Sunday, March 1, 2009

ಮೊದಲ ಧಂ...


ನನಗಾಗ ೧೦ ವರ್ಷಗಳಿರಬಹುದು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮೂರಿನ ಹುಡುಗರ ಪೈಕಿ ನಾನೇ ಚಿಕ್ಕವನು. ಅವರೆಲ್ಲ ಎಲ್ಲಿಗೆ ಹೊರಟರೂ ನಾನೂ ಬರುತ್ತೇನೆ ಎಂದು ದುಂಬಾಲು ಬೀಳುತ್ತಿದ್ದೆ. ಮತ್ತು ಅವರು ಬೇಡ ಎಂದೇ ಹೇಳುತ್ತಿದ್ದರು. ಅವರಾದರೂ ನನಗಿಂತ ತುಂಬಾ ದೊಡ್ಡವರಲ್ಲ. ಹೆಚ್ಚೆಂದರೆ ನನಗಿಂತ ನಾಲ್ಕಾರು ವರ್ಷಕ್ಕೆ ದೊಡ್ದವರಿರಬಹುದು. ಅದರೂ ಅವರ ದೃಷ್ಟಿಯಲ್ಲಿ ನಾನಿನ್ನೂ ಚಿಕ್ಕವ. ಹಾಗಾಗಿಯೇ ನನ್ನನು ಅವರ ಜೊತೆ ಸೇರಿಸಿಕೊಲ್ಲುತ್ತಿರಲಿಲ್ಲವೋ ಏನೋ , ಅಥವಾ ನನ್ನನ್ನೂ ಊರು ಸುತ್ತಲು ಕರೆದುಕೊಂಡು ಹೋದರೆ ಮನೆಯವರಿಂದ ಮಂಗಳಾರತಿಯಾದೀತೆಂಬ ಭಯವೋ ಗೊತ್ತಿಲ್ಲ. ಆದರೆ ನನಗೆ ಮಾತ್ರ ಅವರ ಜೊತೆ ಹೋಗಿ ನಾನೂ ದೊಡ್ದವನೆನಿಸಿಕೊಳ್ಳುವ ತವಕ. ಅವರೆಲ್ಲರ ಜೊತೆ ಅವರಂತೆಯೇ ಹೋದರೆ ನಾನು ದೊಡ್ದವನಾಗಿಬಿಡುತ್ತೇನೆ ಎಂಬ ಹುಸಿ ಬ್ರಮೆ.

ಒಟ್ಟಿನಲ್ಲಿ ಆವತ್ತು ಕೂಡ ಹಾಗೆ ಆಯಿತು. ನಮ್ಮೂರ ಹುಡುಗರು ನನ್ನ ಕಣ್ಣು ತಪ್ಪಿಸಿ ಹೊರಡಲು ತಯಾರಾಗುತ್ತಿದ್ದರು. ನನಗೇನೋ ಅನುಮಾನ ಬಂದು ನೋಡಿದರೆ ಹುಡುಗರ ಗುಂಪು ಸದ್ದಿಲ್ಲದೆ ಹೊರಡಲು ಅಣಿಯಾಗುತ್ತಿತ್ತು. ಎಂದಿನಂತೆ ಅವರ ಜೊತೆ ಜಗಳ ಕಾಯಲು ಮನಸ್ಸಾಗದೆ, ಹಿಂದಿನಿಂದ ಅವರನ್ನು ಫಾಲೋ ಮಾಡುವ ಯೋಚನೆ ಬಂತು. ಇನ್ನೇಕೆ ತಡ, ಯೋಚನೆಯನ್ನು ಕಾರ್ಯಗತ ಗೊಳಿಸಬೇಕಲ್ಲ, ಹಾಗೆ ಮಾಡಿದೆ. ಆದರೆ ಹಾಗೆ ಹೊರಟ ಗುಂಪು ಬೇರೆಲ್ಲೂ ಹೋಗದೆ ನಮ್ಮೂರಮುಂದಿನ ಬೋಳು ಗುಡ್ಡ ಹತ್ತತೊಡಗಿತು. ನನಗೋ ಆಶ್ಚರ್ಯ.. ಬರೀ ಬಂಡೆಗಳು ಮತ್ತು ಮುಳ್ಳು ಗಂತಿಗಳನ್ನು ಬಿಟ್ಟರೆ ಬೇರೇನೂ ಇಲ್ಲದ ಈ ಜಾಗದಲ್ಲಿ ಇವರೇನು ಮಾಡುತ್ತಾರೆ ಎಂದು. ಬೇಸಿಗೆಯಲ್ಲಿ ಬಿಡುವ ಮುಳ್ಳು ಹಣ್ಣು ಕೂಡ ಈ ಸಮಯದಲ್ಲಿ ಸಿಗುವುದಿಲ್ಲ. ಏನೇ ಆದರು ಬಂದಆಗಿದೆಯಲ್ಲ, ಎಂದು ದೂರದಿಂದಲೇ ನೋಡುತ್ತಾ ನಿಂತೆ.

