Wednesday, July 22, 2009

ಮತ್ತೆ ಬಂದಿದೆ ಆಗಸ್ಟ್ ಹದಿನೈದು.....

ಇನ್ನೇನು, 100 ಕೋಟಿ ಜನಸಂಖ್ಯೆಯನ್ನು ಹೊಂದಿರುವ, ಅನೇಕ ಧರ್ಮ, ಬಹು ಜಾತಿ, ನೂರಾರು ಸಂಪ್ರದಾಯಗಳು, ಅಸ್ಟೇ ವಿಧದ ಭಾಷೆ, ಇತ್ಯಾದಿಗಳನ್ನು ಹೊಂದಿರುವ, ಕೆಲವು ಕಡೆ ಮುಂದುವರಿದಿದೆ ಎಂದು ಭಾವಿಸಬಹುದಾದ, ಇನ್ನು ಕೆಲವು ಕಡೆ, ಮುಂದುವರಿಯುತ್ತಿದೆ ಎಂದು ನಂಬಬಹುದಾದ, ಇನ್ನೂ ಕೆಲವು ಸಾರಿ, ಯಾಕೋ ನಮ್ಮ ದೇಶ ಹಿಂದೆ ಉಳಿದುಬಿಟ್ಟಿದೆ ಎನ್ನಿಸುವ, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದ ಭಾರತ ದೇಶಕ್ಕೆ ಇನ್ನೊಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುವ ಸುಸಂದರ್ಭ ಬಂದೆ ಬಿಟ್ಟಿತು. ಭಾರತ ಎಂದಾಕ್ಷಣ, ನಮಗೆ ನಮ್ಮದೇ ನೆನಪು ಬರುತ್ತದೆ, ಬರಬೇಕು ಕೂಡ. ಏಕೆಂದರೆ ಅದು ನಮ್ಮದೇ ವ್ಯಕ್ತಿತ್ವಗಳ ಒಟ್ಟಾರೆ ಪ್ರತಿಬಿಂಭ. ನಮ್ಮೆಲ್ಲರ ಗುಣ ಅವಗುಣಗಳು, ನಮ್ಮೆಲ್ಲಾ ಸ್ವಾರ್ಥ, ತಿಕ್ಕಲುತನಗಳು, ಅತ್ತ ವ್ಯವಸ್ಥೆಯು ಅಲ್ಲದ, ಇತ್ತ ಅವ್ಯವಸ್ತೆಯು ಅಲ್ಲದ ಸರಕಾರೀ ಯಂತ್ರ, ಇದೆಲ್ಲದರ ನಡುವೆ ಅಕ್ಕ ಪಕ್ಕದ ದೇಶಗಳ ಮುಂದೆ ತಲೆ ಎತ್ತಿ ನಡೆಯಬೇಕೆಂಬ ನಮ್ಮ ಸ್ವಾಭಿಮಾನ, ದೇಶದ ಜೊತೆಗೆ ನಮ್ಮ ಕಿಸೆಯನ್ನೂ ಸ್ವಲ್ಪ ದಪ್ಪ ಮಾಡಿಕೊಂಡುಬಿಡೋಣ ಎಂಬ ನಮ್ಮ ಸಣ್ಣತನ, ಇದೆಲ್ಲಾ ಸೇರಿ ಆಗಿದ್ದೆ ನಮ್ಮ ದೇಶವಲ್ಲವೇ, ಹಾಗಾಗಿಯೇ ಸ್ವಾತಂತ್ರ್ಯೋತ್ಸವ ನಮ್ಮ ಮನೆಯ ಉತ್ಸವ ಕೂಡ ಅಗಿದ್ದು.
ಮಾನ್ಯ ಗುರುವ್ರಂದದವರೇ, ನನ್ನ ಪ್ರೀತಿಯ ಸಹಪಾಟಿಗಳೇ, ಹಾಗು ಊರ ನಾಗರಿಕರೆ, ಎಂದು ಪ್ರಾರಂಬಿಸಿ, ದೇಶದ ಸ್ವಾತಂತ್ಯ್ರ ಗಳಿಕೆಗೆ ಯಾರ್ಯಾರು ಹೇಗೆ ಬಲಿದಾನ ಮಾಡಿದರು ಎಂದು ಮುಗಿಸುವ ಶಾಲಾ ಮಕ್ಕಳ ಭಾಷಣದಂತೆ ನಾವು ಕೂಡ ಒಂದು ದಿನ ದೇಶದ ಬಗ್ಗೆ ಮಾತಾಡಿ ಮುಗಿಸಿಬಿಡಬೇಕೇ ಎನ್ನುವುದು ಈಗಿನ ಪ್ರಶ್ನೆ. ಕೇವಲ ಕೆಲವು ವರ್ಷಗಳ ಹಿಂದೆ ಭವಿಷ್ಯದ ಪ್ರಜೆಗಳು ಎನ್ನಿಸಿಕೊಂಡವರು ನಾವು. ಅಂದರೆ ಈಗ ನಾವು ಭವ್ಯ ಭಾರತದ ಚುಕ್ಕಾಣಿ ಹಿಡಿದಿರುವ ಪ್ರಜೆಗಳು. ಯುವ ಶಕ್ತಿಯೇ ದೇಶದ ಬೆನ್ನೆಲುಬು ಎಂದಾದರೆ, ದೇಶದ ಮುನ್ನಡೆಗೆ ನಮ್ಮ ಕೊಡುಗೆ ಏಷ್ಟು ಎಂದು ನಾವು ನಮ್ಮನ್ನೇ ಕೇಳಿಕೊಳ್ಳಲು ಇದು ಸಕಾಲ ಎನ್ನುವುದು ನನ್ನ ಭಾವನೆ. ನೀವೆಲ್ಲ ಏನಂತೀರಿ??? ೫೦ ವರ್ಷಗಳ ಹಿಂದೆ ದೇಶಕ್ಕೆ ಸ್ವಾತಂತ್ಯ್ರ ಕೊಡಿಸುವಲ್ಲಿ ಯಾರ್ಯಾರು ಎಷ್ಟು ಕಾಣಿಕೆ ನೀಡಿದರು, ಎಂದು ಅವರನ್ನು ಹೊಗಳುವುದು, ವ್ಯಾಪಾರಕ್ಕೆಂದು ಬಂದು ದೇಶವನ್ನೇ ಕೊಳ್ಳೆ ಹೊಡೆದ ಬ್ರಿಟಿಷ್ ರನ್ನು ತೆಗಳುವುದು, ಎಷ್ಟು ಮುಖ್ಯವೋ, ಇವತ್ತು ನಾವೇ ನು ಮಾಡಬೇಕು ಎನ್ನುವುದು ಕೂಡ ಅಸ್ಟೆ ಮುಖ್ಯವಲ್ಲವೆ???
ಯಾವಾಗಲು ಪಕ್ಕದ ಮನೆಯ ವಸ್ತುಗಳೇ ನಮಗೆ ಸುಂದರವಾಗಿ ಕಾಣುತ್ತದೆ. ಅದಕ್ಕೆ ಸಿಂಗಪುರದ ಸ್ವಚ್ಚತೆಯನ್ನು, ಅಮೆರಿಕಾದ ವ್ಯವಸ್ಥೆಯನ್ನು, ಆಸ್ಟ್ರೇಲಿಯಾದ ಶ್ರೀಮಂತಿಕೆಯನ್ನು, ನೋಡಿ ನಾವು ಹಾಗೆ ಆಗಬೇಕು ಎಂದು ಕೊಳ್ಳುತ್ತೇವೆ. ಆದರೆ ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಭಾರತ ಇನ್ನೆಲ್ಲಿ ಸಿಕ್ಕೆತು ನಮಗೆ?? ಇರುವ ನಮ್ಮದೇ ಆದ ಸಂಪ್ರದಾಯಗಳನ್ನು, ವ್ಯವಸ್ಥೆಯನ್ನು ಕಳೆದುಕೊಂಡು ಬಿಟ್ಟರೆ ನಮ್ಮ ದೇಶವನ್ನು ಇನ್ನೆಲ್ಲಿ ಹುಡುಕೋಣ?? ಸದ್ಯಕ್ಕೆ ಬೇರೆ ದೇಶಗಳನ್ನು, ಅವುಗಳ ಚಂದವನ್ನು, ದೂರದಿಂದಲೇ ನೋಡಿ ಖುಶಿಪಡೋಣ. ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ, ನಮ್ಮದೇ ದೇಶವನ್ನು ಇನ್ನಸ್ಟು ಚಂದಗೊಳಿಸೋಣ, ಅದು ಈಗಿರುವಂತೆಯೇ. ಭಾರತ ಎಂದರೆ ಅದು ಭಾರತದಂತೆಯೇ ಇರಬೇಕು. ಆಗ ಮಾತ್ರ ಅದು ತನ್ನತನವನ್ನು ಉಳಿಸಿಕೊಳ್ಳಲು ಸಾದ್ಯ. ಅದು ಬಿಟ್ಟು ಭಾರತ ಕೂಡ ಅಮೆರಿಕಾದಂತೆ ಆಗಿಬಿಟ್ಟರೆ ಭಾರತಕ್ಕೆನು ಬೆಲೆ??? ಮೊನ್ನೆ ಮೊನ್ನೆ ಕಣ್ಣು ಬಿಟ್ಟ ಅಮೆರಿಕಾವನ್ನು ಅನುಕರಿಸಿಬಿಟ್ಟರೆ ಅತ್ತ ಅಮೆರಿಕಾವೂ ಆಗದೆ, ಇತ್ತ ಭಾರತವೂ ಅಲ್ಲದೆ ತ್ರಿಶಂಕು ಆಗಿಬಿಡುತ್ತದೆ ಅಲ್ಲವೇ???
