Thursday, November 19, 2009

....

ಸ್ಪಂಜಿನ ದಿಂಬಿಗೆ ಮುಖ ಒತ್ತಿ ಮಲಗಿದ್ದ ನನಗೆ ಯಾಕೋ ನಿನ್ನದೇ ಕನವರಿಕೆ.. ಅಕ್ಷರ ಕಲಿತಿದ್ದು ನಿನಗೆ ಪ್ರೇಮ ಪತ್ರಗಳನ್ನು ಬರೆಯಲು ಮಾತ್ರವೇನೋ ಎಂಬಂತೆ ದಿನಕ್ಕೊಂದು ಪತ್ರ ಬರೆದು ನನ್ನ ಶಭ್ದ ಬಂಡಾರವೇ ಖಾಲಿಯಾಯಿತೇನೋ ಎಂದುಕೊಂಡಿದ್ದೆ. ಆದರೆ ಕೈಗೆ ಪೆನ್ನು ಸಿಕ್ಕುವುದೇ ತಡ, ಕಣ್ಣು ಮುಚ್ಚಿ ಬಿಡುವುದರೊಳಗೆ ಪ್ರೇಮ ಪತ್ರ ರೆಡಿ. ದಿನಕ್ಕೊಂದು ಪತ್ರ ಬರೆಯದಿದ್ದರೆ ನೀನಾದರೂ ಎಲ್ಲಿ ಬಿಡುತ್ತಿ?? ಹಠ ಮಾಡಿಯಾದರೂ ಪತ್ರ ಬರೆಸಿಕೊಲ್ಲುತ್ತಿಯಲ್ಲೇ ಗೆಳತಿ, ಅದೂ ಪ್ರತ್ಯಕ್ಷ ನಾನೇ ನಿನ್ನ ಬಳಿ ಇರುವಾಗ. ಅದೇನು ಹುಚ್ಚು ಪ್ರೀತಿಯೋ ನಾ ಕಾಣೆ. ನಮ್ಮೂರಲ್ಲಿ ಮೊಬೈಲ್ Network ಸಿಗುವುದಿಲ್ಲ ಎಂದು ನನ್ನನ್ನು ಮನೆಗೆ ಹೋಗುವುದೇ ಬೇಡ ಎನ್ನುವ ನಿನಗೆ ಕೇವಲ ಒಂದೆರಡು ದಿನ ಕೂಡ ನನ್ನನ್ನು ಬಿಟ್ಟಿರಲು ಅಗುವುದಿಲ್ಲವಲ್ಲೇ ಗೆಳತಿ, ಇಷ್ಟು ಹಚ್ಹ್ಚಿಕೊಂಡಿದ್ದೀಯಲ್ಲ ನನ್ನ, ನಾನೆನಾದರೋ ನಿನ್ನ ಕೈಗೆ ಸಿಗದೇನೆ ಹೋದ್ರೆ ಅದ್ಹೇಗೆ ತಡ್ಕೊತೀಯೋ?? ಆದರೆ ನೀನೇನೋ ಎಲ್ಲವನ್ನು ಬಾಯಿ ಬಿಟ್ಟು ಹೇಳಿ ಬಿಡ್ತೀಯ, ನನ್ನ ಕತೆ?? ನೀನೆನದ್ರು ಸಿಕ್ದೇ ಹೋದ್ರೆ ನಾನು ಹುಚ್ಚನೆ ಅಗಿಬಿಡ್ತೀನೇನೋ??
.
.