ಅಸ್ಟರಲ್ಲಿ ಅವರಲ್ಲಿಯೇ ಇದ್ದ ನಮ್ಮ ದತ್ತಣ್ಣ ತನ್ನ ಕಿಸೆಯಿಂದ ಏನನ್ನೋ ತೆಗೆದು ಬಾಯೋಳಗಿತ್ತುಕೊಂದ. ಎಲಾ ಇವನಾ ಇದನ್ನು ಮನೆಯಲ್ಲೇ ಮಾಡಬಹುದಲ್ಲ, ಇಲ್ಲಿಗೇಕೆ ಬರಬೇಕು ಎಂದು ಕೊಳ್ಳುವಸ್ತರಲ್ಲೇ ವಿವೇಕನ ಕಯ್ಯಲ್ಲಿ ಬೆಂಕಿ ಪೊಟ್ಟಣ ತಯಾರಾಗಿತ್ತು. ಒಂದು ಕಡ್ಡಿಯನ್ನು ಗೀರಿ, ಎರಡೂ ಕಯ್ಯಲ್ಲಿ ಅದಕ್ಕೆ ಗಾಳಿ ಬರದಂತೆ ಹಿಡಿದು, ದತ್ತಣ್ಣನ ಬಾಯಿಗೆ ಹಿಡಿದ. ಅಯ್ಯೋ, ಗ್ರಹಚಾರವೇ, ಅವನ ಬಾಯಿಗೆ ಬೆಂಕಿ ಇಟ್ಟುಬಿದುತ್ತಾನೆ, ಎಂದು ಕೊಳ್ಳುವಸ್ತ್ರಲ್ಲಿ, ದತ್ತಣ್ಣ ಖುಷಿಯಿಂದ ನಗುತ್ತಾ ಬಾಯ್ತುಂಬ ಹೋಗೆ ಬಿಡುತ್ತಿದ್ದ. ನಾನು ಅಸ್ಟು ಹೊತ್ತು ಆಶ್ಚರ್ಯದಿಂದ ನೋಡಿದ್ದು ಬೀಡಿ.







