Saturday, December 26, 2009

"ಕಂಗಳಲ್ಲೇ ಕವನ ಬರೆದು................



ಚಿನ್ನು, ಈಗ ಎಷ್ಟೊಂದು ಸಾರಿ ಬೇಟಿ ಆಗ್ತೇವೆ ನಾವು, ಆದರೂ ಏನೋ ಒಂಥರಾ ಅತೃಪ್ತಿ ನನ್ನಲ್ಲಿ, ಮೊದಲೇ ಚೆನ್ನಾಗಿತ್ತೇನೋ ಅನ್ನಿಸ್ತು. ಆದಿನಗಳೇ ಚೆನ್ನಾಗಿತ್ತು ಬಿಡು. ದಿನವಿಡೀ ಹರಟೆ,ಮತ್ತೆ ರಾತ್ರಿ ಫೋನ್, ಒಂದೂ ಮೊಬೈಲ್ ನ ಚಾರ್ಜ್ ಮುಗೀಬೇಕು, ಇಲ್ಲ currency ಖಾಲಿ ಆಗ್ಬೇಕು... ಹೇಗಿತ್ತು ಅಲ್ವಾ??? ಈಗಾದರೋ ದೊಡ್ಡಪ್ಪ ಬಂದ್ರು , ದೊಡ್ಡಮ್ಮ ನೋಡ್ತಾ ಇದಾಳೆ, ಅಣ್ಣ ಕರೀತಿದಾನೆ, ಏನೋ ಹೇಳಿ ಫೋನ್ ಕಟ್ ಮಾಡೋದು. ಆದರೆ ನೀನು ಮಾತ್ರ ನಿರಾಳ ನಿರಾಳ ಅನ್ಸತ್ತೆ. ಆಗ ಕೆಟ್ಟ ಸಿಟ್ಟು ಬರತ್ತೆ ನಂಗೆ.ಆದ್ರೆ ನಿನ್ನ work stress , tension , ಕೆಲಸದ ಚಿಂತೆ ಇವನ್ನೆಲ್ಲ ನೋಡಿ ಸುಮ್ಮನಾಗಿಬಿಡ್ತೀನಿ. ಅದರ ಜೊತೆ ನಿನ್ನ ಸತಾಯಿಸುವ Dialogue ಇದೆಯಲ್ಲ, "ಬೇಕೆಂದೇ ಜಗಳವಾಡಿ ನಂತರ ರಾಜಿ ಆಗುವ ಸಂತೋಷ ಬೇರೆಲ್ಲಿದೆಯೇ ಕೂಚೆ" ಅಂತ. ಮೊದಲು ನಂಗೂ ಅದು ಇಷ್ಟ ಆಗ್ತಿತ್ತು. ಆದರೆ ಈ ಮೊದಲ ಪ್ರೇಮ ನನ್ನನ್ನು ಹೇಗೆ ಮಾಡಿಬಿಡ್ತು ನೋಡು. ಮೊದಮೊದಲು ಬೈಕ್ ಹೊಡೆಯಲು ಕಲಿತ ಸಂಬ್ರಮದಂತೆ........., ನಾನು ಹಾಡಿಕೊಳ್ಳುವ ಪ್ರತಿ ಹಾಡಿನ ಸಾಲಿನಲ್ಲಿಯೂ,ನೀನು ನನ್ನನ್ನು ಹೀಗೆ ಪ್ರೀತಿಸಬೇಕೆಂಬ ಭಾವ........ ಒಂದು ಹಗಲು ನಮಗೋಸ್ಕರವೇ ಬೆಳಗಾಗುತ್ತಿದೆ ಅನಿಸ್ಸುತ್ತದೆ..... ಪ್ರತಿ ಬೇಟಿಯಲ್ಲೂ ಒಂದು ವಿದಾಯದ ಆತಂಕ..... ಮತ್ತೊಂದು ಬೇಟಿ ಪ್ರೇಮಾಲಾಪವಿದ್ದರೂ ಕೂಡ.. ....... ಸುಮ್ಮನೆ ಕೈ ಹಿಡಿದು ಕುಳಿತ ಸಂಜೆ ಗಳಲ್ಲಿ ಅದೆಷ್ಟೋ ಮಾತು ಮರೆತೇ ಹೋಗಿರುತ್ತದೆ.......................ನೆನೆಪನ್ನೇ ತಬ್ಬಿಕೊಂಡು ರಾತ್ರಿ ಮಲಗಿದರೆ ಅಲ್ಲೂ ನಿನ್ನ,ನನ್ನ ಕನಸುಗಳಜಾತ್ರೆ............


