Friday, December 4, 2009

ಮನಸ್ಸು ಮತ್ತು ಮೆನೇಜ್ಮೆಂಟ್

Office ನಲ್ಲಿ ಕುಳಿತು ಏನೋ ಮಾಡುತ್ತಿದ್ದವನಿಗೆ ಯಾಕೋ ಭಾವನೆಗಳು ಮತ್ತು ವ್ಯವಹಾರಗಳ ನಡುವಿನ ವ್ಯತ್ಯಾಸಗಳ ಕಡೆಗೆ ಯೋಚನೆ ಹರಿಯಹತ್ತಿತು. ಇಲ್ಲಿ ಭಾವನೆಗಳಿಗೆ , ಮಾನವೀಯತೆಗೆ ಜಾಗವಿಲ್ಲ, ಕೇವಲ ವ್ಯವಹಾರೀ ದೃಷ್ಟಿ ಇಂದ ಎಲ್ಲವನ್ನೂ ನೋಡಬೇಕು, ಎಂಬ ಧೋರಣೆಯಿಂದ ನಾವೇ ನಮ್ಮ ಸಹೋದ್ಯೋಗಿಗಳಿಗೆ ಹೆರುವ ಕೆಲಸಗಳು, ಮನೆಯಲ್ಲಿ ಯಾರೋ ಕಾಯುತ್ತಿರುತ್ತಾರೆ ಎಂಬ ಅರಿವು ಕೂಡ ಇಲ್ಲದೆ ಕೆಲಸ ಮುಗಿಸಿಯೇ ಹೋಗು ಎಂದು ನಾವು ನಮ್ಮ ಕೆಳಗಿನವರಿಗೆ ಮಾಡುವ ಆಜ್ಞೆ, ಮನೆಯ ವಿಚಾರಗಳನ್ನು, ನಮ್ಮ ವಯಕ್ತಿಕ ವಿಚಾರಗಳನ್ನು ಆಫೀಸ್ ನ ಒಳಗೆ ತರಬಾರದು ಎಂಬ ನಮ್ಮ ವಾದ, ಭಾವನೆಗಳು ಮತ್ತು ಜೀವನಕ್ಕಾಗಿ ನಾವು ಮಾಡುವ ಕೆಲಸಗಳ ನಡುವೆ ನಾವೇ ಸೃಸ್ತಿಸಿಕೊಳ್ಳುವ ಕಂದಕ, ಇವುಗಳ ಬಗ್ಗೆ ನನ್ನ ಯೋಚನೆ ಜಾರುತ್ತಿತ್ತು.



ಹೌದಲ್ಲ, ಒಂದು ಸಾರಿ ವೃತ್ತಿ ಜೀವನಕ್ಕೆ ಕಾಲಿಟ್ಟು ಬಿಟ್ಟರೆ ನಮಗೆ ನಮ್ಮವರು, ತಮ್ಮವರು ಎಂಬ ಯೋಚನೆಯೇ ಇರುವುದಿಲ್ಲ, ಆಗಾಗ ಬರುವ ಹಬ್ಬ ಹರಿದಿನಗಳು ಮರೆತೇ ಹೋಗಿರುತ್ತದೆ. ಸ್ವಂತ ಅಕ್ಕನ ಮನೆಗೋ, ತಂಗಿಯ ಮನೆಗೋ ಕೊನೆಯೇ ಬಾರಿ ಹೋಗಿದ್ದು ಯಾವಾಗ ಎಂದು ನೆನಪು ಮಾಡಿಕೊಳ್ಳಬೇಕಾಗುತ್ತದೆ, ಮಗನೆ, ನಿನ್ನ ಜೊತೆ ಮಾತಾಡಿ ೧೫ ದಿನ ಆಯಿತಲ್ಲೋ ಎಂದು ತಾಯಿ ಹೇಳಿದಾಗಲೇ, ಮನೆಗೆ call ಮಾಡಲು ಮರೆತಿದ್ದೆ ಎಂದು ನೆನಪಾಗುವುದು. ಚಿಕ್ಕವರಿದ್ದಾಗ ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸಗಳು, ಪದೇ ಪದೇ ಹೋಗುತ್ತಿದ್ದ ನಮ್ಮ ಊರಿನ ಜಾಗಗಳು, ಸ್ಮೃತಿಪಟಲದಿಂದ ದೂರವೇ ಹೋಗಿಬಿಟ್ಟಿರುತ್ತದೆ.