ಇನ್ನು ನಿಂತಲ್ಲೇ ನಿಲ್ಲಲಾಗದೆ, ಹತ್ತಿರ ಹೋಗೋಣವೆಂದು ಹೊರಟೆ. ನನ್ನ ಹೆಜ್ಜೆಯ ಸಪ್ಪಳ ಕೇಳಿದ ಅವರ ಮುಖದಲ್ಲಿ ಬೆವರಿನ ಸಾಲುಗಳು. ಯಾರೋ ಬಂದರೆಂದು ಓದಲು ತಯಾರಾದ ಅವರನ್ನು ನಾನೇ ನಾನೇ ಕರೆದು ನಿಲ್ಲಲು ಹೇಳಿದೆ. ಓದುವುದಕ್ಕಿಂತ ಇರುವುದೇ ಸರಿ ಎಂದು ಅವರಿಗೂ ಅನಿಸಿರಬೇಕು. ಅಂತೂ ಸಿಕ್ಕಿಬಿದ್ದಾಗಿದೆ. ಏನಾದರೂ ಮಾಡಬೇಕಲ್ಲ, ಏನೂ ಗೊತ್ತಿರದ ನನ್ನ ಜೊತೆ ರಾಜಿ ಸೂತ್ರಕ್ಕೆ ಬಂದೆ ಬಿಟ್ಟರು. ಇನ್ನು ಮುಂದೆ ಎಲ್ಲೇ ಹೊರಟರೂ ನನ್ನನ್ನೂ ತಮ್ಮ ಜೊತೆ ಸೇರಿಸಿಕೊಳ್ಳುವ ವಾಗ್ದಾನ ಮಾಡಿದರು. ಆದರೆ ಈ ವಿಷಯವನ್ನು ಎಲ್ಲೂ ಹೇಳಕೂದದೆಂದು ಹೇಳಿದರು. ನನಗೆ ಬೇಕಾಗಿದ್ದು ಅದೇ ಆಗಿತ್ತು. ಆದರೆ ನಾನು ಅಷ್ಟಕ್ಕೆ ಸುಮ್ಮನಾಗಲಿಲ್ಲ. ನಿಮ್ಮ ಜೊತೆ ಸೇರಿಸಿಕೊಳ್ಳುವುದರ ಜೊತೆ ನನಗೂ ಬೀಡಿ ಸೇದಲು ಕೊಡಬೇಕು ಎಂದೆ. ಒಂದು ಸಾರಿ ಒಬ್ಬರ ಮುಖ ಒಬ್ಬರು ನೋಡಿಕೊಂಡು, ಸರ್ವ ಸಂಮತದಿಂದ ಒಪ್ಪಿಕೊಂಡರು. ಅವರಿಗೂ ಬೇರೆ ದಾರಿ ಇರಲಿಲ್ಲ ಎಂಬುದು ಆ ಸಮಯದಲ್ಲಿ ನನಗೆ ಗೊತ್ತಾಗದಿದ್ದರೂ, ನಾನೂ ಬೀಡಿ ಸೇದುತ್ತೇನೆ ಎಂಬುದು ಹೆಚ್ಚಿನ ಥ್ರಿಲ್ ಕೊಟ್ಟಿತ್ತು.







ಹೀಗೆ ಪ್ರಾರಂಭವಾದ ನಮ್ಮ ಧಂ ನ ಅಭಿಯಾನ ನಮ್ಮೂರ ಕಲ್ಲು ಬಂಡೆಗಳಲ್ಲಿ, ಮರದ ಪೊಟರೆಗಳಲ್ಲಿ ಪ್ರತಿದ್ವನಿಸುತ್ತಿತ್ತು. ಆ ಗುಡ್ಡದಲ್ಲಿ ನಿಂತುಕೊಂಡರೆ ನಮ್ಮೂರಿನ ಪ್ರತಿ ಮನೆಯೂ ಕಾಣುತ್ತಿತ್ತು. ಆದರೆ ನಾವ್ಯಾರಿಗೂ ಕಾಣುತ್ತಿರಲಿಲ್ಲ ಅನ್ನುವುದು, ಧಂ ಗಿಂತಲೂ ಹೆಚ್ಚು ಖುಷಿ ಕೊಡುತ್ತಿತ್ತು. ಮರದ ಪೋತರೆಯ ಒಳಗೆ ಹೋಗೆ ಬಿಟ್ಟು, ಅದು ನಿಧಾನವಾಗಿ ಹೊರಗೆ ಬರುವುದನ್ನು ನೋಡುವುದು ನಿಜಕ್ಕೂ ಕಣ್ಣಿಗೆ ಹಬ್ಬವಾಗಿತ್ತು. ಹೊಗೆಯನ್ನು ಬಾಯಿಯಿಂದ ಹಾಗೆ ಹೊರಗೆ ಬಿಡಬಾರದು, ಹೊಟ್ಟೆಗೆ ತಂದು ಆಮೇಲೆ ಹೊರಗೆ ಬಿಡಬೇಕು ಎನ್ನುವ ದತ್ತಣ್ಣನ ಮಾತು ಸ್ವಲ್ಪ ಕಹಿಯಾಗಿತ್ತದರೂ, ಕೊನೆ ಕೊನೆಗೆ ನಾಯಲ್ಲಿ ಸೇದಿ, ಮೂಗಲ್ಲಿ ಹೋಗೆ ತರುವುದನ್ನು ಕಲಿತಿದ್ದೆವು. ಆದರೆ ಕಾಲ ಹಾಗೆ ಇರುವುದಿಲ್ಲವಲ್ಲ. ಒಬ್ಬೊಬ್ಬರೂ ಒಂದೊಂದು ಕೆಲಸಕ್ಕೆ ಬೇರೆ ಬೇರೆ ಊರುಗಳಿಗೆ ಹೊರಟರು. ಮತ್ತು ಅದರ ಜೊತೆಗೆ ನಮ್ಮ ಧಂ ನ ಒಂದು ಹಂತವೂ ಮುಗಿದಿತ್ತು.







