Saturday, June 13, 2009

ನೆತ್ತಿಯ ಮೇಲಿನ ಮುದ್ದು ಹಕ್ಕಿ,

ಭಾವನೆಗಳ ಜೊತೆ ಬಣ್ಣದೋಕುಳಿಯಾಡಿದ ಪಾತರಗಿತ್ತೀ, ನನ್ನ ಕಣ್ಣ ಪೋಟರೆಯೊಳಗೆ ಗೂಡು ಕಟ್ಟಿದ ಮರಕುಟುಕ ನೀನು, ನನ್ನ ಹಾಡು ನೀನು. ಹುಟ್ಟಾ ಕೊಳಕನೂ, ಪಕ್ಕಾ ಪೊಲಿಯೂ, ಶುದ್ದ ವರಟನೂ ಆದ ನನ್ನನ್ನು ಅದು ಹೇಗೆ ಪ್ರೀತಿಸಿಬಿಟ್ಟೆಯೆ ಗೆಳತಿ, ಕೇವಲ ಬುದ್ದಿಯಿಂದ, ಹಣದಿಂದ, ಏನು ಬೇಕಾದರು ಮಾಡಬಹುದು ಎಂದು ನಂಬಿಕೊಂಡಿದ್ದವನು ನಾನು. ಪ್ರೀತಿಯ ಭಾಷೆ ಗೊತ್ತಿರದಿದ್ದವನು ನಾನು. ನೀನು ಕರ್ಚಿಗೆ ಕೊಡು ಎಂದಿದ್ದನ್ನೇ ತಪ್ಪಾಗಿ ತಿಳಿದು ಕಿಸೆಯಿಂದ ಹಣ ತೆಗೆದು ಕೊಟ್ಟವನು ನಾನು. ನನ್ನಂಥವನನ್ನು ಅದು ಹೇಗೆ ಸಹಿಸಿಕೊಳ್ತೀಯೋ ಅಂದು ಕೊಂಡಿದ್ದೆ.

ಆದರೆ ಒಂದು ಬಾರಿ ನನ್ನ ಜೀವನದಲ್ಲಿ ನಿನ್ನ ಪ್ರವೇಶವಾಗಿದ್ದೇ ತಡ, ಹೃದಯವನ್ನಾಳುತ್ತಿದ್ದ ನನ್ನ ಬುದ್ದಿ, ಹೃದಯದ ತಾಳಕ್ಕೆ ತಕ್ಕಂತೆ ಕುಣಿಯತೊಡಗಿಬಿಟ್ಟಿತು ನೋಡು. ಹಾಗೆ ಭಾವನಾ ಲೋಕಕ್ಕೆ ಕರೆದೊಯ್ದ ನೀನು ಸಂಗೀತವೆಂದರೇನೆಂದು ಪರಿಚಯಿಸಿದೆ. ನಿನಗಿಸ್ಟ ಅಂತಲೋ, ಅಥವಾ ನನಗೇ ಇಸ್ಟವಾಯೀತೋ, ಅಂತೂ ಸಂಗೀತ ಪ್ರಪಂಚದ ಹುಚ್ಚು ಹತ್ತಿಸಿಕೊಂಡು ಬಿಟ್ಟೆ. ಅಲ್ಲಿಂದ ನಮ್ಮ ಮನೆಯ ರೇಡಿಯೋಕ್ಕೆ ಬಿಡುವೇ ಇಲ್ಲದಾಯ್ತಲ್ಲ. ಬರುವ ನಾಲ್ಕಾರು ಸ್ಟೇಶನ್ ಗಳಲ್ಲೇ ಹುಡುಕಿ ಹುಡುಕಿ ಹಾಡು ಕೇಳುತ್ತಿದ್ದೆ. ಅದ್ಯಾವುದೋ ಒಂದು ದಿನ ಹಾಗೆ ರೇಡಿಯೋದ ಕಿವಿಗಳನ್ನು ತಿರಿಸುತ್ತಿದ್ದಾಗ ಬಂತಲ್ಲ ಕೊಳಲ ಗಾನ, ಅದೇನು ಮೋಡಿ ಮಾಡಿತೋ ಏನೋ, ಅವತ್ತಿನಿಂದಲೇ ತಾನೇ ನಾನು ಕೊಳಲ ದಾಸನಾಗಿದ್ದು??

