Saturday, February 13, 2010

ಹೀಗೂ ಬರೆಯಬಹುದೆ ಪ್ರೇಮ ಪತ್ರವನ್ನು??

ಪ್ರೀತಿಸಿದ  ಪ್ರತಿಯೊಬ್ಬರೂ ತಾನೂ ಕೂಡ ಒಂದು ಪ್ರೇಮ ಪತ್ರ ಬರೆದು ಬಿಡಬೇಕು ಎಂದುಕೊಳ್ಳುತ್ತಾರೆ. ಆದರೆ ಹೇಗೆ ಪ್ರಾರಂಬಿಸಿ ಹೇಗೆ ಮುಗಿಸಬೇಕು ಎಂದೇ ಗೊತ್ತಾಗದೆ ಕೆಲವನ್ನು ಕಸದ  ಬುಟ್ಟಿಗೆ ಹಾಕಿ,  , ಇನ್ನು  ಕೆಲವನ್ನು  ತಾವೇ ಇಟ್ಟು  ಕೊಂಡುಬಿದುತ್ತಾರೆ. ಪ್ರೇಮ ಪತ್ರ ಗಳ ಬಗ್ಗೆ ಸಾವಿರ  ಜನ ಸಾವಿರ defination ಕೊಡಬಹುದು, ಪತ್ರದಲ್ಲಿ ಇರಬೇಕಾದ ಅಕ್ಷರಗಳಿಗಿಂತ ಬರೆಯುವವರಲ್ಲಿರುವ ಪ್ರೀತಿ ಮುಖ್ಯ  ಎನ್ನಬಹುದು, ಹೇಗೆ ಬರೆದರೂ ಅದನ್ನು ಓದುವವರು ಪ್ರೀತಿಸಿದವರೇ ತಾನೇ ಎಂದು ಕೂಡ ಹೇಳಿಬಿಡಬಹುದು. ಓದುವವರಿಗೆ ಕೂಡ ಆ ಕ್ಷಣದಲ್ಲಿ ಅದು ಅಪ್ಯಾಯಮಾನವಾಗಿ ಕಾಣಬಹುದು. ಆದರೆ ನೀವು ಬರೆದ ಪ್ರೇಮ ಪತ್ರ ನೂರ್ಕಾಲ ಹಸಿ ಹಸಿಯಾಗಿರಬೇಕು, ನೀವು ಕೂಡ ಒಂದು ಚಂದದ ಪತ್ರ ಬರೆಯಬೇಕು  ಎಂದಾದರೆ,  ಇಲ್ಲಿದೆ ನೋಡಿ ಕೆಲವು ಸಲಹೆಗಳು :-

