Wednesday, April 22, 2009

ಬಂದಿತೊಂದು ಮಳೆ , ಹಳೆಯ ನೆನಪುಗಳನ್ನು ಕೆದಕುತ್ತಾ.............

ಭಹುಶ ಬೆಂಗಳೂರಿನ ನನ್ನ ಎರಡು ಮುಕ್ಕಾಲು ವರ್ಷದ ಯಾಂತ್ರಿಕ ಜೀವನದಲ್ಲಿ ಮಳೆಯ ಅನುಭವವೇ ಆಗಿಲ್ಲವೇನೋ ಅನಿಸುತ್ತದೆ. ಆಕಾಶವಾಣಿಯ ಹವಾಮಾನ ವರದಿಯಲ್ಲಿ ಪ್ರತಿದಿನ ಒಂದೇ ರಾಗ, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ತುಂತುರು ಮಳೆಯಾಗುವ ಸಂಭವವಿದೆ ಎಂದು. ವರ್ಷದ ಎಲ್ಲ ಕಾಲದಲ್ಲೂ, ಇದೆ ವರದಿ ಬೆಂಗಳೂರಿನ ಹವಾಮಾನದ ಬಗ್ಗೆ ಬರುತ್ತದೆ. ಆದರೆ ಇಲ್ಲಿಯೇ ಜೀವನ ನಡೆಸುವ ನಮ್ಮಂಥವರಿಗೆ ಅದರ ಪರಿವೆಯೇ ಇರುವುದಿಲ್ಲ. ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕೆ ಮೊದಲೇ ಮನೆ ಬಿಟ್ಟು ಆಫೀಸ್ ಗೆ ಹೋಗುವ ಕ್ಯಾಬ್ ಹತ್ತಿ ಕುಳಿತು ಬಿಟ್ಟರೆ, ಎರಡು ಕಿವಿಗಳಿಗೆ ಮೊಬೈಲ್ Head phone ಬಂದು ಬಿಡುತ್ತದೆ. ಎಲ್ಲಿಂದ ಕಾಣಬೇಕು ಪರಿಸರದ ಸೌಂದರ್ಯ??? ಟ್ರಾಫಿಕ್ ಸಿಗ್ನಲ್ ಗಳಲ್ಲಿ ಕಿಟಕಿಯ Glass ತೆಗೆದು ಹೊರಗೆ ಇಣುಕಿದರೆ, pulser ಗಳಲ್ಲಿ ತಮ್ಮ ಪ್ರಿಯತಮನನ್ನು ತಬ್ಬಿ ಕುಳಿತ ಹುಡುಗಿಯರೇ ಕಾಣುತ್ತಾರೆ. ಇನ್ನು ಆಫೀಸ್ ತಲುಪಿ ಕಂಪ್ಯೂಟರಿನ ಮುಂದೆ ಕಣ್ಣು ಕಿರಿದು ಮಾಡಿ ಕುಳಿತುಬಿಟ್ಟರೆ ಹೊರಗಡೆ ಮಳೆಯೇನು ನೆರೆಯೇ ಬಂದರು ಗಮನಿಸುವ ವ್ಯವಧಾನ ಇರುವುದಿಲ್ಲ. ಎಸ್ಟೋ ಜನ ನೈಸರ್ಗಿಕ ಬೆಳಕನ್ನೇ ನೋಡದೆ ತಿಂಗಳುಗಟ್ಟಲೆ ಕಳೆದು ಬಿಡುತ್ತಾರೇನೋ..

ಇಂತಹ ಪರಿಸ್ಥಿತಿಯಲ್ಲಿ ಮೊನ್ನೆಯ ಸೋನೆ ಮಳೆ , ನನ್ನ ಮನದಾಳದ ನೆನೆಪುಗಳನ್ನೆಲ್ಲ ಹೊರಹಾಕಿಸಿತು ಹೀಗಿತ್ತು ಅಲ್ಲಿಯ ಜೀವನ, ಟೆನ್ಶನ್ ಅವಕಾಶವೇ ಇರಲಿಲ್ಲ.. ನನ್ನ ೨೨ ವರ್ಷಗಳ ಹಳ್ಳಿಯ ಜೀವನದಲ್ಲಿ ಪ್ರತಿ ಮಳೆಗಾಲವನ್ನು ತುಂಬ ಶೃದ್ದೆಯಿಂದ ಅನುಭವಿಸಿದ್ದೇನೆ. ಮಳೆಯಲ್ಲಿ ನೆನೆದು ಹಚ್ಚ ಹಸಿರಿನಿಂದ ಕಂಗೊಳಿಸುವ ಹಸಿರನ್ನೇ ಅಚ್ಚರಿಯಿಂದ, ಅಸ್ಟೇ ಸಂತೋಷದಿಂದ ನೋಡಿದ್ದೇನೆ. ಮನೆಯ ಸುತ್ತಲು ಇರುವ ಕಾಡು ನನ್ನ ಪಾಲಿಗೆ ಅವಿಸ್ಮರನೀಯವಾಗಿತ್ತು. ತುಂಬಿ ತುಳುಕುತ್ತಿದ್ದ ಕೆರೆಗಳು, ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿವೆ. ಮಲೆನಾಡಿನ ಸೌಂದರ್ಯಕ್ಕೆ ಇಂಬು ಕೊಡುವ ಬೆಟ್ಟ ಗುಡ್ಡಗಳು ನಿತ್ಯ ನೂತನ.

