Saturday, May 16, 2009

ಹದಿಹರೆಯದ ಪ್ರಾಣಾಳಿಕೆಗಳು...

ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಹೊರಡಿಸುವ ಪ್ರಾಣಾಳಿಕೆಗಳಂತೆ, ಹದಿಹರೆಯದವರು ಕೂಡ ತಮ್ಮ ಮುಂದಿನ ಜೀವನದ ಬಗ್ಗೆ ತಮ್ಮದೇ ಆದ ಕೆಲವು ಪ್ರಣಾಳಿಕೆಗಳನ್ನು ಹಾಕಿಕೊಳ್ಳುತ್ತಾರೆ. ಏರುತ್ತಿರುವ ವಯಸ್ಸಿನಲ್ಲಿ, ಬಿಸಿರಕ್ತ ಹರಿಯುತ್ತಿರುವಾಗ, ಬಾಲ್ಯದಿಂದ ಪ್ರೌಧಾವಸ್ತೆಗೆ ಜಾರುತ್ತಿರುವಾಗ, ಏನು ಬೇಕಾದರೂ ಸಾಧಿಸಬಲ್ಲೆ ಎಂಬ ದರ್ಸ್ತ್ಯವಿದ್ದಾಗ, ಪ್ರನಾಳಿಕೆಗಲಿಗೆನು ಕೊರತೆ?? ಅದೇನು ಕೇವಲ ರಾಜಕೀಯ ಪಕ್ಷಗಳ ಸ್ವತ್ತೆ?? ಜೀವನದಲ್ಲಿ ಪ್ರನಾಳಿಕೆಗಳು ಇರಬೇಕು ಕೂಡ. ಹೀಗೆ ತಮ್ಮದೇ ಆದ ಸಿದ್ದಾಂತಗಳ ಅಡಿಯಲ್ಲಿ, ಅವರದೇ ಆದ ಮೌಲ್ಯಗಳ ಕೆಳಗೆ, ತಮ್ಮ ಮುಂದಿನ ಜೀವನ ಹೀಗೆ ಇರಬೇಕು ಎಂದು ಹಾಕಿಕೊಂಡ ಪ್ರಣಾಳಿಕೆಗಳಲ್ಲಿ ಎಷ್ಟು ಈಡೇರುತ್ತವೆ ಎನ್ನುವುದಕ್ಕಿಂತ ಅವು ಹೇಗಿವೆ ಅನ್ನುವುದು ಮುಖ್ಯ.

ಈಬಾರಿ ಚೆನ್ನಾಗಿ ಓದಿ, ಪರೀಕ್ಷೆ ಮುಗಿಸಿ ಬಿಟ್ಟರೆ ತನ್ನ ವಿದ್ಯಾರ್ಥಿ ಜೀವನ ಮುಗಿದು ಹೋಗುತ್ತದೆ, ಯಾವುದಾದರೂ ಒಳ್ಳೆಯ ಬಹುರಾಸ್ಟ್ರೀಯ ಕಂಪನಿಯಲ್ಲಿ, ಉದ್ಯೋಗ ಪ್ರಾರಂಬಿಸಿ, ಕಂಪನಿಯ ಉನ್ನತಿಗೆ ತಾನು ಕಾರಣನಾಗಬೇಕು, ತನ್ಮೂಲಕ, ತನ್ನ ಯಾರೋ ಬಂಧುಗಳ ಹಾಗೆ, ಪರಿಚಯದವರ ಹಾಗೆ, ತಾನು ಒಳ್ಳೆಯ ಹೆಸರು ಗಳಿಸಬೇಕು ಎಂದುಕೊಂಡಿರುತ್ತಾನೆ. ಆದರೆ ಕೆಲದಕ್ಕೆ ಸೇರಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು, ಕೆಲಸ ಅಂಥ ಕಲಿಯಲಿಕ್ಕೇ 6 ತಿಂಗಳು ಹಿಡಿದು ಹೋಗುತ್ತದೆ. ನಂತರ ಎಲ್ಲಿಯ ಕೆಲಸ, Chat ಮಾಡಲಿಕ್ಕೆ ಸಮಯ ಸಿಕ್ಕುವುದಿಲ್ಲ. ಇವ್ರು ಕೊಡೊ ಸಂಬಳಕ್ಕೆ ನಾನ್ ಆಗಿರೋದಕ್ಕೆ ಕೆಲಸ ಮಾಡ್ತಾ ಇದ್ದೀನಿ, ಬೇರೆಯವರಾಗಿದ್ರೆ ಯಾವಾಗ್ಲೋ ಬಿಟ್ಹೊಗ್ತಿದ್ರು ಅಂತ ಗೊನ್ಗೋಕೆ ಶುರು ಮಾಡ್ತಾನೆ. ನಾನು ಕೆಲಸ ಬಿಟ್ರೆ ನನ್ value ಗೊತ್ತಾಗತ್ತೆ ಅಂತಾನೆ. ಕೆಲಸ ಬಿಟ್ಮೇಲೆ ಇವ್ನ ಕಥೆ ಏನಾಗತ್ತೆ ಅಂಥ ಯೋಚನೆ ನೆ ಮಾಡಿರಲ್ಲ. ಹೀಗೆ ಓದಬೇಕಾದರೆ ಹಾಕ್ಕೊಂಡಿರೋ ಒಂದು ಪ್ರನಾಳಿಕೆ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ ಆಗಿರತ್ತೆ.