ನಿನ್ನೆ ರಾತ್ರಿ ಈ ಪತ್ರ ಬರೆದೆ. ಇಂದು, ಈಗ ನೀನು ಈ ಪತ್ರ ಓದಿ ಮುಗಿಸಿದ ಮೇಲೆ ನಿನ್ನ ಮುಖ ನೋಡುವ ಆಸೆ ನನಗೆ. ನಿನ್ನ ಎಷ್ಟೋ ದಿನಗಳ ಆಯಾಸವನ್ನೆಲ್ಲ ನನ್ನ ಮಡಿಲ ಮೇಲೆ ನಿನ್ನನ್ನು ಮಲಗಿಸಿಕೊಂಡು ಕಳೆದು ಬಿಡಬೇಕು,... ದಾಹಗೊಂಡಿರುವ ನಿನಗೆ ಸಿಹಿ ಮುತ್ತುಗಳ ಬರಪೂರ ಅಭಿಷೇಕ....... ಹಿಂದಿನ ಬಾರಿ ಬಂದಾಗ ಕೊಡದೆ ಉಳಿದದ್ದು, ಮುನಿದಾಗ ನಿರಾಕರಿಸಿದ್ದು,ಕೆಲಬಾರಿ ಕೊಡಲು ಮರೆತಿದ್ದು, ಮುಂದೆ ಕೊಡಬೇಕಾಗಿದ್ದು, ಹೀಗೆ ಹಳೆಯ ಬಾಕಿ ಸೇರಿಸಿ, ಕೈಯಿಂದ ಮತ್ತಷ್ಟು ಹಾಕಿ, ಅವೆಲ್ಲವನ್ನು ಒಂದೇ ಸಲ ಕೊಟ್ಟುಬಿಡಬೇಕು ಅಂದುಕೊಂಡಿದ್ದೇನೆ. ಇದನ್ನೆಲ್ಲ ನೋಡಿದ ಮೇಲೆ ನಮ್ಮ ಕೋತಿಗೆ ಹೆಂಡ ಕುಡಿಸಿದ ಹಾಗಾಗುತ್ತದೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಫೋನ್ ನಲ್ಲಿ ಅಷ್ಟೊಂದು ಮಾತನಾಡುವ ನಮಗೆ, ಇಲ್ಲಿ ಸಂಕೋಚದ ತೆರೆ, ನೀನೀಗ ಮನಸ್ಸಿನಲ್ಲೇ ಬೈದುಕೊಳ್ಳಬಹುದು...... ಇಷ್ಟೊಂದು ಚಂದದ ಪತ್ರ ಬರೆಯುವವಳಿಗೆ ಹಾಗೆ ಪ್ರೀತಿಸಲು ಏನಾಗುತ್ತದೆ ಎಂದು.. ನನಗೂ ಸಿಟ್ಟು ಬರುತ್ತದೆ,ನನ್ನ ಈ ನಾಚಿಕೆಯ ಮೇಲೆ,ಆದರೆ ಏನು ಮಾಡಲೋ???