ಎಲ್ಲಿದೆ ನಗರದ ಜೀವನದಲ್ಲಿ ಎಲ್ಲ ಸೌಂದರ್ಯ??? ಕೆರೆಗಳನ್ನು ತುಂಬಿ ಸೈಟ್ ಗಳನ್ನಾಗಿ ಮಾರಿದ್ದಾರೆ. ನದಿಯಲ್ಲಿನ ಮರಳನ್ನು ತೆಗೆದು ನಗರವನ್ನು ಕಾಂಕ್ರೀಟ್ ಕಾಡನ್ನಾಗಿಸಿದ್ದರೆ. ಇದೆಲ್ಲವೂ ಒಂದು ಕಡೆಯಾದರೆ ಹಳ್ಳಿಯ ಆಹ್ಲಾದಕರ ಮತ್ತು ಆತ್ಮೀಯ ವಾತಾವರಣ. ತೋಟದಲ್ಲಿರುವ ಪ್ರತಿ ಗಿಡಮರಗಳು ನಮ್ಮೊಡನೆ ಹೊಂದಿರುವ ಆತ್ಮೀಯ ಸಂಭಂಧ, ನಮ್ಮನ್ನು ಹಳ್ಳಿಯತ್ತ ಸೆಳೆಯುತ್ತದೆ. ಸಾವಿರಾರು ಜನರ ನಡುವೆ ಇದ್ದು ಏಕಾಂಗಿ ಎನಿಸುವ ಇಂದಿನ ಸಮಾಜದಲ್ಲಿ, ಏಕಾಂಗಿಯಾಗಿದ್ದು ಸಾವಿರಾರು ಜನರ ನಡುವೆ ಇರುವ ಅನುಭವ ಆಗುವುದು ಹಳ್ಳಿಯಲ್ಲಿ ಮಾತ್ರ. ಮೊದಲ ಮಳೆಯ ಮಣ್ಣಿನ ಪರಿಮಳ, ತುಂಬಿದ ಕೆರೆಗಳು, ಬೇಸಿಗೆಯ ವಾತಾವರಣದಿಂದ ಮಳೆಗಾಲಕ್ಕೆ ಪರಿವರ್ತನೆ ಗೊಳ್ಳುವ ಪರಿ, ನಿಜಕ್ಕೂ ಮನ ಮೋಹಕ. ಮಳೆ ಹಿಡಿದ ಹಾಗೆ, ಪ್ರತಿದಿನವೂ ಹೆಚ್ಚಾಗುವ ಬಾವಿಯ ನೀರನ್ನು ನೋಡುವುದೇ ನಮಗೆ ಖುಷಿಯ ವಿಷಯವಾಗಿತ್ತು. ಹಾಗೆ ಬಾವಿ ತುಂಬುತ್ತ ತುಂಬುತ್ತ ಒಂದು ದಿನ ಕೈಗೆ ಸಿಗುವ ಮಟ್ಟಕ್ಕೆ ಬಂದಾಗ ಆಗುವ ಸಂಭ್ರಮ ನಿಜಕ್ಕೂ ವರ್ಣನಾತೀತ.

ಮಳೆಯ ಮತ್ತು ಗುಡುಗು ಸಿಡಿಲಿನ ಆರ್ಭಟದಲ್ಲಿ ಒಂದುಕಡೆ ಸಣ್ಣ ಭಯ, ಇನ್ನೊಂದು ಕಡೆ ಬೆಂಕಿಯ ಎದುರು ಬೆಚ್ಚಗೆ ಕುಳಿತು, ಮಳೆಗಾಳಕ್ಕೆಂದೇ ಸಿದ್ದಪದಿಸಿಸ ತಿಂಡಿಗಳನ್ನು ತಿನ್ನುವ ಸುಖಾನುಭವ , .೩೦, .೦೦ ಕ್ಕೆಲ್ಲ ಊಟ ಮುಗಿಸಿ ಮಳೆಯ ಶಬ್ಧವನ್ನೇ ಜೋಗುಳದಂತೆ ಕೇಳುತ್ತಾ ಮಲಗುವ ಆಹ್ಲಾದ, ತೋಟದ ಒದ್ದು ಒಡೆದುಹೊಗಬಹುದೆಂಬ ಹುಸಿ ಆತಂಕ , ಎಲ್ಲ ಭಾವನೆಗಳ ಮೂಸೆ ಎಲ್ಲಿ ಸಿಕ್ಕಿತು????? ಎಲ್ಲ ಕಾಲದಲ್ಲೂ ಎಲ್ಲ ಕಾಲದ ಅನುಭವವನ್ನು ಪಡೆಯಬಹುದಾದ ಬೆಂಗಳೂರಿನಲ್ಲಿ ಬಿದ್ದ ಮೊನ್ನೆಯ ಅಕಾಲಿಕ ಮಳೆ ನನ್ನ ಎಲ್ಲ ನೆನಪುಗಳನ್ನು ಹೊರ ಹಾಕಿಸಿತು. ಇನ್ನೂ ಎರಡು ತಿಂಗಳಿದೆ ಮಳೆಗಾಲಕ್ಕೆ. ಭಾರಿ ಮಳೆಗಾಲದಲ್ಲಿ ಎರಡು ದಿನವನ್ನಾದರೂ ಕಳೆದು ಬರಬೇಕೆಂದು ನಿರ್ಧರಿಸಿಬಿಟ್ಟಿದ್ದೇನೆ.. ... ನೀವು ಬನ್ನಿ.. ಮಳೆಯ ಸವಿಯನ್ನು ಅನುಭವಿಸೋಣ.. .


>>>>>>>>>>>>>>>>>><<<<<<<<<<<<<<<<<<<<<<<

4 comments:

Unknown said...

hey, idu nodi, naane 1 sarti oorge hog bandangaaytu boss....

Unknown said...

nau barteeni, dina hogana boss...........

Unknown said...

Nice boss........Really its good

Sandhya Bhat said...

nice one arun...nanna baraha bhanatadalli inthahude barahagala ondu putta mootegalive...aa putagalannomme teredu nodide...really thanks..