ಮನೆಯ ತೊಂದರೆ ತಾಪತ್ರಯಗಳನ್ನು ನೋಡುತ್ತಾ ಬೆಳೆದ , ಬಡತನದಲ್ಲೇ ಓದು ಮುಗಿಸಿದ ಹುಡುಗ, ತನಗೆ ಕೆಲಸ ಅಂಥ ಒಂದು ಸಿಕ್ಕಿಬಿಟ್ಟರೆ , ತನ್ನ ಅಪ್ಪ ಅಮ್ಮನ್ನ ತಾನೇ ನೋಡಿಕೊಳ್ಳಬೇಕು, ಪ್ರತೀ ತಿಂಗಳು ಅವರಿಗೆ ಅಂಥ ಒಂದಸ್ಟು ಹಣ ಕಳಿಸುತ್ತಾ ಇರಬೇಕು, ಅವರ ಕೊನೆಗಾಲದಲ್ಲದ್ರೂ ಅವ್ರು ಚೆನಗಿರ್ಲಿ, ಇಷ್ಟು ದಿನ ಅಂತು ಪಾಪ ಕಷ್ಟ ಪಟ್ರು, ಅಂಥ ಅಂದ್ಕೊಂಡಿರ್ತಾನೆ. ಹಾಗಂತ ತನ್ನ ಸ್ನೇಹಿತರಿಗೆ ಹೇಳೂ ಇರ್ತಾನೆ. ಅವ್ನು ಅಂದ್ಕೊಂಡ ಹಾಗೆ ಕೆಲ್ಸಾನು ಸಿಗತ್ತೆ, ಮೊದಲ್ನೇ ತಿಂಗಳ ಸಂಬಳವೂ ಸಿಗತ್ತೆ. ಆದ್ರೆ ಅವ್ನು, ತಿಂಗ್ಳು ಒಂದು ಮೊಬೈಲ್ ತಗೋ ಬಿಡೋಣ, ಅದಿಲ್ದೆ ಇದ್ರೆ Contacts ಇರಲ್ಲ, ಮುಂದಿನ ತಿಂಗಳಿಂದ ಪ್ರತೀ ತಿಂಗ್ಳು ತಪ್ಪದೆ ಹಣ ಕೊಡ್ಬೇಕು ಅಂದ್ಕೊತಾನೆ. ಆದರೆ, ಮುಂದಿನ ತಿಗಳಿನ ಇವನ ಮೊಬೈಲ್ ಬಿಲ್ಲು ಹೊಸಾ ಮೊಬೈಲ್ ಕಿಂತಾನು ಜಾಸ್ತಿ ಆಗಿರತ್ತೆ. ಯಾಕಂದ್ರೆ ಅವನ Contacts ಲಿ ಹೊಸ girl friend ಕೂಡ ಸೇರ್ಕೊಬಿತ್ತಿರ್ತಾಳೆ ಅವನಿಗೇ ಗೊತ್ತಿಲ್ದೆ. ಅವಾಗ್ಲೇ ಅವ್ನಿಗೆ ಅನ್ಸೋಕೆ ಶುರು ಆಗಿರತ್ತೆ, ಅಪ್ಪ ಅಮ್ಮನ್ನ ನೋಡ್ಕೊಳದ್ರಲ್ಲಿ ತನ್ನಷ್ಟೇ ತನ್ನ ಅಣ್ಣ, ಅಕ್ಕನದು ಪಾಲಿದೆ ಅಂತ. ಅವ್ರು ಕೂಡ ನೋಡ್ಕೊಳ್ಳಿ, ತನಗೆ ಮಾತ್ರ ಯಾಕೆ ಉಸಾಬರಿ ಅಂತ. ಹಾಕಿಕೊಂಡ ಪ್ರಣಾಳಿಕೆ ಈಡೇರುವ ಮೊದಲೇ ಎಲ್ಲೋ ಕುಳಿತು ತಣ್ಣಗೆ ನಗುತ್ತಿರುತ್ತದೆ.