ಆದರೆ ದಿನಕ್ಕೆ 10 ಗಂಟೆ ಆಫೀಸ್ ಮತ್ತು, ೪ ಗಂಟೆ office ಗೆ ಹೋಗುವ ದಾರಿಯಲ್ಲಿ ಕಳೆಯುವ ನಮಗೆ ನಮ್ಮ ಬಗ್ಗೆ ಯೋಚಿಸಲು ಸಮಯವಾದರೂ ಯೆಲ್ಲಿ ಸಿಕ್ಕುತ್ತದೆ?? ಹಾಗೊಮ್ಮೆ ಯೋಚಿಸಲು ಪ್ರಾರಂಬಿಸಿದರು ನವ್ಯಾರೋ ಬೇರೆಯವರ ಬಗ್ಗೆ ಯೋಚಿಸುತ್ತಿದ್ದೇವೆ ಎಂಬಸ್ಟು ನಮಗೆ ನಾವೇ ಅಪರಿಚಿತರಾಗಿರುತ್ತೇವೆ. ಇಂತಹ ಯೋಚನೆಗಳನ್ನು ಕೂಡ Office ನಲ್ಲಿಯೇ ಮಾಡಬೇಕು. ಏಕೆಂದರೆ ಮನೆಗೆ ಬಂದ ಮೇಲೆ ಊಟ ಮಾಡಿ ಮಲಗಿದರೆ ಸಾಕು ಎಂಬಂತಾಗಿರುತ್ತದೆ. ಇಂತಹ ನಮಗೆ ಒಂದೆರಡು ದಿನಗಳನ್ನು ಬಿಟ್ಟಿಯಾಗಿ ಕೊಟ್ಟುಬಿಟ್ಟರೆ ಏನು ಮಾಡಬಹುದು?? ಏನೂ ಮಾಡುವುದಿಲ್ಲವಾದರೂ ಮತ್ತೆ ಆಫೀಸ್ ನ ಬಗ್ಗೆ ಯೋಚನೆ ಮಾಡುವುದನ್ನಂತು ಬಿಡುವುದಿಲ್ಲ. ಯಾಕಾದರೂ ರಜೆ ಕೊಟ್ಟರೋ ಎಂದು ನಮಗಿಂತ ಚಿಕ್ಕವರಾದ ನಮ್ಮ ಜೂನಿಯರ್ ಗಳ ಬಗ್ಗೆ, ಯಾರು ಕೆಲಸ ಹೇಳಿದರು ಐದೇ ನಿಮಿಷ ಬಂದೆ ಎಂದು ನಾಪತ್ತೆಯಾಗುವ ಆಫೀಸ್ ಬಾಯ್, ದಿನಕ್ಕೊಂದು ಡ್ರೆಸ್ ಮಾಡಿಕೊಂಡು ಗಮನ ಸೆಳೆಯುವ ಪಕ್ಕದ ಕ್ಯಾಬಿನ್ ನ ಚಂದದ ಹುಡುಗಿ, ಮತ್ತೆ ಮತ್ತೆ ಕೈಕೊಡುವ ಇಂಟರ್ನೆಟ್, ಏನೋ ಮೋಸ ನಡೆದಿದೆ, ಅದನ್ನು ತಾನು ಹುಡುಕಬೇಕು ಎಂದೇ ಕೆಲಸ ಪ್ರಾರಂಬಿಸುವ Auditor, ಹೀಗೆ ಎಲ್ಲ ನಮ್ಮ ಯೋಚನಾ ವಸ್ತುವಾಗಿರುತ್ತದೆ.
.
.
ಇದೆಲ್ಲಾ ಒಂದುಕಡೆಯಾದರೆ, ಸಾವಿರ ಸಂದೇಶಗಳನ್ನು ಹೇಳುವ ಬಾಸ್ ನ smile. ಲೇಟ್ ಆಗಿ ಆಫೀಸ್ ಗೆ ಬಂದರೆ ಒಂದು ರೀತಿಯ smile, ಬೇಗ ಬಂದರೆ ಒಂದು ರೀತಿಯ smile, ಆತನ ಒಂದು smile ನಿಂದ ನಮಗೆ ತನ್ನ ಸಂದೇಶಗಳನ್ನು ರವಾನಿಸಿಬಿದುತ್ತಾನೆ, ಅಥವಾ ಹಾಗೆ ರವಾನಿಸುವುದೇ ಆತನ ಉದ್ದೇಶವಾಗಿರುತ್ತದೆ. ನಿರ್ವಹಣೆ, ಆಡಳಿತ, ನಿಯಂತ್ರಣ ಮುಂತಾದ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಆತನ ಅದದೇ ಕೆಲಸಗಳಲ್ಲಿ ಇದೂ ಒಂದೇನೋ, ಲೇಟ್ ಆಗಿ ಬಂದಾಗ ನಿನ್ನದು ದಿನಾ ಇದೆ ಕತೆ ಎಂದು, ಬೇಗ ಬಂದಾಗ, ತನ್ನನ್ನು impress ಮಾಡಲು ಬಂದೆಯಾ ಎಂದು, ಕಡಿಮೆ ಕೆಲಸ ಮಾಡಿದಾಗ, ಅಥವಾ ತಪ್ಪು ಮಾಡಿದಾಗ incriment ಗೆ ತುಂಬಾ ದಿನ ಇಲ್ಲ ಎಂದು ಆತನ ಒಂದು smile ನಿಂದ ಅವನಿಗಿಂತ ಮೊದಲೇ ನಮಗೆ ಅರ್ಥವಾಗಿಬಿಡುತ್ತದೆ. ಅಂತು ರಜಾದ ಖುಷಿ ಅನುಭವಿಸುವ ಬದಲು ಮತ್ತೆ ಮತ್ತೆ ಆಫೀಸ್ ನ ಬಗ್ಗೆಯೇ ಆಲೋಚಿಸುತ್ತೇವೆ.
.
.
ಇನ್ನು ಬೇರೆಯವರ ದುಡ್ಡನ್ನು ಲೆಕ್ಕ ಮಾಡಿ ಸಂಪಾದನೆ ಮಾಡುವ ನಮ್ಮಂಥ ಲೆಕ್ಕಾಚಾರದ ಮನುಷ್ಯರಿಗಂತೂ ದಿನವಿಡೀ ವ್ಯವಹಾರದ್ದೆ ಚಿಂತೆ. ಎಲ್ಲಿ ಏನು ಮಾಡಿದರೆ ನಮ್ಮ ಕಂಪನಿ ಗೆ ಎಷ್ಟು ಬಡ್ಡಿ ಉಳಿತಾಯವಾಗುತ್ತದೆ ಎಂದು. ಕೇವಲ ಎರಡು ಹೊತ್ತಿನ ಊಟಕ್ಕಾಗಿ ಎಲ್ಲಿಂದಲೋ ಬಂದು ಆರೋಗ್ಯದ ಜೊತೆ ಮನಸ್ಸನ್ನೂ ಕೆಡಿಸಿಕೊಂಡು ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗಬಹುದು ಎಂದು ಗೊತ್ತಿದ್ದರೂ ನಮ್ಮ ಮನಸ್ಸು ಮೆನೇಜ್ಮೆಂಟ್ ನ ಕಡೆಯೇ ಹೆಚ್ಚು ವಾಲುತ್ತದೆ. ಏಕೆಂದರೆ ನಮಗೂ ಗೊತ್ತು, ಎಲ್ಲೋ ಒಂದು ಕಡೆ ಕುಳಿತು , ಯಾರದೋ ಲೆಕ್ಕದ ಪುಸ್ತಕವನ್ನು ನೋಡಿಕೊಳ್ಳುವುದಕ್ಕಿಂತ, ಇನ್ನೆಲ್ಲೋ ಹೊಲ ಗದ್ದೆ ಗಳಲ್ಲಿ ಕೆಲಸ ಮಾಡುವುದು ಕಷ್ಟ ಎಂದು. ಆಫೀಸ್ ನ ವ್ಯವಹಾರಗಳಲ್ಲಿ ಮುಳುಗಿ ನಮ್ಮ ವಯಕ್ತಿಕ ನೋವು ಕಷ್ಟಗಳನ್ನು ಮರೆತು ಬಿಡಬಹುದು ಎಂಬ ಬ್ರಮೆ ನಮ್ಮನ್ನು ಆವರಿಸಿಕೊಂಡಿರುತ್ತದೆ. ಹಳ್ಳಿಯಲ್ಲಿ ನಮ್ಮದೇ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡಿದರೆ ಇಲ್ಲಿನ ಥಳುಕು ಬಳುಕಿನ ಜೀವನದಿಂದ ವಂಚಿತರಾಗಿ ಬಿಡುತ್ತೇವೆ ಎಂಬ ಭಯ ನಮ್ಮ ತಲೆಯಲ್ಲಿ ತುಂಬಿಕೊಂಡಿರುತ್ತದೆ. ಭಾವನೆಗಳು ಮತ್ತು ಇತರ ಸಿದ್ದಾಂತಗಳು ಮಾತಿಗಸ್ಟೆ ಮುಗಿದು ಹೋಗುತ್ತದೆ.
.
.
ಇವೆಲ್ಲ ಚಿಂತನೆಗಳು ಆ ದಿನ ನನ್ನ ತಲೆಯಲ್ಲಿ ಗಿರಾಕಿ ಹೊಡೆಯುತ್ತಿತ್ತು. ನಿಮ್ಮ ಜೊತೆ ಹಂಚಿಕೊಳ್ಳೋಣ ಎಂದು ಈ ಬರಹ. ಏನೇನೋ ಮ್ಯಾನೇಜ್ ಮಾಡುವುದಕ್ಕಿಂತ ಮೊದಲು ನಮ್ಮನ್ನು ಮತ್ತು ನಮ್ಮದೇ ಮನಸ್ಸನ್ನು ಮ್ಯಾನೇಜ್ ಮಾಡಲು ಕಲಿತುಕೂಳ್ಳೋಣ ಅಲ್ವ??