ನಿನ್ನ ಮನಸ್ಥಿತಿ ನನಗೆ ಅರ್ಥ ಆಗುತ್ತೆ ಚಿನ್ನು, ನಿನ್ನ ಪ್ರೀತಿ, ಕಳವಳ,ಆತಂಕ, ಒಳ ಒಳಗೆ ಚಡಪಡಿಸಿ, "ನನಗೆ ನೀನು ಬೇಕು,ಮತ್ತು ನೀನೆ ಬೇಕು" ಎನ್ನುವ ನಿನ್ನ ನಿಸ್ಸಹಾಯಕ ಆಸೆಗಳು, ನಮ್ಮಿಬ್ಬರ ಮುಂದಿರುವ ಸುದೀರ್ಘ ವಿರಹ,... ನಮ್ಮಿಬ್ಬರ ಸಂಭಂದ ಒಪ್ಪದ ನಮ್ಮ ಮನೆಯವರು,.... ಹೀಗೆ ಎಲ್ಲ. ಜೊತೆಗೆ ಪ್ರೀತಿಸಿದ ಪ್ರತಿ ಹುದುಗರಿಗೂಒಂದು assurence ಬೇಕಾಗುತ್ತದೆ ಅಂತಲೂ ಗೊತ್ತು. ಆದರೆ ನಂಬಿಕೆ ಎನ್ನುವುದು ಮಾತು,ಆಣೆ, ಪ್ರಮಾಣ ಗಳಲ್ಲಿ ಹುಟ್ಟುವುದಿಲ್ಲ ಚಿನ್ನು, ನಂಬಿಕೆ ಹುಟ್ಟುವುದು ಮೌನದಲ್ಲಿ, ಮೊದಲು ನನ್ನ ಮೇಲೆ, ಅಮೇಲೆ ನೀನು ನನ್ನ ಮೇಲೆ ಇಟ್ಟಿರುವ ನಂಬಿಕೆಯ ಮೇಲೆ ನಂಬಿಕೆ ,ಅಲ್ವಾ??? ನೀನೆ ನೋಡ್ತಾ ಇರು,ನೀನು ನನ್ನನ್ನು ಬಿಟ್ಟು ದೂರ ಇದ್ದರೂ ನಾನೆಷ್ಟು confidence ನಿಂದ ಇರ್ತೀನಿ..ಅಂತ.. ಅಂತ. ಮನೆಯವರು ಬಲವಂತ ಮಾಡಿದರೆ, ಹುಡುಗ ನೋಡಲು ಬಂದರೆ, ಇದ್ದೆ ಇದೆಯಲ್ಲ ತಿಂಗಳ ನಾಲ್ಕು ದಿನಗಳ ರಜ, ಹೊಟ್ಟೆ ನೋವು, ತಲೆನೋವು, ಅಂತೂ ಮಾಮೂಲು.... ಇನ್ನೂ ಒಂಚೂರು ಓದಿ ಬಿಡ್ತೀನಿ ಹೀಗೆ ದೊಡ್ದಪನ ಹತ್ತಿರ ಒಂದು ಸಣ್ಣ ಸಬೂಬು. ಆದರೆ ಸರಿದು ಹೋಗುವ ಕಾಲ, ಬದುಕಿನ ಅಗೋಚರ ಕಷ್ಟಗಳು,ಸಣ್ಣದಾಗಿ ಕಾರಣವೇ ಇಲ್ಲದೆ ಹುಟ್ಟುವ ಬೇಸರ, ಸುಖಾ ಸುಮ್ಮನೆ ಹುಟ್ಟುವ ಮೌನ, ಇದ್ಯಾವುದೂ ನಮ್ಮನ್ನು ದೂರ ಮಾಡಲಾರದು, ಮಾಡಬಾರದು ಎನ್ನುವ ನಂಬಿಕೆ ನಿನಗಿರಲಿ. ಅದರಂತೆ ನಿನ್ನ ಕಣ್ಣೆವೆ ಯಿಂದ ನನ್ನ ಚಿತ್ರ ಎಂದಿಗೂ ಅಳಿಸಿ ಹೋಗದಿರಲಿ, ಮನೆಯವರೆಲ್ಲ ಹುಡುಕಲು ಬಂದರೂ ನಿನ್ನ ತಬ್ಬುಗೆಯಲ್ಲಿ ನಾನವರಿಗೆ ಕಾಣಿಸಬಾರದು... ನಿನ್ನ ತೆಕ್ಕೆಯ ಬಿಸುಪೂ ಆರಬಾರದು....

"ಕಂಗಳಲ್ಲೇ ಕವನ ಬರೆದು ಕಳಿಸಿದೆ ನಿನ್ನಲ್ಲಿಗೆ,

ಅಂಗಳದಲ್ಲಿ ಅರಳಿದಾಗ ನನ್ನ ಒಲವ ಮಲ್ಲಿಗೆ..".................