ದೇಶದ ಬಗ್ಗೆ ಬರೆಯುತ್ತಾ ಹೋದರೆ, ಅದು ಪುಟವಲ್ಲ, ಪುಸ್ತಕವಾದೀತು. ಆದ್ರೆ ಈ ವರ್ಷವಾದರೂ ನಾವು ಕೆಲವು ಸಂಕಲ್ಪಗಳನ್ನು ತೊಡಲೇಬೇಕು. ಹಾಗೆಂದು ವಿಶೇಷವಾದದ್ದೇನು ಮಾಡಬೇಕಿಲ್ಲ. ಮಾಡುವ ಕೆಲಸವನ್ನೇ ಇನ್ನಸ್ಟು ಶ್ರದ್ದೆಯಿಂದ ಮಾಡೋಣ, ಪ್ರಾಮಾಣಿಕತೆಯಿಂದ ಮಾಡೋಣ, ನಮ್ಮ ದೇಶದಲ್ಲೇ ತಯಾರಾಗುವ ವಸ್ತುಗಳನ್ನು ಕರೀದಿ ಮಾಡೋಣ, ಕೋಲಾದ ಬದಲು ಎಳನೀರು ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು, ನಮ್ಮ ಹೊಟ್ಟೆಯ ಜೊತೆಗೆ ನಮ್ಮ ರೈತನ ಹೊಟ್ಟೆಯನ್ನು ತಂಪಾಗಿಸಿದ ಪುಣ್ಯ ನಮ್ಮದಾಗುತ್ತದೆ. ಮನೆಯನ್ನು ಸ್ವಚ್ಚವಾಗಿರಿಸಿಕೊಂಡ ಹಾಗೆ ಹೊರಗಡೆಯ ಸ್ವಚ್ಚತೆಗೂ ಇನ್ನಸ್ಟು ಗಮನ ಹರಿಸೋಣ, ದೇಶದ ಬಗ್ಗೆ ನಮಗಿರುವ ಅಭಿಮಾನವನ್ನು ಚೂರೇ ಚೂರು ಹೆಚ್ಚಿಸಿಕೊಳ್ಳೋಣ, ನಮ್ಮದೇ ಕನಸಿನ ದೇಶವನ್ನು, ನಾವಂದುಕೊಂಡಂತೆ ಕಟ್ಟೋಣ, ಕೇವಲ ನಮಗಾಗಿ, ನಾವು ಕಟ್ಟುವ ನಾವು ಕಟ್ಟುವ ಸುಂದರ ಬೀಡಿಗಾಗಿ, ಚಂದದ ನಾಡಿಗಾಗಿ, ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಇನ್ನಸ್ಟು ಅರ್ಥಪೂರ್ಣಗೊಳಿಸುವ ಸಲುವಾಗಿ, ನಮ್ಮ ಇಷ್ಟು ಮಾತ್ರದ ಪ್ರಯತ್ನ ಸಾಕು ಎಂದುಕೊಳ್ಳುತ್ತೇನೆ. ಮತ್ತು ಇಸ್ತನ್ನು ನಾವು ಮಾಡಬಲ್ಲೆವು ಕೂಡ ಎಂದುಕೊಳ್ಳುತ್ತೇನೆ, ಈ ಬಾರಿಯ ಸ್ವಾತಂತ್ರ್ಯೋತ್ಸವ ನಮಗೆಲ್ಲರಿಗೂ ಹೊಸ ಚೈತನ್ಯ ತುಂಬಲಿ, ಹೊಸ ಹುಮ್ಮಸ್ಸಿನೊಂದಿಗೆ ನಾನಂತೂ Ready, ಇನ್ನು ನೀವು, ಒಹ್, ನನಗಿಂತ ಮೊದಲೇ ಎದ್ದುಬಿಟ್ಟಿದ್ದೀರಿ, Ready ತಾನೆ??

5 comments:

MAHESH HEGDE said...
This comment has been removed by the author.
MAHESH HEGDE said...

ನಿಜಕ್ಕೊ ನೀನು ಒಬ್ಬ ಉತ್ತಮ ಬರಹಗಾರ ಎಂಬುದರಲ್ಲಿ ೨ ಮಾತಿಲ್ಲ

me said...

very well.....

Unknown said...
This comment has been removed by the author.
ಗೌತಮ್ ಹೆಗಡೆ said...

chennagide:) yaake e barahada nantara enoo barile illa?