಮ ಜವಾಬ್ದಾರಿಗಳನ್ನು ಕೂಡ ಹೊರುವ ಅನಿವಾರ್ಯತೆ. ಆದ್ರೆ ಆಕೆ ಅದನ್ನು ಪ್ರೀತಿಯಿಂದಲೇ ಮಾದುತ್ತಳಲ್ಲ, ಮಕ್ಕಳು ಹೇಗೆ ಇರಲಿ, ಇಂಥವರೇ ಆಗಿರಲಿ, ತಾಯಿ ತೋರುವ ಪ್ರೀತಿ, ವಾತ್ಸಲ್ಯ, ಮಮತೆ ಮಮಕಾರಗಳು ಕುಂದುವುದೇ ಇಲ್ಲ. ಬೆನ್ನಿಗೆ ಮಕ್ಕಳನ್ನು ಕಟ್ಟಿಕೊಂಡು ರಸ್ತೆ ಬದಿಯಲ್ಲಿ ಕೂಲಿ ಕೆಲಸ ಮಾಡುವ ಅನೇಕ ತಾಯಂದಿರನ್ನು ಇದಕ್ಕೆ ಉತ್ತಮ ಉದಾಹರಣೆ ಯಾಗಿ ನೋಡಬಹುದು. ಹೀಗೆ ಜೋಗುಳ ಹಾಡುವ ತಾಯಿಯಾಗಿ, ಶ್ರುದ್ದೆಯಿಂದ ಕೆಲಸ ಮಾಡುವ ಉದ್ಯೋಗಿಯಾಗಿ, ತಂದೆಗೆ ಪ್ರೀತಿಯ ಮಗಳಾಗಿ, ಪತಿಯನ್ನು ಅರಿತು ನಡೆಯುವ ಸತಿಯಾಗಿ, ಸೆರಗಿನ ತುದಿಯಿಂದ ಮೊಮ್ಮಕ್ಕಳ ಕನೀರುಯ್ ವರೆಸುವ ಅಜ್ಜಿಯಾಗಿ, ಅತ್ತೆಗೆ ಸೊಸೆಯಾಗಿ, ಸೊಸೆಗೆ ಅತ್ತೆಯಾಗಿ, ಇನ್ಯಾರಿಗೋ ಸಾಂತ್ವನ ಹೆಕುವ ಗೆಳತಿಯಾಗಿ, ಊರಿಗೊಬ್ಬಳೇ ಪದ್ಮಾವತಿಯಾಗಿ, ತನ್ನೆಲ್ಲ ಕಷ್ಟ ಕಾರ್ಪಣ್ಯಗಳನ್ನು ಸೆರಗಿನಲ್ಲಿ ಗಂಟು ಕಟ್ಟಿಕೊಂಡು ನಗುಮೊಗವನ್ನು ಹೊರಸೂಸುವ ಹೆಣ್ಣಿಗೆ ಸ್ತ್ರೀ ಎಂದರೆ ಅಸ್ತೆ ಸಾಕೆ???
ಹೀಗೆ ಹೆಣ್ಣಿನ ಚೌಕಟ್ಟು ಸೀಮಿತವಾಗಿದೆಯೇ, ಹತ್ತು ವರ್ಷಗಳ ಹಿಂದಿನ ಪರಿಸ್ತಿತಿ ಹಾಗೆ ಮುಂದುವರಿದಿದೆಯೇ ಎಂದು ಯೋಚಿಸುತ್ತಾ ಹೋದರೆ ಕಂಡಿತಾ ಇಲ್ಲ. ಹೆಣ್ಣು ಅಡಿಗೆ ಕೊನೆಗೆ ಮಾತ್ರ ಸೀಮಿತ ಎನ್ನುವ ಅದ್ಯಾಯ ಮುಗಿಯುತ್ತ ಬಂದಿದೆ. ಅವಳು ಗಂಡಿನ ಪುರುಷ ಪ್ರದಾನ ವ್ಯವಸ್ಥೆಗೆ ಅಧೀನಲು ಆಗಿಲ್ಲ. ಹೆಣ್ಣು ಗಂಡು ಇಬ್ಬರು ಸಮಾನರು ಎನ್ನುವ ಕೂಗು ಎಲ್ಲೆಲ್ಲು ಕೇಳಿ ಬರುತ್ತಿದೆ. ಜಾಗತೀಕರಣ ತಂಡ ಅವಕಾಶಗಳ ಸಂತೆ, ಹೆಣ್ಣಿಗೆ ಬರವಸೆಯ ಉಡುಗೊರೆ ನೀಡಿದೆ. ವೇಗದ ಪ್ರಪಂಚದಲ್ಲಿ ಹೆಣ್ಣು ಗಂಡು ಎಂಬ ತಾರತಮ್ಯಕ್ಕಿಂತಲೂ ಪ್ರತಿಬೆಗೆ ಹೆಚ್ಚಿನ ಮಾನ್ಯತೆ ಸಿಕ್ಕುತ್ತಿದೆ. ಇಸ್ತಾಗಿಯು ಮಹಿಳಾ ಸಂಘಟನೆಗಳ ಬೆಂಬಲ ಸಿಕ್ಕುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನಸ್ತೆ ಓದಿರುವ ಹೆಂಡತಿಯನ್ನು ಕೇವಲ ಅಡಿಗೆಗೊಸ್ಕರ ಮನೆಯಲ್ಲೇ ಇರು ಎಂದು ಹೇಳುವುದು ಅವಿವೇಕ ಎಂಬ ಭಾವ ನಮ್ಮ ಯುವಕರಲ್ಲಿ ಬಂದುಬಿಟ್ಟಿದೆ. ಯತ್ರ ನಾರ್ಯಂತು ಪೂಜ್ಯಂತೆ ರಮಂತೆ ತತ್ರ ದೇವತಾ, ಎಂಬಂತೆ ಹೆಣ್ಣಿನ ಅರ್ಹತೆಗೆ ತಕ್ಕಂತೆ ಪೂಜ್ಯತೆಯನ್ನು ಪಡೆಯಲಿ. ಗಂದ್ದಿನ ಅಧೀನತೆಯಿಂದ ಹೊರಬರಲಿ. ಮತ್ತೆ ಸಮಾನತೆಯ ಕೂಗು ಹುರಿಗೊಳ್ಳಲಿ, ಸಮಾಜದ ಎರಡು ಕಣ್ಣುಗಳು ಒಂದೇ ದಿಕ್ಕಿನತ್ತ ನೋಡಲಿ, ಅದು ನಮಗೂ ನಮ್ಮ ಸಮಾಜಕ್ಕೂ ಒಳ್ಳೆಯದಲ್ಲವೇ???

Saturday, June 13, 2009

ನೆತ್ತಿಯ ಮೇಲಿನ ಮುದ್ದು ಹಕ್ಕಿ,

ಭಾವನೆಗಳ ಜೊತೆ ಬಣ್ಣದೋಕುಳಿಯಾಡಿದ ಪಾತರಗಿತ್ತೀ, ನನ್ನ ಕಣ್ಣ ಪೋಟರೆಯೊಳಗೆ ಗೂಡು ಕಟ್ಟಿದ ಮರಕುಟುಕ ನೀನು, ನನ್ನ ಹಾಡು ನೀನು. ಹುಟ್ಟಾ ಕೊಳಕನೂ, ಪಕ್ಕಾ ಪೊಲಿಯೂ, ಶುದ್ದ ವರಟನೂ ಆದ ನನ್ನನ್ನು ಅದು ಹೇಗೆ ಪ್ರೀತಿಸಿಬಿಟ್ಟೆಯೆ ಗೆಳತಿ, ಕೇವಲ ಬುದ್ದಿಯಿಂದ, ಹಣದಿಂದ, ಏನು ಬೇಕಾದರು ಮಾಡಬಹುದು ಎಂದು ನಂಬಿಕೊಂಡಿದ್ದವನು ನಾನು. ಪ್ರೀತಿಯ ಭಾಷೆ ಗೊತ್ತಿರದಿದ್ದವನು ನಾನು. ನೀನು ಕರ್ಚಿಗೆ ಕೊಡು ಎಂದಿದ್ದನ್ನೇ ತಪ್ಪಾಗಿ ತಿಳಿದು ಕಿಸೆಯಿಂದ ಹಣ ತೆಗೆದು ಕೊಟ್ಟವನು ನಾನು. ನನ್ನಂಥವನನ್ನು ಅದು ಹೇಗೆ ಸಹಿಸಿಕೊಳ್ತೀಯೋ ಅಂದು ಕೊಂಡಿದ್ದೆ.

