Saturday, May 30, 2009

ಅರ್ಥಿಕ ಸುಧಾರಣೆಗಳು ಮತ್ತು ವಿಮಾನ ಯಾನ...

ಆದಿನ ನಾನೇ ನೆಲದಿಂದ ತುಂಬಾ ಮೇಲಿದ್ದೆನೋ ಅಥವಾ ನೆಲವೇ ನನಗಿಂತ ಕೆಳಗಿತ್ತೋ ಗೊತ್ತಿಲ್ಲ. ಅಂತೂ ನೆಲ ಬಿಟ್ಟು ಹೋಗುವಸ್ಟು ಖುಷಿಯಾಗಿದ್ದಂತೂ ಸತ್ಯ. ಖುಷಿ ಅನ್ನುವುದಕ್ಕಿಂತ ಅನೇಕ ಭಾವನೆಗಳ ಮಿಶ್ರಣ ಎನ್ನುವುದು ಸೂಕ್ತ. ಅದು ಹೇಳಿದರೆ ಅರ್ಥವಾಗುವುದಿಲ್ಲ ಬಿಡಿ. ಅನುಭವಿಸಿ ನೋಡಬೇಕು. ಹಿಂದೆಂದೂ ಆಗಿರದ, ಮುಂದೆ ಆಗಲು ಸಾದ್ಯವಿರದಸ್ಟು ಖುಷಿಯಾಗಿತ್ತದು ಎಂದು ಮಾತ್ರ ಹೇಳಬಲ್ಲೆ. ಯಾವತ್ತಾದರೂ ಯಾರಾದರೂ ನಿನ್ನ ಜೀವನದ ಅತ್ಯಂತ ಸಂತಸದ ಕ್ಷಣ ಯಾವುದಾಗಿತ್ತು ಎಂದರೆ ಅನುಮಾನಕ್ಕೆ ಎಡೆಯೆ ಇಲ್ಲದೇ ಈ ಘಟನೆಯನ್ನು ಹೇಳಬಲ್ಲೆ ಎನಿಸಿತ್ತು.


ಅಸ್ಟೆಲ್ಲ ಖುಷಿಗೆ ಮೂಲ ಕಾರಣ ಕೇವಲ 3.5 ನಿಮಿಷಗಳ 1 ಫೋನ್ ಕಾಲ್. ಪ್ರಪಂಚದ ಆರ್ಥಿಕ ಬಿಕ್ಕಟ್ತಿನ ಬಗ್ಗೆ, ತುಂಬಾ ಸರಳವಾಗಿ ನಾನು ಮಂಡಿಸಿದ ಪ್ರಬಂದ ಅದು ಹೇಗೊ ಜಗಜ್ಜಾಹೀರಾಗಿತ್ತು. ಅದನ್ನು ಓದಿದ ಮೊಂಟೆಕ್ ಸಿಂಗ್ ಅಹ್ಲುವಾಳೀಯ ಎಂಬ ಪ್ರಖ್ಯಾತ ಅರ್ಥ ಶಾಸ್ತ್ರಜ್ಞ ತನ್ನನ್ನು ಕಾಣಲು ಸೂಚಿಸಿದ್ದ ಪೋನ್ ಕಾಲ್ ಅದು. ಆದಿನವಿಡೀ ನನ್ನನ್ನು ಯಾವುದೋ ಮತ್ತಿನಲ್ಲಿ ತೇಲಾಡುವಂತೆ ಮಾಡಿದ ಫೋನ್ ಕಾಲ್ ಅದು. ನನ್ನನ್ನು ನಾನು ನಂಬಲಾಗದಂತೆ ಮಾಡಿದ ಫೋನ್ ಕಾಲ್ ಅದು.