ತನ್ನ Education ಗೆ ಅಂತ ಅಪ್ಪ ಸಾಲ ಮಾಡಿದಾನೆ, ಮದ್ವೆ ಅಗೂಕಿಂತ ಮೊದ್ಲು ಅದನ್ನೆಲ್ಲಾ ಹೇಗಾದ್ರು ಮಾಡಿ ತೀರಿಸಬೇಕು, ಒಂದು ವೇಳೆ ಆಗಿಲ್ಲ ಅಂದ್ರೆ ತನ್ನ ಮದ್ವೆ ಅಗೋ ಹುಡಗನ ಹತ್ರ ವಧುದಕ್ಷಿನೆನಾದ್ರು ತಗೊಂಡು ತನ್ನ ಅಪ್ಪನಿಗೆ ಕೊಡ್ಬೇಕು, ಅವನಿಗೆ ಯಾಕೆ ಸಾಲದ ಹೊರೆ, ಅದೂ ಇಳಿವಯಸ್ಸಿನಲ್ಲಿ, ಅಂತ ಅಂದ್ಕೊಂದಿರ್ತಾಳೆ ಹುಡುಗಿ. ಆದರೆ ತನ್ನ office ನಲ್ಲೆ ಕೆಲಸ ಮಾಡೋ ಚೆಂದದ ಹುಡುಗನನ್ನ ಲವ್ ಮಾಡಿ, ಮದ್ವೆ ಮಾಡ್ಕೊಂಡು, ಹನಿಮೂನ್ ಮುಗ್ಸೋ ಹೊತ್ಗೆ, ಅಪ್ಪನ ಸಾಲ ಇರೋದೇ ಮರ್ತೊಗಿರತ್ತೆ. ಪ್ರಪಂಚ ಅರಿಯದ ಅಪ್ಪ ಮಾತೆ ಆಡಿರಲ್ಲ. ಎಷ್ಟಾದರೂ ವಿದ್ಯೆ ಕಲಿತ ಮಗಳು ತಾನೆ, ಎಲ್ಲಾದರೂ ಚೆನ್ನಾಗಿರಲಿ ಅಂತ ಮನತುಂಬಿ ಹಾರೈಸಿರ್ತಾನೆ.

ವರದಕ್ಷಿಣೆಯ ಬಗ್ಗೆ, ಅದರ ದುಷ್ಪರಿಣಾಮಗಳ ಬಗ್ಗೆ, ತನ್ನ College ಜೀವನದಲ್ಲಿ ಮಾರುದ್ದದ ಭಾಷಣ ಮಾಡಿದ ಹುಡುಗ ನಿಜವಾಗಿಯೂ ಸ್ವಾಭಿಮಾನಿಯಾಗಿರುತ್ತಾನೆ. ಏನಾದರು ಮಾಡಿ ಪಿಡುಗನ್ನು ದೂರಮಾಡಬೇಕು ಎಂದು ಬಲವಾಗಿ ಪ್ರತಿಪಾದಿಸಿರುತ್ತಾನೆ. ವರದಕ್ಷಿಣೆ ಪಡೆದು ತಮ್ಮನ್ನೇ ಮಾರಿಕೊಳ್ಳುವವರನ್ನು ವಿರೋದಿಸಿರುತ್ತಾನೆ. ಹಾಗೆ, ತಾನು ಮಾತ್ರ ವರದಕ್ಷಿಣೆ ಮುಟ್ಟುವುದಿಲ್ಲ ಎನ್ನುವ ಹುಡುಗ, ಕೊನೆಗೆ ಅವರಾಗೆ ಕೊಟ್ಟರೆ ತೆಗೆದುಕೊಳ್ಳುವುದು ತಪ್ಪಲ್ಲ ಎಂದು ರಾಜೀ ಸೂತ್ರಕ್ಕೆ ಬರುತ್ತಾನೆ. ಮತ್ತು ಇವನ ಮದುವೆಯ ವೇಳೆಗೆ, ಇವನು ಕೊಳ್ಳುವ Site ಗೆ ದುಡ್ಡು ಕಡಿಮೆಯಾಗಿಬಿದುತ್ತದೆ. ವರದಕ್ಷಿಣೆ ತೆಗೆದುಕೊಳ್ಳದೆ ಬೇರೆ ದಾರಿಯೇ ಇಲ್ಲ. ಎಸ್ತಾದಎಊ ಅವರು ಕೊಡುತ್ತಿರುವುದು ಅವರ ಮಗಳಿಗೆ ತಾನೆ ಎಂದು ತನ್ನನ್ನು ತಾನೆ ಸಮರ್ಥಿಸಿಕೊಂಡು, ತನ್ನದೇ ಪ್ರಣಾಳಿಕೆಗೆ ಎಳ್ಳು ನೀರು ಬಿಟ್ಟಿರುತ್ತಾನೆ.