ಆದರೆ ಹತ್ತನೇ ತರಗತಿಗೆ ಬಂದಾಗ ಮತ್ತೆ ಪರಿಚಯವಾಗಿದ್ದು, ಬೀದಿಯಲ್ಲ. ಸಿಗರೇಟು. ವಾರ್ಷಿಕ ಪರೀಕ್ಷೆಗೆಂದು ಓದಲು ಬೆಟ್ಟ ಹತ್ತುವ ನಾವು 5 ಜನ ಸ್ನೇಹಿತರು ಮತ್ತು, ಕಿಸೆಯಲ್ಲಿ 10 ಸಿಗರೇಟುಗಳು. ಒಬ್ಬೊಬ್ಬರಿಗೆ ಎರಡೆರಡು. ಪುಸ್ತಕವನ್ನು ಪಕ್ಕಕ್ಕಿಟ್ಟು ಬಾಯಲ್ಲಿ ಸಿಗರೇಟು ಸೇದುತ್ತ, ಊರ ರಾಜಕೀಯ ಮಾತನಾಡಲು ತೊಡಗಿದರೆ, ಪ್ರಪಂಚವೇ ಮರೆತು ಹೋಗುತ್ತಿತ್ತು. ಅಸ್ಟು ಮಾಡಿ ಸಂಜೆಯ ಹೊತ್ತಿಗೆ ಮನೆಗೆ ಹೋದರೆ, ನಮ್ಮಮ್ಮನಿಗೆ ಖುಷಿಯೋ ಖುಷಿ. ಇಷ್ಟು ಕಷ್ಟ ಪಟ್ಟು ಓದುವ ಮಗನಿಗೆ ಒಂದು rank ಖಂಡಿತ ಎಂದು. ಅದೇ ಖುಷಿಯಲ್ಲಿ ನನಗೆ ಬೇಕಾದ ತಿಂಡಿ ಬೇರೆ. ಆದರೆ ಸ್ನೇಹಿತರು, ಸಿಗರೇಟು, ಮತ್ತು ಹಾಲು ರಾಜಕೀಯ ಹರೆತೆಯ ಪರಿಣಾಮ ಗೊತ್ತಾಗಿದ್ದು, SSLC ರಿಸಲ್ಟ್ ಬಂದಾಗ. 5 ಜನರಲ್ಲಿ, ನಾವು 3 ಜನ ಜಸ್ಟ್ ಪಾಸು, ಮತ್ತು ಇನ್ನಿಬ್ಬರು 3 ವಿಷಯಗಳಲ್ಲಿ ಮಾತ್ರ ಪಾಸು. ಹಾಗಾಗಿ ಮತ್ತೆ ಸಿಗರೇಟು ಸೇದುವ ಸಹವಾಸಕ್ಕೆ ಹೋಗಲಿಲ್ಲ. ನಾಲ್ಕನೇ ತರಗತಿಯದು ಮೊದಲ ಧಂ ಆದರೆ, ಹತ್ತರದು ಕೊನೆಯ ಧಂ ಆಯಿತು. ( ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ ಹ ಹ,, ಹುಷಾರ್.)



............................................................................

8 comments:

me said...

beautiful....... niina dham astu bega mugdhota???

Anonymous said...

Super agiddu dosta...

MAHESH HEGDE said...

boss super iddu nandu ide reeti kate iddu.

niranjan.makkimane said...

Hingella iddu kathe, hangare

Unknown said...

First class boss... keep it up

ಮುಸ್ಸ೦ಜೆ said...

Hum..nimmora guDDakku chata hatsidri anthatu.. nice blog :)

Anju said...

hmmmmmmmmm smoking is injurious to health,,,,so quite madu

Unknown said...

nee bardid nodi naanu bidbeku ansta ide boss.....