ಆದರೆ ಒಂದು ಬಾರಿ ನನ್ನ ಜೀವನದಲ್ಲಿ ನಿನ್ನ ಪ್ರವೇಶವಾಗಿದ್ದೇ ತಡ, ಹೃದಯವನ್ನಾಳುತ್ತಿದ್ದ ನನ್ನ ಬುದ್ದಿ, ಹೃದಯದ ತಾಳಕ್ಕೆ ತಕ್ಕಂತೆ ಕುಣಿಯತೊಡಗಿಬಿಟ್ಟಿತು ನೋಡು. ಹಾಗೆ ಭಾವನಾ ಲೋಕಕ್ಕೆ ಕರೆದೊಯ್ದ ನೀನು ಸಂಗೀತವೆಂದರೇನೆಂದು ಪರಿಚಯಿಸಿದೆ. ನಿನಗಿಸ್ಟ ಅಂತಲೋ, ಅಥವಾ ನನಗೇ ಇಸ್ಟವಾಯೀತೋ, ಅಂತೂ ಸಂಗೀತ ಪ್ರಪಂಚದ ಹುಚ್ಚು ಹತ್ತಿಸಿಕೊಂಡು ಬಿಟ್ಟೆ. ಅಲ್ಲಿಂದ ನಮ್ಮ ಮನೆಯ ರೇಡಿಯೋಕ್ಕೆ ಬಿಡುವೇ ಇಲ್ಲದಾಯ್ತಲ್ಲ. ಬರುವ ನಾಲ್ಕಾರು ಸ್ಟೇಶನ್ ಗಳಲ್ಲೇ ಹುಡುಕಿ ಹುಡುಕಿ ಹಾಡು ಕೇಳುತ್ತಿದ್ದೆ. ಅದ್ಯಾವುದೋ ಒಂದು ದಿನ ಹಾಗೆ ರೇಡಿಯೋದ ಕಿವಿಗಳನ್ನು ತಿರಿಸುತ್ತಿದ್ದಾಗ ಬಂತಲ್ಲ ಕೊಳಲ ಗಾನ, ಅದೇನು ಮೋಡಿ ಮಾಡಿತೋ ಏನೋ, ಅವತ್ತಿನಿಂದಲೇ ತಾನೇ ನಾನು ಕೊಳಲ ದಾಸನಾಗಿದ್ದು??

ನಮ್ಮೂರಿನಲ್ಲಿರುವ ಬಿದಿರನ್ನೆಲ್ಲ ಕಡಿದು , ಒಂದರಿಂದಲೂ ನಾದವಿರಲಿ, ಕನಿಸ್ಟ ಶಿಳ್ಳೆ ಹೊಡೆದ ಶಬ್ಧವೂ ಬಾರದಿದ್ದಾಗ ನಾನು ಪಟ್ಟ ಪರಿಪಾಟಲು, ಅಂತೂ ಯಾರನ್ನೋ ಹಿಡಿದು ಒಂದು ಕೊಳಲನ್ನು ಸಂಪಾದಿಸಿದೆನಲ್ಲ, ತಿಂಗಳುಗಟ್ಟಲೇ ಅದರೊಂದಿಗೆ ಗುದ್ದಾಡಿ, ಕೆಲವು ಹಾಡುಗಳನ್ನು ಕಲಿತು ನಾನು ನುಡಿಸುತ್ತಿದ್ದರೆ, ರಾಧೆ, ರುಕ್ಮಿಣಿ, ಸತ್ಯಭಾಮೆ ಎಲ್ಲವೂ ನೀನೆ ಆಗಿ ಕೇಳುತ್ತಿದ್ದ ನೀನು ನಿಜಕ್ಕೂ ಅಪರೂಪದ ಕೇಳುಗಳು. ಹಾಗೆ ನಾನು ನುಡಿಸುತ್ತಾ, ನೀನು ಕೇಳುತ್ತ ನಮಗೆ ನಾವೇ ಸ್ರಸ್ಟಿಸಿಕೊಳ್ಳುತ್ತಿದ್ದ ಗಂದರ್ವ ಲೋಕ, ಪ್ರೀತಿ ಎಂದರೆ ಇದೇ ತಾನೇ, ಬೇರೆಯವರಿಗೆಲ್ಲ ನಾನೂದುವ ಪಿಳ್ಳನ್ಗೋವಿ, ನಿನ್ನ ಪಾಲಿಗೆ ಸುಮಧುರ ಕೊಳಲ ಗಾನ. ಕೊನೇ ಕೊನೆಗೆ ಕೊಳಲೂದುವುದನ್ನೆ ಮರೆತು ನಿನ್ನನ್ನೇ ನೋಡುತ್ತಾ ಕುಳಿತು ಬಿಡುತ್ತಿದ್ದೆ. ನೀನೋ, ನಾನೇ ತಟ್ಟಿ ಎಬ್ಬಿಸಬೇಕಿತ್ತು. ನೀನು ನಿಜವಾಗಿಯೂ ಕೆಳುತ್ತಿದ್ದೆಯೋ, ನನ್ನನ್ನು ನೋಡುತ್ತಾ ಕುಳಿತಿರುತ್ತಿದ್ದೆಯೋ, ಅಥವಾ ಭವಿಷ್ಯದ ಕನಸು ಕಾಣುತ್ತಿದ್ದೆಯೋ ಇವತ್ತಿಗೂ ಗೊತ್ತಿಲ್ಲ. ಯಾಕೆಂದರೆ ನಾನು ನುಡಿಸಿದ ಕೊಳಲ ಗಾನ, ರೆಕಾರ್ಡ್ ಮಾಡಿಕೊಂಡು ಹಾಕಿದರೆ ನನಗೇ ಕೇಳಲಾಗುತ್ತಿರಲಿಲ್ಲವಲ್ಲ..

ಅವಾಗಲೇ ಅಂದುಕೊಂಡಿದ್ದೆ, ನನ್ನ ಹೆಂಡತಿಯಾಗಲು ನೀನೇ ಸರಿ ಎಂದು. ನೀನು ಮಾತ್ರ ನನಗೆ ತಕ್ಕ ಸತಿಯಾಗಬಲ್ಲೆ ಎಂದು ನಂಬಿಕೊಂಡಿದ್ದೆ. ಆದರೆ ನೀರಿನಲ್ಲಿ ಈಜುವ ಮೀನಿನ ಹೆಜ್ಜೆಯನ್ನದರೂ ಗುರುತಿಸಬಹುದು, ಹೃದ್ಗತವಾದ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾದ್ಯವಿಲ್ಲ ಅಂತಾರಲ್ಲ, ಅದ್ಯಾವ ಗೃಹ ನಿನ್ನ ಮನಸ್ಸನ್ನು ಬದಲಿಸಿಬಿತ್ತಿತೋ ನಾಕಾಣೆ, ನೀನೆಂದರೆ ನಂಗೆ ಇಸ್ಟವಿಲ್ಲ, ನನ್ನನ್ನು ಮರೆತುಬಿಡು ಅಂದುಬಿಟ್ಟೆಯಲ್ಲ, ಎಲ್ಲವನ್ನೂ ಅತಿಯಾಗಿಯೇ ಮಾಡುವ ನನ್ನಂಥವನ ಜೊತೆ ಏಗುವುದು ಹೇಗೆನ್ದು ನಿನಗೂ ಅನ್ನಿಸಿರಬಹುದು ಗೆಳತಿ, ಆದರೆ ಹಾಗೆ ನಿನ್ನಿಂದ ಒಂದೇ ಮಾತಿನಲ್ಲಿ ತಿರಸ್ಕ್ರತಗೊಂಡು ಹೋದ ದಿನದಿಂದ ಒಂದೇ ಒಂದು ದಿನವೂ ನಿನ್ನನ್ನು ಮರೆಯುವ ಪ್ರಯತ್ನದಲ್ಲಿ ನಾನು ಸಫಲನಾಗಲೇ ಇಲ್ಲ. ನಾನಾಯಿತು ನನ್ನ ಪಾದಾಯಿತು ಎಂದು ಇದ್ದವನನ್ನು ಪ್ರೀತಿಯೆಂಬ ಸುಂದರ ತೋಟಕ್ಕೆ ಎಳೆದು ತಂದೆಯಲ್ಲ, ಅದು ನೋದಲು ಮಾತ್ರ ಸುಂದರ ಎಂದು ಈಗ ಗೊತ್ತಾಗುತ್ತಿದೆ. ಪ್ರೀತಿ ಎಂದರೆ ಎಸ್ಟು ಮುಕ್ಕಿದರೂ ತೀರದ ಹಸಿವು. ಎಸ್ಟು ಹಾಕಿದರೂ ತುಂಬದ ಬಿಕ್ಷಾ ಪಾತ್ರೆ. ಅದು ನಿರಂತರ ಹರಿಯುವ ನೀರಿನ ಸೆಳೆತ..

