Tuesday, April 7, 2009

.............

ಆಕೆ ನಗರದ ಬೀದಿಯೊಂದರಲ್ಲಿ ಕುಳಿತು ತರಕಾರಿ ವ್ಯಾಪಾರ ಮಾಡುತ್ತಿದ್ದಳು. ವಯಸ್ಸು ಸುಮಾರು 70 - 75 ಆಗಿದ್ದರೂ ಅದಕ್ಕಿಂತಲೂ ಹೆಚ್ಚಾಗಿ ಕಾಣುತ್ತಿದ್ದ ವೃದ್ದೆಯಾಕೆ. ಬಂದ ಗಿರಾಕಿಗಳಿಂದ ಹಣ ಪಡೆದು, ಚಿಲ್ಲರೆ ಹಿಂದಿರುಗಿಸುತ್ತಿದ್ದ ಆಕೆಯ ಕಣ್ಣುಗಳು ಯಾರನ್ನೋ ಹುಡುಕುತ್ತಿದ್ದಂತೆ ಕಾಣುತ್ತಿತ್ತು. ಜೊತೆಗೆ, ಏನನ್ನೋ ಕಳೆದುಕೊಂಡ ಭಾವ, ಮುಖದಲ್ಲಿ ಅಸಹಾಯಕತೆ, ಎದ್ದು ಕಾಣುತ್ತಿತ್ತು. ಅವಾಗಾವಾಗ ಯಾವುದೊ ಯೋಚನೆಯ ಚಿಪ್ಪಿನೊಳಗೆ ಜಾರಿಹೊಗುತ್ತಿದ್ದಳು.

ಕೆಲವೇ ವರ್ಷಗಳ ಹಿಂದಿನವರೆಗೂ ಅವಳ ಜೀವನ ಸುಂದರವಾಗಿಯೇ ಇತ್ತು. ಅವಳ ಗಂಡ ಯಾವುದೋ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಇದ್ದ ಒಬ್ಬನೇ ಮಗನಿಗೂ ತಂದೆ ತಾಯಿಯ ಬಗ್ಗೆ ಗೌರವವಿತ್ತು. ಮೂರು ಜನರ ಸುಖ ಸಂಸಾರ ಅವರದಾಗಿತ್ತು. ಆದರೆ ವಿಧಿ ಲಿಖಿತ ಹೇಗಿತ್ತೋ ಏನೋ? ಯಾವುದೊ ಅಪಘಾತದಲ್ಲಿ ಅವಳ ಪತಿ ಮರಣ ಹೊಂದಿದ. ಆಘಾತವನ್ನು ಇನ್ನೇನು ಮರೆಯಬೇಕು ಎನ್ನುವಸ್ಟರಲ್ಲಿ, ಬೆಳೆದು ನಿಂತ ಮಗನಿಂದ ಕೊಂಕು ಶುರುವಾಗಿತ್ತು. ಆತನ ಕಣ್ಣಿಗೆ ಶ್ರೀಮಂತರು ಮಾತ್ರ ಕಾಣುತ್ತಿದ್ದರು. ತನಗಾಗಿ ತನ್ನ ಹೆತ್ತವರು ಏನು ಮಾಡಿಲ್ಲ ಎಂಬ ಭಾವನೆ ಅವನದಾಗಿತ್ತು. ವಿಲಾಸೀ ಜೀವನದ ಕನಸು ಹೊತ್ತ ಅವನಿಗೆ ತಾಯಿಯ ಅವಶ್ಯಕತೆಯೇ ಇಲ್ಲವಾಗಿತ್ತು. ಆದರೆ ತಾಯಿಗೆ ತನ್ನ ಅವಶ್ಯಕತೆ ಇದೆ ಎಂಬುದು ಆತನ ಚತುರ ಮಾತಿಗೆ ಹೊಳೆಯಲೇ ಇಲ್ಲ. ಹೀಗೆ ಸುಖದ ಆಸೆ ಹೊತ್ತು ಬೇರೆ ಯಾವುದೋ ದೇಶ ಸೇರಿದ ಭಾರತೀಯ ಪ್ರತಿಭೆಯಿಂದ ಮೊದಮೊದಲು ಸ್ವಲ್ಪ ಹಣ ಮತ್ತು ಪತ್ರಗಳು ಬರುತ್ತಿದ್ದವು. ಆಮೇಲೆ ಅದು ಪತ್ರಕ್ಕೆ ಮಾತ್ರ ಸೀಮಿತವಾಗಿ, ನಂತರ ಅದು ಸಹ ನಿಂತು ಹೋಯಿತು. ಆಕೆಯ ಬಳಿಯಿದ್ದ ಅಲ್ಪ ಸ್ವಲ್ಪ ಹಣ ಮಗನ ವಿದ್ಯಾಭ್ಯಾಸಕ್ಕೆ ಖರ್ಚಾಗಿತ್ತು. ಉಳಿದ ಪುಡಿಗಾಸು ಸಹ ಖಾಲಿಯಾಗಿ ಜೀವನ ನಿರ್ವಹಣೆಯೇ ಕಸ್ಟವಾದಾಗ, ಕೇವಲ ಬದುಕುವ ಛಲ ಮತ್ತು ಸ್ವಾಭಿಮಾನಗಲೇ ಆಕೆಯ ಬಂಡವಾಳವಾಗಿತ್ತು. ಯಾರಯಾರದೋ ಕೈಕಾಲು ಹಿಡಿದು ಕೊನೆಗೆ ಬೇರೆ ದಾರಿಯೇ ಇಒಲ್ಲದೆ, ಬಿಕ್ಷೆ ಬೇಡಲು ಮನಸ್ಸಾಗದೆ, ತರಕಾರಿ ವ್ಯಾಪಾರವನ್ನು ಪ್ರಾರಂಭಿಸಿದ್ದಳು.