ಅವಾಗ ತಾನೆ ನನ್ನ ನಿನ್ನ ಸ್ನೇಹ ಮೊಗ್ಗಾಗಿ ಅರಳುತ್ತಿತ್ತು. ಅದು ಕೆಲವೇ ದಿನಗಳಲ್ಲಿ ಹೂವಾಗಿ ಅರಳಿ ಅಸ್ಟೆ ಬೇಗ ಪ್ರೇಮಕ್ಕೆ ತಿರುಗಿದ ಬಗೆ ಇದೆಯಲ್ಲ, ಅದು ನಿಜಕ್ಕೂ ಅದ್ಬುತ. ಎಸ್ಟೋ ಜನ ಹುಡುಗರು, ಹುಡುಗಿಯರೂ ಪ್ರೀತಿಸಿದವರ ಹಸಿರು ನಿಶಾನೆಗೆ ವರ್ಷಗಟ್ಟಲೆ ಕಾಯುತ್ತಾರಲ್ಲ, ಆದರೆ ನಾವು, ಕೇವಲ ಹಾವ ಭಾವ ಗಳಲ್ಲೇ ಪ್ರೀತಿಸಿ, ಎಸ್ಟೋ ದಿನದ ನಂತರ Propose ಮಾಡಿಕೊಂಡು ನಕ್ಕಿದ್ದೇವೆ. ನಿಜಕ್ಕೂ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎನ್ನುವ ಯೋಚನೆಯೇ ರೋಮಾಂಚನ.. ಎಂದು ಮುಗಿಯದ ಆಫೀಸ್ ನ ಜಂಜಡಗಳ ನಡುವೆ, ಮುಂದೇನು ಮಾಡಬೇಕೆಂದು ತೋಚದೆ, ಮಾಡುತ್ತಿರುವ ಕೆಲಸವನ್ನು ಮಾಡದೆ, ಬೇರೆ ಕೆಲಸಕ್ಕೂ ಕೈ ಹಾಕದೆ, ಬಾಸ್ ಮುಂದೆ ಹೋದರೆ ಇನ್ನಸ್ಟು ಬಿಸಿಕೊಲ್ಲಬೇಕೆಂಬ ದುಗುಡದಿಂದ, ನೋಡುತ್ತಿರುವುದೆಲ್ಲ ಅರಿಶಿನವಾಗಿ ಕಾಣುತ್ತಿರುವ ಆ ವಿಹ್ವಲ ಸನ್ನಿವೇಶಗಳಲ್ಲಿ ನೀನು ಮತ್ತು ನಿನ್ನ ಪ್ರೀತಿಯ ಸ್ಮರಣೆ ಎಲ್ಲವನ್ನು ಮರೆಸಿ, ಒಂದು ಹಗುರ ಭಾವನೆ ಉಂಟಾಗುತ್ತದೆ. ಪ್ರೀತಿಯಲ್ಲಿ ಮುಳುಗಿ ಹೋದ ನನ್ನ ಸ್ನೇಹಿತರ ತೊಳಲಾಟ, ದುಗುಡ, ಪ್ರೀತಿಯ ಬಲೆಗೆ ಬೀಳುತ್ತಿರುವಾಗ ಅವರಲ್ಲಾಗುವ ಹನಿ ಹನಿ ಬದಲಾವಣೆಗಳನ್ನು ನೋಡಿ ನಗುತ್ತಿದ್ದವನು ನಾನು. ಈವತ್ತು ಈ ಪರಿಯಲ್ಲಿ ನಿನ್ನ ಪ್ರೇಮದ ಪಾಶಕ್ಕೆ ಸಿಲುಕಿದ್ದೇನೆ ಎಂದರೆ ನನಗೇ ನಂಬುವುದು ಕಷ್ಟ. ಪ್ರೀತಿಯ ಶಕ್ತಿ ಎಂತಹುದಿರಬಹುದು ನೋಡು.
.
.
ಹೌದು, ಹೇಗಿದ್ದೀ ನೀನು??? ಭಾಹುಶ ನಿನಗೂ ಅನ್ನಿಸಿರಬಹುದು, ಪ್ರತಿ ಸಾರಿಯ ನಿನ್ನ ಜೊತೆಗಿನ ನನ್ನ ಮಾತುಕತೆಯಲ್ಲೂ, ನಾನು ನಿನಗಿಂತ ನಿನ್ನ ಮನೆಯವರನ್ನೇ ಹೆಚ್ಚು ವಿಚಾರಿಸಿ ಬಿಡುತ್ತೇನೆ, ಅಮ್ಮ ಹೆಂಗಿದಾಳೆ, ತಂಗಿ ಚೆನ್ನಗಿದಾರ, ಹಾಗಾ, ಹೀಗಾ ಎಂದು, ಅದರರ್ಥ ನಿನ್ನ ಬಗೆಗಿನ ಅಸದ್ದೆಯಂತೂ ಖಂಡಿತ ಅಲ್ಲ.. ನೀನು ಯಾವಾಗಲೂ ಚೆನ್ನಾಗಿಯೇ ಇರ್ತಿ ಮತ್ತು