Saturday, May 9, 2009

ಇನ್ನೂ ನೋಡದ ನಿಮ್ಮ ಬಗ್ಗೆ ಚೂರು ಪಾರು......

ವೀಣೆಯ ತಂತಿಗಳನ್ನು ಮೀಟಿದಾಗ ಅದು ಸ್ವರವಾಗಿ, ಲಯವಾಗಿ, ಸುಶ್ರಾವ್ಯ ರಾಗವಾಗಿ ಪರಿವರ್ತನೆಗೊಂಡು ಸುಮಧುರ ನಾದ ಹೊರಹೊಮ್ಮುವಂತೆ ನಿಮ್ಮ ಧ್ವನಿ , ಅಲೆ ಅಲೆಯಾಗಿ, ಜಲಧಾರೆಯಂತೆ CEll ಮೂಲಕ ನನ್ನ ಕಿವಿಗಳಿಗೆ ತಲುಪುತ್ತಿದ್ದರೆ, ನಾನು ಮಾತು ಬಾರದವನಂತೆ ನಿಮ್ಮ ಮಾತಿನ ಮೋಡಿಗೆ ಸಿಲುಕಿ ಹೋಗಿದ್ದೆ. ನಿಮ್ಮ ಮಾತಿನಲ್ಲಿ ಪ್ರಭುದ್ದತೆ ಎದ್ದು ಕಾಣುತ್ತಿತ್ತು. ತುಂಟತನ ಇಣುಕುತ್ತಿತ್ತು. ನೀವು ಸರಾಗವಾಗಿ, ನಿರರ್ಗಳವಾಗಿ ಮಾತನಾಡುತ್ತಿದ್ದಾರೆ, ನಿಮ್ಮ ಕರೆ ಬರಬಹುದೆಂಬ ಯಾವ ಮನ್ಸೂಚನೆಯೂ ಇಲ್ಲದ ನನಗೆ ಮೊದಲ ಬಾರಿ ನಿಮ್ಮ ಧ್ವನಿಯನ್ನು ಕೇಳಿದ ಪುಳಕ. ಆಮೇಲೆ ಅದನ್ನು ಹೇಳಿಯೂ ಬಿಟ್ಟಿದ್ದೆ. Your Voice is so nice ಎಂದು. ಆದರೆ ಏನು ಮಾಡೋಣ??? ಅಸ್ತಸ್ಟು ಹೊತ್ತಿಗೆ ಅದದೇ ಕೆಲಸಗಳನ್ನು ಮಾಡಬೇಕೆಂದು ನಮಗೆ ನಾವೇ ಹಾಕಿಕೊಂಡ ಕಟ್ಟು ಪಾಡಿನ ಯಾಂತ್ರಿಕ ಜೀವನದಲ್ಲಿ, ಸ್ನೇಹಿತರ ಜೊತೆ ಮಾತನಾಡಲು ಕೂಡ ಮುಹೂರ್ತ ನೋಡುವ ಪರಿಸ್ಥಿತಿ ಬಂದು ಬಿಟ್ಟಿದೆ.

ಪತ್ರವನ್ನು ನಿಮಗೆ ನೇರವಾಗಿಯೇ ಕೊಡಬಹುದಿತ್ತು. ಈಗೆಲ್ಲಿಯ ಪತ್ರ??? ಎಲ್ಲವು e MAil ನಲ್ಲೆ ಮುಗಿದು ಹೋಗುತ್ತದಲ್ಲ. ಅದಕ್ಕಿಂತಲೂ ಬ್ಲಾಗ್ ಹೆಚ್ಚು ಸೂಕ್ತ ಎಂದು ಇಲ್ಲಿಯೇ ನನ್ನ ಸ್ನೇಹದ ಹರಿವನ್ನು ಹರಿಸುತ್ತಿದ್ದೇನೆ. ನಮ್ಮ ಪರಿಚಯವೂ ಇಲ್ಲಿಯೇ ತಾನೆ?? Google talk ಇಲ್ಲದಿದ್ದರೆ ನಾನ್ಯಾರೋ, ನೀವ್ಯಾರೋ. ಸ್ನೇಹವೊಂದು ಕವನ, ನೂರಾರು ಭಾವನೆಗಳ ಮಿಶ್ರಣ, ಇನ್ನೂ ಏನೇನೋ ಹೇಳುತ್ತಾರೆ. ಬಿಡಿ, ನಮ್ಮ ಪರಿಚಯ ಎಲ್ಲಿ, ಹೇಗಾಯಿತು ಎನ್ನುವುದಕ್ಕಿಂತ ನಮಗೆ ಸ್ನೇಹವೆಂಬ ಭಾವ ಮುಖ್ಯ. ಅದೆಸ್ತು ಗಟ್ಟಿ ಎನ್ನುವುದು ಮುಖ್ಯ.

ಒಂದು ವಿಷಯ ಮಾತ್ರ ನನಗಿನ್ನೂ ನಗು ಬರಿಸುತ್ತಿದೆ. ನಿಮಗೆ ನನ್ನ ಹೆಸರೇ ಗೊತ್ತಿರಲಿಲ್ಲವಲ್ಲ. ಆದರು ನಮ್ಮ ಸ್ನೇಹಕ್ಕೆ, ಮಧುರ ಮಾತಿಗೆ ಅದರಿಂದ ಯಾವ ತೊಂದರೆಯೂ ಅಗೆ ಇಲ್ಲೇ. ನಿನ್ನ ಕಂಗಳ ಕೊಳದಿ ಬೆಳದಿಂಗಲಿಳಿದಂತೆ ಎಂಬ ಹೆಸರಿನ ನನ್ನ profile ನಲ್ಲಿ ನನ್ನ ಹೆಸರೇ ಇಲ್ಲ ಎಂಬುದು ನನಗೆ ಹೊಳೆದಿದ್ದೇ ಆವಾಗ. ಅದೆಸ್ಟು ಚೆನ್ನಾಗಿ ಮಾತನಾಡುತ್ತಿದ್ದೆವು ನಾವು??? ಪ್ರತಿ ಮಾತಲ್ಲೂ ಕಾಲೆಳೆಯುವುದು, ಕೀಟಲೆ ನಡೆದೇ ಇತ್ತು. ಹಾಗೆ ಮಾಡುತ್ತಲೇ ನಮ್ಮ ನಮ್ಮ ಪರಿಚಯವನ್ನೂ ಮಾಡಿಕೊಂಡೆವು. ಅಲ್ಲಿಂದ ನಮ್ಮ ಮಾತು ಪುಸ್ತಕಗಳತ್ತ ತಿರುಗಿತ್ತು. ನಾವು ಓದಿದ ಪುಸ್ತಕಗಳ ಬಗ್ಗೆ ಚರ್ಚೆ. ಒಟ್ಟಿನಲ್ಲಿ ಅದೊಂದು ಮುಗಿಯದ ಮಾತುಕತೆ. ಕೆಲವೇ ಕೆಲವು ದಿನಗಳಲ್ಲಿ ಜನ್ಮ ಜನ್ಮಾಂತರದ ಗೆಳೆಯರಾಗಿಬಿತ್ತೆವಲ್ಲ ನಾವು...

