Tuesday, January 20, 2009

ಭಾವ

ನಾನೊಬ್ಬ ಭಾವ ಜೀವಿ ಅಥವಾ ನಾನು ಪ್ರಾಕ್ಟಿಕಲ್ ಎಂದು ಹೇಳುವ ಪ್ರತಿಯೊಬ್ಬರನ್ನೂ ನಾನು ಬಹಳ ಹತ್ತಿರದಿಂದ ಗಮನಿಸಿ ನೋಡಿದ್ದೇನೆ. ಮತ್ತು ಪ್ರತಿ ಸಾರಿಯೂ ನಾನು ಯಾವ ಗುಂಪಿಗೆ ಸೇರುತ್ತೇನೆ ಎಂದು ಗೊಂದಲ ಪಟ್ಟಿದ್ದೇನೆ. ಆದರೆ ಕೊನೆಗೂ ಭಾವಜೀವಿ, practical, moody, materialistic, ಮುಂತಾದ ಪದಗಳಲ್ಲಿ ನಾನ್ಯಾರು ಎಂದು ಗೊತ್ತಾಗಲೇ ಇಲ್ಲ. ಮತ್ತು ಅವುಗಳನ್ನು ಯಾವ ಮಾನದಂಡದ ಮೇಲೆ ಅಳೆಯುತ್ತಾರೆ ಎಂದೂ ಅರ್ಥವಾಗಲಿಲ್ಲ. ಹಾಗಾದರೆ ಯೋಚಿಸಿದರೂ ಅರ್ಥವಾಗದಸ್ಟು ಜಟಿಲವೇ ಇದು?
ಕೇವಲ ಲಾಭ ನಸ್ಟವನ್ನೇ ತಲೆಯಲ್ಲಿ ತುಂಬಿಕೊಂಡಿರುವವರು ಕೂಡ ಸಾಹಿತ್ಯ ಸಂಗೀತಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಅವನದೇ ಆದ ವಯಕ್ತಿಕ ಜೀವನವನ್ನು ಹೊಂದಿರುತ್ತಾನೆ. ಅಥವಾ ಸಂಭಂಧಗಳ ಅರಿವೇ ಇಲ್ಲದವರು ಕೂಡ ಯಾವುದೊ ಸಂದರ್ಭದಲ್ಲಿ ಭಾವನೆಗೆ ಹೆಚ್ಚು ಬೆಳೆ ಕೊಟ್ಟಿರುತ್ತಾರೆ. ಹಾಗಾದರೆ ಒಂದೊಂದು ಸಮಯದಲ್ಲಿ ಒಂದೊಂದು ರೀತಿ ವರ್ತಿಸುವ ಭಾವವನ್ನು ಇದು ಯಾವ ರೀತಿ ಎಂದು ಹೇಗೆ ನಿರ್ಧರಿಸುವುದು?

ಸದಾ ಹಸನ್ಮುಖಿಯಾಗಿ ತುಂಬಾ Jolly ಯಾಗಿರುವ ವ್ಯಕ್ತಿ ಕೂಡ ಕೆಲವೊಮ್ಮೆ ತಿಂಗಳುಗಟ್ಟಲೆ ಏಕಾಂತವಾಗಿ ಭಾವನೆಗಳೊಂದಿಗೆ ಕಿನ್ನತೆಯ ಚಿಪ್ಪನ್ನು ಸೇರಿಕೊಂಡು ವಾಸ್ತವಿಕತೆಯಿಂದ ದೂರ ಉಳಿದುಬಿಡುತ್ತಾನೆ. ತೀರ ದಾರಲಿ ಎನಿಸಿದವನು ಕೂಡ ದುಡ್ಡು ಮಾಡುವ ಹಪಹಪಿಗೆ ಬಿದ್ದು ಬಿಡುತ್ತಾನೆ. ಜಿಪುನಾಗ್ರೇಸರನು ಕೂಡ ದರಾಲಿಯಗುವ ಸಂದರ್ಭಗಳಿವೆ. ಹಾಗಾದರೆ ಇವೆಲ್ಲ ಕ್ಷಣಿಕ ಕೇವಲ ವೈರಾಗ್ಯವೇ? ಸದಾ ಸಿಡುಕುವ boss ಗಳು ಕೆಲವೊಮ್ಮೆ ನಗುನಗುತ್ತ ಮಾತನಾಡುವುದು ತಮ್ಮ ಉದ್ಯೋಗಿಗಳಿಂದ ಹೆಚ್ಚು ಕೆಲಸ ಮಾಡಿಸಿಕೊಳ್ಳುವ ವ್ಯಾವಹಾರಿಕ ಚತುರತೆಯೋ ಅಥವ ಅದು ಅವರ ಅಕ್ಷಣದ ಭಾವವೇ?

ಅವರವರ ಭಾವಕ್ಕೆ ಅವರವರ ಭಕುತಿಗೆ ಎನ್ನುತ್ತಾರೆ. ಅಂದರೆ ಅದು ಕಳವು ಸಮಯಕ್ಕಸ್ತೆ ಸೀಮಿತವೇ ಅಥವಾ ಅದು ಒಬ್ಬ ವ್ಯಕ್ತಿಯ ಒಟ್ಟು ನಿರ್ಧಾರಗಳ , ಮಾತು ಮತ್ತು ಕೃತಿಯ ಆಧಾರದ ಮೇಲೆ ಬೇರೆಯವರು ಈತ ಹೀಗೆ ಎಂದು ನಿರ್ಧರಿಸುವುದೇ? ಅನೇಕರು Film ಅಥವಾ ಕಾದಂಬರಿ ಗಳನ್ನೂ ಓದಿ ದಿನಗಟ್ಟಲೆ ಅದೇ ಯೋಚನೆಯಲ್ಲಿ , ಬೇರೆ ಕೆಲಸ ಮಾಡಲು ಆಗದಷ್ಟು ತಲ್ಲೀನರಗುತ್ತಾರೆ. ಆದರೆ ಭಾವ ಯಾವಾಗಲೂ ಇರುವುದಿಲ್ಲವಲ್ಲ..

ಕೇವಲ ಯಾರೋ ಆಡಿದ ಮಾತಿಗೆ ಅಥವಾ ಯಾವುದೋ ಘಟನೆಗೆ ಸಂಭಂದಿಸಿ , ಕೆಲವರು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತಾರೆ. ಮತ್ತು ವಿಷಯದ ಬಗ್ಗೆಯೇ ಯೋಚಿಸಿ ಕೊರಗುತ್ತಾರೆ. ಅದು ಅವ್ರ ಸೂಕ್ಷ್ಮ ಮನಸ್ಥಿತಿಯೇ ಅಥವಾ ಅವರ ಮಾನಸಿಕ ಬ್ಲಾಹೆನತೆಯೇ? ಅಥವಾ ಅದು ಕೂಡ ಅವರ ಅಯಾ ಕ್ಷಣದ ಭಾವ ಮಾತ್ರವೇ? ಪ್ರೀತಿ, ಪ್ರೇಮ, ಕರುಣೆ, ಸಿಟ್ಟು, ದಯೆ, ದಾಕ್ಷಿಣ್ಯ, ಅಳು ಮುಂತಾದವು ;ಭಾವ' ಹಲವು ಮುಖಗಳಂತೆ ಕಂಡರೂ, ಎಲ್ಲವು ಬೇರೆ ಬೇರೆ ಭಾವಗಳೇ ಅಲ್ಲವೇ? ಬಡವ ಹಾಗು ಶ್ರೀಮಂತರ ಭಾವಗಳಲ್ಲಿ ಏನಾದರು ವ್ಯತ್ಯಾಸ ವಿರುತ್ತದೆಯೇ ಎಂದರೆ ಇಲ್ಲ ನದೀ ಎಲ್ಲರೂ ಹೇಳುತ್ತಾರೆ. ಆದರೆ ಬಡವ ಮತ್ತು ಶ್ರೀಮಂತ ಮಕ್ಕಳ ನಡುವೆ ವ್ಯತ್ಯಾಸ ಇರುವುದು ಏತಕ್ಕೆ? ಅದು ಅವರು ಬೆಳೆದು ಬಂದ ಪರಿಸರದ ಪ್ರಭಾವವೇ? ಅಂದಮೇಲೆ ಬೆಳೆಯುವ ಪರಿಸರಕ್ಕೂ ನಮ್ಮ ನಮ್ಮ ಭಾವಕ್ಕೂ ಸಂಭಂದ ಇದೆ ಎನ್ನಬಹುದಲ್ಲವೇ ?

ಇತ್ತೀಚಿಗೆ ಗಣೇಶ್ ಯಲ್ಲಪುರ್ ಬರೆದ ಅವರ ಮೊದಲ ಕಾದಂಬರಿ 'ಭಾವ' ದಿಂದ ಪ್ರೀರಿತನಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳಿವು. ಪ್ರಾಪಂಚಿಕ ವಿಷಯಗಳನ್ನು ಮರೆತಂತೆ, ಸುಸಂಸ್ಕ್ರತ ಮನೆತನದಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ಮನೆಯಿಂದ ಹೊರಗೆ ಬಂದು, ಜೀವನೋಪಾಯಕ್ಕಾಗಿ ಹತ್ತು ಹಲವು ಕೆಲಸಗಳನ್ನು ಮಾಡುತ್ತ ಕೆಟ್ಟ ಹವ್ಯಾಸಗಳನ್ನು ರುದಿಸಿಕೊಂದವನ ಕಥೆಯಿದು. ಕಾದಂಬರಿಯನ್ನು ಓದಿದ ಮೇಲೆ ನನ್ನ ಮನದಲ್ಲಿ ಮೂಡಿದ ಭಾವವನ್ನು ಇದನ್ನು ಓದುತ್ತಿರುವ ನಿಮ್ಮ ಮುಂದಿಡುತ್ತಿದ್ದೇನೆ. ನಿಮಗೂ ಭಾವದ ಬಗ್ಗೆ ಏನಾದರು ಯೋಚಿಸಿದರೆ ಅಷ್ಟರ ಮಟ್ಟಿಗೆ ಲೇಖನ ಸಾರ್ಥಕವಾದಂತೆ.

>>>>>>>><<<<<<<<

2 comments:

Unknown said...

Super gurooooooo........ keep it up

Unknown said...

Good... yaavaaginda article baryale shuru madidyo maaraya? chenagiddu... mundvarsu hingeyaa...