ಕೇವಲ ಒಂದು ಏಕ್ರೆ ತೋಟ, ಒಂದು ಮನೆ, ಒಂದು ಸುಂದರ ಸಂಸಾರ, ಅಸ್ಟೆ ಆಗಿತ್ತಲ್ಲ ನಿನ್ನ ಕನಸು, ನನ್ನನ್ನು ಅಸ್ಟು ಕೂಡ ಕೊಡಲು ಆಗದವನು ಎಂದುಕೊಂಡುಬಿಟ್ಟಿದ್ದೇಯಲ್ಲ, ಪ್ರತಿ ಮಾತು, ಪ್ರತಿ ಘಟನೆ, ಪ್ರತಿದಿನದ ಕತ್ತಲು, ಎಳೆಬಿಸಿಲು, ತಂಗಾಳಿ, ನಮ್ಮೂರಿನ ಗುಡ್ಡಬೆಟ್ಟಗಳು, ನಾನೂದಿದ ಕೊಳಲು, ಹೀಗೆ ಎಲ್ಲೆಂದರಲ್ಲಿ ನಿನ್ನ ನೆನಪಾಗುತ್ತಿದ್ದರೂ, ಇದೋ ನೋಡು, ನಿನ್ನೆರಡೂ ಕಣ್ಣುಗಳನ್ನು ಬಿಟ್ಟು, ಎಲ್ಲ ಅಸಹಾಯಕತೆ, ಅವಮಾನ , ಖಿನ್ನತೆ ಗಳನ್ನೆಲ್ಲ ಹಿಮ್ಮಡಿಯ ಕೆಳಗೆ ಮೆಟ್ಟಿ ನಿಲ್ಲುವ ಫಕೀರನ ಛಲದಂತೆ ನಾನು ಕೂಡ ನನ್ನ ಜೀವನವನ್ನು ರೂಪಿಸಿಕೊಂಡಿದ್ದೇನೆ. ನೀನು ಕಂಡ ಕನಸನ್ನು ಮೀರಿ ಬೆಳೆದುಬಿಟ್ಟಿದ್ದೇನೆ.

ಒಂದು ಕಾಲದಲ್ಲಿ ಮರಳಲ್ಲಿ ರೆಕ್ಕೆ ಹುದುಗಿಸಿ, ಮೈಮರೆತು ತೀರಕ್ಕೆ ಬರುವ ಮೀನಿಗಾಗಿ ಕಾಯುತ್ತ ಶತಮಾನ ಕಳೆದು ಬಿಡುವ ಹಕ್ಕಿಯ ಸಂಯಮವಿತ್ತು. ಮರದ ಮೇಲಿನ ಹೆಜ್ಜೆನಿಗಾಗಿ ಕೆಳಗಡೆ ಶತಪಥ ಹಾಕುವ ಕರಡಿಯ ಕನವರಿಕೆಯಿತ್ತು. ನೀನು ಸಿಕ್ಕಿದರೆ ನನ್ನ ಜೊತೆ ಇಡೀ ಜಗತ್ತೇ ಸಮಧಾನಗೊಳ್ಳುತ್ತದೆ ಎನ್ನುವ ಸುಳ್ಳೇ ಸುಳ್ಳು ನಿರಾಳತೆಯಿತ್ತು. ಕೊಳಲೆಂಬ ತುತುಗಳುಲ್ಲ ಬಿದಿರು ಉಡುವ ನನಗೆ ಅದ್ಭುತವಾದ ಭಾವುಕ ಮನಸ್ಸಿತ್ತು. ಶತಮಾನಗಳ ಕಾಲ ನಿನ್ನ ಜೀವಕೊಶಗಳೊಂದಿಗೆ ಬೆರೆತು ಹೋಗುವ ಉತ್ಸಾಹವಿತ್ತು. ಪ್ರೀತಿಯಲ್ಲಿ ಮುಳುಗಿದವನೊಬ್ಬನ ಆರ್ತನಾದವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ನನ್ನ ಅಗಾಧ ಪ್ರೇಮವಿತ್ತು. But My dear Love, ನನ್ನ ಪಾಲಿಗೆ ನೀನು ಆಗಂತುಕಳಾಗಿ ಹೋದೆಯಲ್ಲ. Really I am Sorry, ಭಾಹುಶಹ ಇನ್ನೊಂದು ಸ್ವಲ್ಪ ದಿನಕ್ಕೆ ನೀನಾಗಿ ಬಂದರೂ ನಾನು ನಿನ್ನ ಜೊತೆ ಮಾತನಾಡುವ ಉತ್ಸಾಹವನ್ನೇ ಕಳೆದುಕೊಂಡು ಬಿಡಬಹುದು. Wish you all the best....



Saturday, May 30, 2009

ಅರ್ಥಿಕ ಸುಧಾರಣೆಗಳು ಮತ್ತು ವಿಮಾನ ಯಾನ...

ಆದಿನ ನಾನೇ ನೆಲದಿಂದ ತುಂಬಾ ಮೇಲಿದ್ದೆನೋ ಅಥವಾ ನೆಲವೇ ನನಗಿಂತ ಕೆಳಗಿತ್ತೋ ಗೊತ್ತಿಲ್ಲ. ಅಂತೂ ನೆಲ ಬಿಟ್ಟು ಹೋಗುವಸ್ಟು ಖುಷಿಯಾಗಿದ್ದಂತೂ ಸತ್ಯ. ಖುಷಿ ಅನ್ನುವುದಕ್ಕಿಂತ ಅನೇಕ ಭಾವನೆಗಳ ಮಿಶ್ರಣ ಎನ್ನುವುದು ಸೂಕ್ತ. ಅದು ಹೇಳಿದರೆ ಅರ್ಥವಾಗುವುದಿಲ್ಲ ಬಿಡಿ. ಅನುಭವಿಸಿ ನೋಡಬೇಕು. ಹಿಂದೆಂದೂ ಆಗಿರದ, ಮುಂದೆ ಆಗಲು ಸಾದ್ಯವಿರದಸ್ಟು ಖುಷಿಯಾಗಿತ್ತದು ಎಂದು ಮಾತ್ರ ಹೇಳಬಲ್ಲೆ. ಯಾವತ್ತಾದರೂ ಯಾರಾದರೂ ನಿನ್ನ ಜೀವನದ ಅತ್ಯಂತ ಸಂತಸದ ಕ್ಷಣ ಯಾವುದಾಗಿತ್ತು ಎಂದರೆ ಅನುಮಾನಕ್ಕೆ ಎಡೆಯೆ ಇಲ್ಲದೇ ಈ ಘಟನೆಯನ್ನು ಹೇಳಬಲ್ಲೆ ಎನಿಸಿತ್ತು.


ಅಸ್ಟೆಲ್ಲ ಖುಷಿಗೆ ಮೂಲ ಕಾರಣ ಕೇವಲ 3.5 ನಿಮಿಷಗಳ 1 ಫೋನ್ ಕಾಲ್. ಪ್ರಪಂಚದ ಆರ್ಥಿಕ ಬಿಕ್ಕಟ್ತಿನ ಬಗ್ಗೆ, ತುಂಬಾ ಸರಳವಾಗಿ ನಾನು ಮಂಡಿಸಿದ ಪ್ರಬಂದ ಅದು ಹೇಗೊ ಜಗಜ್ಜಾಹೀರಾಗಿತ್ತು. ಅದನ್ನು ಓದಿದ ಮೊಂಟೆಕ್ ಸಿಂಗ್ ಅಹ್ಲುವಾಳೀಯ ಎಂಬ ಪ್ರಖ್ಯಾತ ಅರ್ಥ ಶಾಸ್ತ್ರಜ್ಞ ತನ್ನನ್ನು ಕಾಣಲು ಸೂಚಿಸಿದ್ದ ಪೋನ್ ಕಾಲ್ ಅದು. ಆದಿನವಿಡೀ ನನ್ನನ್ನು ಯಾವುದೋ ಮತ್ತಿನಲ್ಲಿ ತೇಲಾಡುವಂತೆ ಮಾಡಿದ ಫೋನ್ ಕಾಲ್ ಅದು. ನನ್ನನ್ನು ನಾನು ನಂಬಲಾಗದಂತೆ ಮಾಡಿದ ಫೋನ್ ಕಾಲ್ ಅದು.

