Thursday, January 22, 2009

ಜೀವದ ಜೀವಕ್ಕೊಂದು ಪ್ರೇಮ ಪತ್ರ

ಸಂಬಂಧದ ಸುಳಿಗೆ ಸಿಲುಕದ, ಭಾವನೆಗಳಿಗೆ ನಿಲುಕದ,ಕಲ್ಪನೆಗಳನ್ನು ಮೀರಿದ, ಕನಸೊಳಗೆ ಕಾಡುವ, ಮನಸಲ್ಲೇ ಕುಳಿತು ನಗುವ, ಒಲವಿನ ಗೆಳತೀ, ನಿನ್ನದೊಂದು ಸ್ಪಷ್ಟ ರೂಪ ನನ್ನ ಕನ್ನೋಳಗಿದ್ದರೂ ನಿನ್ನನ್ನು ಯಾವ ಹೆಸರಿನಿಂದ ಕರೆಯಬೇಕು ಎಂಬ ಗೊಂದಲದಿಂದ ಇಷ್ಟೆಲ್ಲಾ ಹೆಸರಿನಿಂದ ಕರೆಯಬೇಕಾಯಿತು. ದಶಕಗಳ ಕಾಲ ನನ್ನ ಮನದ ಮೂಲೆಯಲ್ಲಿ ಮೂಡಿ, ಹಾಗೇ ಒಂದು ಚಿತ್ತಾರವಾದ ಕನಸು ನೀನು. ನೀಲ ಗಗನದಲ್ಲಿ ಮೇಘಗಳ ನವಿಲು ನರ್ತಿಸಿದಂತೆ ಅನಿಸುವ ನಿನ್ನ ಪ್ರತಿ ಹಾವ ಭಾವಗಳೂ, ನನ್ನ ಮನದ ತಳದಲ್ಲಿ ಬೇರುಗಟ್ಟಿ ಬಿಟ್ಟಿದೆ. ಭಹುಷಹ ಅದಕ್ಕೆ ಇರಬೇಕು ಪ್ರಪಂಚದ ಯಾವ ವಸ್ತುವೂ ನಿನ್ನಷ್ಟು ಸುಂದರವಾಗಿ ಕಾಣುವುದಿಲ್ಲ.

ನಾನೇನಾದರೂ ಕಲಾವಿದನಾಗಿದ್ದರೆ ನಿನ್ನದೊಂದು ಅದ್ಭುತ ಚಿತ್ರ ಬರೆದು ಬಿಡುತ್ತಿದ್ದೆನೋ ಏನೋ, ಆದರೆಏನು ಮಾಡಲಿ, ನನ್ನ ಮನದಲ್ಲಿ ಸ್ಥಿರವಾಗಿರುವ ನಿನ್ನ ಆ ಸುಂದರ ರೂಪವನ್ನು ರೇಖೆಗಳನ್ನಾಗಿ ಪರಿವರ್ತಿಸಲು ನನ್ನ ಕೈಬೆರಳುಗಳು ವಿಫಲವಾಗಿವೆ. ನನಗೆ ಗೊತ್ತು, ನೀನು ನನ್ನ ಕನಸಿನ ಆಕೃತಿ ಮಾತ್ರ ಎಂದು, ಅದರೂ ಮನದ ಮೂಲೆಯಲ್ಲಿ ಒಂದು ಆಸೆ, ನೀನು ಎಲ್ಲೋ ಒಂದು ಕಡೆ ಇದ್ದೇ ಇರುತ್ತೀ ಎಂದು. ಈ ಪತ್ರವನ್ನು ನೀನು ಓದಲಾರೆ ಎಂಬುದೂ ಗೊತ್ತು. ಆದರೂ ಇದನ್ನು ಬರೆಯುತ್ತಿರುವುದು ನನ್ನ ಸಮಾಧಾನಕ್ಕಾಗಿ ಮಾತ್ರ. ಒಂದು ವೇಳೆ ನೀನು ನಿಜವಾಗಿಯೂ ಪ್ರಪಂಚದ ಯಾವುದೋ ಮೂಲೆಯಲ್ಲಿ ಇದ್ದರೆ, ನನ್ನ ಪ್ರೀತಿ ನಿನಗೆ ಅರ್ಥವಾಗಲಿ ಎಂದು ಆಶಿಸುತ್ತೇನೆ. ಮತ್ತು ಅದು ನಿಜವಾಗಲಿ ಎಂದು ದೇವರಲ್ಲಿ ಪ್ರತಿ ದಿನವೂ ಪ್ರಾರ್ಥಿಸುತ್ತೇನೆ.

ಇಬ್ಬರು ವ್ಯಕ್ತಿಗಳ ನೈಜ ಪ್ರೀತಿಯೇ ವಿಫಲವಾಗುತ್ತ್ತಿರುವಾಗ ಕೇವಲ ಒಂದು ಆಕೃತಿಯನ್ನು ಕಲ್ಪಿಸಿಕೊಂಡು ಅದನ್ನೇ ಪ್ರೀತಿಸುವುದು ಹುಚ್ಚುತನ ಎನಿಸಬಹುದು. ಆದರೆ ಗೆಳತೀ, ನನ್ನ ಹಳೆಯ ಸೂಟ್ ಕೇಸನ್ನು ತೆಗೆದು ನೋಡಿದರೆ ಅದು ನಿನಗೆ ಬರೆದ ಪ್ರೇಮ ಪಾತ್ರಗಳಿಂದಲೇ ತುಂಬಿ ಹೋಗಿದೆ. ಈ ಪತ್ರ ಕೂಡ ಅದರಲ್ಲಿ ಒಂದಾಗುತ್ತದೆ ಎಂದು ಗೊತ್ತು. ಆದರೆ ಪ್ರತಿ ಪತ್ರ ಬರೆಯುವಾಗಲೂ ಕೂಡ ನೀನು ಬಂದೇ ಬರುತ್ತೀ ಎಂದು ನನ್ನ ಅನಿಸಿಕೆಯಾಗಿರುತ್ತದೆ. ಹೆಚ್ಚು ಬರೆದು ನಿನಗೂ bore ಹೊಡೆಸುವುದಿಲ್ಲ. ನಿನ್ನ ಎದುರು ಕುಳಿತು ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಕುಷಿಗಾಗಿ ಕಾಯುತ್ತಿರುತ್ತೇನೆ. ಮುಗಿಸುವ ಮುನ್ನ ಯಾಕೋ ಆ ಹಾಡು ನೆನಪಾಗುತ್ತಿದೆ, 'ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳ ಕಾಣಿಕೆ'.
ನೀನು ಬಂದೇ ಬರುತ್ತೀ ಎಂದು ನಂಬಿರುವ,

ಇಂತೀ ನಿನ್ನ ಪ್ರೀತಿಯ
...........................................................................................................................................................................
(ವೀ. ಸು: ಈ ಪತ್ರ ಓದಿ ನಾನೇ ಅವಳು ಎಂದು ಬೇರೆ ಯಾರಾದರು ನನ್ನನ್ನು ಪ್ರೀತಿಸಿದರೆ ಅದಕ್ಕೆ ನೀನೆ ಜವಾಬ್ದಾರಿ. )
...........................................................................................................................................................................

4 comments:

Arun said...

I am thankful to my friend for suggest a good starting line for this letter.

Unknown said...

Yar sir avlu hudgee???

ಮುಸ್ಸ೦ಜೆ said...

ಅನಾಮಧೇಯ ಪ್ರೆಮ ಪತ್ರ ಅ೦ದ್ರೆ ಸರಿ ಅಗ್ತನ? ಯಾರಿಗೊ ಬರದ್ದು? ಮಸ್ತ್ ಐತ್ರಿ ಸರ...

Subrahmanya Hegde said...

Super Leter.......Yavaga Kavi adya neenu