ಸ್ನೇಹದ ಬಗ್ಗೆ, ಅದರ ವಿಶಾಲತೆಯ ಬಗ್ಗೆ, ಅದರ ಆಳ ಅಗಲಗಳ ಬಗ್ಗೆ , ಸ್ನೇಹದ ಪ್ರಾಮುಖ್ಯತೆಯ ಬಗ್ಗೆ, ಅದೆಸ್ಟೋ SMS ಗಳು ಬರುತ್ತವೆ, ನೂರಾರು ಲೇಖನಗಳು ಬರುತ್ತವೆ. ಅದೆಲವನ್ನು ನಾನು ಮತ್ತೆ ಮತ್ತೆ ಹೇಳುವುದಿಲ್ಲ. ಯಾಕೆಂದರೆ ಅದೆಲ್ಲ ನನಗೂ ಗೊತ್ತು, ನಿಮಗೂ ಗೊತ್ತು. ಕೇವಲ ನಮ್ಮ ಸ್ನೇಹಕ್ಕಾಗಿ ನಾನು ಬರೆಯುತ್ತಿರುವ ಪತ್ರ ಕೂಡ ಅದೆಲ್ಲವನ್ನೂ ಹೇಳಬಹುದು. ಆದರೆ ಎಲ್ಲ ಸಂಭಂದಗಳಲ್ಲೂ, ಸ್ನೇಹ ಸಂಭಂದ ಹೆಚ್ಚು ಗಟ್ಟಿ ಮತ್ತು ಪವಿತ್ರ ಎಂದು ಮಾತ್ರ ಹೇಳಬಲ್ಲೆ. ಯಾಕೆಂದರೆ ಏನನ್ನು ಬೇಕಾದರೂ ಮಾಡದೆ ತಿಂಗಳುಗಟ್ಟಲೆ ಕಳೆದು ಬಿಡಬಹುದು. ಆದರೆ ಸ್ನೇಹಿತರನ್ನು ನೋಡದೇ , ಅವರ ಜೊತೆ ಮಾತನಾಡದೇ, ಇದ್ದರೆ ಮನಸ್ಸು, ಬೆಕ್ಕು ಕುಡಿದ ಗಂಜಿಯ ಮಾಡಿಕೆಯಾಗಿಬಿದುತ್ತದೆ.

ಇಸ್ಟೆಲ್ಲಾ ಹೇಳಿದ ಮೇಲೆ ನನಗೆ ಮತ್ತೆ ಮತ್ತೆ ನೆನಪಾಗುವುದು ನಾನಿನ್ನು ನಿಮ್ಮನ್ನು ನೋಡೇ ಇಲ್ಲವಲ್ಲ ಎಂದು. ಮಾತನಾಡಲು ಮುಹೂರ್ತ ಹುಡುಕಿದಂತೆ ನಿಮ್ಮನ್ನು ನೋಡಲು ಕೂಡ ಅದೆಸ್ಟು ದಿನ ಕಾಯಬೇಕೋ??? ಯಾವಾಗ ನಮ್ಮ ನಿಮ್ಮ ಬೇಟಿ??? ಆದರೆ ನನಗೆ ಒಂದು ಸಣ್ಣ ಭಯ ಕಾಡುತ್ತುದೆ. ನಾವು ಒಬ್ಬರನ್ನೋಬರು ಬೇಟಿ ಮಾಡಿದರೆ ನಮ್ಮ ಸ್ನೇಹದಲ್ಲಿ ಮೊದಲಿನ ಉತ್ಸಾಹ, ಆಸಕ್ತಿ ಕಡಿಮೆಯಾಗಳುಬಹುದು. ದೂರದ ಬೆಟ್ಟ ಕಣ್ಣಿಗೆ ತಂಪಂತೆ. ಬರೀ ಮಾತು ಕೇಳಿ, ಪೋಟೋ ನೋಡಿ, ನೀವು ಹೇಗಿರಬೇಕೆಂದು ನಾನು, ನಾನು ಇನ್ಹೇಗೋ ಇರಬಹುದೆಂದು ನೀವು, ನಾವಿರುವ ನೈಜತೆಗಿಂತಲೂ ಹೆಚ್ಚಿನ ಬ್ರಮೆಯನ್ನು, ಕಲ್ಪನೆಯನ್ನು, ಕಟ್ಟಿಕೊಂಡಿರುತ್ತೇವೆ. ಆದರೆ, ನೈಜತೆಗು ಕಲ್ಪನೆಗೂ ಅಜಗಜಾಂತರ ವ್ಯತ್ಯಾ ಇರುತ್ತದಲ್ಲ, ಯಾವುದೋ ಒಂದು ಘಟನೆಗಾಗಿ ಕಾಯುವಿಕೆಯಲ್ಲಿನ ಖುಷಿ, ಘಟನೆಯ ನಂತರ ಇರುವುದಿಲ್ಲವಂತೆ. ಹೀಗಾಗಿ ಉತ್ಸಾಹ ದಿಂದ ಪ್ರಾರಂಭವಾದ ನಮ್ಮ ಬೇಟಿ, ನಿರುತ್ಸಾಹದಲ್ಲಿ ಕೊನೆಯಾಗಲೂಬಹುದು. ನಿಧಾನವಾಗಿ ಸಿಕ್ಕೋಣ ಬಿಡಿ. ಅದ್ಯಾವುದು ನಮ್ಮ ಸ್ನೇಹಕ್ಕೆ ಅದ್ದಿಯಾಗುವುದಿಲ್ಲ ಅಂದುಕೊಳ್ಳುತ್ತೇನೆ.