ಚಿನ್ಸು...ಸುಮ್ಮನೆ ಸಿಕ್ಕವನಲ್ಲ ನೀನು, ನನ್ನ ಎಷ್ಟು ಜನ್ಮದ ನಿರೀಕ್ಷೆಯೋ ಏನೋ.... ನಿನಗೋಸ್ಕರ ಎಷ್ಟು ಬಾರಿ ಹಲುಬಿದ್ದೆ ಅಂತ ನನಗೇ ಗೊತ್ತು... ಪ್ರತಿ ಸಲ ನಾನೆ ಸೋತು, ನಾನೇ ರಾಜಿ ಆಗಿ, ನಿನ್ನ ಒಲಿಸಿ , ಓಲೈಸಿ, ಈ ಜನ್ಮ ಪೂರ್ತಿ ನಂಗೆ ನೀನೆ ಬೇಕು ಅಂತ ಇಟ್ಟುಕೊಂಡಿದ್ದೇನೆ, ಅದಕ್ಕೋಸ್ಕರ ನಾನು ತುಂಬಾ ಕಷ್ಟ ಪಟ್ಟೆ ಎನ್ನುವುದಕ್ಕಿಂತ ಅದನ್ನು ಇಷ್ಟ ಪಟ್ಟೇ ಮಾಡಿದ್ದೇನೆ ಅಂದ್ರೆ ಸರಿ ಆಗತ್ತೇನೋ.. ಆದರೆ ಚಿನ್ನು, ನಿನಗೆ ಒಂದು ಸತ್ಯ ಹೇಳಲಾ?? ಒಂದು ಸಲ ನಿನ್ನನ್ನು ನನ್ನ ಕಣ್ಣೊಳಗೆ ಕೆಡವಿಕೊಂಡ ಮೇಲೆ ಈ ಜನ್ಮದಲ್ಲೀನ್ನೊಂದು personality ಯನ್ನು ಕಣ್ಣೆತ್ತಿ ಕೂಡ ನೋಡಲಾರೆ....ಅಂಥವ..ನೀನು.... ನಿನ್ನದೊ ಶುದ್ದ ಒರಟು ಪ್ರೀತಿ.. ತುಂಟತನ, concern , ನಿನ್ನನ್ನು ಕೈ ಹಿಡಿದಾಗ ಎಂದಿಗೂ ಬಿಡಲಾರೆ ಎನ್ನುವ ದೃಢತೆ,.. ಅದಕ್ಕೆ ನಿನ್ನ ಜೊತೆ ಹೆಜ್ಜೆ ಹಾಕುವಾಗ ಎಲ್ಲ ಹುಡುಗಿಯರಿಗೆ ಕಾಡುವ ತವಕ,ಭಯ ಆತಂಕಗಳು ನನ್ನನ್ನು ಕಾಡುವುದೇ ಇಲ್ಲ. Believe Me.. ನಾನು ಈ ಜನ್ಮದಲ್ಲಿ ಇನ್ಯಾರನ್ನೂ ಪ್ರೀತಿಸಲಾರೆ..., ನಾನಾಗೇ ಪ್ರೀತಿಸ ಬಯಸಿದರೂ... 'ನನಗೆ ಎಲ್ಲದಕ್ಕೂ ನೀನೆ ಆಗಬೇಕು, ಮಾತಿಗೆ, ಮೌನಕ್ಕೆ, ಹಾಡಿಗೆ, ಫೋನಿಗೆ, ಸರಸಕ್ಕೆ, ಜಗಳಕ್ಕೆ, ರಾಜಿಗೆ, ವಿರಹಕ್ಕೆ, ಬರಹಕ್ಕೆ, ಮದುವೆಗೆ, ಮಕ್ಕಳಿಗೆ, ಎಲ್ಲದಕ್ಕೂ ನೀನೆ ಬೇಕು'...

ಪತ್ರ ಓದಿದ ನಂತರ ತೀರ ಒರಟನಂತೆ ಪ್ರೀತಿಸಬೇಡ, ಮನೆಯಲ್ಲಿ ದೊಡ್ಡಮ್ಮ ಕೇಳಿಯಾರು.... ಆದರೆ ನೀನೆಲ್ಲಿ ಕೇಳ್ತಿ ನನ್ನ ಮಾತನ್ನು ???

ಏಯ್ ಸುಮ್ಮನಿರೋ ಎನ್ನುವ ನಾನು,

ಸುಮ್ಮನಿರದ ನೀನು........



13 comments:

Unknown said...

ಕನಸು..ಚನ್ನಾಗಿರುತ್ತೆ ಅಂತ ಗೊತ್ತು..ಆದರೆ..ಇಷ್ಟೊಂದು?...ಕಾಣದ ಹುಡುಗಿಯನ್ನೇ ಕಲ್ಪಿಸಿಕೊಂಡು ಬರೆದ ಲೆಟರ್...ausim ...if ..ಅವಳಿದ್ರೆ.. ನಂಗೆ ಪರಿಚಯ ಮಾಡಿಸಿ..ಪ್ಲೀಸ್..ಆದರೂ..ಲೆಟರ್ ಪಡೆವ ಹುಡುಗ ಮಾತ್ರ ಭಾಗ್ಯವಂತ..ಅಲ್ಲವೇ?

ಗೌತಮ್ ಹೆಗಡೆ said...

good:)

Sandhya Bhat said...

hi...arun..what a letter..whaaat a letter...ನಮಗೆಲ್ಲಾ ಬರೆಯುವ ಐಡಿಯಾ ಇದ್ರೂ..ಅವಕಾಶ ಇದ್ರೂ ಇಂಥ ಲೆಟರ್ ಬರೆಯಲೇ ಇಲ್ಲ ಅಂತ..ಬೇಜಾರಾಗ್ತಿದೆ..ಆ ಹುಡುಗಿ ಯಾರು?..ನೀನೆ..ಬರೆದಿದ್ದರೆ...ರಿಯಲಿ ಗುಡ್..keep the good work..

Unknown said...

hey .......really very good imagination........superb!!!!!!!

Santosh Kumar said...

kanasu annuvude ondu adbhuta pada. anta kanasannu nanasu maduva prayatnadalliruva snehitanige shubhavagali,,,

Unknown said...

nice one.........

AMIT KUMAR said...

superb blog,,,, keep it up,,,,

Unknown said...

ITZ VERY NICE ONE,,,

ಅಪ್ಪು..... said...

Hey... Arun... I just read your recent posts in your blog.. I think finally you have found your own style of writing. I really appreciate it and try not to change this. ( Previously some of your posts were had some impressions of Ravi ).

BEST OF LUCK :)

ಗಿರಿ said...

hi Arun,

swalpa late aagi nimma blagige bheti koTTe anta annistide...! superb ree...
ನಂಬಿಕೆ ಎನ್ನುವುದು ಮಾತು,ಆಣೆ, ಪ್ರಮಾಣ ಗಳಲ್ಲಿ ಹುಟ್ಟುವುದಿಲ್ಲ ಚಿನ್ನು, ನಂಬಿಕೆ ಹುಟ್ಟುವುದು ಮೌನದಲ್ಲಿ, ಮೊದಲು ನನ್ನ ಮೇಲೆ, ಅಮೇಲೆ ನೀನು ನನ್ನ ಮೇಲೆ ಇಟ್ಟಿರುವ ನಂಬಿಕೆಯ ಮೇಲೆ ನಂಬಿಕೆ.
wow.. estondu prauDhimeya maatu?
greate quote kaNri...
amele aa salugaLiveyalla...
odi nakku biTTe...
ondu kshaNa maretu biTTe..
"ಕಂಗಳಲ್ಲೇ ಕವನ ಬರೆದು ಕಳಿಸಿದೆ ನಿನ್ನಲ್ಲಿಗೆ,
ಅಂಗಳದಲ್ಲಿ ಅರಳಿದಾಗ ನನ್ನ ಒಲವ ಮಲ್ಲಿಗೆ..".................
adara laya, praasa.. ananyavasgittu...

preetiyinda,
-gri

ಕಾವ್ಯಾ ಕಾಶ್ಯಪ್ said...

ಏಯ್ ಸುಮ್ಮನಿರೋ ಎನ್ನುವ ನಾನು,

ಸುಮ್ಮನಿರದ ನೀನು.......
Ending chennagide... jotege huduganaagi hudugiya manasiningitada varnane kooda.... :) :)

Vinayak Bhat, said...

ರಾಶಿ ಚೊಲೋ ಬರದ್ದೆ ... , ಯಾರ ಕಲ್ಪನೆಯಲ್ಲಿ ಮೂಡಿಬಂದ ಸಾಲುಗಳು ?????????

.....

Arun said...

Thanks Everybody...