ನಾನು ನನ್ನ ಪ್ರಬಂದದಲ್ಲ್ಲಿ ಹೇಳಿದ್ದಾದರೂ ಏನು, ಒಂದು ಚಿಕ್ಕ ಸರ್ಕಲ್ ನಲ್ಲಿ, ಹಣದ ಹರಿವನ್ನು ಚಿತ್ರಿಸಿ, ಅವು ಒಂದಕ್ಕೊಂದು ಹೇಗೆ ಬೆಸೆದುಕೊಂಡಿರುತ್ತವೆ ಎಂದು ವಿವರಿಸಿದ್ದೆ , ಬಲು ದೊಡ್ಡ ಕಟ್ಟಡವನ್ನು ಕಟ್ಟುವಾಗ ಹಾಕಿಕೊಳ್ಳುವ ನೀಲ ನಕ್ಷೆಯಂತೆ. ಆರ್ಥಿಕ ಹಿಂಜರಿತಕ್ಕೆ ಕಾರಣವಾದ ಅಂಶಗಳನ್ನು ಹೆಕ್ಕಿ ತೆಗೆದಿದ್ದೆ. ಹೇಗೆ ಒಂದು ಮನೆಯಲ್ಲಿ, ದುಡ್ಡು ಒಳ ಬಂದು ಹೊರ ಹೋಗುವ ಚಕ್ರ ಸರಾಗವಾಗಿ ತಿರುಗುತ್ತಿರುತ್ತದೋ, ಹಾಗೆ ಚಿಕ್ಕ ಉದಾಹರಣೆ ಇಂದ ದೊಡ್ಡದನ್ನು ತೋರಿಸಿದ್ದೆ. ಒಂದು ಕಡೆ ಹಣ ನಿಂತು ಹೋಗಿದೆ, ಅದರಿಂದ ಹಣದ ಹರಿವು ಆಗುತ್ತಿಲ್ಲ, ಅಥವಾ, ಹಣಕಾಸಿನ ಚಕ್ರ ನಿಧಾನವಾಗಿ ತಿರುಗುತ್ತಿದೆ ಎಂದು ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತಹ ಆರ್ಥಿಕ ನೀತಿಯನ್ನು ರೂಪಿಸಿದ್ದೆ. ಹೇಗೆ ಅಧಿಕಾರ ವಿಕೇಂದ್ರೀಕರಣ ಇದೆಯೋ ಹಾಗೆ, ಹಣಕಾಸಿನ ನೀತಿಯನ್ನು, ಬೇರೆ ಬೇರೆ ಪ್ರದೇಶಕ್ಕೆ ಅನುಗುಣವಾಗಿ ರೂಪಿಸಬೇಕು, ಅಂದರೆ ಕಿರು ಹಣಕಾಸು ನೀತಿಯನ್ನು ಬಲಪಡಿಸಬೇಕು ತಿಳಿಸಿ ಹೇಳಿದ್ದೆ. ಅದಕ್ಕಾಗಿ ಕೆಲವು ಆರ್ಥಿಕ ಸುಧಾರಣ ಕ್ರಮಗಳನ್ನೂ ಕೈಗೊಳ್ಳಬೇಕು, ಈಗಾಗಲೇ ತೆಗೆದುಕೊಂಡ ಕ್ರಮಗಳನ್ನು ಬಿಟ್ಟು, ಇನ್ನಸ್ಟು ಪರಿಣಾಮಕಾರಿ ಯೋಜನೆಗಳನ್ನು, ಯಾವ ರಾಜಕೀಯ ವತ್ತದಕ್ಕೂ ಸಿಲುಕಡೆ ಕೈಗೊಂಡರೆ, ಆರ್ ಬೀ ಐ ಮೈ ಚಳಿ ಬಿಟ್ಟು ಕೆಲಸ ಮಾಡಿದರೆ ಆರ್ಥಿಕ ಬಿಕ್ಕಟ್ಟನು ಓಡಿಸಿ ಬಿಡಬಹುದು ಎಂದು ಒತ್ತಿ ಹೇಳಿದ್ದೆ. ಆದರೆ ಈ ಪ್ರಬಂದ ಬರೆಯುವಾಗ ನಿಜವಾಗಿಯೂ ಗೊತ್ತಿರಲಿಲ್ಲ, ಇದು ಇಸ್ಟು ಪ್ರಭಾವ ಬೀರುತ್ತದೆ ಎಂದು. ಕೇವಲ ನನ್ನ ಸಮಾಧಾನಕ್ಕಾಗಿ ನಾನು ಬರೆದ ಪ್ರಬಂದ , ಅಬ್ಬಾ...ನೆನೆಸಿಕೊಂಡರೆ ಮೈ ಜುಂ ಎನ್ನುತ್ತದೆ.