ಮೊದಲನೆಯದಾಗಿ, ನಿಮ್ಮ ಪತ್ರ, ನೀವು ಬಳಸುವ  wordings, ಆದಷ್ಟು ಸರಳವಾಗಿರಲಿ. ನಿಮ್ಮಲ್ಲಿ ಅವರು ಹೇಗೆ ವಿಶೇಷ ಭಾವನೆಯನ್ನು ಉಂಟು ಮಾಡುತ್ತಾರೆ ಎನ್ನುವುದರ ವಿವರಣೆ ಇರಲಿ. ಹೇಳುವುದಕ್ಕೆ ಸ್ವಲ್ಪ ಪೇಚಾಟ ಎನಿಸಿದರೂ, ಪತ್ರ ಓದಿದ ನಂತರ ನಿಮ್ಮ ಸಂಗಾತಿಯ ಆಹ್ಲಾದಕರ ಮುಖದ ಕಲ್ಪನೆ ಮಾಡಿಕೊಂಡರೆ ಅಕ್ಷರಗಳು ತಾನಾಗಿಯೇ ಮುಂದಕ್ಕೆ ಹೋಗುತ್ತದೆ. ಪತ್ರ ಬರೆಯುವ ಮೊದಲು ನಿಮ್ಮ ಸಂಗಾತಿಯ ಬಗ್ಗೆ ಸ್ವಲ್ಪ ಹೊತ್ತು ಯೋಚಿಸಿ, ನಿಮಗೆ ನೆನಪೇ ಆಗದ ಎಸ್ಟೋ ಹೊಸ ಹೊಸ ವಿಚಾರಗಳು ನಿಮ್ಮ ಮನಸ್ಸಿನಲ್ಲಿ ಹಾದು ಹೋಗಬಹುದು. ಅದು ನಿಮ್ಮ ಕಷ್ಟ ಕಾಲದಲ್ಲಿ ಆತ ಅಥವಾ ಆಕೆ ನಿಮಗೆ ಕೊಟ್ಟ Moral  Support  ಇರಬಹುದು, ಅಥವಾ, ನೀವು ಖುಷಿಯಾಗಿದ್ದಾಗ  ನಿಮ್ಮ ಜವಾಬ್ದಾರಿಯ ನೆನಪು ಮಾಡಿದ್ದಿರಬಹುದು, ಮೌನವಾಗಿ ಕೈ ಕೈ ಹಿಡಿದುಕೊಂಡು ಹೋದ Long  Walk  ಇರಬಹುದು.  ಇಷ್ಟು ಯೋಚಿಸುವ ಹೊತ್ತಿಗೆ ನೀವು ಬರೆಯುವ  ಪ್ರೇಮ ಪತ್ರದ ನೀಲ ನಕ್ಷೆಯೊಂದು ನಿಮ್ಮ ಮನಸ್ಸಿನಲ್ಲಿ ಮೂಡಿರುತ್ತದೆ.


ನಿಮ್ಮ ಪತ್ರದ ಮೊದಲ ಸಾಲು, ಮೈ Dear , dearest , ನಂತಹ ಪದಗಳಿಂದ ಪ್ರಾರಂಭವಾದರೆ ಒಳ್ಳೆಯದು. ಒಂದು ವೇಳೆ ನಿಮ್ಮದು ಹಳೆಯ ಸಂಬಂಧ ವಾಗಿದ್ದರೆ ನೀವೇ ಕಂಡುಕೊಂಡ nick name ಇದ್ದೆ ಇರುತ್ತದೆ. ಇಂತಹ ಪದಗಳ ಬಳಕೆ ಓದುವ ಮನಸ್ಸಿಗೆ ಹೆಚ್ಚು ಮುದ ನೀಡುತ್ತದೆ.

ಒಂದು ಸಲ ಇಷ್ಟನ್ನು   ಬರೆದಾದ ನಂತರ ನಿಮಗೆ ಆಕೆಯ ಅಥವಾ ಆತನ ಸಾಂಗತ್ಯ ಎಷ್ಟು ಹಿತವಾಗಿರುತ್ತದೆ ಎನ್ನುವುದನ್ನು ಮನವರಿಕೆ ಮಾಡಿ. ನೀವು ಒಟ್ಟಿಗೆ ಕಳೆದ ಕ್ಷಣಗಳು ಹೀಗೆ ಬಿನ್ನವಾಗಿತ್ತು ಎಂಬುದರ ವಿವರಣೆ  ಕೊಡಿ. ನೀವು ಬಳಸುವ ಶಭ್ದಗಳು ನಿಮ್ಮ ಅಂತರಾಳದಿಂದ ಬಂದಿರಲಿ. ನೀವಾಡುವ ದೊಡ್ಡ ದೊಡ್ಡ ಮಾತುಗಳು ಓದುವ ಮನಸ್ಸಿನಲ್ಲಿ ಶಾಶ್ವತವಾಗಿ ಕೂರುವ ಹಾಗೆ ಇರಲಿ. ಆಡುವ ಮಾತು ಎಷ್ಟು ದೊಡ್ದದಿರುತ್ತದೋ, ಬಳಸುವ  ವಾಖ್ಯಗಳು ಕೂಡ ಅಸ್ಟೆ ನೇರವಾಗಿಯೂ ಇದ್ದರೆ  ಒಳ್ಳೆಯದು. ತೆರೆದ ಮನಸ್ಸಿನಿಂದ ನಿಮ್ಮ ಮನಸ್ಸಿನ ಭಾವನೆಗಳನ್ನು , ನಿಮ್ಮ ಸಂಗಾತಿಯ ಬಗ್ಗೆ ನಿಮಗನಿಸಿದ್ದನ್ನು  ಎಳೆ ಎಳೆಯಾಗಿ ಬಿಡಿಸಿಡುವಲ್ಲಿ ಯಾವ ಕಾರಣಕ್ಕೂ ಹಿಂಜರಿಯ ಬಾರದು. ಓದುವ ಮನಸ್ಸಿಗೆ ಅದು ಖಂಡಿತವಾಗಿಯೂ  ಇಷ್ಟವಾಗುತ್ತದೆ.