4 comments:

Dileep Hegde said...

ಮ್ಯಾನೇಜ್ಮೆಂಟ್ ಬಗೆಗಿನ ನಿಮ್ಮ ಅಭಿಪ್ರಾಯವನ್ನ ಚೆನ್ನಾಗಿ ಬರೆದಿದ್ದೀರಿ ಅರುಣ್..

ಹಳ್ಳಿಯ ಕೃಷಿಕ ಕುಟುಂಬದ ಹಿನ್ನೆಲೆಯುಳ್ಳ ನಮಗೆ ಶಹರದ ಜೀವನ, ಕೆಲಸದ ಸ್ಥಳದಲ್ಲಿನ ವಾತಾವರಣ ಸ್ವಲ್ಪ ಕಿರಿ ಕಿರಿ ಉಂಟು ಮಾಡೋದು ಸಹಜ..
ಇದೆಲ್ಲದರ ನಡುವೆ ನಾವೆಲ್ಲೋ ಕಳೆದುಹೊಗುತ್ತಿದ್ದೇವೆ.. ನಮ್ಮತನ ಮರೆಯುತ್ತಿದ್ದೇವೆ... ನಮ್ಮವರಿಂದ ದೂರವಾಗುತ್ತಿದ್ದೇವೆ ಅಂತೆಲ್ಲ ಅನಿಸೋದು ಸಾಮಾನ್ಯ..

ಆದರೆ ಸಮುದ್ರ ಇಳಿದಾಗಿದೆ.. ಈಜಿ ದಡ ಸೇರಲೇ ಬೇಕು.. ಏನಂತೀರಿ...?? ಅಭಿನಂದನೆಗಳು...

Arun said...

nija, Thanks dileep..

Unknown said...

Propose madadu estella kasta eddu heladre yarigu propose madale hogthnille.....

chiru said...

Houdu ondu sari kelsa anta shuru madidre matte personal life kate aste. Adre enta madadu hottepadalaa?