ನಾನು ನನ್ನ ಪ್ರಬಂದದಲ್ಲ್ಲಿ ಹೇಳಿದ್ದಾದರೂ ಏನು, ಒಂದು ಚಿಕ್ಕ ಸರ್ಕಲ್ ನಲ್ಲಿ, ಹಣದ ಹರಿವನ್ನು ಚಿತ್ರಿಸಿ, ಅವು ಒಂದಕ್ಕೊಂದು ಹೇಗೆ ಬೆಸೆದುಕೊಂಡಿರುತ್ತವೆ ಎಂದು ವಿವರಿಸಿದ್ದೆ , ಬಲು ದೊಡ್ಡ ಕಟ್ಟಡವನ್ನು ಕಟ್ಟುವಾಗ ಹಾಕಿಕೊಳ್ಳುವ ನೀಲ ನಕ್ಷೆಯಂತೆ. ಆರ್ಥಿಕ ಹಿಂಜರಿತಕ್ಕೆ ಕಾರಣವಾದ ಅಂಶಗಳನ್ನು ಹೆಕ್ಕಿ ತೆಗೆದಿದ್ದೆ. ಹೇಗೆ ಒಂದು ಮನೆಯಲ್ಲಿ, ದುಡ್ಡು ಒಳ ಬಂದು ಹೊರ ಹೋಗುವ ಚಕ್ರ ಸರಾಗವಾಗಿ ತಿರುಗುತ್ತಿರುತ್ತದೋ, ಹಾಗೆ ಚಿಕ್ಕ ಉದಾಹರಣೆ ಇಂದ ದೊಡ್ಡದನ್ನು ತೋರಿಸಿದ್ದೆ. ಒಂದು ಕಡೆ ಹಣ ನಿಂತು ಹೋಗಿದೆ, ಅದರಿಂದ ಹಣದ ಹರಿವು ಆಗುತ್ತಿಲ್ಲ, ಅಥವಾ, ಹಣಕಾಸಿನ ಚಕ್ರ ನಿಧಾನವಾಗಿ ತಿರುಗುತ್ತಿದೆ ಎಂದು ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತಹ ಆರ್ಥಿಕ ನೀತಿಯನ್ನು ರೂಪಿಸಿದ್ದೆ. ಹೇಗೆ ಅಧಿಕಾರ ವಿಕೇಂದ್ರೀಕರಣ ಇದೆಯೋ ಹಾಗೆ, ಹಣಕಾಸಿನ ನೀತಿಯನ್ನು, ಬೇರೆ ಬೇರೆ ಪ್ರದೇಶಕ್ಕೆ ಅನುಗುಣವಾಗಿ ರೂಪಿಸಬೇಕು, ಅಂದರೆ ಕಿರು ಹಣಕಾಸು ನೀತಿಯನ್ನು ಬಲಪಡಿಸಬೇಕು ತಿಳಿಸಿ ಹೇಳಿದ್ದೆ. ಅದಕ್ಕಾಗಿ ಕೆಲವು ಆರ್ಥಿಕ ಸುಧಾರಣ ಕ್ರಮಗಳನ್ನೂ ಕೈಗೊಳ್ಳಬೇಕು, ಈಗಾಗಲೇ ತೆಗೆದುಕೊಂಡ ಕ್ರಮಗಳನ್ನು ಬಿಟ್ಟು, ಇನ್ನಸ್ಟು ಪರಿಣಾಮಕಾರಿ ಯೋಜನೆಗಳನ್ನು, ಯಾವ ರಾಜಕೀಯ ವತ್ತದಕ್ಕೂ ಸಿಲುಕಡೆ ಕೈಗೊಂಡರೆ, ಆರ್ ಬೀ ಐ ಮೈ ಚಳಿ ಬಿಟ್ಟು ಕೆಲಸ ಮಾಡಿದರೆ ಆರ್ಥಿಕ ಬಿಕ್ಕಟ್ಟನು ಓಡಿಸಿ ಬಿಡಬಹುದು ಎಂದು ಒತ್ತಿ ಹೇಳಿದ್ದೆ. ಆದರೆ ಈ ಪ್ರಬಂದ ಬರೆಯುವಾಗ ನಿಜವಾಗಿಯೂ ಗೊತ್ತಿರಲಿಲ್ಲ, ಇದು ಇಸ್ಟು ಪ್ರಭಾವ ಬೀರುತ್ತದೆ ಎಂದು. ಕೇವಲ ನನ್ನ ಸಮಾಧಾನಕ್ಕಾಗಿ ನಾನು ಬರೆದ ಪ್ರಬಂದ , ಅಬ್ಬಾ...ನೆನೆಸಿಕೊಂಡರೆ ಮೈ ಜುಂ ಎನ್ನುತ್ತದೆ.


ಅಸ್ಟೆ ಅಲ್ಲ, ಅಲ್ಲಿಗೆ ಹೋಗುವುದು ಹೇಗೆ, bangalore ನಿಂದ ಬರಲು ಅವರೇ ವಿಮಾನದ ಟಿಕೆಟ್ ಕೊಟ್ಟಿದ್ದರಲ್ಲ. ನಾನೋ ಮೊದಲ ಬಾರಿಗೆ ವಿಮಾನ ಏರುತ್ತಿರುವವನು. ಹೇಗೊ ಏನೋ ಎನ್ನಿುವ ಆತಂಕ ಒಂದುಕಡೆ, ಆಗಸದಲ್ಲಿ ಹಾರುವ ಹಕ್ಕಿಗಳನ್ನು ನೋಡಿ ಖುಷಿಪಟ್ಟ ನನಗೆ ನಾನು ಅವುಗಳಂತೆ ಹಾರಬಹುದಲ್ಲ ಎನ್ನುವ ಖುಷಿ ಇನ್ನೊಂದು ಕಡೆ. ಪ್ರತಿ ದಿನ ಆಫೀಸ್ ಗೆ ಹೋಗುವ ಹಾಗೆ ಹೋಗಲೊ, ಅಥವಾ, ಬೇರೆ ಏನಾದರೂ, , ಅಂತು ಪಾರು ಹರಿಯಾದ ಯೋಚನೆ. ಅಲ್ಲಿ ಮೊದಲು ಯಾರನ್ನು ಕಾಣಬೇಕೂ,, ನಾನು ಬೆಂಗಳೂರಿನಿಂದ ಬಂದವನು ಎಂದರೆ ನನ್ನನ್ನು ಅವರು ಒಳಗೆ ಬಿಡುತ್ತಾರೋ ಇಲ್ಲವೋ, ಎನ್ನುವ ಬಗೆ ಹರಿಯದ ಚಿಂತನೆ. ಅನ್ತೂ ಇನ್ತೂ ಸಿಂಗ್ ಅವರನ್ನು ಕಾಣುವ ಸುದಿನ ಬಂದೆ ಬಿಟ್ಟಿತು. ನಾನು ಹೊರಡಲೇ ಬೇಕು.


ಮನೆ ದೇವರಿಂದ ಹಿಡಿದು, ನನ್ನ ಅಜ್ಜಿ ತನ್ನ ಕೊನೆಗಾಲದಲ್ಲಿ ಹೇಳುತ್ತಿದ್ದ ದೇವರ ಹೆಸರುಗಳನ್ನೆಲ್ಲ ಒಂದು ಸಾರಿ ಸ್ಮರಿಸಿಕೊಂಡು ದೆಹಲಿಯತ್ತ ಹೊರಟೆ ಬಿಟ್ಟಿದ್ದೆ. ಅಬ್ಬ, ಅಲ್ಲಿಂದ ಮುಂದೆ ಯಾವುದೂ ನನ್ನ ಕೈಲಿರಲೇ ಇಲ್ಲ. ಯಾರೋ ನಡೆಸುವ ಮಂತ್ರದ ಗೊಂಬೆಯಂತೆ, ಕೇಂದ್ರ ಹಣಕಾಸು ಸಚಿವಾಲಯದ ಸಿಬ್ಬಂದಿಗಳು ಹೇಳಿದಂತೆ ಅವರು ಕರೆದುಕೊಂಡು ಹೋದಲ್ಲೆಲ್ಲ ಹೋದೆ.
ಅವತ್ತೇ ಸಿಂಗ್ ಜೊತೆಯಲ್ಲಿ ಕೇವಲ ೧೫ ನಿಮಿಷಗಳ ಮಾತುಕತೆ , ನಂತರ ನನಗೆ ನೆನಪಿನ ಕಾಣಿಕೆಯ ಅರ್ಪಣೆ, ಮತ್ತು, "ಪ್ರಪಂಚದ ಆರ್ಥಿಕ ಬಿಕ್ಕಟ್ಟು ಮತ್ತು ಪರಿಹಾರೋಪಾಯಗಳು" ಎಂಬ ವಿಷಯದ ಬಗ್ಗೆ ನನ್ನ ಉಪನ್ಯಾಸ. ಸಿಂಗ್ ಜೊತೆಯಲ್ಲಿ ಹೇಗೋ ಮಾತುಕತೆ ಮುಗಿದು ಹೋಗಿತ್ತು. ನನಗೆ ಗೊತ್ತಿರುವ ವಿಷಯಗಳನ್ನು,, ಮುಖದಲ್ಲಿ ಧೈರ್ಯ ತುಂಬಿಕೊಂಡು ಮಂಡಿಸುವ ಹೊತ್ತಿಗೆ ನನ್ನ ಹಣೆಯಲ್ಲಿ ಬೆವರ ಸಾಲು. ಅವರೋ ನನ್ನನ್ನು ಅರ್ಥಿಕ ಜಗತ್ತಿನ ದ್ರುವತಾರೆಯಂತೆ ಚಿತ್ರಿಸುತ್ತಿದ್ದರು. ನಂತರದ ಕಾರ್ಯಕ್ರಮವೇ ನೆನಪಿನ ಕಾಣಿಕೆಯ ಅರ್ಪಣೆ, ಅವರ್ಯಾರೋ Anchor, ಎಲ್ಲರನ್ನು ಕರೆದು ಹಾಗೆ ನನ್ನ ಹೆಸರನ್ನೂ ಕರೆದೇ ಬಿಟ್ಟರು. ನನ್ನ ಯಾವತ್ತಿನ ಗಂಭೀರ , ದಿಟ್ಟ ನಡಿಗೆಯೊಂದಿಗೆ ವೇದಿಕೆ ಹತ್ತುತ್ತಿದ್ದರೆ ಕಾಲುಗಳಲ್ಲಿ ಚಿಕ್ಕ ನಡುಕ. ಹಾಗೆ ಸಾವಿರ ಮಿಂಚುಗಳು ಒಂದೇ ಸಾರಿ ಮಿಂಚಿದ ಹಾಗೆ ಕ್ಯಾಮೆರಾ ಬೆಳಕಿನ ಮದ್ಯೆ ಇನ್ನೇನು ನೆನಪಿನ ಕಾಣಿಕೆ ಪಡೆಯಬೇಕು, ಅಸ್ಟರಲ್ಲಿ,


ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲವಲ್ಲ. ಕತ್ತಲು ಮುಗಿದು ಬೆಳಕು ಬಂದ ಹಾಗೆ, ಹಗಲು ಮುಗಿದು ರಾತ್ರಿಯಾದಂತೆ, ಅವನತಿಯು ಕೂಡ ಉತ್ಕರ್ಷ ದತ್ತ ಸಾಗಿದಂತೆ, ಹರಿಯುವ ನದಿಗೂ ಕೊನೆ ಎನ್ನುವುದು ಇರುವಂತೆ, ಕ್ಷೀರ ಸಾಗರಕ್ಕೂ, ಕಿನಾರೆ ಇರುವಂತೆ, ನನ್ನ ಕನಸು ಕೂಡ ಮುಗಿದು ಹೋಗಿತ್ತು. ಒಂದು ಕ್ಷಣ, ಕನಸೇ ನಿಜವಾಗಿ, ಎಚ್ಚರವೇ ಕನಸಾಗಿರಬಾರದಿತ್ತೆ ಎನಿಸಿತ್ತು. ಆದರೆ ವಸ್ತು ಸ್ಥಿತಿಯನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲವಲ್ಲ. ಎಂದಿನಂತೆ ಅಂದು ಕೂಡ Office ಗೆ Late ಆಗಿಯೇ ಹೋದೆ :)

Saturday, May 16, 2009

ಹದಿಹರೆಯದ ಪ್ರಾಣಾಳಿಕೆಗಳು...

ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಹೊರಡಿಸುವ ಪ್ರಾಣಾಳಿಕೆಗಳಂತೆ, ಹದಿಹರೆಯದವರು ಕೂಡ ತಮ್ಮ ಮುಂದಿನ ಜೀವನದ ಬಗ್ಗೆ ತಮ್ಮದೇ ಆದ ಕೆಲವು ಪ್ರಣಾಳಿಕೆಗಳನ್ನು ಹಾಕಿಕೊಳ್ಳುತ್ತಾರೆ. ಏರುತ್ತಿರುವ ವಯಸ್ಸಿನಲ್ಲಿ, ಬಿಸಿರಕ್ತ ಹರಿಯುತ್ತಿರುವಾಗ, ಬಾಲ್ಯದಿಂದ ಪ್ರೌಧಾವಸ್ತೆಗೆ ಜಾರುತ್ತಿರುವಾಗ, ಏನು ಬೇಕಾದರೂ ಸಾಧಿಸಬಲ್ಲೆ ಎಂಬ ದರ್ಸ್ತ್ಯವಿದ್ದಾಗ, ಪ್ರನಾಳಿಕೆಗಲಿಗೆನು ಕೊರತೆ?? ಅದೇನು ಕೇವಲ ರಾಜಕೀಯ ಪಕ್ಷಗಳ ಸ್ವತ್ತೆ?? ಜೀವನದಲ್ಲಿ ಪ್ರನಾಳಿಕೆಗಳು ಇರಬೇಕು ಕೂಡ. ಹೀಗೆ ತಮ್ಮದೇ ಆದ ಸಿದ್ದಾಂತಗಳ ಅಡಿಯಲ್ಲಿ, ಅವರದೇ ಆದ ಮೌಲ್ಯಗಳ ಕೆಳಗೆ, ತಮ್ಮ ಮುಂದಿನ ಜೀವನ ಹೀಗೆ ಇರಬೇಕು ಎಂದು ಹಾಕಿಕೊಂಡ ಪ್ರಣಾಳಿಕೆಗಳಲ್ಲಿ ಎಷ್ಟು ಈಡೇರುತ್ತವೆ ಎನ್ನುವುದಕ್ಕಿಂತ ಅವು ಹೇಗಿವೆ ಅನ್ನುವುದು ಮುಖ್ಯ.

ಈಬಾರಿ ಚೆನ್ನಾಗಿ ಓದಿ, ಪರೀಕ್ಷೆ ಮುಗಿಸಿ ಬಿಟ್ಟರೆ ತನ್ನ ವಿದ್ಯಾರ್ಥಿ ಜೀವನ ಮುಗಿದು ಹೋಗುತ್ತದೆ, ಯಾವುದಾದರೂ ಒಳ್ಳೆಯ ಬಹುರಾಸ್ಟ್ರೀಯ ಕಂಪನಿಯಲ್ಲಿ, ಉದ್ಯೋಗ ಪ್ರಾರಂಬಿಸಿ, ಕಂಪನಿಯ ಉನ್ನತಿಗೆ ತಾನು ಕಾರಣನಾಗಬೇಕು, ತನ್ಮೂಲಕ, ತನ್ನ ಯಾರೋ ಬಂಧುಗಳ ಹಾಗೆ, ಪರಿಚಯದವರ ಹಾಗೆ, ತಾನು ಒಳ್ಳೆಯ ಹೆಸರು ಗಳಿಸಬೇಕು ಎಂದುಕೊಂಡಿರುತ್ತಾನೆ. ಆದರೆ ಕೆಲದಕ್ಕೆ ಸೇರಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು, ಕೆಲಸ ಅಂಥ ಕಲಿಯಲಿಕ್ಕೇ 6 ತಿಂಗಳು ಹಿಡಿದು ಹೋಗುತ್ತದೆ. ನಂತರ ಎಲ್ಲಿಯ ಕೆಲಸ, Chat ಮಾಡಲಿಕ್ಕೆ ಸಮಯ ಸಿಕ್ಕುವುದಿಲ್ಲ. ಇವ್ರು ಕೊಡೊ ಸಂಬಳಕ್ಕೆ ನಾನ್ ಆಗಿರೋದಕ್ಕೆ ಕೆಲಸ ಮಾಡ್ತಾ ಇದ್ದೀನಿ, ಬೇರೆಯವರಾಗಿದ್ರೆ ಯಾವಾಗ್ಲೋ ಬಿಟ್ಹೊಗ್ತಿದ್ರು ಅಂತ ಗೊನ್ಗೋಕೆ ಶುರು ಮಾಡ್ತಾನೆ. ನಾನು ಕೆಲಸ ಬಿಟ್ರೆ ನನ್ value ಗೊತ್ತಾಗತ್ತೆ ಅಂತಾನೆ. ಕೆಲಸ ಬಿಟ್ಮೇಲೆ ಇವ್ನ ಕಥೆ ಏನಾಗತ್ತೆ ಅಂಥ ಯೋಚನೆ ನೆ ಮಾಡಿರಲ್ಲ. ಹೀಗೆ ಓದಬೇಕಾದರೆ ಹಾಕ್ಕೊಂಡಿರೋ ಒಂದು ಪ್ರನಾಳಿಕೆ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ ಆಗಿರತ್ತೆ.