ನಿಮ್ಮ ಪತ್ರದ ಮುಂದಿನ ಭಾಗ ನೀವು ನಿಮ್ಮ ಸಂಗಾತಿಯನ್ನು ಪ್ರೀತಿಸಲು ಕಾರಣವಾದ ಅಂಶಗಳ ಬಗ್ಗೆ ಇರಲಿ. ಯಾಕೆ ಪ್ರತಿ ಕ್ಷಣವೂ ನಿನ್ನನ್ನು ನೋಡಬೇಕು, ಮಾತಾಡುತ್ತಲೇ ಇರಬೇಕು ಎನಿಸುತ್ತದೆ ಎಂದು ಹೇಳಿ. ಒಂದು ವೇಳೆ ನಿಮ್ಮ ಸಂಗಾತಿಯ ಬಗ್ಗೆ  ನಿಮಗೇನಾದರೂ ಅಸಮಾಧಾನವಿದ್ದರೆ ಅದನ್ನು ಕೂಡ ಅವರ ಮನಸ್ಸಿಗೆ ನೋವಾಗದಂತೆ   ಬರೆಯಬಹುದು. ನೀನು ಹೀಗಿದ್ದರೆ ನನಗಿನ್ನೂ ಸಂತೋಷ ಎಂದು ತಿಳಿಸಿ ಹೇಳಿ. ಪತ್ರದ ಕೊನೆ ಆದಷ್ಟು positive ಆಗಿರಲಿ. .  ನಿಮ್ಮ ಮುಂದಿನ ಜೀವನದ ಬಗ್ಗೆ, ಎದುರಿಸಬಹುದಾದ ಆತಂಕಗಳ ಬಗ್ಗೆ, ಅನುಭವಿಸಬಹುದಾದ ಸುಂದರ ಕ್ಷಣಗಳ ಬಗ್ಗೆ, ನಿಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಹೇಳಿ. ಹೇಳಿ ಕೇಳಿ ಇದು ಪ್ರೇಮಿಗಳ ತಿಂಗಳು. ನಿಮ್ಮ ಮನದನ್ನೆಯ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳುವಾಗ ಕೆಂಪು ಗುಲಾಬಿಯ ಜೊತೆಗೆ ಒಂದು ಒಲವಿನ ಒಲೆಯನ್ನೂ ಕೊಡಬೇಕು ಎಂದಿದ್ದರೆ ಯಾಕೆ ತಡ?? ಬರೆದುಬಿಡಿ ಒಂದು ಚಂದದ ಪತ್ರವನ್ನು...

3 comments:

ದಿನಕರ ಮೊಗೇರ said...

ಪ್ರೀತಿಯಲ್ಲಿ p .h .d ಮಾಡಿದವರ ಹಾಗೆ ಬರೆದಿದ್ದೀರಿ.... ಚೆನ್ನಾಗಿದೆ....... ಕೆಲವರಿಗಾದರೂ ಸಹಾಯಕ್ಕೆ ಬರಬಹುದು......

Unknown said...

hi....
sikkapate salahenalo

MAHESH HEGDE said...

mast iddalo dosta . Love guru ag bityalo.