ನಮ್ಮೂರಿನಲ್ಲಿರುವ ಬಿದಿರನ್ನೆಲ್ಲ ಕಡಿದು , ಒಂದರಿಂದಲೂ ನಾದವಿರಲಿ, ಕನಿಸ್ಟ ಶಿಳ್ಳೆ ಹೊಡೆದ ಶಬ್ಧವೂ ಬಾರದಿದ್ದಾಗ ನಾನು ಪಟ್ಟ ಪರಿಪಾಟಲು, ಅಂತೂ ಯಾರನ್ನೋ ಹಿಡಿದು ಒಂದು ಕೊಳಲನ್ನು ಸಂಪಾದಿಸಿದೆನಲ್ಲ, ತಿಂಗಳುಗಟ್ಟಲೇ ಅದರೊಂದಿಗೆ ಗುದ್ದಾಡಿ, ಕೆಲವು ಹಾಡುಗಳನ್ನು ಕಲಿತು ನಾನು ನುಡಿಸುತ್ತಿದ್ದರೆ, ರಾಧೆ, ರುಕ್ಮಿಣಿ, ಸತ್ಯಭಾಮೆ ಎಲ್ಲವೂ ನೀನೆ ಆಗಿ ಕೇಳುತ್ತಿದ್ದ ನೀನು ನಿಜಕ್ಕೂ ಅಪರೂಪದ ಕೇಳುಗಳು. ಹಾಗೆ ನಾನು ನುಡಿಸುತ್ತಾ, ನೀನು ಕೇಳುತ್ತ ನಮಗೆ ನಾವೇ ಸ್ರಸ್ಟಿಸಿಕೊಳ್ಳುತ್ತಿದ್ದ ಗಂದರ್ವ ಲೋಕ, ಪ್ರೀತಿ ಎಂದರೆ ಇದೇ ತಾನೇ, ಬೇರೆಯವರಿಗೆಲ್ಲ ನಾನೂದುವ ಪಿಳ್ಳನ್ಗೋವಿ, ನಿನ್ನ ಪಾಲಿಗೆ ಸುಮಧುರ ಕೊಳಲ ಗಾನ. ಕೊನೇ ಕೊನೆಗೆ ಕೊಳಲೂದುವುದನ್ನೆ ಮರೆತು ನಿನ್ನನ್ನೇ ನೋಡುತ್ತಾ ಕುಳಿತು ಬಿಡುತ್ತಿದ್ದೆ. ನೀನೋ, ನಾನೇ ತಟ್ಟಿ ಎಬ್ಬಿಸಬೇಕಿತ್ತು. ನೀನು ನಿಜವಾಗಿಯೂ ಕೆಳುತ್ತಿದ್ದೆಯೋ, ನನ್ನನ್ನು ನೋಡುತ್ತಾ ಕುಳಿತಿರುತ್ತಿದ್ದೆಯೋ, ಅಥವಾ ಭವಿಷ್ಯದ ಕನಸು ಕಾಣುತ್ತಿದ್ದೆಯೋ ಇವತ್ತಿಗೂ ಗೊತ್ತಿಲ್ಲ. ಯಾಕೆಂದರೆ ನಾನು ನುಡಿಸಿದ ಕೊಳಲ ಗಾನ, ರೆಕಾರ್ಡ್ ಮಾಡಿಕೊಂಡು ಹಾಕಿದರೆ ನನಗೇ ಕೇಳಲಾಗುತ್ತಿರಲಿಲ್ಲವಲ್ಲ..