ಇರಬೇಕು ಎಂಬ ನಂಬಿಕೆ ಮತ್ತು ಹಾರೈಕೆ. ಆದರು ಇವತ್ತು ನಿನ್ನ ಬಗ್ಗೆ ಕೇಳುವ ಹಂಬಲ, ಚೆನ್ನಗಿದ್ದೆಯ?? ನಾನು ಹೇಗಿದೀನಿ ಗೊತ್ತಾ??? ಈಗೀಗ ನಮ್ಮ ಮನೆಯಲ್ಲಿ ಹಾಲು ಉಕ್ಕಿಸದೆ ಕಾಯಿಸಿದ ದಿನವೇ ಇಲ್ಲ, ಹಾಲನ್ನು ಬಿಸಿಗಿದುವಾಗ ಎಚ್ಚರದಿಂದಿರುವ ನಾನು ಕನಸಿನ ಚಿಪ್ಪಿನೊಳಗೆ ಜಾರಿ ಹೋದರೆ ಹಾಲು ಉಕ್ಕಿ ಕಮಟು ವಾಸನೆ ಬಂದ ಮೇಲೆಯೇ ವಾಸ್ತವಕ್ಕೆ ಬರುವುದು. ಹಗಲು ಪೂರ್ತಿ ನಿನ್ನ SMS ಗಳಿಗೆ ರಿಪ್ಲೈ ಮಾಡುತ್ತಾ ಕಳೆದರೆ ರಾತ್ರಿಯಾಗುತ್ತಿದ್ದಂತೆ ಕೆಲಸದ ನೆನಪು.... ಅನಿವಾರ್ಯವಾಗಿ ಪ್ರತಿದಿನವೂ late sitting.. ಏನೋ ಮಾಡುವ ತುಡಿತ.. ಏನೂ ಮಾಡಲಾಗದ ಚಡಪಡಿಕೆ, ಏನೋ ಕಳೆದುಕೊಂಡ ಭಾವ, ಯಾವುದೋ ಅವ್ಯಕ್ತ ತಳಮಳ, ಒಂದಿಸ್ತು ಪಶ್ಚಾತಾಪ, ಇದ್ದಕ್ಕಿದ್ದಂತೆ ಖಿನ್ನತೆ, ಕೆಲವೇ ಕ್ಷಣಗಳಲ್ಲಿ ಉತ್ಸಾಹದ ಸಂತೆ, ಪ್ರೀತಿ ಎಂದರೆ ಇದೆ ಏನೇ?? ಎಷ್ಟು ದಿನ ಹೀಗೆ???
.
.
ಮೊನ್ನೆ ಸಿಕ್ಕಿದಾಗ ಹೇಳಿದ್ದೆ ನೀನು, ಆದಸ್ಟು ಬೇಗ ಮನೆಯಲ್ಲಿ ನಮ್ಮ ವಿಚಾರವನ್ನು ಹೇಳುತ್ತೇನೆ, ಒಂದು ವೇಳೆ ಮನೆಯಲ್ಲಿ ಒಪ್ಪದಿದ್ದರೆ ಓದಿ ಹೋಗಿ ಬಿಡೋಣ ಎಂದು, ಆದರೆ ನನಗೇಕೋ ಹತ್ತು ಜನರ ಸಮ್ಮುಖದಲ್ಲಿ, ಸರ್ವರ ಸಮ್ಮತದೊಂದಿಗೆ, ಗುರುಹಿರಿಯರ ಆಶೆರ್ವಾದದೊಂದಿಗೆ ತಾಳಿ ಕಾತ್ತುವುದೇ ಹಿತ ಎನಿಸುತ್ತಿದೆ. ಯಾವುದಕ್ಕೂ ದೈರ್ಯ ಗೆಡಬೇಡ.. ನಾವಂತೂ ತಪ್ಪು ಮಾಡುತ್ತಿಲ್ಲ ಎಂಬ ನಂಬಿಕೆ ನನಗಿದೆ.. ನಮ್ಮ ಪ್ರೀತಿ ನಿಒಜವೇ ಆಗಿದ್ದಲ್ಲಿ ಮನೆಯವರು ಖಂಡಿತ ಒಪ್ಪೇ ಒಪ್ಪುತ್ತಾರೆ. ಹೌದು ಯಾವಾಗ್ ಸಿಕ್ತೀ?? ಪ್ರತಿ ಸಲ ನೀನು ನನಗೆ ಸಿಕ್ಕಾಗಲೂ ನಿನ್ನ ಕಣ್ಣುಗಳಿಂದ ಆಚೆ ಬರುವುದಕ್ಕೆ ಆಗದಸ್ತು, ನಿನ್ನ ಕಣ್ಣೊಳಗೆ ನನ್ನ ಕಣ್ಣು ಹುಡುಗಿ ಹೋಗಿರುತ್ತದೆ... ಈ ಬಾರಿ ನಿನ್ನ ಮುದ್ದು ಮುಖವನ್ನು ನೋಡುವ ಹಂಬಲ......
......................................................

No comments: