Saturday, February 28, 2009

First Quarter

ಮೊದಲ ಬಾರಿಗೆ ಕಳೆದು ಹೋದ ಕಾಲು ಶತಮಾನದ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದ್ದೆ . ಮೊನ್ನೆ ಮೊನ್ನೆ ಫೆಬ್ರುವರಿ ೧೫ ಕ್ಕೆ ೨೫ ವರ್ಷಗಳನ್ನು ಮುಗಿಸಿ ೨೬ ಕ್ಕೆ ಕಾಲಿಡುವ ಮುನ್ನ ಯಾಕೋ ಒಮ್ಮೆ ಹಿಂದಿರುಗಿ ನೋಡಿದರೆ ನಡೆದು ಬಂದ ದಾರಿಯೇನು ಸುಗಮವಾಗಿರಲಿಲ್ಲ. ಆದರೆಮಡಿದ ಘನಕಾರ್ಯವೂ ಇರಲಿಲ್ಲ ಎಂಬುದು ಮನಸ್ಸಿಗೆ ಬೇಸರವಾಗಿತ್ತು. ಮುಂದೆ ನಡೆಯಬೇಕಾದ ದೂರದ ಪ್ರಯಾಣಕ್ಕೆ ಇಲ್ಲಿಯವರೆಗಿನ ಕಾಲು ಶತಮಾನದ ಜೀವನ ಅಡಿಪಾಯವೂ ಹೌದು, ದಾರಿದೀಪವೂ ಹೌದು. ಅಂದರೆ ಮುಂದೆ ಹೇಗಿರಬೇಕು ಮತ್ತು ಹೀಗಿರುತ್ತೇವೆ ಎಂಬುದು ನಮ್ಮ ಇಲ್ಲಿಯವರೆಗಿನ ಪರಿಶ್ರಮದ ಮೇಲೆ ಆಧಾರವಾಗಿರುತ್ತದೆ.

ಹಾಗೆ ಯೋಚಿಸುತ್ತ , ಇಲ್ಲಿಯವರೆಗಿನ ನನ್ನ ಜೀವನದಲ್ಲಿ ನಾನೇನು ಬದಲಾವಣೆಯನ್ನು ಮಾಡಿದೆ, ಮತ್ತು ನಾನು ಮಾಡಿದ ಸಾಧನೆಗಲೀನು ಎಂಬ ಪ್ರಶ್ನೆ ಬಂದು ಅದೇ ಭೂತಾಕಾರವಾಗಿ ಬೆಳೆಯಿತು. ನಾನು ಇಲ್ಲಿಯವರೆಗೆ ಎದುರಿಸಿದ ಯಾವ ಪರೀಕ್ಷೆಗಳಲ್ಲೂ ಇಷ್ಟು ಕಷ್ಟದ ಪ್ರಶ್ನೆ ಬಂದಿರಲಿಲ್ಲವಲ್ಲ ಎಂದು ಅನಿಸತೊಡಗಿತು. ಪರೀಕ್ಷೆ ಯಲ್ಲಾದರೆ ಸುಲಭವಾಗಿ ಮುಂದಿನ ಪ್ರಶ್ನೆಗೆ ಹಾರಿ ಬಿಡಬಹುದು. ಆದರೆ ಇಲ್ಲಿ ಸಮಂಜಸ ಉತ್ತರ ಸಿಗುವವರೆಗೆ ನಿದ್ರೆಯೇ ಬಾರದಲ್ಲ, ಹಾಗೆ ಯೋಚಿಸುತ್ತಿರುವಾಗ ಕೆಲವು ಸಮಾಧಾನಕರ ಉತ್ತರಗಳೂ ದೊರೆತವು. ಒಂದು, ನಾನು ನನ್ನ ತಂದೆ ತಾಯಿಯರಿಗೆ ಪ್ರೀತಿಯ ಮಗ ಮತ್ತು ನನಗೂ ಅವರೆಂದರೆ ಪ್ರೀತಿ ಮತ್ತು ಗೌರವ ಎಂದು. ಎರಡು, ನಾನು ನನ್ನ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿ ಒಳ್ಳೆಯ ಉದ್ಯೋಗ ಹೊಂದಿದ್ದೇನೆ ಎಂಬುದು. ಮೂರು, ನನ್ನ ಕಷ್ಟ ಸುಖಗಳಲ್ಲಿ ನನ್ನ ಜೊತೆ ಇರುವಂತಹ ಅನೇಕ ಸ್ನೇಹಿತರನ್ನು ಹೊಂದಿದ್ದೇನೆ . ನಾಲ್ಕು, ಪತ್ರಿಕೆಯ ಪ್ರಸಾರಧಿಕಾರಿಯಿಂದ , ಅಡಿಕೆ ವ್ಯಾಪಾರದ ವರೆಗೆ ಸುಮಾರು ೫ ರೊಂದ ೬ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ ಮತ್ತು ಅವುಗಳಿಂದ ಸಾಕಸ್ತು ಅನುಭವವನ್ನು ಪಡೆದಿದ್ದೇನೆ ಎಂಬುದು. ಕೊನೆಗೆ ಇದ್ಯಾವುದು ನನ್ನ ಕ್ಷೆತ್ರಗಳಲ್ಲ ಎನಿಸಿ ನಾನು ಕಲಿತ ಲೆಕ್ಕಾಚಾರದ ಹಣಕಾಸಿನ ಬದುಕಿಗೆ ಹಿಂದಿರುಗಿದೆ ಎಂಬುದು ಬೇರೆ ಮಾತು.

ಹೀಗೆ ಸಾಗಿದ್ದ ಯೋಚನೆಗಳು ಇದ್ದಕ್ಕಿದ್ದಂತೆ ತುಂಡಾಯಿತು. ಇದ್ಯಾವುದೂ ಸಾಧನೆಗಲೀ ಅಲ್ಲವಲ್ಲ ಅನಿಸಲು ಶುರುವಾಯಿತು. ಅಪ್ಪ ಅಮ್ಮನಿಗೆ ಒಳ್ಳೆಯ ಮಗನಾಗುವುದು, ನಮ್ಮ ಕರ್ತವ್ಯ. ಅದರಲ್ಲೇನು ಸಾಧನೆ?? ಇನ್ನು ಅವರ ಪ್ರೀತಿ, ಎಲ್ಲ ಮಕ್ಕಳೂ ಅವರವರ ಪಾಲಕರಿಂದ ಪ್ರೀತಿ ಪಾತ್ರರೆ ಅಲ್ಲವೇ? (ಹೆತ್ತವರಿಗೆ ಹೆಗ್ಗಣ ಮುದ್ದ್ದು ಎಂಬಂತೆ). ಹಾಗೆ ಶಿಕ್ಷಣ ಮತ್ತು ಉದ್ಯೋಗ ಕೂಡ ಎಲ್ಲಾರೂ ಮಾಡುವನ್ತಹುದೆ ಅದರಲ್ಲೇನು ವಿಷೇಶ?? ಇನ್ನು ಸ್ನೀಹಿತರಿದ್ದ ಹಾಗೆ ನನ್ನನ್ನು ವಿರೂಧಿಸುವವರೂ ಇರುತ್ತಾರಲ್ಲ, ಹಾಗಾದರೆ ನಾನು ಸಾಧನೆಯನ್ನೇ ಮಾಡಲಿಲ್ಲವೇ??? ನನ್ನ ಮುಖದಲ್ಲಿ ಬೆವರಿನ ಸಾಲುಗಳು ಮೂಡುತ್ತಿದ್ದವು.

ಇದೀರೀತಿ ಯೋಚಿಸುತ್ತಿದ್ದರೆ ಬೆಳಕಾಗುವವರೆಗೂ ನಿದ್ರೆ ಬಿಟ್ಟು ಯೋಚಿಸಬೇಕಾಗಬಹುದು ಎನಿಸಿ, ನನ್ನ ಪ್ರೀತಿಯ ಗೆಳೆಯನಿಗೆ call ಮಾಡಿ, ನನ್ನ ಮನದ ಅಳಲನ್ನು ಹೇಳಿಕೊಂಡೆ . ಆತ ಹೇಳಿದ, " ಅಯ್ಯೋ ಮಾರಾಯ, ನಾವು ಈ ಭೂಮಿಯಲ್ಲಿ ಹುಟ್ಟುವುದು, ಬರೀ ಸಾಧನೆಗಾಗಿ ಮಾತ್ರವಲ್ಲ, ಜೀವನವನ್ನು ಕಲಿಯಲು ಮತ್ತು ಅದನ್ನು ಅನುಭವಿಸಲು ಕೂಡ, ಹಾಗೆ ಎಲ್ಲರೂ ಸಧನೆಯನ್ನೇ ಮಾಡುತ್ತಾ ಹೊರಟರೆ ಪ್ರಪಂಚದಲ್ಲಿ ಸಾಮಾನ್ಯ ಮನುಶ್ಯರೇ ಇರುವುದಿಲ್ಲ, ನಮ್ಮ ಸುತ್ತಲಿನವರಿಗೆ ಒಳ್ಳೆಯವರಾಗಿ, ನಾವು ನಂಬಿದ ಸಿದ್ಧಾಂತಗಳೊಂದಿಗೆ ಪ್ರಾಮಾಣಿಕವಾಗಿ ಬದಿಕಿದರೆ ಅದೇ ದೊಡ್ಡ ಸಾಧನೆ, ನೀನು ಅದನ್ನು ಮಾದುತ್ತಿದ್ದೆಯೇ". ಎಂದು.

ಅಸ್ಟು ಕೇಳಿದ ಮೇಲೆ 'ಒಹ್ ಹೌದಲ್ಲ' ಎನಿಸಿದ್ದು ನಿಜವಾಗಿಯೂ ಸುಳ್ಳಲ್ಲ. ಸುಮ್ಮನೆ ಯೋಚಿಸಿ ನಿದ್ರೆ ಹಾಳಾಯಿತಲ್ಲ ಅಂದು ಅನಿಸಿದ್ದು ಮಾತ್ರ ನೆನಪು. ಎಚ್ಚರವಾದಾಗ ಬೆಳಿಗ್ಗೆ ೮ ಗಂಟೆ.

<><><><><><><><><><><><><><><><><><><><><><><><><><><><><><><><><><><><><><>

4 comments:

Anonymous said...

Hi, Really good question, yaa... I am becoming ur fan... & waiting ur next post

niranjan.makkimane said...

25 ata gurooo??? jatga hordsale addille hangare

Unknown said...

Happy birthday boss... Any way nim frnd chennage helidaare...

Unknown said...

Nice