ಮನೆಯ ತೊಂದರೆ ತಾಪತ್ರಯಗಳನ್ನು ನೋಡುತ್ತಾ ಬೆಳೆದ , ಬಡತನದಲ್ಲೇ ಓದು ಮುಗಿಸಿದ ಹುಡುಗ, ತನಗೆ ಕೆಲಸ ಅಂಥ ಒಂದು ಸಿಕ್ಕಿಬಿಟ್ಟರೆ , ತನ್ನ ಅಪ್ಪ ಅಮ್ಮನ್ನ ತಾನೇ ನೋಡಿಕೊಳ್ಳಬೇಕು, ಪ್ರತೀ ತಿಂಗಳು ಅವರಿಗೆ ಅಂಥ ಒಂದಸ್ಟು ಹಣ ಕಳಿಸುತ್ತಾ ಇರಬೇಕು, ಅವರ ಕೊನೆಗಾಲದಲ್ಲದ್ರೂ ಅವ್ರು ಚೆನಗಿರ್ಲಿ, ಇಷ್ಟು ದಿನ ಅಂತು ಪಾಪ ಕಷ್ಟ ಪಟ್ರು, ಅಂಥ ಅಂದ್ಕೊಂಡಿರ್ತಾನೆ. ಹಾಗಂತ ತನ್ನ ಸ್ನೇಹಿತರಿಗೆ ಹೇಳೂ ಇರ್ತಾನೆ. ಅವ್ನು ಅಂದ್ಕೊಂಡ ಹಾಗೆ ಕೆಲ್ಸಾನು ಸಿಗತ್ತೆ, ಮೊದಲ್ನೇ ತಿಂಗಳ ಸಂಬಳವೂ ಸಿಗತ್ತೆ. ಆದ್ರೆ ಅವ್ನು, ತಿಂಗ್ಳು ಒಂದು ಮೊಬೈಲ್ ತಗೋ ಬಿಡೋಣ, ಅದಿಲ್ದೆ ಇದ್ರೆ Contacts ಇರಲ್ಲ, ಮುಂದಿನ ತಿಂಗಳಿಂದ ಪ್ರತೀ ತಿಂಗ್ಳು ತಪ್ಪದೆ ಹಣ ಕೊಡ್ಬೇಕು ಅಂದ್ಕೊತಾನೆ. ಆದರೆ, ಮುಂದಿನ ತಿಗಳಿನ ಇವನ ಮೊಬೈಲ್ ಬಿಲ್ಲು ಹೊಸಾ ಮೊಬೈಲ್ ಕಿಂತಾನು ಜಾಸ್ತಿ ಆಗಿರತ್ತೆ. ಯಾಕಂದ್ರೆ ಅವನ Contacts ಲಿ ಹೊಸ girl friend ಕೂಡ ಸೇರ್ಕೊಬಿತ್ತಿರ್ತಾಳೆ ಅವನಿಗೇ ಗೊತ್ತಿಲ್ದೆ. ಅವಾಗ್ಲೇ ಅವ್ನಿಗೆ ಅನ್ಸೋಕೆ ಶುರು ಆಗಿರತ್ತೆ, ಅಪ್ಪ ಅಮ್ಮನ್ನ ನೋಡ್ಕೊಳದ್ರಲ್ಲಿ ತನ್ನಷ್ಟೇ ತನ್ನ ಅಣ್ಣ, ಅಕ್ಕನದು ಪಾಲಿದೆ ಅಂತ. ಅವ್ರು ಕೂಡ ನೋಡ್ಕೊಳ್ಳಿ, ತನಗೆ ಮಾತ್ರ ಯಾಕೆ ಉಸಾಬರಿ ಅಂತ. ಹಾಕಿಕೊಂಡ ಪ್ರಣಾಳಿಕೆ ಈಡೇರುವ ಮೊದಲೇ ಎಲ್ಲೋ ಕುಳಿತು ತಣ್ಣಗೆ ನಗುತ್ತಿರುತ್ತದೆ.

ತನ್ನ Education ಗೆ ಅಂತ ಅಪ್ಪ ಸಾಲ ಮಾಡಿದಾನೆ, ಮದ್ವೆ ಅಗೂಕಿಂತ ಮೊದ್ಲು ಅದನ್ನೆಲ್ಲಾ ಹೇಗಾದ್ರು ಮಾಡಿ ತೀರಿಸಬೇಕು, ಒಂದು ವೇಳೆ ಆಗಿಲ್ಲ ಅಂದ್ರೆ ತನ್ನ ಮದ್ವೆ ಅಗೋ ಹುಡಗನ ಹತ್ರ ವಧುದಕ್ಷಿನೆನಾದ್ರು ತಗೊಂಡು ತನ್ನ ಅಪ್ಪನಿಗೆ ಕೊಡ್ಬೇಕು, ಅವನಿಗೆ ಯಾಕೆ ಸಾಲದ ಹೊರೆ, ಅದೂ ಇಳಿವಯಸ್ಸಿನಲ್ಲಿ, ಅಂತ ಅಂದ್ಕೊಂದಿರ್ತಾಳೆ ಹುಡುಗಿ. ಆದರೆ ತನ್ನ office ನಲ್ಲೆ ಕೆಲಸ ಮಾಡೋ ಚೆಂದದ ಹುಡುಗನನ್ನ ಲವ್ ಮಾಡಿ, ಮದ್ವೆ ಮಾಡ್ಕೊಂಡು, ಹನಿಮೂನ್ ಮುಗ್ಸೋ ಹೊತ್ಗೆ, ಅಪ್ಪನ ಸಾಲ ಇರೋದೇ ಮರ್ತೊಗಿರತ್ತೆ. ಪ್ರಪಂಚ ಅರಿಯದ ಅಪ್ಪ ಮಾತೆ ಆಡಿರಲ್ಲ. ಎಷ್ಟಾದರೂ ವಿದ್ಯೆ ಕಲಿತ ಮಗಳು ತಾನೆ, ಎಲ್ಲಾದರೂ ಚೆನ್ನಾಗಿರಲಿ ಅಂತ ಮನತುಂಬಿ ಹಾರೈಸಿರ್ತಾನೆ.

ವರದಕ್ಷಿಣೆಯ ಬಗ್ಗೆ, ಅದರ ದುಷ್ಪರಿಣಾಮಗಳ ಬಗ್ಗೆ, ತನ್ನ College ಜೀವನದಲ್ಲಿ ಮಾರುದ್ದದ ಭಾಷಣ ಮಾಡಿದ ಹುಡುಗ ನಿಜವಾಗಿಯೂ ಸ್ವಾಭಿಮಾನಿಯಾಗಿರುತ್ತಾನೆ. ಏನಾದರು ಮಾಡಿ ಪಿಡುಗನ್ನು ದೂರಮಾಡಬೇಕು ಎಂದು ಬಲವಾಗಿ ಪ್ರತಿಪಾದಿಸಿರುತ್ತಾನೆ. ವರದಕ್ಷಿಣೆ ಪಡೆದು ತಮ್ಮನ್ನೇ ಮಾರಿಕೊಳ್ಳುವವರನ್ನು ವಿರೋದಿಸಿರುತ್ತಾನೆ. ಹಾಗೆ, ತಾನು ಮಾತ್ರ ವರದಕ್ಷಿಣೆ ಮುಟ್ಟುವುದಿಲ್ಲ ಎನ್ನುವ ಹುಡುಗ, ಕೊನೆಗೆ ಅವರಾಗೆ ಕೊಟ್ಟರೆ ತೆಗೆದುಕೊಳ್ಳುವುದು ತಪ್ಪಲ್ಲ ಎಂದು ರಾಜೀ ಸೂತ್ರಕ್ಕೆ ಬರುತ್ತಾನೆ. ಮತ್ತು ಇವನ ಮದುವೆಯ ವೇಳೆಗೆ, ಇವನು ಕೊಳ್ಳುವ Site ಗೆ ದುಡ್ಡು ಕಡಿಮೆಯಾಗಿಬಿದುತ್ತದೆ. ವರದಕ್ಷಿಣೆ ತೆಗೆದುಕೊಳ್ಳದೆ ಬೇರೆ ದಾರಿಯೇ ಇಲ್ಲ. ಎಸ್ತಾದಎಊ ಅವರು ಕೊಡುತ್ತಿರುವುದು ಅವರ ಮಗಳಿಗೆ ತಾನೆ ಎಂದು ತನ್ನನ್ನು ತಾನೆ ಸಮರ್ಥಿಸಿಕೊಂಡು, ತನ್ನದೇ ಪ್ರಣಾಳಿಕೆಗೆ ಎಳ್ಳು ನೀರು ಬಿಟ್ಟಿರುತ್ತಾನೆ.