ಅವಾಗಲೇ ಅಂದುಕೊಂಡಿದ್ದೆ, ನನ್ನ ಹೆಂಡತಿಯಾಗಲು ನೀನೇ ಸರಿ ಎಂದು. ನೀನು ಮಾತ್ರ ನನಗೆ ತಕ್ಕ ಸತಿಯಾಗಬಲ್ಲೆ ಎಂದು ನಂಬಿಕೊಂಡಿದ್ದೆ. ಆದರೆ ನೀರಿನಲ್ಲಿ ಈಜುವ ಮೀನಿನ ಹೆಜ್ಜೆಯನ್ನದರೂ ಗುರುತಿಸಬಹುದು, ಹೃದ್ಗತವಾದ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾದ್ಯವಿಲ್ಲ ಅಂತಾರಲ್ಲ, ಅದ್ಯಾವ ಗೃಹ ನಿನ್ನ ಮನಸ್ಸನ್ನು ಬದಲಿಸಿಬಿತ್ತಿತೋ ನಾಕಾಣೆ, ನೀನೆಂದರೆ ನಂಗೆ ಇಸ್ಟವಿಲ್ಲ, ನನ್ನನ್ನು ಮರೆತುಬಿಡು ಅಂದುಬಿಟ್ಟೆಯಲ್ಲ, ಎಲ್ಲವನ್ನೂ ಅತಿಯಾಗಿಯೇ ಮಾಡುವ ನನ್ನಂಥವನ ಜೊತೆ ಏಗುವುದು ಹೇಗೆನ್ದು ನಿನಗೂ ಅನ್ನಿಸಿರಬಹುದು ಗೆಳತಿ, ಆದರೆ ಹಾಗೆ ನಿನ್ನಿಂದ ಒಂದೇ ಮಾತಿನಲ್ಲಿ ತಿರಸ್ಕ್ರತಗೊಂಡು ಹೋದ ದಿನದಿಂದ ಒಂದೇ ಒಂದು ದಿನವೂ ನಿನ್ನನ್ನು ಮರೆಯುವ ಪ್ರಯತ್ನದಲ್ಲಿ ನಾನು ಸಫಲನಾಗಲೇ ಇಲ್ಲ. ನಾನಾಯಿತು ನನ್ನ ಪಾದಾಯಿತು ಎಂದು ಇದ್ದವನನ್ನು ಪ್ರೀತಿಯೆಂಬ ಸುಂದರ ತೋಟಕ್ಕೆ ಎಳೆದು ತಂದೆಯಲ್ಲ, ಅದು ನೋದಲು ಮಾತ್ರ ಸುಂದರ ಎಂದು ಈಗ ಗೊತ್ತಾಗುತ್ತಿದೆ. ಪ್ರೀತಿ ಎಂದರೆ ಎಸ್ಟು ಮುಕ್ಕಿದರೂ ತೀರದ ಹಸಿವು. ಎಸ್ಟು ಹಾಕಿದರೂ ತುಂಬದ ಬಿಕ್ಷಾ ಪಾತ್ರೆ. ಅದು ನಿರಂತರ ಹರಿಯುವ ನೀರಿನ ಸೆಳೆತ..

ಕೇವಲ ಒಂದು ಏಕ್ರೆ ತೋಟ, ಒಂದು ಮನೆ, ಒಂದು ಸುಂದರ ಸಂಸಾರ, ಅಸ್ಟೆ ಆಗಿತ್ತಲ್ಲ ನಿನ್ನ ಕನಸು, ನನ್ನನ್ನು ಅಸ್ಟು ಕೂಡ ಕೊಡಲು ಆಗದವನು ಎಂದುಕೊಂಡುಬಿಟ್ಟಿದ್ದೇಯಲ್ಲ, ಪ್ರತಿ ಮಾತು, ಪ್ರತಿ ಘಟನೆ, ಪ್ರತಿದಿನದ ಕತ್ತಲು, ಎಳೆಬಿಸಿಲು, ತಂಗಾಳಿ, ನಮ್ಮೂರಿನ ಗುಡ್ಡಬೆಟ್ಟಗಳು, ನಾನೂದಿದ ಕೊಳಲು, ಹೀಗೆ ಎಲ್ಲೆಂದರಲ್ಲಿ ನಿನ್ನ ನೆನಪಾಗುತ್ತಿದ್ದರೂ, ಇದೋ ನೋಡು, ನಿನ್ನೆರಡೂ ಕಣ್ಣುಗಳನ್ನು ಬಿಟ್ಟು, ಎಲ್ಲ ಅಸಹಾಯಕತೆ, ಅವಮಾನ , ಖಿನ್ನತೆ ಗಳನ್ನೆಲ್ಲ ಹಿಮ್ಮಡಿಯ ಕೆಳಗೆ ಮೆಟ್ಟಿ ನಿಲ್ಲುವ ಫಕೀರನ ಛಲದಂತೆ ನಾನು ಕೂಡ ನನ್ನ ಜೀವನವನ್ನು ರೂಪಿಸಿಕೊಂಡಿದ್ದೇನೆ. ನೀನು ಕಂಡ ಕನಸನ್ನು ಮೀರಿ ಬೆಳೆದುಬಿಟ್ಟಿದ್ದೇನೆ.