ಅಸ್ಟೆ ಅಲ್ಲ, ಅಲ್ಲಿಗೆ ಹೋಗುವುದು ಹೇಗೆ, bangalore ನಿಂದ ಬರಲು ಅವರೇ ವಿಮಾನದ ಟಿಕೆಟ್ ಕೊಟ್ಟಿದ್ದರಲ್ಲ. ನಾನೋ ಮೊದಲ ಬಾರಿಗೆ ವಿಮಾನ ಏರುತ್ತಿರುವವನು. ಹೇಗೊ ಏನೋ ಎನ್ನಿುವ ಆತಂಕ ಒಂದುಕಡೆ, ಆಗಸದಲ್ಲಿ ಹಾರುವ ಹಕ್ಕಿಗಳನ್ನು ನೋಡಿ ಖುಷಿಪಟ್ಟ ನನಗೆ ನಾನು ಅವುಗಳಂತೆ ಹಾರಬಹುದಲ್ಲ ಎನ್ನುವ ಖುಷಿ ಇನ್ನೊಂದು ಕಡೆ. ಪ್ರತಿ ದಿನ ಆಫೀಸ್ ಗೆ ಹೋಗುವ ಹಾಗೆ ಹೋಗಲೊ, ಅಥವಾ, ಬೇರೆ ಏನಾದರೂ, , ಅಂತು ಪಾರು ಹರಿಯಾದ ಯೋಚನೆ. ಅಲ್ಲಿ ಮೊದಲು ಯಾರನ್ನು ಕಾಣಬೇಕೂ,, ನಾನು ಬೆಂಗಳೂರಿನಿಂದ ಬಂದವನು ಎಂದರೆ ನನ್ನನ್ನು ಅವರು ಒಳಗೆ ಬಿಡುತ್ತಾರೋ ಇಲ್ಲವೋ, ಎನ್ನುವ ಬಗೆ ಹರಿಯದ ಚಿಂತನೆ. ಅನ್ತೂ ಇನ್ತೂ ಸಿಂಗ್ ಅವರನ್ನು ಕಾಣುವ ಸುದಿನ ಬಂದೆ ಬಿಟ್ಟಿತು. ನಾನು ಹೊರಡಲೇ ಬೇಕು.


ಮನೆ ದೇವರಿಂದ ಹಿಡಿದು, ನನ್ನ ಅಜ್ಜಿ ತನ್ನ ಕೊನೆಗಾಲದಲ್ಲಿ ಹೇಳುತ್ತಿದ್ದ ದೇವರ ಹೆಸರುಗಳನ್ನೆಲ್ಲ ಒಂದು ಸಾರಿ ಸ್ಮರಿಸಿಕೊಂಡು ದೆಹಲಿಯತ್ತ ಹೊರಟೆ ಬಿಟ್ಟಿದ್ದೆ. ಅಬ್ಬ, ಅಲ್ಲಿಂದ ಮುಂದೆ ಯಾವುದೂ ನನ್ನ ಕೈಲಿರಲೇ ಇಲ್ಲ. ಯಾರೋ ನಡೆಸುವ ಮಂತ್ರದ ಗೊಂಬೆಯಂತೆ, ಕೇಂದ್ರ ಹಣಕಾಸು ಸಚಿವಾಲಯದ ಸಿಬ್ಬಂದಿಗಳು ಹೇಳಿದಂತೆ ಅವರು ಕರೆದುಕೊಂಡು ಹೋದಲ್ಲೆಲ್ಲ ಹೋದೆ.
ಅವತ್ತೇ ಸಿಂಗ್ ಜೊತೆಯಲ್ಲಿ ಕೇವಲ ೧೫ ನಿಮಿಷಗಳ ಮಾತುಕತೆ , ನಂತರ ನನಗೆ ನೆನಪಿನ ಕಾಣಿಕೆಯ ಅರ್ಪಣೆ, ಮತ್ತು, "ಪ್ರಪಂಚದ ಆರ್ಥಿಕ ಬಿಕ್ಕಟ್ಟು ಮತ್ತು ಪರಿಹಾರೋಪಾಯಗಳು" ಎಂಬ ವಿಷಯದ ಬಗ್ಗೆ ನನ್ನ ಉಪನ್ಯಾಸ. ಸಿಂಗ್ ಜೊತೆಯಲ್ಲಿ ಹೇಗೋ ಮಾತುಕತೆ ಮುಗಿದು ಹೋಗಿತ್ತು. ನನಗೆ ಗೊತ್ತಿರುವ ವಿಷಯಗಳನ್ನು,, ಮುಖದಲ್ಲಿ ಧೈರ್ಯ ತುಂಬಿಕೊಂಡು ಮಂಡಿಸುವ ಹೊತ್ತಿಗೆ ನನ್ನ ಹಣೆಯಲ್ಲಿ ಬೆವರ ಸಾಲು. ಅವರೋ ನನ್ನನ್ನು ಅರ್ಥಿಕ ಜಗತ್ತಿನ ದ್ರುವತಾರೆಯಂತೆ ಚಿತ್ರಿಸುತ್ತಿದ್ದರು. ನಂತರದ ಕಾರ್ಯಕ್ರಮವೇ ನೆನಪಿನ ಕಾಣಿಕೆಯ ಅರ್ಪಣೆ, ಅವರ್ಯಾರೋ Anchor, ಎಲ್ಲರನ್ನು ಕರೆದು ಹಾಗೆ ನನ್ನ ಹೆಸರನ್ನೂ ಕರೆದೇ ಬಿಟ್ಟರು. ನನ್ನ ಯಾವತ್ತಿನ ಗಂಭೀರ , ದಿಟ್ಟ ನಡಿಗೆಯೊಂದಿಗೆ ವೇದಿಕೆ ಹತ್ತುತ್ತಿದ್ದರೆ ಕಾಲುಗಳಲ್ಲಿ ಚಿಕ್ಕ ನಡುಕ. ಹಾಗೆ ಸಾವಿರ ಮಿಂಚುಗಳು ಒಂದೇ ಸಾರಿ ಮಿಂಚಿದ ಹಾಗೆ ಕ್ಯಾಮೆರಾ ಬೆಳಕಿನ ಮದ್ಯೆ ಇನ್ನೇನು ನೆನಪಿನ ಕಾಣಿಕೆ ಪಡೆಯಬೇಕು, ಅಸ್ಟರಲ್ಲಿ,


ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲವಲ್ಲ. ಕತ್ತಲು ಮುಗಿದು ಬೆಳಕು ಬಂದ ಹಾಗೆ, ಹಗಲು ಮುಗಿದು ರಾತ್ರಿಯಾದಂತೆ, ಅವನತಿಯು ಕೂಡ ಉತ್ಕರ್ಷ ದತ್ತ ಸಾಗಿದಂತೆ, ಹರಿಯುವ ನದಿಗೂ ಕೊನೆ ಎನ್ನುವುದು ಇರುವಂತೆ, ಕ್ಷೀರ ಸಾಗರಕ್ಕೂ, ಕಿನಾರೆ ಇರುವಂತೆ, ನನ್ನ ಕನಸು ಕೂಡ ಮುಗಿದು ಹೋಗಿತ್ತು. ಒಂದು ಕ್ಷಣ, ಕನಸೇ ನಿಜವಾಗಿ, ಎಚ್ಚರವೇ ಕನಸಾಗಿರಬಾರದಿತ್ತೆ ಎನಿಸಿತ್ತು. ಆದರೆ ವಸ್ತು ಸ್ಥಿತಿಯನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲವಲ್ಲ. ಎಂದಿನಂತೆ ಅಂದು ಕೂಡ Office ಗೆ Late ಆಗಿಯೇ ಹೋದೆ :)

5 comments:

Anonymous said...

haa haa nanasagali kanasu :)

Venkatesh said...

nen e munjavina kanasu nijavagali anta ashisuva




enti nen preetiya
RAMvenki

Arun said...
This comment has been removed by the author.
Arun said...

Hey, nihaa, & venki, Thanks a lot

ಮುಸ್ಸ೦ಜೆ said...

ಒಳ್ಳೆಯ ಲೇಖನ. ಒಳ್ಳೆಯ ಕನಸು. ನಿನ್ನ ಕನಸು ನನಸಾಗಲಿ :)