ಇಷ್ಟೇ ಅಲ್ಲ, ಲಂಚಾವತಾರದ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ, ದೇಶದ ಬಗ್ಗೆ, ದೇಶದ ಪ್ರಗತಿಯ ಬಗ್ಗೆ, ಅದರ ಭವಿಷ್ಯದ ಬಗ್ಗೆ, ಸಮಾಜದಲ್ಲಿ ನಾವು ಪಾಲಿಸುವ ಕರ್ತವ್ಯದ ಬಗ್ಗೆ, ಕೌಟುಂಬಿಕ ಸಾಮರಸ್ಯದ ಬಗ್ಗೆ, ಇಂದಿನ ಯುವಕರಿಗೆ ಅವರದೇ ಅದ ದೃಷ್ಟಿಕೊನವಿರುತ್ತದೆ. ಭವ್ಯ ಭಾರತದ ಭಾವೀ ಪ್ರಜೆಗಳ ಕಳಕಳಿ, ನಿಜಕ್ಕೂ ಶ್ಲಾಘನೀಯ ಕೂಡ. ಆದರೆ ಬದಲಾಗುವ ಜೀವನ, ಬೆನ್ನು ಬೀಳುವ ಜವಾಬ್ದಾರಿಗಳು, ಬಿಟ್ಟು ಬಿಡದೆ ಕಾಡುವ ವತ್ತಡಗಳು, ಅವರ ಸಿದ್ದಾಂತ ಗಳನ್ನೂ ಎಷ್ಟೋ ಬಾರಿ ಬುಡಮೇಲು ಮಾಡಿಬಿಡುತ್ತದೆ. ಚೆನ್ನಾಗಿ ಓದಿ ಒಳ್ಳೆಯ score ಮಾಡಿದ ಹುಡುಗ ವರ್ಷಗಟ್ಟಲೆ ಕೆಲಸ ಸಿಗದಿದ್ದಾಗ ಅನಿವಾರ್ಯವಾಗಿ ಲಂಚ ಕೊಟ್ಟು ಕೆಲಸ ಹಿಡಿಯುತ್ತಾನೆ. ಆಮೇಲೆ ಇವನು ಕೂಡ ಅದೇ ದಾರಿ ಹಿಡಿಯುತ್ತಾನೆ.

ಹಾಗಂತ ಎಲ್ಲ ವಿಷಯದಲ್ಲೂ, ಎಲ್ಲ ಕಾಲದಲ್ಲೂ ಹೀಗೆ ಆಗುತ್ತದೆ ಎಂದು ಹೇಳಲಾಗದು. ಕೆಲವರು ತಮ್ಮ ಜೀವನದ ಕೊನೆಯವರೆಗೂ ಒಂದು ಶಿಸ್ತನ್ನು, ಮೌಲ್ಯವನ್ನು ರೂಡಿಸಿಕೊಂಡು ಬಂದಿರುತ್ತಾರೆ. ಅವರನ್ನೇ ನಮ್ಮ ಬುದ್ದಿವಂತ ಸಮಾಜ 'ಬದುಕಲು ಬರದವರು' ಎಂದು ಕರೆಯುವುದು. ಏನೇ ಆದರು, ಭವಿಷ್ಯದ ಬಗ್ಗೆ ನಮ್ಮ ಯುವಕರು ಕಾಣುವ ಕನಸುಗಳು ಇಡೆರಲಿ ಎಂದು ಹಾರೈಸೋಣ. ಕನಸುಗಳನ್ನು ನನಸು ಮಾಡಿಕೊಳ್ಳುವ ಅವರ ಪ್ರಯತ್ನವನ್ನು ಅಭಿನಂದಿಸೋಣ. ಯುವಕರ ಕಯ್ಯಲ್ಲಿ ಭಾರತ ಪ್ರಕಾಶಿಸಲಿ, ನಾವು ನಾವಾಗಿ ಅಷ್ಟು ಮಾಡಬಹುದಲ್ಲ........

.........................................................................................................................................................

Saturday, May 9, 2009

ಇನ್ನೂ ನೋಡದ ನಿಮ್ಮ ಬಗ್ಗೆ ಚೂರು ಪಾರು......

ವೀಣೆಯ ತಂತಿಗಳನ್ನು ಮೀಟಿದಾಗ ಅದು ಸ್ವರವಾಗಿ, ಲಯವಾಗಿ, ಸುಶ್ರಾವ್ಯ ರಾಗವಾಗಿ ಪರಿವರ್ತನೆಗೊಂಡು ಸುಮಧುರ ನಾದ ಹೊರಹೊಮ್ಮುವಂತೆ ನಿಮ್ಮ ಧ್ವನಿ , ಅಲೆ ಅಲೆಯಾಗಿ, ಜಲಧಾರೆಯಂತೆ CEll ಮೂಲಕ ನನ್ನ ಕಿವಿಗಳಿಗೆ ತಲುಪುತ್ತಿದ್ದರೆ, ನಾನು ಮಾತು ಬಾರದವನಂತೆ ನಿಮ್ಮ ಮಾತಿನ ಮೋಡಿಗೆ ಸಿಲುಕಿ ಹೋಗಿದ್ದೆ. ನಿಮ್ಮ ಮಾತಿನಲ್ಲಿ ಪ್ರಭುದ್ದತೆ ಎದ್ದು ಕಾಣುತ್ತಿತ್ತು. ತುಂಟತನ ಇಣುಕುತ್ತಿತ್ತು. ನೀವು ಸರಾಗವಾಗಿ, ನಿರರ್ಗಳವಾಗಿ ಮಾತನಾಡುತ್ತಿದ್ದಾರೆ, ನಿಮ್ಮ ಕರೆ ಬರಬಹುದೆಂಬ ಯಾವ ಮನ್ಸೂಚನೆಯೂ ಇಲ್ಲದ ನನಗೆ ಮೊದಲ ಬಾರಿ ನಿಮ್ಮ ಧ್ವನಿಯನ್ನು ಕೇಳಿದ ಪುಳಕ. ಆಮೇಲೆ ಅದನ್ನು ಹೇಳಿಯೂ ಬಿಟ್ಟಿದ್ದೆ. Your Voice is so nice ಎಂದು. ಆದರೆ ಏನು ಮಾಡೋಣ??? ಅಸ್ತಸ್ಟು ಹೊತ್ತಿಗೆ ಅದದೇ ಕೆಲಸಗಳನ್ನು ಮಾಡಬೇಕೆಂದು ನಮಗೆ ನಾವೇ ಹಾಕಿಕೊಂಡ ಕಟ್ಟು ಪಾಡಿನ ಯಾಂತ್ರಿಕ ಜೀವನದಲ್ಲಿ, ಸ್ನೇಹಿತರ ಜೊತೆ ಮಾತನಾಡಲು ಕೂಡ ಮುಹೂರ್ತ ನೋಡುವ ಪರಿಸ್ಥಿತಿ ಬಂದು ಬಿಟ್ಟಿದೆ.

ಪತ್ರವನ್ನು ನಿಮಗೆ ನೇರವಾಗಿಯೇ ಕೊಡಬಹುದಿತ್ತು. ಈಗೆಲ್ಲಿಯ ಪತ್ರ??? ಎಲ್ಲವು e MAil ನಲ್ಲೆ ಮುಗಿದು ಹೋಗುತ್ತದಲ್ಲ. ಅದಕ್ಕಿಂತಲೂ ಬ್ಲಾಗ್ ಹೆಚ್ಚು ಸೂಕ್ತ ಎಂದು ಇಲ್ಲಿಯೇ ನನ್ನ ಸ್ನೇಹದ ಹರಿವನ್ನು ಹರಿಸುತ್ತಿದ್ದೇನೆ. ನಮ್ಮ ಪರಿಚಯವೂ ಇಲ್ಲಿಯೇ ತಾನೆ?? Google talk ಇಲ್ಲದಿದ್ದರೆ ನಾನ್ಯಾರೋ, ನೀವ್ಯಾರೋ. ಸ್ನೇಹವೊಂದು ಕವನ, ನೂರಾರು ಭಾವನೆಗಳ ಮಿಶ್ರಣ, ಇನ್ನೂ ಏನೇನೋ ಹೇಳುತ್ತಾರೆ. ಬಿಡಿ, ನಮ್ಮ ಪರಿಚಯ ಎಲ್ಲಿ, ಹೇಗಾಯಿತು ಎನ್ನುವುದಕ್ಕಿಂತ ನಮಗೆ ಸ್ನೇಹವೆಂಬ ಭಾವ ಮುಖ್ಯ. ಅದೆಸ್ತು ಗಟ್ಟಿ ಎನ್ನುವುದು ಮುಖ್ಯ.