ಒಂದು ಕಾಲದಲ್ಲಿ ಮರಳಲ್ಲಿ ರೆಕ್ಕೆ ಹುದುಗಿಸಿ, ಮೈಮರೆತು ತೀರಕ್ಕೆ ಬರುವ ಮೀನಿಗಾಗಿ ಕಾಯುತ್ತ ಶತಮಾನ ಕಳೆದು ಬಿಡುವ ಹಕ್ಕಿಯ ಸಂಯಮವಿತ್ತು. ಮರದ ಮೇಲಿನ ಹೆಜ್ಜೆನಿಗಾಗಿ ಕೆಳಗಡೆ ಶತಪಥ ಹಾಕುವ ಕರಡಿಯ ಕನವರಿಕೆಯಿತ್ತು. ನೀನು ಸಿಕ್ಕಿದರೆ ನನ್ನ ಜೊತೆ ಇಡೀ ಜಗತ್ತೇ ಸಮಧಾನಗೊಳ್ಳುತ್ತದೆ ಎನ್ನುವ ಸುಳ್ಳೇ ಸುಳ್ಳು ನಿರಾಳತೆಯಿತ್ತು. ಕೊಳಲೆಂಬ ತುತುಗಳುಲ್ಲ ಬಿದಿರು ಉಡುವ ನನಗೆ ಅದ್ಭುತವಾದ ಭಾವುಕ ಮನಸ್ಸಿತ್ತು. ಶತಮಾನಗಳ ಕಾಲ ನಿನ್ನ ಜೀವಕೊಶಗಳೊಂದಿಗೆ ಬೆರೆತು ಹೋಗುವ ಉತ್ಸಾಹವಿತ್ತು. ಪ್ರೀತಿಯಲ್ಲಿ ಮುಳುಗಿದವನೊಬ್ಬನ ಆರ್ತನಾದವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ನನ್ನ ಅಗಾಧ ಪ್ರೇಮವಿತ್ತು. But My dear Love, ನನ್ನ ಪಾಲಿಗೆ ನೀನು ಆಗಂತುಕಳಾಗಿ ಹೋದೆಯಲ್ಲ. Really I am Sorry, ಭಾಹುಶಹ ಇನ್ನೊಂದು ಸ್ವಲ್ಪ ದಿನಕ್ಕೆ ನೀನಾಗಿ ಬಂದರೂ ನಾನು ನಿನ್ನ ಜೊತೆ ಮಾತನಾಡುವ ಉತ್ಸಾಹವನ್ನೇ ಕಳೆದುಕೊಂಡು ಬಿಡಬಹುದು. Wish you all the best....



6 comments:

ಮುಸ್ಸ೦ಜೆ said...

ಚೆನ್ನಾಗಿ ಬರದ್ದೆ ಅರುಣ್... ಇದು ಬರೀ ಕಲ್ಪನೆಯ? ಇಲ್ಲ ಅದ್ಯಾವುದೊ ಕಟುಕಿ ನಿನ್ನ ಪ್ರೀತಿ ತೊರೆದು ಹೋದಳಾ?... ಕೊನೆಯ ಸಾಲುಗಳ ಬರವಣಿಗೆ ಇಸ್ಟ ಆಯ್ತು.. Keep the good work going :)

Anonymous said...

wordings super Arun!!!

Anju said...

super iddu,,,,rashi khushi atu odi ambage yaru heli hottaglille,,,adruva super super,,,,,,

ಅಪ್ಪು..... said...

ಮೀನು - ಹೆಣ್ಣು ಹೋಲಿಕೆ ಅದ್ಭುತ...

Unknown said...

Title super iddu......... chanagiddu....

RAJESH BHAT said...

ಕಮೆಂಟಾಥೀತ ! ನಾವು ಕೆಲವೊಮ್ಮೆ ಎಲ್ಲವನ್ನು ಮರೆತು ನಮಗೆ ಇಷ್ಟವಾದವರ ನೋಡುತ್ತಾ ಕಲ್ಪನಾ ಲೋಕಕ್ಕೆ ಪಯಣಿಸಿರ್ತಿವಿ. ನಮ್ಮನ್ನ ನಮ್ಮ ಹಾಗು ಹೋಗುಗಳನ್ನ ಪ್ರತಿಸಮಯದಲ್ಲೂ ನೋಡ್ತಾನೆ ಇರ್ತಾರೆ ಅನ್ನೋ ಪರಿವು ಕೂಡಾ ಇರೋಲ್ಲ !