ಹೀಗೆ ದಿನಗಳು ಉರುಳುತ್ತಿರುವಾಗ ಅವಳಿಗೆ ಜೋತೆಯಾದವಳು ಅವಳದೇ ಪರಿಸ್ಥಿತಿಯಲ್ಲಿರುವ ಇನ್ನೊಬ್ಬಳು ಮುದುಕಿ. ತನ್ನ ಕೆಲಸ ಮುಗಿಸಿ ಸಂಜೆಯ ವೇಳೆಗೆ ತನ್ನ ಗುಡಿಸಲು ಸೇರಿದರೆ ಆವೇಳೆಗೆ ಇನ್ನೋಬ್ಬಾಕೆಯು ಬಂದಿರುತ್ತಿದ್ದಳು. ಇವಳ ಕಣ್ಣೀರಿಗೆ ಅವಳು ಹೆಗಲಾಗುತ್ತಿದ್ದಳು, ಅವಳ ಕಷ್ಟಕ್ಕೆ ಇವಳು ಆಸರೆಯಾಗುತ್ತಿದ್ದಳು. ತಮ್ಮನ್ನು ತ್ಯಜಿಸಿ ಹೋದ , ಇಳಿವಯಸ್ಸಿನಲ್ಲಿ ಆಸರೆಯಾಗಬೇಕಾದ ಮಕ್ಕಳ ಬಗ್ಗೆ ದಿನಗಟ್ಟಲೆ ಮಾತನಾಡುತ್ತಿದ್ದರು. ಯಾವತ್ತಾದರೂ ಅವರು ತಿರುಗಿ ಬಂದಾರು, ತಮ್ಮನ್ನು ಸಾಖಿಯಾರು ಎಂದು ಕನಸು ಕಾಣುತ್ತಿದ್ದರು. ಅವರ ಕ್ರೌರ್ಯಕ್ಕೆ ಹಲುಬುತ್ತಿದ್ದರು. ತಮ್ಮ ಹೆಣಕ್ಕೆ ಬೆಂಕಿ ಇದಲಾದರು ಬಂದರೆ ಸಾಕು, ತಮ್ಮ ಜೀವನ ಇಸ್ಟೇ ಎಂದು ವೈರಾಗ್ಯ ಬಂದವರಂತೆ ಕೊರಗುತ್ತಿದ್ದರು. ಕೊನೆಯ ಪಕ್ಷ ತನ್ನದೇ ಪರಿಸ್ಥಿತಿಯ ಇನ್ನೊಬ್ಬಳು ತನ್ನ ಜೋತೆಗಿದ್ದಾಳೆ ಎಂದು ಸಂತೋಷ ಪಡುತ್ತಿದ್ದರು. ತಮ್ಮ ಮಕ್ಕಳ ಬಾಲಕ್ರೀದೆಗಳನ್ನು ನೆನೆಸಿಕೊಂಡು ಮರುಗುತ್ತಿದ್ದರು. ಎಲ್ಲೇ ಇದ್ದರು ಅವರು ಮಾತ್ರ ಚೆನ್ನಾಗಿರಲಿ ಎಂದು ಹರಸುತ್ತಿದ್ದರು. ಹಾಗೆ ಸಾಗುತ್ತಿತ್ತು ಅವರ ಜೀವನ, ಕಾರ್ಪೊರೇಟ್ ಆಫೀಸ್ ಆಂತರಿಕ ರಾಜಕೀಯಗಳ ಅರಿವಿಲ್ಲದೆ, ಹೊರ ಜಗತ್ತಿನ ಜಂಜಾಟವಿಲ್ಲದೆ, ಯಾರ ಹಂಗು ಇಲ್ಲದೆ, ಆವತ್ತಿನ ಊಟವನ್ನು ಆವತ್ತು ದುಡಿದುಕೊಂಡು.