ಒಂದು ವಿಷಯ ಮಾತ್ರ ನನಗಿನ್ನೂ ನಗು ಬರಿಸುತ್ತಿದೆ. ನಿಮಗೆ ನನ್ನ ಹೆಸರೇ ಗೊತ್ತಿರಲಿಲ್ಲವಲ್ಲ. ಆದರು ನಮ್ಮ ಸ್ನೇಹಕ್ಕೆ, ಮಧುರ ಮಾತಿಗೆ ಅದರಿಂದ ಯಾವ ತೊಂದರೆಯೂ ಅಗೆ ಇಲ್ಲೇ. ನಿನ್ನ ಕಂಗಳ ಕೊಳದಿ ಬೆಳದಿಂಗಲಿಳಿದಂತೆ ಎಂಬ ಹೆಸರಿನ ನನ್ನ profile ನಲ್ಲಿ ನನ್ನ ಹೆಸರೇ ಇಲ್ಲ ಎಂಬುದು ನನಗೆ ಹೊಳೆದಿದ್ದೇ ಆವಾಗ. ಅದೆಸ್ಟು ಚೆನ್ನಾಗಿ ಮಾತನಾಡುತ್ತಿದ್ದೆವು ನಾವು??? ಪ್ರತಿ ಮಾತಲ್ಲೂ ಕಾಲೆಳೆಯುವುದು, ಕೀಟಲೆ ನಡೆದೇ ಇತ್ತು. ಹಾಗೆ ಮಾಡುತ್ತಲೇ ನಮ್ಮ ನಮ್ಮ ಪರಿಚಯವನ್ನೂ ಮಾಡಿಕೊಂಡೆವು. ಅಲ್ಲಿಂದ ನಮ್ಮ ಮಾತು ಪುಸ್ತಕಗಳತ್ತ ತಿರುಗಿತ್ತು. ನಾವು ಓದಿದ ಪುಸ್ತಕಗಳ ಬಗ್ಗೆ ಚರ್ಚೆ. ಒಟ್ಟಿನಲ್ಲಿ ಅದೊಂದು ಮುಗಿಯದ ಮಾತುಕತೆ. ಕೆಲವೇ ಕೆಲವು ದಿನಗಳಲ್ಲಿ ಜನ್ಮ ಜನ್ಮಾಂತರದ ಗೆಳೆಯರಾಗಿಬಿತ್ತೆವಲ್ಲ ನಾವು...

ಸ್ನೇಹದ ಬಗ್ಗೆ, ಅದರ ವಿಶಾಲತೆಯ ಬಗ್ಗೆ, ಅದರ ಆಳ ಅಗಲಗಳ ಬಗ್ಗೆ , ಸ್ನೇಹದ ಪ್ರಾಮುಖ್ಯತೆಯ ಬಗ್ಗೆ, ಅದೆಸ್ಟೋ SMS ಗಳು ಬರುತ್ತವೆ, ನೂರಾರು ಲೇಖನಗಳು ಬರುತ್ತವೆ. ಅದೆಲವನ್ನು ನಾನು ಮತ್ತೆ ಮತ್ತೆ ಹೇಳುವುದಿಲ್ಲ. ಯಾಕೆಂದರೆ ಅದೆಲ್ಲ ನನಗೂ ಗೊತ್ತು, ನಿಮಗೂ ಗೊತ್ತು. ಕೇವಲ ನಮ್ಮ ಸ್ನೇಹಕ್ಕಾಗಿ ನಾನು ಬರೆಯುತ್ತಿರುವ ಪತ್ರ ಕೂಡ ಅದೆಲ್ಲವನ್ನೂ ಹೇಳಬಹುದು. ಆದರೆ ಎಲ್ಲ ಸಂಭಂದಗಳಲ್ಲೂ, ಸ್ನೇಹ ಸಂಭಂದ ಹೆಚ್ಚು ಗಟ್ಟಿ ಮತ್ತು ಪವಿತ್ರ ಎಂದು ಮಾತ್ರ ಹೇಳಬಲ್ಲೆ. ಯಾಕೆಂದರೆ ಏನನ್ನು ಬೇಕಾದರೂ ಮಾಡದೆ ತಿಂಗಳುಗಟ್ಟಲೆ ಕಳೆದು ಬಿಡಬಹುದು. ಆದರೆ ಸ್ನೇಹಿತರನ್ನು ನೋಡದೇ , ಅವರ ಜೊತೆ ಮಾತನಾಡದೇ, ಇದ್ದರೆ ಮನಸ್ಸು, ಬೆಕ್ಕು ಕುಡಿದ ಗಂಜಿಯ ಮಾಡಿಕೆಯಾಗಿಬಿದುತ್ತದೆ.

ಇಸ್ಟೆಲ್ಲಾ ಹೇಳಿದ ಮೇಲೆ ನನಗೆ ಮತ್ತೆ ಮತ್ತೆ ನೆನಪಾಗುವುದು ನಾನಿನ್ನು ನಿಮ್ಮನ್ನು ನೋಡೇ ಇಲ್ಲವಲ್ಲ ಎಂದು. ಮಾತನಾಡಲು ಮುಹೂರ್ತ ಹುಡುಕಿದಂತೆ ನಿಮ್ಮನ್ನು ನೋಡಲು ಕೂಡ ಅದೆಸ್ಟು ದಿನ ಕಾಯಬೇಕೋ??? ಯಾವಾಗ ನಮ್ಮ ನಿಮ್ಮ ಬೇಟಿ??? ಆದರೆ ನನಗೆ ಒಂದು ಸಣ್ಣ ಭಯ ಕಾಡುತ್ತುದೆ. ನಾವು ಒಬ್ಬರನ್ನೋಬರು ಬೇಟಿ ಮಾಡಿದರೆ ನಮ್ಮ ಸ್ನೇಹದಲ್ಲಿ ಮೊದಲಿನ ಉತ್ಸಾಹ, ಆಸಕ್ತಿ ಕಡಿಮೆಯಾಗಳುಬಹುದು. ದೂರದ ಬೆಟ್ಟ ಕಣ್ಣಿಗೆ ತಂಪಂತೆ. ಬರೀ ಮಾತು ಕೇಳಿ, ಪೋಟೋ ನೋಡಿ, ನೀವು ಹೇಗಿರಬೇಕೆಂದು ನಾನು, ನಾನು ಇನ್ಹೇಗೋ ಇರಬಹುದೆಂದು ನೀವು, ನಾವಿರುವ ನೈಜತೆಗಿಂತಲೂ ಹೆಚ್ಚಿನ ಬ್ರಮೆಯನ್ನು, ಕಲ್ಪನೆಯನ್ನು, ಕಟ್ಟಿಕೊಂಡಿರುತ್ತೇವೆ. ಆದರೆ, ನೈಜತೆಗು ಕಲ್ಪನೆಗೂ ಅಜಗಜಾಂತರ ವ್ಯತ್ಯಾ ಇರುತ್ತದಲ್ಲ, ಯಾವುದೋ ಒಂದು ಘಟನೆಗಾಗಿ ಕಾಯುವಿಕೆಯಲ್ಲಿನ ಖುಷಿ, ಘಟನೆಯ ನಂತರ ಇರುವುದಿಲ್ಲವಂತೆ. ಹೀಗಾಗಿ ಉತ್ಸಾಹ ದಿಂದ ಪ್ರಾರಂಭವಾದ ನಮ್ಮ ಬೇಟಿ, ನಿರುತ್ಸಾಹದಲ್ಲಿ ಕೊನೆಯಾಗಲೂಬಹುದು. ನಿಧಾನವಾಗಿ ಸಿಕ್ಕೋಣ ಬಿಡಿ. ಅದ್ಯಾವುದು ನಮ್ಮ ಸ್ನೇಹಕ್ಕೆ ಅದ್ದಿಯಾಗುವುದಿಲ್ಲ ಅಂದುಕೊಳ್ಳುತ್ತೇನೆ.

ಪತ್ರ ಬರೆಯಲು ಕುಳಿತಾಗ, ಏನು ಬೇರೆಯಲಿ, ಹೇಗೆ ಪ್ರಾರಂಭಿಸಲಿ ಎಂದೇ ತೋಚದಾಗಿತ್ತು. ಆದರೆ ಬರೆಯಲು ತೊಡಗಿದ್ದೆ ತಡ, ನನ್ನ ಪೆನ್ನಿಗೆ ಬ್ರೇಕೇ ಇಲ್ಲದೆ ಇಲ್ಲಿಯವರೆಗೆ ಬರೆಸಿಬಿಟ್ಟಿತು. ಏನೇ ಇರಲಿ, ನಿಮ್ಮ ಸ್ನೇಹಕ್ಕೆ, ನೀವು ತೋರಿಸುವ ಪ್ರೀತಿಗೆ, ನಿಮ್ಮ ಕಳಕಳಿಗೆ, ನಿಮ್ಮ ಅಭಿಮಾನಕ್ಕೆ, ನೀವು ತುಂಬುವ ಉತ್ಸಾಹಕ್ಕೆ, ನಿಮ್ಮ ಬೆಲೆಬಾಳುವ ಸಲಹೆ ಸೂಚನೆಗಳಿಗೆ ನಾನು ಕೃತಜ್ಞನಾಗಿದ್ದೇನೆ. ನಮ್ಮ ಸ್ನೇಹ ನಿರಂತರವಾಗಿರಲಿ. ಹೇಳುವುದು ಇನ್ನೂ ತುಂಬಾ ಇದೆ. ಜೊತೆ ಜೊತೆಗೆ ಕೇಳುವುದು ಕೂಡ. ಇನ್ಯಾವತ್ತಾದರೂ ಮಾತನಾಡೋಣ. ಜೀವನದ ಸಂಪೂರ್ಣ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತಾ,

ನಿಮ್ಮ ಪ್ರೀತಿಯ ಸ್ನೇಹಿತ..