ಇಷ್ಟೇ ಅಲ್ಲ, ಲಂಚಾವತಾರದ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ, ದೇಶದ ಬಗ್ಗೆ, ದೇಶದ ಪ್ರಗತಿಯ ಬಗ್ಗೆ, ಅದರ ಭವಿಷ್ಯದ ಬಗ್ಗೆ, ಸಮಾಜದಲ್ಲಿ ನಾವು ಪಾಲಿಸುವ ಕರ್ತವ್ಯದ ಬಗ್ಗೆ, ಕೌಟುಂಬಿಕ ಸಾಮರಸ್ಯದ ಬಗ್ಗೆ, ಇಂದಿನ ಯುವಕರಿಗೆ ಅವರದೇ ಅದ ದೃಷ್ಟಿಕೊನವಿರುತ್ತದೆ. ಭವ್ಯ ಭಾರತದ ಭಾವೀ ಪ್ರಜೆಗಳ ಕಳಕಳಿ, ನಿಜಕ್ಕೂ ಶ್ಲಾಘನೀಯ ಕೂಡ. ಆದರೆ ಬದಲಾಗುವ ಜೀವನ, ಬೆನ್ನು ಬೀಳುವ ಜವಾಬ್ದಾರಿಗಳು, ಬಿಟ್ಟು ಬಿಡದೆ ಕಾಡುವ ವತ್ತಡಗಳು, ಅವರ ಸಿದ್ದಾಂತ ಗಳನ್ನೂ ಎಷ್ಟೋ ಬಾರಿ ಬುಡಮೇಲು ಮಾಡಿಬಿಡುತ್ತದೆ. ಚೆನ್ನಾಗಿ ಓದಿ ಒಳ್ಳೆಯ score ಮಾಡಿದ ಹುಡುಗ ವರ್ಷಗಟ್ಟಲೆ ಕೆಲಸ ಸಿಗದಿದ್ದಾಗ ಅನಿವಾರ್ಯವಾಗಿ ಲಂಚ ಕೊಟ್ಟು ಕೆಲಸ ಹಿಡಿಯುತ್ತಾನೆ. ಆಮೇಲೆ ಇವನು ಕೂಡ ಅದೇ ದಾರಿ ಹಿಡಿಯುತ್ತಾನೆ.

ಹಾಗಂತ ಎಲ್ಲ ವಿಷಯದಲ್ಲೂ, ಎಲ್ಲ ಕಾಲದಲ್ಲೂ ಹೀಗೆ ಆಗುತ್ತದೆ ಎಂದು ಹೇಳಲಾಗದು. ಕೆಲವರು ತಮ್ಮ ಜೀವನದ ಕೊನೆಯವರೆಗೂ ಒಂದು ಶಿಸ್ತನ್ನು, ಮೌಲ್ಯವನ್ನು ರೂಡಿಸಿಕೊಂಡು ಬಂದಿರುತ್ತಾರೆ. ಅವರನ್ನೇ ನಮ್ಮ ಬುದ್ದಿವಂತ ಸಮಾಜ 'ಬದುಕಲು ಬರದವರು' ಎಂದು ಕರೆಯುವುದು. ಏನೇ ಆದರು, ಭವಿಷ್ಯದ ಬಗ್ಗೆ ನಮ್ಮ ಯುವಕರು ಕಾಣುವ ಕನಸುಗಳು ಇಡೆರಲಿ ಎಂದು ಹಾರೈಸೋಣ. ಕನಸುಗಳನ್ನು ನನಸು ಮಾಡಿಕೊಳ್ಳುವ ಅವರ ಪ್ರಯತ್ನವನ್ನು ಅಭಿನಂದಿಸೋಣ. ಯುವಕರ ಕಯ್ಯಲ್ಲಿ ಭಾರತ ಪ್ರಕಾಶಿಸಲಿ, ನಾವು ನಾವಾಗಿ ಅಷ್ಟು ಮಾಡಬಹುದಲ್ಲ........

.........................................................................................................................................................

3 comments:

Venkatesh said...

hey dosta ed nijvaglu nange sakat hidistu super edduu.........keep writting...........

Venkatesh said...

hey dosta ed nijvaglu nange sakat hidistu super edduu.........keep writting...........

Venkatesh said...

hey dosta ed nijvaglu nange sakat hidistu super edduu.........keep writting...........