ಪತ್ರ ಬರೆಯಲು ಕುಳಿತಾಗ, ಏನು ಬೇರೆಯಲಿ, ಹೇಗೆ ಪ್ರಾರಂಭಿಸಲಿ ಎಂದೇ ತೋಚದಾಗಿತ್ತು. ಆದರೆ ಬರೆಯಲು ತೊಡಗಿದ್ದೆ ತಡ, ನನ್ನ ಪೆನ್ನಿಗೆ ಬ್ರೇಕೇ ಇಲ್ಲದೆ ಇಲ್ಲಿಯವರೆಗೆ ಬರೆಸಿಬಿಟ್ಟಿತು. ಏನೇ ಇರಲಿ, ನಿಮ್ಮ ಸ್ನೇಹಕ್ಕೆ, ನೀವು ತೋರಿಸುವ ಪ್ರೀತಿಗೆ, ನಿಮ್ಮ ಕಳಕಳಿಗೆ, ನಿಮ್ಮ ಅಭಿಮಾನಕ್ಕೆ, ನೀವು ತುಂಬುವ ಉತ್ಸಾಹಕ್ಕೆ, ನಿಮ್ಮ ಬೆಲೆಬಾಳುವ ಸಲಹೆ ಸೂಚನೆಗಳಿಗೆ ನಾನು ಕೃತಜ್ಞನಾಗಿದ್ದೇನೆ. ನಮ್ಮ ಸ್ನೇಹ ನಿರಂತರವಾಗಿರಲಿ. ಹೇಳುವುದು ಇನ್ನೂ ತುಂಬಾ ಇದೆ. ಜೊತೆ ಜೊತೆಗೆ ಕೇಳುವುದು ಕೂಡ. ಇನ್ಯಾವತ್ತಾದರೂ ಮಾತನಾಡೋಣ. ಜೀವನದ ಸಂಪೂರ್ಣ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತಾ,

ನಿಮ್ಮ ಪ್ರೀತಿಯ ಸ್ನೇಹಿತ..

9 comments:

Subrahmanya Hegde said...

entadale edu kavi agbutide....superb"""??{{"??"

Unknown said...

Super gurooooo

Unknown said...

Nice gurooo..........

Unknown said...

Super Boss........ yarige bardiddu adu??? Any way keep it up

ರಂಜಿತಾ said...

awesome............

Arun said...

Thanks All my dear friend.... for ur valuable comments

Unknown said...

namma bagge ishtondu heliddakke...dhanyavaadagalondige....

Anonymous said...

ಇನ್ನೂ ನೋಡದ ನಿಮ್ಮ ಬಗ್ಗೆ ನನ್ನ ಅಭಿಪ್ರಾಯ, ನಿಮ್ಮ ಬರವಣಿಗೆ ಸ್ನೇಹದ ಸರಳತೆ ಇದೆ, ಅದು ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ, ನಿಮ್ಮ ಸ್ನೇಹದ ಪಯಣ ಹೀಗೆ ಸಾಗಲಿ

Unknown said...

super & nice guroooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooooo..............