ಆವತ್ತು ಆಕೆಗೆ ಜ್ವರ ಬಂದಿತ್ತು. ಹಾಗೆಂದು ತರಕಾರಿ ವ್ಯಾಪಾರ ಮಾಡದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಹಾಗಾಗಿ ಎಂದಿಗಿಂತ ಸ್ವಲ್ಪ ಬೇಗನೆ ವ್ಯಾಪಾರ ಮುಗಿಸಿ ತನ್ನ ಬಿಡಾರಕ್ಕೆ ಹಿಂದಿರುಗಿದ್ದಳು. ಅವಳ ಜೊತೆಗಿರುವವಳು ಎಲ್ಲಿಂದಲೋ ಒಂದಿಷ್ಟು ಮಾತ್ರೆಗಳನ್ನು ತಂದಿದ್ದಳು. ಒಂದು ಕಡೆ ಸುಡುವ ಜ್ವರ, ಇನ್ನೊಂದು ಕಡೆ, ದೊಡ್ದದನ್ನೇ ಯೋಚಿಸುತ್ತಾ, ದೊಡ್ಡವರ ಸಹವಾಸ ಮಾಡಿ ತನ್ನನ್ನು ತೊರೆದು ಹೋದ ಮಹತ್ವಾಕಾಂಕ್ಷಿ ಮಗನ ಯೋಚನೆ. ಇಂತಹ ಸಮಯದಲ್ಲೇ ಅಲ್ಲವೇ ಮಕ್ಕಳ ನೆನೆಪು ಕಾಡುವುದು?? ಹಾಗೆ ಯೋಚಿಸುತ್ತಾ ಸೇರಿದಸ್ಟನ್ನು ತಿಂದು, ತನ್ನ ಎಂದಿನ ಹರುಕು ಗೋಣೀ ಚೀಲದ ಮೇಲೆ ಮಲಗಿದ ಆಕೆಗೆ ಮಗನ ಕನಸು. ಅವಳ ಮಗ ಅವಳಿಗೆ ಗುರುತು ಸಿಗದಸ್ಟು ಬದಲಾಗಿದ್ದ. ಹಣೆಯ ತುದಿಯವರೆಗಿದ್ದ ದಪ್ಪ ಕೂದಲು, ಹಿಂದೆ ಸರಿದಿತ್ತು. ಕಣ್ಣಿಗೆ ಕನ್ನಡಕ ಬಂದಿದ್ದು. ಮೈ ತುಂಬ ಸಿರಿತನವನ್ನೇ ತುಂಬಿಕೊಂಡಿದ್ದ ಆತ ದುಬಾರಿ ಕಾರಿನಿಂದ ಇಳಿದಿದ್ದ. ಬಡ ತಾಯಿಗೆ, ಮಗ ಸೊರಗಿದಂತೆ ಕಂಡಿತ್ತು. ತನ್ನ ಎದುರು ತ್ರಿವಿಕ್ರಮನಂತೆ ನಿಂತಿದ್ದ ಮಗನ ಅಮ್ಮ ಎಂಬ ಕರೆಗೆ, ತನ್ನೆಲ್ಲ ಕಷ್ಟವನ್ನು ಮರೆತು, ಕಂದಾ ಎಂದಳು. ಎಸ್ಟಾದರು ತಾಯಿ ಹೃದಯ ತಾನೆ.. ಆತನು ಎಸ್ಟೋ ವರ್ಷಗಳಿಂದ ಕಾಣದ ತಾಯಿಯ ಬಳಿ ಪ್ರೀತಿಯಿಂದಲೇ ಮಾತನಾಡುತ್ತಿದ್ದ. ಆಕೆಗೋ ಸಾವಿರ ಪ್ರಶ್ನೆ ಗಳನ್ನು ಕೇಳುವ ತವಕ. ಇನ್ನೇನು ಒಳಗಿನ ಭಾವನೆ ಮಾತಾಗಿ ಹೊರಬರಬೇಕು ಎಂಬಸ್ಟರಲ್ಲಿ, ಅವಳ ಕನಸು ಮುಗಿದು ಹೋಗಿತ್ತು. ಮಲಗಿದ್ದು ಅದೇ ಹಳೆಯ ಗೋಣಿ ಚೀಲದ ಹಾಸಿಗೆಯ ಮೇಲೆ. ಜ್ವರ ಪೂರ್ತಿ ಬಿತ್ತಿರಲಿಲ್ಲವಾದರು, ಬದಿಕಿನ ಬಂಡಿ ಸಾಗಬೇಕಾದರೆ ಕೆಲಸ ಅನಿವಾರ್ಯವಾಗಿತ್ತು. ಮತ್ತೆ ಎಂದಿನಂತೆ ತನ್ನ ಮಾಮೂಲಿ ಜಾಗಕ್ಕೆ ಬಂದು ಕುಳಿತುಕೊಂಡಳು. ಗಿರಾಕಿಗಳನ್ನು ಅರಸುತ್ತ, ತರಕಕರಿ, ಹಸ್ಸಿ ಹಸಿ ತರಕಾರಿ ಎಂದು ಕೂಗುತ್ತಾ......... ಯಾವುದೋ ಯುವಕ ರಸ್ತೆಯಲ್ಲಿ ಹಾಡು ಹೋಗುತ್ತಿದ್ದ.. ಈಕೆ ಕಳೆದು ಹೋದ ತನ್ನ ಮಗನನ್ನು ನೆನೆಸಿಕೊಂಡಳು....

,,,,,,,,,,,,,,,,,,,,,,,,,,,,,,,,,,,,,,,,,,,,,,,,,

6 comments:

Anonymous said...

super eddu dosta adre poorna elle anista eddu nange

anjali said...

hmmmmmmm olle iddu,,,,nice n keep it up

Unknown said...

hmm, chennagide kathe gurooo

Unknown said...

Hey kathe chenagiddu guroooo... keep it up

Satish Hegde said...

sakkattagidda...........

vivek said...

bartha barta Arun bhatru kavigalgta edru nanag anstu sadyadlle gruhastashrama serta edru heli good all the best